ಹಿರಿಮೆ
ಹಿರಿಮೆಯು ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಪ್ರಭಾವ ಬೀರುವ ಮೇಲ್ಮೆಯ ಸ್ಥಿತಿಯ ಪರಿಕಲ್ಪನೆಯಾಗಿದೆ. ಹಿರಿಮೆ ಶಬ್ದವನ್ನು ಬೇರೆ ಎಲ್ಲರಿಗಿಂತ ಉತ್ತಮವಾಗಿರುವ ಸಹಜ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಬಹುದು. ಸಮಾನ ಬಗೆಯ ಇತರರಿಗೆ ಅಥವಾ ಇತರವುಗಳಿಗೆ ಹೋಲಿಸಿದರೆ, ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವು ಸ್ಪಷ್ಟ ಮೇಲುಗೈ ಹೊಂದಿದ್ದಾನೆ/ಹೊಂದಿದೆ ಎಂಬ ಸೂಚ್ಯಾರ್ಥವನ್ನು ಈ ಪರಿಕಲ್ಪನೆಯು ಹೊಂದಿದೆ. ವಿವರಣಾತ್ಮಕ ಪದವಾಗಿ, ಇದನ್ನು ಬಹುತೇಕ ವೇಳೆ ಒಬ್ಬ ವ್ಯಕ್ತಿ ಅಥವಾ ಅವರ ಕೆಲಸಕ್ಕೆ ಅನ್ವಯಿಸಲಾಗುತ್ತದೆ, ಮತ್ತು ನಿರ್ಬಂಧಿತ ಅಥವಾ ಅನಿರ್ಬಂಧಿತವಾಗಿರಬಹುದು. ಈ ಪರಿಕಲ್ಪನೆಯ ಅಭಿವ್ಯಕ್ತಿಯ ಉದಾಹರಣೆಯೆಂದರೆ "ಅಬ್ರಹಮ್ ಲಿಂಕನ್ ಹಿರಿಮೆಯ ವ್ಯಾಖ್ಯಾನವಾಗಿದ್ದಾರೆ". ಅನಿರ್ಬಂಧಿತ ಅರ್ಥದಲ್ಲಿ ಇದನ್ನು ಹೀಗೆ ಹೇಳಬಹುದು "ಜಾರ್ಜ್ ವಾಷಿಂಗ್ಟನ್ ತನ್ನದೇ ಜೀವಮಾನದಲ್ಲಿ ಹಿರಿಮೆಯನ್ನು ಸಾಧಿಸಿದನು", ಹೀಗೆ ಇದು "ಹಿರಿಮೆ" ಪದವು ನಿಖರ ಹಾಗೂ ಗುರುತಿಸಬಹುದಾದ ಗುಣವೆಂದು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿ, ವಸ್ತು ಅಥವಾ ಸ್ಥಳದ ಗ್ರಹಿತ ಹಿರಿಮೆಯನ್ನು ಅನೇಕರು ಒಪ್ಪಬಹುದು. ಆದರೆ ಇದು ಯಾವಾಗಲೂ ಇರಬೇಕೆಂದೇನಿಲ್ಲ, ಮತ್ತು ಹಿರಿಮೆಯ ಗ್ರಹಿಕೆಯನ್ನು ತೀವ್ರವಾಗಿ ವಿರೋಧಿಸಲಾಗಬಹುದು ಅಥವಾ ಅದು ಬಹಳ ವೈಯಕ್ತಿಕವಾಗಿರಬಹುದು.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Hans J. Morgenthau (1995). "The Nature of Greatness". In Kenneth W. Thompson (ed.). Great American presidents. Lanham, MD: University Press of America. ISBN 0-8191-9885-4.
- Dictionnaire philosophique. Paris: Imprimerie de Cosse et Gaultier-Laguionie. 1838. pp. 563–564.
{{cite encyclopedia}}
: Missing or empty|title=
(help) — available in translation as:- A Philosophical Dictionary from the French of M. Voltaire. Vol. I. London: W. Dugdale. 1843. pp. 596–598.
{{cite encyclopedia}}
: Missing or empty|title=
(help)
- A Philosophical Dictionary from the French of M. Voltaire. Vol. I. London: W. Dugdale. 1843. pp. 596–598.