ಹಿತೋಪದೇಶ
ಗೋಚರ
ಹಿತೋಪದೇಶವು ಸಂಸ್ಕೃತ ಭಾಷೆಯ ಒಂದು ಭಾರತೀಯ ಪಠ್ಯ. ಇದು ಪ್ರಾಣಿ ಹಾಗೂ ಮನುಷ್ಯ ಎರಡೂ ಪಾತ್ರಗಳಿರುವ ನೀತಿಕಥೆಗಳನ್ನು ಹೊಂದಿದೆ. ಇದು ನೀತಿವಚನಗಳು, ಲೌಕಿಕ ವಿವೇಕ ಮತ್ತು ರಾಜಕೀಯ ವ್ಯವಹಾರಗಳ ಮೇಲಿನ ಸಲಹೆಯನ್ನು ಸರಳ, ಸೊಗಸಾದ ಭಾಷೆಯಲ್ಲಿ ಒಳಗೊಂಡಿದೆ.[೧] ಈ ಕೃತಿಯನ್ನು ವ್ಯಾಪಕವಾಗಿ ಭಾಷಾಂತರ ಮಾಡಲಾಗಿದೆ.
ಇದರ ಮೂಲದ ಬಗ್ಗೆ ಕಡಿಮೆ ತಿಳಿದಿದೆ. ಉಳಿದುಕೊಂಡಿರುವ ಪಠ್ಯವ್ಯ್ ೧೨ನೇ ಶತಮಾನದ್ದೆಂದು ನಂಬಲಾಗಿದೆ, ಆದರೆ ಸಂಭಾವ್ಯವಾಗಿ ನಾರಾಯಣನು ಕ್ರಿ.ಶ. ೮೦೦ ರಿಂದ ೯೫೦ರ ನಡುವೆ ರಚಿಸಿರಬಹುದು.[೨] ನೇಪಾಳದಲ್ಲಿ ದೊರಕಿದ ಅತ್ಯಂತ ಹಳೆಯ ಹಸ್ತಪ್ರತಿಯು ೧೪ನೇ ಶತಮಾನದ್ದೆಂದು ಕಾಲನಿರ್ಧಾರ ಮಾಡಲಾಗಿದೆ, ಮತ್ತು ಅದರ ಒಳವಸ್ತು ಹಾಗೂ ಶೈಲಿ ಬಹಳ ಹಿಂದಿನಿಂದ ಪಂಚತಂತ್ರ ಎಂದು ಕರೆಯಲ್ಪಡುವ ಪ್ರಾಚೀನ ಸಂಸ್ಕೃತ ಗ್ರಂಥಗಳಂತಿದೆ ಎಂದು ಪತ್ತೆಹಚ್ಚಲಾಗಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ S Narayana; A.N.D. Haksar (Translator) (2005). Hitopadesa. Penguin Books. pp. ix–xiv. ISBN 978-93-5118-096-8.
{{cite book}}
:|last2=
has generic name (help) - ↑ Kaushik Roy (2012). Hinduism and the Ethics of Warfare in South Asia: From Antiquity to the Present. Cambridge University Press. p. 151. ISBN 978-1-139-57684-0.
- ↑ Panchatantra: INDIAN LITERATURE, Encyclopaedia Britannica