ಹಿಂದ್ ಮಾತಾ ಸಿನೆಮಾ, ದಾದರ್, ಮುಂಬೈ
ಸುಮಾರು ಎರಡು ದಶಕಗಳಕಾಲ ಸ್ಥಗಿತಗೊಂಡಿದ್ದು, ಈಗ ಹೊಸದಾಗಿ ಸಜ್ಜಾಗಿರುವ 'ಹಿಂದ್ ಮಾತಾ ಸಿನೆಮಾ ಥಿಯೇಟರ್',[೧] ತನ್ನ ಪ್ರದರ್ಶನಗಳನ್ನು ಮತ್ತೆ ಶುರುಮಾಡಲಿದೆ. ೨೦ ವರ್ಷಗಳ ತರುವಾಯ ಮತ್ತೆ ಶುರುವಾದ ಸಿನೆಮಾ ಥಿಯೇಟರ್ ನ ಹೊಸ ಹೆಸರು, 'ಗೋಲ್ಡನ್ ಡಿಜಿಟಲ್ ಸಿನೆಮಾ' ಎಂದು. ಈಗ ಥಿಯೇಟರ್ ನ, ಒಳಗಡೆ ಹಾಗೂ ಹೊರಗಡೆ ಎಲ್ಲಾ ಹೊಸದಾಗಿ ನಿರ್ಮಿಸಲ್ಪಟ್ಟಿದೆ. ಒಂದು ಕಾಲದಲ್ಲಿ ಹಲವಾರು ಪ್ರಸಿದ್ಧ ಸಿನಿಮಾ ಥಿಯೇಟರ್ ಗಳಾದ, ಜೈಹಿಂದ್, ಭಾರತ್ ಮಾತಾ, ಮೊದಲಾದ ಟಾಕೀಸ್ ಗಳ ಸಾಲಿನಲ್ಲಿ ಶೋಭಿಸುತ್ತಿದ್ದ 'ಹಿಂದ್ ಮಾತಾ ಟಾಕೀಸ್', ೧೯೯೪ ರಲ್ಲಿ ಮುಚ್ಚಲಾಗಿತ್ತು. ಈ ಸಿನೆಮಾ ಟಾಕೀಸನ್ನು ಈಗಿನ ಶಿವಸೇನಾ ಪ್ರಮುಖರಾದ ಉದ್ಧವ ಥಾಕರೆ ಉದ್ಘಾಟಿಸಲಿದ್ದಾರೆ. ಸಿದ್ಧಾರ್ಥ್ ಮಲಹೋತ್ರ-ಶ್ರದ್ಧಾಕಪೂರ್ ಜೋಡಿ ನಟಿಸಿರುವ,'ಎಕ್ ವಿಲನ್' ಎಂಬ ಹೊಸ ಚಿತ್ರವನ್ನು ಅಲ್ಲಿ ಪ್ರದರ್ಶಿಸಲಾಗುವುದು. ಸಿನಿಮಾದಲ್ಲಿ ಅಳವಡಿಸಿರುವ ಒಂದೇ ಪರದೆಯಲ್ಲಿ ಮಲ್ಟಿಪ್ಲೆಕ್ಸ್ ನ, ಎಲ್ಲಾ ಸುವಿಧಗಳನ್ನೂ ಅಳವಡಿಸಲಾಗಿದೆ. ೨೪ ಜನ ಕೂಡ್ರುವ ಆಸನಗಳು, ವಾತಾನುಕೂಲ ವ್ಯವಸ್ಥೆ, ಒಂದು 'ಮಿನಿ ಫುಡ್ ಕೋರ್ಟ್' ಸಹಿತ. ಹಳಬರಿಗೆ ಅಲ್ಲಿಗೆ ಹೋದಾಗ ನೆನಪುಗಳು ಮರುಕಳಿಸುತ್ತವೆ. ಹೊಸದಾಗಿ ನಿರ್ಮಿಸಿದ, 'ಗೋಲ್ಡ್ ಡಿಜಿಟಲ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್' ನ, ಈಗಿನ 'ಎಕ್ಸಿ ಕ್ಯೂಟಿವ್ ಡೈರೆಕ್ಟರ್' ರಾಜೇಶ್ ಗುಪ್ತ,
ಅಲ್ಲಿ ಈಗಲೂ ಬಟ್ಟೆ ಅಂಗಡಿಗಳಿವೆ
[ಬದಲಾಯಿಸಿ]ಈಗಲೂ ಹೊರಗಡೆ 'ಕ್ಲಾತ್ ಮಾರ್ಕೆಟ್' ಎಂದು ಕರೆಯಲಾಗುತ್ತಿದ್ದರೂ,[೨] 'ಗ್ರೌಂಡ್ ಫ್ಲೋರ್', ಹಾಗೂ ಮೊದಲ ಮಹಡಿಯಲ್ಲಿ, ಹಲವಾರು ಶಾಪ್ ಗಳಿವೆ ೧೯೯೪ ರ ಬಳಿಕ ಯಾವ ಪ್ರದರ್ಶನವೂ ಜರುಗಲಿಲ್ಲ. ಕೊನೆಯ ಶೋ, ಜಿತೇಂದ್ರ ನಟಿಸಿದ 'ಹಿಮ್ಮತ್ ವಾಲಾ' ಎಂಬ ಚಿತ್ರವಾಗಿತ್ತು. ಎಂದು ಥಿಯೇಟರ್ರಿನ ಡೋರ್ಮನ್, 'ಹೀರಾಲಾಲ್' ನೆನೆಸಿಕೊಳ್ಳುತ್ತಾರೆ. ನಂತರ ಸಿ. ಗ್ರೇಡ್ ಚಿತ್ರಗಳ ಪ್ರದರ್ಶನಕ್ಕೆ ತೆರವಾಗಿತ್ತು.ಅಲ್ಲಿ ಹಲವು ಸಮಾಜದಲ್ಲಿ ಹೆಚ್ಚು ಮಾನ್ಯತೆ ಇಲ್ಲದ ವ್ಯಕ್ತಿಗಳು ಚಿತ್ರವೀಕ್ಷಿಸಲು ಬರುತ್ತಿದ್ದರು. '೧೯೮೨ ರ ಮುಂಬಯಿ ಗಿರಣಿ ಕಾರ್ಮಿಕರ ಮುಷ್ಕರ' ದ ಬಳಿಕೆ, ಕಾರ್ಮಿಕರು ಬರುವುದು ಕಡಿಮೆಯಾಗಿತ್ತು. 'ಇಲ್ಲಿಗೆ ಚಿತ್ರನೋಡಲು ಬರುವವರಲ್ಲಿ ಅಧಿಕಮಂದಿ ಮಿಲ್ ಕಾರ್ಮಿಕರಿದ್ದರು', ಎಂದು 'ಗೋಲ್ಡ್ ಡಿಜಿಟಲ್ ಥಿಯೇಟರ್ಸ್', ನ ಚೇರ್ಮನ್, ಹಸ್ಮುಖ್, ನೆನೆಸಿಕೊಳ್ಳುತ್ತಾರೆ.
ಹಿಂದ್ ಮಾತಾ ಟಾಕೀಸ್ ಇತಿಹಾಸ
[ಬದಲಾಯಿಸಿ]'ಹಿಂದ್ ಮಾತಾ ಸಿನೆಮಾ', ೧೯೩೦ ರಲ್ಲಿ 'ದೊರಬ್ ಜಮ್ಷೆಡ್ಜಿ ಪಾಂಡೆ'ಯವರಿಂದ ಸ್ಥಾಪಿಸಲ್ಪಟ್ಟಿತು. ಮಹಾರಾಷ್ಟ್ರ ಸರಕಾರದಿಂದ '೯೯೯ ವರ್ಷದ ಲೀಸ್ ಮೇಲೆ ದೊರೆತ ಆಸ್ತಿ'ಯಾಗಿತ್ತು. ೧೯೪೨ ರಲ್ಲಿ 'ಮಹಾತ್ಮ ಗಾಂಧೀಜಿ'ಯವರು ಕರೆಕೊಟ್ಟು ಆಯೋಜಿಸಿದ, 'ಕ್ವಿಟ್ ಇಂಡಿಯ ಆಂದೋಳನ'ದ ಸಮಯದಲ್ಲಿ 'ಹಿಂದ್ ಮಾತಾ ಥಿಯೇಟರ್' ನಲ್ಲಿ ಅನೇಕ ಸಭೆಗಳು ಜರುಗಿದವು.
ಇತರ ಸಿನೆಮಾ ಥಿಯೇಟರ್ಸ್ ಗಳು
[ಬದಲಾಯಿಸಿ]ಇತರ ಎರಡು ಸಿನಿಮಾ ಮಂದಿರಗಳು: 'ಭಾರತ್ ಮಾತ' ಮತ್ತು 'ಜೈ ಹಿಂದ್', ಎರಡನ್ನೂ ಜನ 'ಮದರ್ ಇಂಡಿಯ' ಎಂದು ಕರೆಯುತ್ತಿದ್ದರು. ಒಳ್ಳೆಯ ಜನಪ್ರಿಯ ಹಿಂದಿ ಚಿತ್ರ ತರಿಸಿದರೂ ಸ್ಥಾನೀಯ ಸಿನೆಮಾಗಳಿಗೆ ಹೆಚ್ಚು ಒತ್ತು ಕೊಡುವ ಪರಿಪಾಠವಿದೆ.