ಹಾಲೆ ಮರದ ಕಷಾಯ
ಆಷಾಢ ಮಾಸದಂದು ಹಾಲೆ [೧] ಮರದ ಕಷಾಯವನ್ನು ಸೇವಿಸುವುದರಿಂದ ಶೀತ ದೂರವಾಗುತ್ತದೆ, ಜೀರ್ಣಾಂಗದ ಸಮಸ್ಯೆ, ಕ್ಯಾನ್ಸರ್, ಡೆಂಗ್ಯೂವನ್ನೂ ಕೂಡ ಇದು ಉತ್ತಮ. ಈ ಕಷಾಯದಲ್ಲಿ ಉಷ್ಣದ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ಮಳೆಗಾಲದಲ್ಲಿ ಸೇವಿಸುವುದರಿಂದ ಶೀತದ ವಾತಾವರಣದಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳನ್ನು ದೂರಾಗಿಸುತ್ತದೆ. ಈ ಕಷಾಯವನ್ನು ಹಾಲೆ ಮರಹಾಲೆ ಮರದ ತೊಗಟೆ ಯಿಂದ ಮಾಡುತ್ತಾರೆ. ಈ ಮರ ಸಾವಿರ ಪಾಲಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಮರದ ತೊಗಟೆಯನ್ನು ಕೆತ್ತಿದಾಗ ಹಾಲಿನ ರೂಪದಲ್ಲಿ ರಸ ಚೆಲ್ಲುತ್ತದೆ. ಈ ರಸವು ಆಟಿಯಲ್ಲಿ ಔಷಧೀಯ ಸತ್ವಗಳನ್ನು ಒಳಗೊಂಡಿದ್ದು ಆರೋಗ್ಯವನ್ನು ಕಾಪಾಡುತ್ತದೆ. ಅಮಾವಾಸ್ಯೆಯ ಹಿಂದಿನ ದಿನ ಪಾಲೆ ಮರದ ಬಳಿ ತೆರಳಿ ಗುರುತು ಹಿಡಿದು ಬರುತ್ತಾರೆ. ಮರುದಿನ ಸೂರ್ಯೋದಕ್ಕೂ ಮುನ್ನ ಎದ್ದು ಬೆತ್ತಲೆಯಲ್ಲಿ ಪಾಲೆ ಮರದ ಹತ್ತಿರ ಹೋಗಿ ಕಲ್ಲಿನಿಂದ ಕೆತ್ತುತ್ತಾರೆ. ಲೋಹದಾಂಶ ಆ ಮರಕ್ಕೆ ತಾಗಿದರೆ ಔಷಧೀಯ ಗುಣ ನಾಶವಾಗುತ್ತದೆ ಎಂಬ ಕಾರಣಕ್ಕೆ ಕಲ್ಲಿನಿಂದ ಕೆತ್ತುತ್ತಾರೆ.ತುಳುನಾಡಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷ ಮಹತ್ವ; ಪಾಲೆ ಮರದ ಕಷಾಯ ಸೇವಿಸೋದ್ರ ಹಿಂದಿದೆ ಔಷಧೀಯ ಸತ್ವ.
ಕಷಾಯಕ್ಕೆ ಬೇಕಾಗುವ ಸಾಮಾನು
[ಬದಲಾಯಿಸಿ]- ಹಾಲೆ ಮರದ ತೊಗಟೆ
- ಓಮ
- ಬೆಳ್ಳುಳ್ಳಿ
- ಅರಶಿಣ
- ಕರಿ ಮೆಣಸು
ಕಷಾಯ ಮಾಡುವ ವಿಧಾನ
[ಬದಲಾಯಿಸಿ]ಕೆತ್ತಿತಂದ ತೊಗಟೆಯನ್ನು ಓಮ, ಬೆಳ್ಳುಳ್ಳಿ, ಅರಿಶಿನ, ಕರಿ ಮೆಣಸು ಹಾಕಿ ಪುಡಿ ಮಾಡಿ ರಸ ತೆಗೆಯುತ್ತಾರೆ. ನಂತರ ಅದಕ್ಕೆ ಬಿಳಿಯಾದ ಕಲ್ಲನ್ನು ಬಿಸಿ ಮಾಡಿ ಮುಚ್ಚುತ್ತಾರೆ. ಈ ಕಷಾಯವನ್ನು ಕುಡಿಯುವುದರಿಂದ ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಆಸ್ತಮಾ ಹೀಗೆ ಅನೇಕ ರೋಗಗಳನ್ನು ದೂರ ಮಾಡುತ್ತವೆ ಎಂಬ ನಂಬಿಕೆ. ಕಹಿಯಾಗಿರುವ ಈ ಔಷಧಿಯನ್ನು ಖಾಲಿ ಕೊಟ್ಟೆಗೆ ಕುಡಿಯುತ್ತಾರೆ. ಈ ಔಷಧಿ ಮುಂದಿನ ಆಷಾಢದವರೆಗೆ ಆರೋಗ್ಯ ಉತ್ತಮವಾಗಿರಿಸುವಂತೆ ಮಾಡುತ್ತದೆ. ಈ ಕಷಾಯದಲ್ಲಿ ಉಷ್ಣದ ಅಂಶ ಅಡಕವಾಗಿರುವ ಕಾರಣ ಮೆಂತ್ಯೆ ಗಂಜಿ ತಿನ್ನುತ್ತಾರೆ. ಆದರೆ ಈ ಪಾಲೆ ಮರದ ಕಷಾಯವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ನಂಬಿಕೆ ಇಂದಿಗೂ ಉಳಿದಿದೆ.