ವಿಷಯಕ್ಕೆ ಹೋಗು

ಹಾರೊಹಳ್ಳಿ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾರೊಹಳ್ಳಿ ಕಲ್ಬರಹ
ಶಾಸನವಿರುವ ಜಾಗ

ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಹಾರೊಹಳ್ಳಿಯಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೫೩೦ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' X 2'11". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಆಂಜನೇಯ ಗುಡಿಯ ಆವರಣದಲ್ಲಿದೆ.

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN28 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[]

ಅದೇ ಹೋಬಳಿ ಹಾರೋಹಳ್ಳಿ ಗ್ರಾಮದ ಆಂಜುನೇಯ ದೇವಾಲಯದ ಬಳಿ ನೆಟ್ಟರುವ ಕಲ್ಲಿನಲ್ಲಿ
ಪ್ರಮಾಣ 5' X 2'11"
1.   ಸ್ವಸ್ತಿಶ್ರೀಜಯಾಭ್ಯುದಯಶಾಲಿವಾಹಶಕ
2.   ವರುಷ೧೪೫೨ ನೇ ವಿಕೃತಿಸಂವತ್ಸರ
3.   ದಕಾರ್ತೀಕಶುದ್ಧ ೧೨ ಪುಣ್ಯ ಕಾಲದಲ್ಲಿ ಆ
4.   ಚ್ಯುತರಾಯಮಹಾರಾಯರಿಗೆನಮ್ಮ ತಂದೆಬ
5.   ಸವಪ್ಪನಾಯಕರಿಗೆಪುಣ್ಯವಾಗಿಅಚ್ಯುತರಾ
6.   ಯರುಸೋಲೂರಬಸವಪ್ಪ ನಾಯಕರಮಕಳುಕ್ರಿ
7.   ಸ್ವಪ್ಪನಾಯಕರಿಗೆನಾಯಕತನಕ್ಕೆ ಪಾಲಿಸಿದಸಿವನ
8.   ಸಮುದ್ರ ದಸ್ತ ಲಕ್ಕೆ ಸಲುವಹಾರೋಹಳ್ಳಿ ಗ್ರಾಮವ
9.   ಸುಸಿಂಗಾಪುರದತಿರುವೆಂಗಳನಾತಲಿಂಗರಂಗ
10.  ವೈಭೋಗಾಮ್ರು ತಪಡಿನೈವೇದ್ದಕ್ಕೆ ರಾಮಾನುಜಕೂ
11.  ಟಕೆಸಲಬೇಕೆಂದು ಕೊಟ್ಟಸಿಲಶಸನ

ಅರ್ಥವಿವರಣೆ

[ಬದಲಾಯಿಸಿ]

Be it well. (On the date specified), :- In order that merit might be to Achyuta-Raya-maharaya and to our father Basavappa- Nayaka, - Harohalli, belonging to the Sivanasamudra-sthala, which Achyuta-Raya favoured to Solur Basavappa-Nayaka’s son Krishnappa-Nayaka for his office of Nayaka, have we granted for the decorations, illuminations and offerings of the god Tiruvengalanatha of Singapura, to be held by the Ramanuja-kuta.

ಆಕರಗಳು/ಉಲ್ಲೇಖಗಳು

[ಬದಲಾಯಿಸಿ]
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಸಂಪರ್ಕಕೊಂಡಿಗಳು

[ಬದಲಾಯಿಸಿ]