ಹಾರುವ ಮೀನುಗಳು
ಹಾರುವ ಮೀನು | |
---|---|
![]() | |
ಸೈಲ್‌ಫಿನ್ ಹಾರುವ ಮೀನು Parexocoetus brachypterus | |
Egg fossil classification | |
Kingdom: | Animalia
|
Phylum: | Chordata
|
Class: | |
Order: | |
Family: | Exocoetidae
|
ಹಾರುವ ಮೀನುಗಳು ಸಮುದ್ರವಾಸಿ ಮೀನುಗಳಲ್ಲಿ ಸುಮಾರು ೫೦ ತಳಿಗಳಿಗೆ ಸೇರಿದವಾಗಿವೆ. ಈ ಮೀನುಗಳ ಕುಟುಂಬಕ್ಕೆ ಶಾಸ್ತ್ರೀಯವಾಗಿ ಎಕ್ಸೋಕೋಟಿಡೇ ಎಂದು ಹೆಸರು. ವಿಶ್ವದ ಎಲ್ಲ ಮಹಾಸಾಗರಗಳಲ್ಲಿ ಕಾಣಬರುವ ಹಾರುವ ಮೀನುಗಳು ಈ ಸಾಗರಗಳ ನೀರು ಬೆಚ್ಚಗಿರುವ ಪ್ರದೇಶಗಳಲ್ಲಿ (ಉಷ್ಣವಲಯದಲ್ಲಿ)ಹೆಚ್ಚಾಗಿ ಜೀವಿಸುತ್ತವೆ. ಈ ಮೀನುಗಳಿಗೆ ದೊಡ್ಡದಾದ ರೆಕ್ಕೆಗಳಂತಹ ರಚನೆಯಿದ್ದು ಈ ರೆಕ್ಕೆಗಳ ಸಹಾಯದಿಂದ ಇವು ಸಾಕಷ್ಟು ದೂರ ಗಾಳಿಯಲ್ಲಿ ತೇಲಬಲ್ಲವು. ಸಾಮಾನ್ಯವಾಗಿ ೫೦ ಮೀಟರ್‌ಗಳವರೆಗೆ ಸರಾಗವಾಗಿ ಗಾಳಿಯಲ್ಲಿ ತೇಲಿಕೊಂಡು ಸಾಗುವ ಹಾರುವ ಮೀನುಗಳು ದೊಡ್ಡ ಅಲೆಗಳು ಉಬ್ಬುವಾಗ ಉಂಟಾಗುವ ಗಾಳಿಯ ಒತ್ತಡವನ್ನು ಬಳಸಿ ೪೦೦ ಮೀಟರ್‌ಗಳವರೆಗೆ ಸುಲಭವಾಗಿ ತೇಲಿಕೊಂಡು ಸಾಗಬಲ್ಲವು. ೨೦೦೮ರ ಮೇ ನಲ್ಲಿ ಜಪಾನಿನ ಸಾಗರತೀರದಾಚೆ ಒಂದು ಹಾರುವ ಮೀನು ೪೫ ಸೆಕೆಂಡುಗಳ ಕಾಲ ಗಾಳಿಯಲ್ಲಿ ತೇಲಿಕೊಂಡು ಸಾಗಿದುದನ್ನು ಚಿತ್ರೀಕರಿಸಲಾಯಿತು. ಸದ್ಯಕ್ಕೆ ಇದು ದಾಖಲೆಯಾಗಿದೆ. ಇತರ ಮೀನುಗಳಂತೆ ಹಾರುವ ಮೀನುಗಳನ್ನು ಸಹ ಜಗತ್ತಿನೆಲ್ಲೆಡೆ ಮಾನವನು ಆಹಾರವಾಗಿ ಬಳಸುವನು.
ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

Exocoetidae ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.