ಹವೇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಟ್ವ್ಞೋ ಜೀ ಕಿ ಹವೇಲಿ, ಜೈಸಲ್ಮೇರ್

ಹವೇಲಿ ಎಂದರೆ ಭಾರತೀಯ ಉಪಖಂಡದಲ್ಲಿನ ಸಾಂಪ್ರದಾಯಿಕ ಛಾವಣಿ ಮನೆ ಅಥವಾ ದೊಡ್ಡಮನೆ. ಇದು ಸಾಮಾನ್ಯವಾಗಿ ಐತಿಹಾಸಿಕ ಹಾಗೂ ವಾಸ್ತುಶಾಸ್ತ್ರೀಯ ಮಹತ್ವವನ್ನು ಹೊಂದಿರುತ್ತದೆ. ಹವೇಲಿ ಶಬ್ದವು "ವಿಭಜನೆ" ಅಥವಾ "ಖಾಸಗಿ ಸ್ಥಳ" ಎಂಬ ಅರ್ಥದ ಅರಬ್ಬೀ ಶಬ್ದವಾದ ಹವಾಲಿಯಿಂದ ವ್ಯುತ್ಪನ್ನವಾಗಿದೆ. ಇದನ್ನು ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಜನಪ್ರಿಯಗೊಳಿಸಲಾಯಿತು, ಮತ್ತು ಇದು ಯಾವುದೇ ವಾಸ್ತುಶಾಸ್ತ್ರೀಯ ಸಂಬಂಧಗಳನ್ನು ಹೊಂದಿರಲಿಲ್ಲ.[೧][೨] ನಂತರ, ಹವೇಲಿ ಶಬ್ದವನ್ನು ಭಾರತೀಯ ಉಪಖಂಡದಲ್ಲಿ ಕಂಡುಬರುವ ವಿವಿಧ ಶೈಲಿಗಳ ಪ್ರಾದೇಶಿಕ ದೊಡ್ಡಮನೆಗಳು, ಛಾವಣಿ ಮನೆ ಹಾಗೂ ದೇವಸ್ಥಾನಗಳಿಗೆ ಜಾತಿವಾಚಕ ಪದವಾಗಿ ಬಳಸಲಾಯಿತು.[೩]

ಉಲ್ಲೇಖಗಳು[ಬದಲಾಯಿಸಿ]

  1. "haveli - definition of haveli in English from the Oxford dictionary". Oxforddictionaries.com. Archived from the original on 2018-12-25. Retrieved 2016-01-19.
  2. Sarah, Tillotson (1998). Indian Mansions: A Social History of the Haveli. Orient longman. p. 72. ISBN 0-900891-91-2.
  3. Bahl, Vani. "Haveli — A Symphony of Art and Architecture". The New Indian Express. Archived from the original on 2016-02-20. Retrieved 2016-01-19.
"https://kn.wikipedia.org/w/index.php?title=ಹವೇಲಿ&oldid=1205803" ಇಂದ ಪಡೆಯಲ್ಪಟ್ಟಿದೆ