ಹಲಸಿನ ಎಲೆಯ ಮೂಡೆ
ಪ್ರದೇಶ ಅಥವಾ ರಾಜ್ಯ | ಕರಾವಳಿ |
---|---|
ಸಮಾನ ಭಕ್ಷ್ಯಗಳು | ಇಡ್ಲಿ |
ಹಲಸಿನ ಎಲೆ[೧] ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಇದರ ಉಪಯೋಗ ಬಹಳ. ಇಡ್ಲಿ ಹಿಟ್ಟನ್ನು ಹಲಸಿನ ಎಲೆಯಲ್ಲಿ ತುಂಬಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದೊಂದು ವಿಶಿಷ್ಟ ಖಾದ್ಯ ಕೂಡ. ಇದರಲ್ಲಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್ ಗುಣವಿದೆ. ಕ್ಯಾನ್ಸರ್ ಹಾಗೂ ಹೃದಯ ರೋಗಗಳನ್ನು ತಡೆಯುತ್ತದೆ .ಡಯಾಬಿಟಿಸ್ ನ್ನು ನಿಯಂತ್ರಣದಲ್ಲಿ ಇಡುತ್ತದೆ. ನಮ್ಮ ದೇಹದಲ್ಲಿನ ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ. ಹಲಸಿನ ಮರದ ಎಲೆಯಿಂದ ತಯಾರಿಸಿದ 'ಕೊಟ್ಟೆ'ಯಲ್ಲಿ ಮಾಡಿದ ತಿಂಡಿ 'ಕೊಟ್ಟೆ ಕಡುಬು'. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರಚಲಿತ. ಸಮಾರಂಭಗಳಲ್ಲಿ ಕಡುಬಿಗೆ ಎತ್ತರದ ಸ್ಥಾನ. ಕೊಟ್ಟೆಗೆ 'ತೊಟ್ಟೆ, ಮೂಡೆ' ಎಂದೂ, ಕಡುಬಿಗೆ 'ಕೊಟ್ಟಿಗೆ' ಎನ್ನುವುದೂ ಇದೆ.
ಹಲಸಿನ ಮೂಡೆ (ಕೊಟ್ಟೆ )ತಯಾರಿಸುವ ವಿಧಾನ
[ಬದಲಾಯಿಸಿ]ಕೊಟ್ಟೆ ತಯಾರಿಸುವುದು ಜಾಣ್ಮೆ ಕೆಲಸ. ಹಲಸಿನ ನಾಲ್ಕು ಎಲೆಗಳ ತುದಿಗಳನ್ನು ಚಿಕ್ಕ ಕಡ್ಡಿ ಸಹಾಯದಿಂದ ಮೊದಲು ಜೋಡಿಸುತ್ತಾರೆ. ನಂತರ ವೃತ್ತಾಕಾರವಾಗಿ (ಎಲೆಯ ಹಿಂಭಾಗ ಕೊಟ್ಟೆಯ ಒಳಮೈಗೆ ಬರುವಂತೆ) ಎಲೆಗಳನ್ನು ಜೋಡಿಸುತ್ತಾ ಬಂದಾಗ 'ಕೊಟ್ಟೆ' ಸಿದ್ಧ. ರುಬ್ಬಿದ ಅಕ್ಕಿಹಿಟ್ಟನ್ನು ಕೊಟ್ಟೆಯೊಳಗೆ ತುಂಬಿ ಹಬೆಯಲ್ಲಿ ಬೇಯಿಸಿದರೆ 'ಕೊಟ್ಟೆ ಕಡುಬು' ರೆಡಿ. ಬೆಂದ ಬಳಿಕ ಎಲೆಗಳನ್ನು ತೆಗೆಯಬೇಕು. ಕಡುಬಿನ ಮೇಲೆ ಎಣ್ಣೆ ಯಾ ತುಪ್ಪ ಹಾಕಿ, ಚಟ್ನಿಯೊಂದಿಗೆ ಸವಿಯಲು ಕುಳಿತರೆ ಐದಾರು ಕಡುಬು ಹೊಟ್ಟೆಗಿಳಿಯುವುದು ಗ್ಯಾರಂಟಿ. ಹಲಸಿನ ಎಲೆಯ ಕೊಟ್ಟೆಯನ್ನು ಹಳ್ಳಿಯಲ್ಲಿ ಮನೆಯಲ್ಲೇ ತಯಾರಿಸುತ್ತಾರೆ.ಹಲಸಿನ ಎಲೆಯನ್ನು ಆಯುವುದು ಮುಖ್ಯ ಕೆಲಸ. ಸಿದ್ಧವಾದ ಕೊಟ್ಟೆಯನ್ನು ಪ್ಲಾಸ್ಟಿಕ್ಕಿಚೀಲದೊಳಗಿಟ್ಟರೆ ಮಳೆಗಾಲದಲ್ಲಾದರೆ ನಾಲ್ಕೈದು ದಿವಸ ತಾಳಿಕೆ. ಬೇಸಿಗೆಯಲ್ಲಿ ಎರಡೇ ದಿವಸ. 'ಫ್ರೆಶ್ ಎಲೆಯಲ್ಲಿ ತಯಾರಿಸಿದ ಕೊಟ್ಟೆಕಡುಬು ತಿನ್ನಲು ರುಚಿ' ಎನ್ನುತ್ತಾರೆ.