ಹರ್ವಂತ್ ಕೌರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರ್ವಂತ್ ಕೌರ್
೧೯ನೇ ಕಾಮನ್ವೆಲ್ತ್ ಗೇಮ್ಸ್-೨೦೧೦ರಲ್ಲಿ ಹರ್ವಂತ್ ಕೌರ್
ವೈಯುಕ್ತಿಕ ಮಾಹಿತಿ
ಜನನ (1980-07-05) ೫ ಜುಲೈ ೧೯೮೦ (ವಯಸ್ಸು ೪೩)
ಎತ್ತರ1.68 m (5 ft 6 in)
Sport
ದೇಶ ಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಡಿಸ್ಕಸ್ ಥ್ರೋ
ಶಾಟ್ ಪುಟ್
ತರಬೇತುದಾರರುಪರ್ವೀರ್ ಸಿಂಗ್
Achievements and titles
ವೈಯಕ್ತಿಕ ಪರಮಶ್ರೇಷ್ಠShot Put: 15.75 (ಬೆಂಗಳೂರು ೨೦೦೨)
Discus Throw: 63.05 m (ಕೈವ್ ೨೦೦೪)
Updated on ೧೦ July ೨೦೧೩.

ಹರ್ವಂತ್ ಕೌರ್ (ಜನನ ೫ ಜುಲೈ ೧೯೮೦) ಒಬ್ಬ ಭಾರತೀಯ ಡಿಸ್ಕಸ್ ಎಸೆತಗಾರ್ತಿ ಮತ್ತು ಶಾಟ್ ಪುಟರ್. ಇವರು ೨೦೦೨ ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. [೧] ೨೦೦೩ ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕನೇ ಸ್ಥಾನ ಮತ್ತು ೨೦೦೬ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಏಳನೇ ಸ್ಥಾನ ಪಡೆದರು. ಜೊತೆಗೆ ಅವರು ೨೦೦೪ ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಮತ್ತು ಅರ್ಹತಾ ಸುತ್ತುಗಳಲ್ಲಿ ೧೩ ನೇ ಶ್ರೇಯಾಂಕವನ್ನು ಪಡೆದರು. ಆಕೆಯ ವೈಯಕ್ತಿಕ ಕೋಚ್ ಪರ್ವೀರ್ ಸಿಂಗ್. ೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. [೨]

ಆಕೆಯ ವೈಯಕ್ತಿಕ ಅತ್ಯುತ್ತಮ ಎಸೆತವು ೬೩.೦೫ ಮೀಟರ್‌ಗಳು. ಆಗಸ್ಟ್ ೨೦೦೪ ರಲ್ಲಿ ಕೈವ್‌ನಲ್ಲಿ ಸಾಧಿಸಲಾಯಿತು. ಇವರು ೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರು. ಆದರೆ ಫೈನಲ್‌ಗೆ ತಲುಪಲು ವಿಫಲರಾದರು ಮತ್ತು ಅರ್ಹತಾ ಪಂದ್ಯಗಳಲ್ಲಿ ೫೬.೪೨ ಮೀ ಎಸೆಯುವ ಮೂಲಕ ೧೭ ನೇ ಶ್ರೇಯಾಂಕವನ್ನು ಪಡೆದರು.

ಸಹ ನೋಡಿ[ಬದಲಾಯಿಸಿ]

  • ೨೦೦೮ ರ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡ.

ಉಲ್ಲೇಖಗಳು[ಬದಲಾಯಿಸಿ]

  1. Asian Championships – GBR Athletics
  2. "CWG: Poonia leads India's medal sweep in discus throw". NDTV. 11 October 2010. Retrieved 10 July 2013.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • ವಿಶ್ವ ಅಥ್ಲೆಟಿಕ್ಸ್ನಲ್ಲಿ ಹರ್ವಂತ್ ಕೌರ್.

[[ವರ್ಗ:ಜೀವಂತ ವ್ಯಕ್ತಿಗಳು]]