ಹರೇಕೃಷ್ಣ ದೇವಸ್ಥಾನ (ಟೊರಾಂಟೋ ನಗರ)
'ಹರೇ ಕೃಷ್ಣ ದೇವಾಲಯ' ಕೆನಡ ದೇಶದ, ಆಂಟೇರಿಯೋ ಪ್ರಾಂತ್ಯದ ಟೊರಾಂಟೋನಗರದ ೨೪೩, ಅವೆನ್ಯೂ ರೋಡ್ ನಲ್ಲಿ ಸ್ಥಾಪಿಸಲ್ಪಟ್ಟಿದೆ.[೧] ೧೮೯೯ ರಲ್ಲಿ ನಿರ್ಮಿಸಲ್ಪಟ್ಟ ಈ ಪುರಾತನ ಇಗರ್ಜಿ, ಕ್ರೈಸ್ತ ಧರ್ಮದ ಒಂದು ಮಹತ್ವದ ಕಟ್ಟಡವಾಗಿದ್ದು, 'ಪ್ರೆಸ್ಬಿಟೇರಿಯನ್ ಚರ್ಚ್ ಆಫ್ ದ ಕಾನ್ವೆಂಟ್,' ಎಂಬ ಹೆಸರಿನಲ್ಲಿ ಗುರುತಿಸಲ್ಪಡುತ್ತಿತ್ತು. ಈ ಸುಂದರ ಕಟ್ಟಡದ ಶಿಲ್ಪಿಗಳು 'ಗಾರ್ಡನ್' ಮತ್ತು 'ಹೆಲಿವೆಲ್' ಎಂಬ ಟೊರಾಂಟೋನಗರದ ಕಟ್ಟಡ ನಿರ್ಮಾಪಕರು.
ISKCON
[ಬದಲಾಯಿಸಿ]'ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಸ್ ನೆಸ್' (ISKCON) ಎಂಬುದು ಹರೇ ಕೃಷ್ಣ ಮೂವ್ಮೆಂಟ್ ಗೆ ಮತ್ತೊಂದು ಹೆಸರು. ಇದು ಗೌಡೀಯ ವೈಷ್ಣವ ಮತದ ಸಂಘಟನೆಯಾಗಿದೆ. ೧೯೬೬ ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 'ಶ್ರೀ.ಎ.ಸಿ.ಭಕ್ತಿ ವೇದಾಂತ ಸ್ವಾಮಿ ಶ್ರೀಲಾ ಪ್ರಭುಪಾದ'ರಿಂದ ಸ್ಥಾಪನೆಗೊಂಡ ಈ ಸಂಸ್ಥೆ, ೪೦ ವರ್ಷಗಳಲ್ಲಿ ವಿಶ್ವದಲ್ಲೆಲ್ಲಾ ವ್ಯಾಪಿಸಿ ಹೆಸರುವಾಸಿಯಾಗಿದೆ. ಯಾವ ಲಾಭವನ್ನೂ ಅಪೇಕ್ಷಿಸದ ವಿದ್ಯಾಪ್ರಸಾರಕ ಸಂಸ್ಥೆ, ಚೈತನ್ಯ ಮಹಾಪ್ರಭುಗಳ ಸಂಕೀರ್ತನಗಳನ್ನು ವಿಶ್ವದ ಭಕ್ತರಿಗೆ ಸುಲಭವಾಗಿ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ವಿಶ್ವದ ಹಲವೆಡೆ ಸಂಚಾಲನೆಯಲ್ಲಿರುವ 'ಇಸ್ಕಾನ್ ಸಂಸ್ಥೆ'ಗಳ ವಿಳಾಸ ಹೀಗಿದೆ. [೨]ಸುತ್ತುತ್ತಿರುವ ಗೋಳಾಕೃತಿಯಮೇಲೆ ಕಂಪ್ಯೂಟರಿನ ಮೌಸನ್ನು ಕ್ಲಿಕ್ಕಿಸುವ ಮೂಲಕ,ವಿಶ್ವದ ನಗರಗಳಲ್ಲಿ 'ಇಸ್ಕಾನ್ ದೇವಾಲಯಗಳ ಬಗ್ಗೆ ಮಾಹಿತಿ'ಯನ್ನು ಹತ್ತಿರದಲ್ಲಿ ವೀಕ್ಷಿಸಿ ಗ್ರಹಿಸಬಹುದು.