ವಿಷಯಕ್ಕೆ ಹೋಗು

ಹರಿಶ್ಚಂದ್ರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನ ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಹರಿಶ್ಚಂದ್ರ ಬಗ್ಗೆ.
೧೯೬೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಸತ್ಯ ಹರಿಶ್ಚಂದ್ರ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.
ಹರಿಶ್ಚಂದ್ರ (ಚಲನಚಿತ್ರ)
ಹರಿಶ್ಚಂದ್ರ
ನಿರ್ದೇಶನಆರ್.ನಾಗೇಂದ್ರರಾಯ
ಚಿತ್ರಕಥೆಆರ್. ನಾಗೇಂದ್ರ ರಾವ್
ಕಥೆಪೌರಾಣಿಕ ಕತೆ
ಸಂಭಾಷಣೆಆರ್. ನಾಗೇಂದ್ರ ರಾವ್
ಪಾತ್ರವರ್ಗಸುಬ್ಬಯ್ಯ ನಾಯ್ಡು ಲಕ್ಷ್ಮೀಬಾಯಿ ಆರ್.ನಾಗೇಂದ್ರರಾವ್, ಜೆ.ವಿ.ಕೃಷ್ಣಮೂರ್ತಿ ರಾವ್, ಎಂ.ಜಿ.ಮರಿರಾವ್
ಸಂಗೀತಸರಸ್ವತಿ ಆರ್ಕೇಸ್ಟ್ರಾ, ಮದರಾಸು
ಛಾಯಾಗ್ರಹಣಜೆ.ವಿ.ಕೃಷ್ಣಮೂರ್ತಿ ರಾವ್
ಸಂಕಲನಎಂ.ವಿ.ರಾಮನ್
ಬಿಡುಗಡೆಯಾಗಿದ್ದು೧೯೪೩
ನೃತ್ಯಬಿ.ರಮಣಪಿಳ್ಳೈ, (ಜಾನಪದ ನರ್ತನ: ಜಯಲಕ್ಷ್ಮಿ ಮತ್ತು ಜಯ)
ಚಿತ್ರ ನಿರ್ಮಾಣ ಸಂಸ್ಥೆಸರಸ್ವತಿ ಸಿನಿ ಫಿಲಂಸ್ ಲಿ., ಮೈಲಾಪುರ
ಸಾಹಿತ್ಯಆರ್. ನಾಗೇಂದ್ರ ರಾವ್
ಹಿನ್ನೆಲೆ ಗಾಯನಆಯಾ ಪಾತ್ರಧಾರಿಗಳು

"ಹರಿಶ್ಚಂದ್ರ" ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಸರಸ್ವತಿ ಸಿನಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಆರ್.ನಾಗೇಂದ್ರ ರಾಯರು ನಿರ್ಮಿಸಿ, ನಿರ್ದೇಶಿಸಿದರು.

ಕಥಾ ಸಾರಂಶ

[ಬದಲಾಯಿಸಿ]

ಹರಿಶ್ಚಂದ್ರ ಸತ್ಯಕ್ಕಾಗಿ ರಾಜ್ಯ,ಕೋಶ,ಹೆಂಡತಿ,ಮಕ್ಕಳನ್ನು ಬಿಟ್ಟು ಕಷ್ಟಪಡುವ ಪೌರಾಣಿಕ ಕಥಾನಕವೇ ಈ ಚಿತ್ರದ ಕಥಾ ಸಾರಾಂಶ.ವಿಶ್ವಾಮಿತ್ರನನನ್ನು ಖಳನಾಯಕನಂತೆ ಚಿತ್ರಿಸದೇ ತಮ್ಮಲ್ಲಿನ ತಪಃಶಕ್ತಿ ಧಾರರೆಯೆರುವ ಸಲುವಾಗಿ ಈ ಕಠಿಣ ಪರಿಕ್ಷೆಗಳನ್ನು ಒಡ್ಡುವಂತೆ ಚಿತ್ರನಾಟಕ ರಚಿಸಲಾಗಿತ್ತು.

ವಿಶೇಷತೆ

[ಬದಲಾಯಿಸಿ]

ಆರ್. ನಾಗೇಂದ್ರ ನಿರ್ದೇಶನದ ಮೊದಲ ಚಿತ್ರ ಇದಾಗಿದೆ.[]ರಾಜಯ್ಯಂಗಾರ್ ನಟಿಸಿರುವ ಮೊದಲ ಚಿತ್ರ ಕೂಡ. ಬೇರೆ ಭಾಷೆಗೆ ಡಬ್ ಆದ ಭಾರತದ ಮೊದಲ ಚಿತ್ರವಾಗಿದೆ.[] ತಮಿಳು ಭಾಷೆಗೆ ಡಬ್ ಆದ ಈ ಚಿತ್ರಕ್ಕೆ ಕನ್ನಡ ಕಲಾವಿದರೇ ಸಂಭಾಷಣೆ ಹೇಳಿದರು. ೧೧,೦೦೦ ಅಡಿಗಿಂತಲೂ ಯಾವುದೇ ಚಲಚಿತ್ರ ಉದ್ದವಿರಬಾರದೆಂಬ ಸರ್ಕಾರದ ನಿಷೇಧಾಜ್ಞೆಯಂತೆ ಆ ಮಿತಿಯೊಳಗೆ ಚಿತ್ರನ್ನು ತಯಾರಿಸಲಾಯಿತು.

ನಿರ್ಮಾಣ ಮತ್ತು ಬಿಡುಗಡೆ

[ಬದಲಾಯಿಸಿ]

ಸೆನ್ಸಾರ್ ಆದ ಬಳಿಕ ೧೦,೯೯೦ ಅಡಿ ಉದ್ದವಿದ್ದ ಈ ಚಲನಚಿತ್ರ, ಏಪ್ರಿಲ್ ೧೯೪೩ರಲ್ಲಿ ಬಿಡುಗಡೆಯಾಯಿತು. ಧಾರವಾಡದಲ್ಲಿ ಶತದಿನೋತ್ಸವ ಆಚರಿಸಿದ್ದಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿ ೨೯ ವಾರಗಳ ಕಾಲ ಪ್ರದರ್ಶಿತವಾದ ಮೊದಲ ಚಿತ್ರ ಇದು.[]

ಪಾತ್ರ ವರ್ಗ

[ಬದಲಾಯಿಸಿ]
  • ಎಂ.ವಿ. ಸುಬ್ಬಯ್ಯ ನಾಯ್ಡು (ಹರಿಶ್ಚಂದ್ರ)
  • ಆರ್. ನಾಗೇಂದ್ರ ರಾವ್ (ವಿಶ್ವಾಮಿತ್ರ)
  • ಜಿ.ವಿ.ಕೃಷ್ಣಮೂರ್ತಿ ರಾವ್ (ನಕ್ಷತ್ರಿಕ)
  • ಬಿ.ಎಸ್. ರಾಜಯ್ಯಂಗಾರ್ (ನಾರದ)
  • ಎಂ.ಜಿ.ಮರಿ ರಾವ್ (ಮೈತ್ರೇಯ)
  • ಲಕ್ಷ್ಮಿ ಬಾಯಿ (ಚಂದ್ರಮತಿ)
  • ಮಾ| ನರಸಿಂಹನ್ (ಲೋಹಿತ)

ಉಲ್ಲೇಖ

[ಬದಲಾಯಿಸಿ]
  1. Pillai, Swarnavel Eswaran (2015). Madras Studios: Narrative, Genre, and Ideology in Tamil Cinema. India: SAGE Publications. pp. 107–108. ISBN 978-93-5150-121-3.
  2. R, Shilpa Sebastian (19 December 2019). "2019: The year when Kannada cinema went national". The Hindu.
  3. "Satya Harischandra 100 days in Dharwad". Chitraloka. 14 August 2013. Archived from the original on 7 October 2013. Retrieved 5 October 2013.