ಹನುಮಂತನಗರ

ವಿಕಿಪೀಡಿಯ ಇಂದ
Jump to navigation Jump to search

ಹನುಮಂತನಗರ ಎಂಬುದು ಮಂಡ್ಯ ಜಿಲ್ಲೆಯ ಧೀಮಂತ ಹೋರಾಟಗಾರರೆನಿಸಿಕೊಂಡಿರುವ ಶ್ರೀ ಜಿ ಮಾದೇಗೌಡರ ಒಂದು ಕನಸು ಎಂದು ಹೇಳಿದರೆ ತಪ್ಪಾಗಲಾರದು.ಇದು ಮದ್ದೂರು ತಾಲೂಕಿನ ಚಿಕ್ಕಆರಸಿನಕೆರೆ ಹೋಬಳಿಯ ವ್ಯಾಪ್ತಿಗೆ ಬರುತ್ತದೆ.ಕೆ.ಎಂ. ದೊಡ್ಡಿಯಿಂದ ೪ ಕಿ.ಮೀ ದೂರದಲ್ಲಿದೆ. ಈ ಸ್ಥಳವು ನೋಡುಗರಿಗೆ ಒಂದು ಪ್ರೇಕ್ಷಣೀಯ ಸ್ಥಳದಂತೆ ಕಾಣುತ್ತದೆ.ಇದು ಕೇವಲ ಧಾರ್ಮಿಕ ಕ್ಷೇತ್ರವಾಗಿರದೆ, ಶೈಕ್ಷಣಿಕವಾಗಿಯೂ ತನ್ನದೇ ಆದ ಸಾಧನೆಯನ್ನು ಮಾಡಿದೆ.ಅಂದರೆ ಉತ್ತಮವಾದ ಶಾಲ-ಕಾಲೇಜುಗಳನ್ನು ಒಳಗೊಂಡಿದ್ದು,ವಿದ್ಯಾದಾನಕ್ಕೆ ಹೆಸರುವಾಸಿಯಾಗಿದೆ.ಈ ದೇವಾಲಯದ ಬಳಿ ಸಾಕಷ್ಟು ಚಲನಚಿತ್ರಗಳನ್ನು ಕೂಡ ಚಿತ್ರಿಕರಿಸಲಾಗಿದೆ. ಈ ದೇವಾಲಯದ ನಿರ್ಮಾತೃವಾದ ಮಾನ್ಯ ಜಿ.ಮಾದೇಗೌಡರ ಹುಟ್ಟೂರು ಗುರುದೇವರಹಳ್ಳಿ. ಮದ್ದೂರಿನಿಂದ ಬೋರಾಪುರ ಮತ್ತು ಛತ್ರದಹೊಸಹಳ್ಳಿ ಮಾರ್ಗವಾಗಿ ಹೋದರೆ ಈ ಊರು ಸಿಗುತ್ತದೆ.ಗೌಡರು ಒಬ್ಬ ರೈತ ಮಗನಾಗಿ ಹುಟ್ಟಿ ರೈತರ ಕಷ್ಟಗಳನ್ನು ಪರಿಹರಿಸುವಲ್ಲಿ ಸಾಕಷ್ಟು ಯಶಶ್ವಿಯನ್ನು ಪಡೆದ ಕೆಚ್ಚೆದೆಯ ಗಂಡು ಎಂದು ಹೇಳಬಹುದು.