ಹಂಪಿ ಎಕ್ಸ್‍ಪ್ರೆಸ್
ಗೋಚರ
ಹಂಪಿ ಎಕ್ಸ್‍ಪ್ರೆಸ್ - ಇದು ಬೆಂಗಳೂರು ನಗರ ಮತ್ತು ನೈರುತ್ಯ ರೇಲ್ವೆ ಯ ಪ್ರಧಾನ ಕಚೇರಿ ಇರುವ ಹುಬ್ಬಳ್ಳಿ ನಡುವೆ ಸಾಗುವ ದೈನಂದಿನ ಎಕ್ಸ್‍ಪ್ರೆಸ್ ರೈಲು. ೧೬೫೯೧/೧೬೫೯೨ ಸಂಖ್ಯೆಗಳನ್ನು ಇದು ಹೊಂದಿದ್ದು, ಇದರ ಪ್ರಾಥಮಿಕ ನಿರ್ವಹಣೆಯನ್ನು ಹುಬಳ್ಳಿಯಲ್ಲಿ ಮಾಡಲಾಗುತ್ತದೆ.
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಹೆಸರನ್ನು ಇದಕ್ಕಿಡಲಾಗಿದ್ದು ಹಂಪೆಯ ಹತ್ತಿರದ ರೈಲುನಿಲ್ದಾಣವಾದ ಹೊಸಪೇಟೆಯನ್ನು ಇದು ಸಂಪರ್ಕಿಸುತ್ತದೆ.
ಮಾರ್ಗ ಮತ್ತು ವೇಳಾಪಟ್ಟಿ
[ಬದಲಾಯಿಸಿ]ಈ ರೈಲು ಬೆಂಗಳೂರು ಕ್ಯಾಂಟೋನ್ಮೆಂಟ್, ಯಲಹಂಕ, ಹಿಂದುಪುರ, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆಗಳ ಮಾರ್ಗವಾಗಿ ಸಾಗಿ ಹುಬ್ಬಳ್ಳಿಯನ್ನು ತಲುಪುತ್ತದೆ.
- ರೈಲು ಸಂಖ್ಯೆ ೧೬೫೯೧ ಹುಬಳ್ಳಿಯನ್ನು ಪ್ರತಿದಿನ ಸಂಜೆ ೫.೪೫ಕ್ಕೆ ಬಿಟ್ಟು ೫೬೭ ಕಿಲೋಮೀಟರ್ ದೂರವನ್ನು ಕ್ರಮಿಸಿ ಬೆಂಗಳೂರನ್ನು ಮರುದಿನ ಮುಂಜಾನೆ ೬.೧೦ ಗಂಟೆಗೆ ತಲುಪುತ್ತದೆ. ಪ್ರಯಾಣದ ಸಮಯ ೧೨ ಗಂ.೨೫ ನಿ. ಸರಾಸರಿ ವೇಗ ಪ್ರತಿಗಂಟೆಗೆ ೪೮ ಕಿ.ಮೀ.
- ರೈಲು ಸಂಖ್ಯೆ ೧೬೫೯೨ ಬೆಂಗಳೂರನ್ನು ರಾತ್ರಿ ೯ ಗಂಟೆಗೆ ಬಿಟ್ಟು ಮರುದಿನ ಬೆಳಿಗ್ಗೆ ೧೦.೧೦ ಗಂಟೆಗೆ ಹುಬ್ಬಳ್ಳಿಯನ್ನು ತಲುಪುತ್ತದೆ. ಪ್ರಯಾಣದ ಸಮಯ ೧೩ ಗಂ.೧೦ ನಿ. ಸರಾಸರಿ ವೇಗ ಪ್ರತಿಗಂಟೆಗೆ ೪೫ ಕಿ.ಮೀ.
ಅಪಘಾತಗಳು ಮತ್ತು ಇತರ ಘಟನೆಗಳು
[ಬದಲಾಯಿಸಿ]೨೨ ಮೇ ೨೦೧೨ರಂದು ೧೬೫೯೧ ಸಂಖ್ಯೆಯ ರೈಲು ಪೆನುಕೊಂಡದಲ್ಲಿ ನಿಂತಿದ್ದ ಸರಕುಸಾಗಣೆಯ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ೧೫ ಜನರು ಸತ್ತು ೭೪ ಜನರು ಗಾಯಗೊಂಡರು.