ಹಂಟಿಂಗ್ಟನ್ ಬೀಚ್, ಆರೇಂಜ್ ಕೌಂಟಿ, ಕ್ಯಾಲಿಫೋರ್ನಿಯ

ವಿಕಿಪೀಡಿಯ ಇಂದ
Jump to navigation Jump to search
ಹಂಟಿಂಗ್ಟನ್ ಬೀಚ್

'ಹಂಟಿಂಗ್ಟನ್ ನಗರ ಹಾಗೂ ಬೀಚ್',[೧] ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ 'ಅರೇಂಜ್ ಕೌಂಟಿ'ಯ ಜಾಗಗಳಿಗೆಲ್ಲಾ ಸಂಪರ್ಕ ಸೌಲಭ್ಯವಿದೆ. ಈ ಸ್ಥಳ, ಲಾಂಗ್ ಬೀಚ್ ಗೂ ಹತ್ತಿರ. ಅಂತರಾಷ್ಟ್ರೀಯವಾಗಿ, ’Surfing City,’ ಯೆಂದು ಕರೆಸಿಕೊಳ್ಳುವ ಹಂಟಿಂಗ್ಟನ್ ನಗರದ, ೮ ಮೈಲಿ ಉದ್ದದ, ಮಧ್ಯೆ ಎಲ್ಲೂ ಮುಕ್ಕಾಗದ, ಕಡಲತೀರ, Jogging, Biking, Swimming, rollerblade, Professional Sports ಗಳಿಗೆ, ವಿಶೇಷವಾಗಿ ಹೇಳಿಮಾಡಿಸಿ ತಯಾರಿಸಿದ ಜಾಗ.

ಇಲ್ಲಿ ನಡೆಯುವ ಆಟ, ಸ್ಪರ್ಧೆಗಳು[ಬದಲಾಯಿಸಿ]

'ಹಂಟಿಂಗ್ಟನ್ ಬೀಚ್, ಆರೇಂಜ್ ಕೌಂಟಿ, ಕ್ಯಾಲಿಫೋರ್ನಿಯ'

ಹಂಟಿಂಗ್ಟನ್ ನಗರದಲ್ಲಿ , ಅನೇಕ ಲೈಬ್ರೆರಿಗಳು, ಮ್ಯೂಸಿಯೆಮ್ ಗಳು, ೫, City High School ಗಳು, ೩೫ ಪ್ರಾಥಮಿಕ ಶಾಲೆಗಳು, Golden West Community College, ಇವೆ. ಹತ್ತಿರದಲ್ಲೇ, UC Irvine, Cal State Long Beach, Cal State Fullertone, ಇತ್ಯಾದಿಗಳಿವೆ. ಶುಚಿತ್ವ, ಶುದ್ಧತೆ, ಸಂದರ್ಯಪ್ರಜ್ಞೆ, ಅವನ್ನು ಸದಾ ಕಾಯ್ದಿಡುವ ಮನೋಧರ್ಮ ; ಇವುಗಳು ಯಶಸ್ವೀ ಅಮೆರಿಕನ್ ಜನಜೀವನದ ರಹಸ್ಯಗಳು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಉತ್ತಮ ಫಲಿತಾಂಷಗಳನ್ನು ಅಪೇಕ್ಷಿಸಬಹುದು. ಸುಮಾರು ೧೯೫,೦೦೦ ಜನರಿರುವ ಹಂಟಿಂಗ್ಟನ್ ನಲ್ಲಿ, ಸೂರ್ಯನ ಬೆಳಕು ಧಾರಾಳವಾಗಿರುವುದು, ಇಲ್ಲಿನ ನಗರವಾಸಿಗಳಿಗೆ ಸಂತೋಷದ ಸಂಗತಿ. ಪಾಶ್ಚಿಮಾತ್ಯದೇಶದಜನರೆಲ್ಲಾ ಈ ತರಹದ ಸನ್ನಿವೇಷವನ್ನು ಇಷ್ಟಪಡುತ್ತಾರೆ.

ಆರೇಂಜ್ ಕೌಂಟಿಯಲ್ಲಿ (OC) ಹಲವಾರು ಒಳ್ಳೆಯ ಬೀಚ್ ಗಳಿವೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. huntingtonbeach,ca