ನ್ಯೂ ಪೋರ್ಟ್ ಬೀಚ್, ಕ್ಯಾಲಿಫೋರ್ನಿಯ
'New Port Beach,'ಬೆಳೆದ ಬಗೆ[ಬದಲಾಯಿಸಿ]
'ನ್ಯೂ ಪೋರ್ಟ್ ಬೀಚ್, ಕ್ಯಾಲಿಫೋರ್ನಿಯ, [೧] 'ನ್ಯೂ ಪೋರ್ಟ್ ಸಿಟ್ ಬೀಚ್', ಆರೇಂಜ್ ಕೌಂಟಿಯ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟಿದೆ. ಉತ್ತರಕ್ಕೆ 'ಲಾಸ್ ಎಂಜಲೀಸ್ ಕೌಂಟಿ', ದಕ್ಷಿಣಕ್ಕೆ 'ಸಾನ್ಡಿಯಾಗೊ ಕೌಂಟಿ'ಗಳಿವೆ. ೧೯೦೫ ರಲ್ಲಿ, ನಗರ ಚೆನ್ನಾಗಿಬೆಳೆದು ಹೆಸರುವಾಸಿಯಾಗಿತ್ತು. ನ್ಯೂಪೋರ್ಟ್ ಸಿಟಿಯ ಕಡಲ ತೀರಪ್ರದೇಶ ೧೯೦೬, ರ, ಸೆಪ್ಟೆಂಬರ್, ೧ ರಿಂದ ಸೇರಲ್ಪಟ್ಟಿತು. ಈಗಿನ, ಚಿಟಿ ಚಾರ್ಟರ್, ೧೯೫೪ ರಲ್ಲಿ ಅನುಮೋದಿಸಲ್ಪಟ್ಟಿತು. ಅದೂಅಲ್ಲದೇ, ’ಪೆಸಿಫಿಕ್ ರೈಲ್ ರೋಡ್,’ ನ ಕಾಮಗಾರಿ ಶುರುವಾಗಿತ್ತು. ದಕ್ಷಿಣದ ಟರ್ಮಿನಸ್ ಆಗಿ, ನ್ಯೂಪೋರ್ಟ್’ ಬಂದರನ್ನು ಬಡಾವ ಮಾಡಲಾಯಿತು. ಮುಂದೆ ’ಕ್ಯಾಲಿಫೋರ್ನಿಯ,’ ನಗರದ ’ಡೌನ್ ಟೌನ್,’ ಗೆ ಸಂಪರ್ಕ ಕೊಡಲಾಯಿತು. ’ನ್ಯೂಪೋರ್ಟ್,’ ಯೆಂಬ ನಾಮಕರಣವೂ ಆಯಿತು. ಆಗ ಅಲ್ಲಿ ವಾಸಿಸುತ್ತಿದವರ ಸಂಖ್ಯೆ, ಕೇವಲ ೨೦೬ ಮಂದಿ ಮಾತ್ರ. ೨೦೧೦ ರ ಜನಗಣತಿಯಂತೆ, ಇಲ್ಲಿ ೮೬,೭೩೮ ಜನ ನಾಗರಿಕರು ಖಾಯಂ ಆಗಿ ವಾಸಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ೧ ಲಕ್ಷಕ್ಕೂ ಮೀರಿ ಪರ್ಯಟಕರು ಇಲ್ಲಿಗೆ ಭೇಟಿಕೊಡುತ್ತಾರೆ. ಸುಮಾರು ೨೦,೦೦೦ ರಿಂದ, ೧೦೦,೦೦೦ ಜನ ವಲಸಿಗರು ಪ್ರತಿದಿನ ಇದ್ದೇ ಇರುತ್ತಾರೆ. ಜನವಸತಿಗೆ ಅತ್ಯಂತ ಉತ್ತಮವಾದ ಸ್ಥಳ. 'ಆಧುನಿಕ ಶಾಪಿಂಗ್ ಸೌಕರ್ಯ'ಗಳು ಹೆಚ್ಚಾಗಿವೆ. ಅತಿ ದೊಡ್ಡ ವಾಣಿಜ್ಯ ಪ್ರದೇಶಗಳಿವೆ. ಅತ್ಯುತ್ತಮ ಶಾಲಾ-ಕಾಲೇಜುಗಳಿವೆ. ಈ ಬಂದರಿನ ಬಳಿಯಲ್ಲಿ ಸುಮಾರು ೯,೦೦೦ ಕ್ಕೂ ಹೆಚ್ಚು ತರಹಾವರಿಯ ನಾವೆಗಳನ್ನು ಲಂಗರಿನಲ್ಲಿ ನಿಲ್ಲಿಸುವ ವ್ಯವಸ್ಥೆ ಇದೆ. ೨೧ ಚ. ಮೈ. ಪ್ರದೇಶದಲ್ಲಿ ಬೇ-ವಲಯ ಹಾಗೂ ನಗರದ ೮ ಮೈಲಿ ಪರಿಸರದ ಹೊರವಲಯಗಳಲ್ಲಿ ಕಡಲಿನ ಕೃಪೆಯಿಂದ ಸೊಗಸಾದ ಮೀನುಗಳನ್ನು ಹಿಡಿಯುವ ಅನುಕೂಲ ಕಲ್ಪಿಸಿದ್ದಾರೆ. ಈಜಾಡಲು ಒಳ್ಳೆಯ ಅನುಕೂಲವಿದೆ, ಸರ್ಫಿಂಗ್, ಮತ್ತು ಕ್ರೀಡೆಗಳಿಗೆ ಅತ್ಯುತ್ತಮ ಸ್ಥಳ.
ಆಡಳಿತ ವ್ಯವಸ್ಥೆ[ಬದಲಾಯಿಸಿ]
'ನ್ಯೂಪೋರ್ಟ್ ಸಿಟಿ'ಯಲ್ಲಿ, ಸರಕಾರದ ಒಂದು 'ಕೌನ್ಸಿಲ್' ಘಟನೆಯಾಗಿದ್ದು, ಮ್ಯಾನೇಜರ್ ಇದರ ಆಡಳಿತ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದಾರೆ. ೭ ಸಿಟಿ ಕೌನ್ಸಿಲ್ ಸದಸ್ಯರು, ಜಿಲ್ಲೆಯ ನಾಗರಿಕರಿಂದ, ಚುನಾಯಿತರಾಗುತ್ತಾರೆ. ೪ ವರ್ಷದ ಅವಧಿಯಲ್ಲಿ, ಕೌನ್ಸಿಲ್ ನಲ್ಲಿ ಮೇಯರ್ ಜೊತೆ, ೬ ಜನ ಇತರ ಸದಸ್ಯರಿರುತ್ತಾರೆ. ಈ ಸಮಿತಿ, ಪೋಲೀಸ್ ಕಾನೂನು ವ್ಯವಸ್ಥೆಯನ್ನು ಆಯೋಜಿಸಲು, ಲೆಕ್ಖ ಪತ್ರಗಳ ವರದಿ ಸಲ್ಲಿಸಲು, ಹಲವು ಸಮಿತಿಗಳ ನೆರವಿನಿಂದ ನಿರ್ವಹಿಸುತ್ತವೆ. 'ಸಿಟಿ ಮ್ಯಾನೇಜರ್', 'ಸಿಟಿ ಅಟಾರ್ನಿ', 'ಸಿಟಿ ಕಾರಕೂನರ' ನೇಮಕಾತಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಾರೆ.
'ಕಾಸ್ಟಾ-ಮೆಸಾನಗರಕ್ಕೆ ಅತಿ-ಹತ್ತಿರದಲ್ಲಿದೆ[ಬದಲಾಯಿಸಿ]
ಸುಮಾರು ಸಮುದ್ರಮಟ್ಟಕ್ಕಿಂತ ೧೧೬೧ ಅಡಿಎತ್ತರದಲ್ಲಿರುವ, ಪಶ್ಚಿಮಕ್ಕೆ ’ಹಂಟಿಂಗ್ಟನ್ ಬೀಚು,’, ಉತ್ತರಕ್ಕೆ ’ಕಾಸ್ಟಾ-ಮೆಸಾನಗರ, ಹಾಗೂ ’ಜಾನ್ ವ್ಹೇನ್ ವಿಮಾನ ನಿಲ್ದಾಣ’, ಗಳಿವೆ. ’ಕರೋನ,’ ’ಡೆಲ್ಮಾರ್,’ ಕೂಡ ಸೇರಿಕೊಂಡಿದೆ. ನ್ಯೂಪೋರ್ಟ್ ತೀರಕ್ಕೆ ’ಬಲ್ಬೋವ ದ್ವೀಪ,’ ಅಂಟಿಕೊಂಡಿದೆ. ’ಸ್ಯಾನ್ ಜ್ಯಾಕ್ವಿನ್ ಬೆಟ್ಟಗಳೂ,’ ಸೇರಿವೆ. ’ಸಾಂಟ ಅನ್ನಾ ನದಿ,’ ’ನ್ಯೂಪೋರ್ಟ್,’ ಗೆ ಸೇರಿಕೊಳ್ಳುತ್ತದೆ. ಕ್ಯಾಲಿಫೋರ್ನಿಯ ರಾಜ್ಯದ ಎಲ್ಲೆಡೆ, ಹವಾಮಾನ ಚಳಿಗಾಲದಲ್ಲೂ ಅಷ್ಟೇನೂ ಚಳಿಯಿರದೆ, ಹಿತಕರವಾಗಿರುವುದು ಇಲ್ಲಿಯ ವಿಶೇಷತೆಗಳಲ್ಲೊಂದು. ಭಾರತೀಯ ಸಮುದಾಯದವರನ್ನು ಇಲ್ಲಿನ ಬೀಚ್ ಗಳಲ್ಲಿ ಕಾಣಬಹುದು. [೨]
ನ್ಯೂಪೋರ್ಟ್ ಬಂದರಿನ ಹತ್ತಿರದ ದ್ವೀಪಗಳು[ಬದಲಾಯಿಸಿ]
ಈ 'ಸಮುದ್ರ ಬೀಚಿ'ನ ಮತ್ತೊಂದು ವಿಶೇಷತೆಯೆಂದರೆ, ಇದು, ಸುಮಾರು ೮ ದ್ವೀಪಗಳ ಸಮೂಹದಿಂದ ಸುತ್ತುವರಿಯಲ್ಪಟ್ಟಿದೆ.
- 'ಬೇ ಐಲ್ಯಾಂಡ್',
- 'ಕಾಲಿನ್ಸ್ ಐಲ್ಯಾಂಡ್',
- 'ಹಾರ್ಬರ್ ಐಲ್ಯಾಂಡ್',
- 'ಲಿಡೊ ಐಲ್ಯಾಂಡ್',
- 'ಲಿಟಲ್ ಬಾಲ್ಬೊವ ಐಲ್ಯಾಂಡ್',
- 'ನ್ಯೂಪೋರ್ಟ್ ಐಲ್ಯಾಂಡ್',
ಇವೆಲ್ಲದರಲ್ಲೂ ಜನರು ಹೆಚ್ಚಾಗಿ ವಾಸಿಸುತ್ತಾರೆ. 'ಬಾಲ್ಬೊವ ದ್ವೀಪ'ದಲ್ಲಿ ಸ್ವಲ್ಪಮಟ್ಟಿಗೆ 'ವಾಣಿಜ್ಯ ಸಂಕೀರ್ಣ'ಗಳೂ ಸ್ಥಾಪಿಸಲ್ಪಟ್ಟಿವೆ.