ಸ್ವಾಮಿ ಸ್ಮರಣಾನಂದ ಗಿರಿ
ಗೋಚರ
ಸ್ವಾಮಿ ಸ್ಮರಣಾನಂದ ಗಿರಿಯವರು ಪರಮಹಂಸ ಯೋಗಾನಂದರಿಂದ 1917ರಲ್ಲಿ ಸ್ಥಾಪಿತವಾದ 'ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ'ದ ಪಸಕ್ತ ಕಾರ್ಯದರ್ಶಿಯಾಗಿದ್ದಾರೆ. ಈ ಸಂಘಟನೆಯು ಅಮೇರಿಕಾದ ಸೆಲ್ಫ್ ರಿಯಲೈಸೇಶನ್ ಫೆಲಾಶಿಪ್‍ನ ಭಾರತೀಯ ಅಂಗ ಸಂಸ್ಥೆಯಾಗಿದೆ.ಇವರು ಕೆನಡಾದ ಕೊನ್ಕೊರ್ಡಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿದ್ದರು. ವಿದ್ಯುನ್ಮಾನ ಹಾಗು ಸಂವಹನ ವಿಷಯದಲ್ಲಿ IIT-ಕಾರಾಪುರದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಇವರು 1985ರಲ್ಲಿ ಯೋಗದಾ ಸೊಸೈಟಿಗೆ ಸನ್ಯಾಸಿಯಾಗಿ ಸೇರುವ ಮೊದಲು ಅನೇಕ ವಿಶ್ವವಿದ್ಯಾಲಯ ಹಾಗು ಉದ್ಯಮಗಳಲ್ಲಿ ದುಡಿದಿದ್ದರು. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಸಿಧ್ಧಾರ್ಥ ಇಂಜೀನಿಯರಿಂಗ್ ಕಾಲೇಜು,ಒಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.[೧]
ಉಲ್ಲೇಖ
[ಬದಲಾಯಿಸಿ]- ↑ https://web.archive.org/web/*/http://www.biharyoga.net/world-yoga-convention/wyc-speaker-swami-smaranananda-giri/
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |