ಸ್ವಾಮಿನಾರಾಯಣ ಮಂದಿರ, ಅಹಮದಾಬಾದ್
ಶ್ರೀ ಸ್ವಾಮಿನಾರಾಯಣ ಮಂದಿರ ಕಾಲೂಪುರ್ (ಗುಜರಾತಿ: શ્રી સ્વામિનારાયણ મંદિર, અમદાવાદ, ದೇವನಾಗರಿ: श्री स्वामिरायण मन्दिर, अहमदाबाद) ಒಂದು ಹಿಂದೂ ಪಂಥವಾದ ಸ್ವಾಮಿನಾರಾಯಣ ಸಂಪ್ರದಾಯದ ಮೊದಲ ದೇವಾಲಯವಾಗಿತ್ತು. ಇದು ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಕಾಲೂಪುರ್ ಪ್ರದೇಶದಲ್ಲಿ ಸ್ಥಿತವಾಗಿದೆ. ಈ ದೇವಾಲಯವನ್ನು ಈ ಪಂಥದ ಸಂಸ್ಥಾಪಕರಾದ ಸ್ವಾಮಿನಾರಾಯಣರ ಆದೇಶದ ಮೇಲೆ ನಿರ್ಮಿಸಲಾಗಿತ್ತು.[೧]
ನರ್ ನಾರಾಯಣ್ ದೇವಾಲಯವು ದೇವಾಲಯ ಸಂಕೀರ್ಣದ ಹೃದಯಭಾಗವಾಗಿದೆ. ಧರ್ಮಗ್ರಂಥದ ಸಂಪ್ರದಾಯಗಳ ಪ್ರಕಾರ ದೇವಾಲಯವನ್ನು ನಿರ್ಮಿಸಲಾಗಿತ್ತು. ಶುದ್ಧ ಬರ್ಮಾ ತೇಗದಲ್ಲಿ ಸಂಕೀರ್ಣವಾದ ಕೆತ್ತನೆ ಮಾಡಲಾಗಿದೆ. ದೇವತೆಗಳ ಜೀವನದ ಪ್ರಕರಣಗಳನ್ನು ಚಿತ್ರಿಸಲಾಗಿದೆ. ಸ್ವಯಂವೇದ್ಯವಾದ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಂಗಳಕರ ಸಂಕೇತಗಳು ಮತ್ತು ಧಾರ್ಮಿಕ ಲಾಂಛನಗಳಿವೆ. ಈ ದೇವಾಲಯವು ಗುಜರಾತ್ ಮತ್ತು ಭಾರತದ ಸಮಾಜಧಾರ್ಮಿಕ ಇತಿಹಾಸದಲ್ಲಿ ಒಂದು ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ನಂಬಲಾಗಿದೆ.[೨]
ದೇವಾಲಯದ ಪ್ರಧಾನ ದೇವತೆಗಳೆಂದರೆ ನರ್‌ನಾರಾಯಣ್ ದೇವ್, ರಾಧಾ ಕೃಷ್ಣ ದೇವ್, ಧರ್ಮಭಕ್ತಿಮಾತಾ ಮತ್ತು ಹರಿ ಕೃಷ್ಣ ಮಹಾರಾಜ್, ಬಾಲ್ ಸ್ವರೂಪ್ ಘನಶ್ಯಾಮ್ ಮಹಾರಾಜ್ ಹಾಗೂ ರಂಗ್‍ಮೋಹಲ್ ಘನ್‍ಶ್ಯಾಮ್ ಮಹಾರಾಜ್.
ಅಡಿಟಿಪ್ಪಣಿಗಳು
[ಬದಲಾಯಿಸಿ]- ↑ "Ahmedabad Swaminarayan Temple".
- ↑ Lang, Jon T. (2005). Urban Design: A typology of Procedures and Products. Illustrated with over 50 Case Studies. London: Architectural Press. p. 86. ISBN 978-0-7506-6628-2.
{{cite book}}
: Invalid|ref=harv
(help)
ಉಲ್ಲೇಖಗಳು
[ಬದಲಾಯಿಸಿ]- Williams, Raymond (2001). Introduction to Swaminarayan Hinduism. Cambridge University Press. ISBN 978-0-521-65422-7.
{{cite book}}
: Invalid|ref=harv
(help)