ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ'

'Sanborn Agricultural Experiment Farm’ (UMC), Columbia[ಬದಲಾಯಿಸಿ]

ಇಂದಿಗೂ ನಾವು, ಕೊಲಂಬಿಯಾನಗರದ ಮಿಸ್ಸೂರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಸ್ಥಾಪಿಸಲ್ಪಟ್ಟ ’ಸ್ಯಾನ್ ಬರ್ನ್ ಕೃಷಿ ಪ್ರಾಯೋಗಿಕಾ ಹೊಲ,’ ವನ್ನು ವೀಕ್ಷಿಸಬಹುದು. [೧] ಇದು ಅಸ್ತಿತ್ವಕ್ಕೆ ಬಂದಿದ್ದು ೧೮೮೮ ರಲ್ಲಿ. ಅಮೆರಿಕದಲ್ಲೇ ಪ್ರಪ್ರಥಮವಾಗಿ ಮಣ್ಣಿನ ಕೊಚ್ಚಿಕೊಂಡುಹೋಗುವಿಕೆ, ಪ್ರತಿಬೆಳೆಯಲ್ಲೂ ಅದಕ್ಕೆ ಬೇಕಾದ ಸಮಯವನ್ನು ನಿರ್ಧರಿಸಿ ಬಿತ್ತನೆ, ಕಟಾವುಮಾಡುವ ಸುಧಾರಿತ ಪದ್ಧತಿಗಳ-ಅಭ್ಯಾಸ, ಮತ್ತು ಬೇಸಾಯದಲ್ಲಿ ಅವಲಂಭಿಸಬೇಕಾದ ಕೆಲವೊಂದು ನಡುವಳಿಕೆಗಳು ಇತ್ಯಾದಿಗಳನ್ನು ತಿಳಿಯುವಸಲುವಾಗಿ ಅನುಸಂಧಾನವನ್ನು ಮಾಡುವ ಪ್ರಯತ್ನ ಶುರುವಾದದ್ದೇ ಈ ಜಾಗದಲ್ಲಿ.

’ಸಾಯಿಲ್ ಕನ್ಸರ್ವೇಶನ್,’ಗೆ ಪ್ರಧಾನ ಆದ್ಯತೆ[ಬದಲಾಯಿಸಿ]

’ಸಾಯಿಲ್ ಕನ್ಸರ್ವೇಶನ್,’ ಪಾಲಿಸಿಯನ್ನು ಅಳವಡಿಸಿ ಜಾರಿಗೆತಂದು ಸುವ್ಯವಸ್ಥಿತಗೊಳಿಸಿದ ವಿಶೇಷತೆಗೆ ಇದು ಪ್ರಸಿದ್ಧಿಯಾಗಿತ್ತು. ದೇಸಿ-ಗೊಬ್ಬರ, ರಸ-ಗೊಬ್ಬರಗಳ ಮೇಲೆ ಸಂಶೋಧನೆಗಳು ನಡೆದವು. ಸನ್, ೧೯೧೪ ರಲ್ಲಿ ರಸ-ಗೊಬ್ಬರಗಳ ಬಳಕೆಗೆ ಹೆಚ್ಚಿನ ಗಮನಹರಿಸಲಾಯಿತು. ಆಹಾರ ಧಾನ್ಯಗಳ ಗುಣಸಂವರ್ಧನೆ, ಹಾಗೂ ಹೆಚ್ಚು ಇಳುವರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮೂಲ-ಪ್ರಯೋಗಗಳನ್ನು ಈ ಹೊಲದಲ್ಲಿ ಮಾಡಲಾಯಿತು. [೨]

ಪ್ರಾಯೋಗಿಕಾ ಹೊಲ,' ಸಕ್ರಿಯವಾಗಿದೆ[ಬದಲಾಯಿಸಿ]

'ಸ್ಯಾನ್ ಬಾರ್ನ್',[೩] 'ಕೃಷಿಪ್ರಾಯೋಗಿಕಾ-ಹೊಲ' ವನ್ನು ಅದರ ಪ್ರಥಮ ನಿರ್ದೇಶಕರಾಗಿದ್ದ ’ಡಾ. ಸ್ಯಾನ್ ಬಾರ್ನ್,’ ರ ಗೌರವಾರ್ಥವಾಗಿ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಅಮೆರಿಕದ ಪ್ರಮುಖ ಬೆಳೆಯಾಗಿದ್ದ, ಮೆಕ್ಕೇಜೋಳದ ಫಸಲನ್ನು '(Corn)' ಉತ್ತಮಪಡಿಸುವ ಗುರಿಯಿಂದಲೇ ಸ್ಥಾಪಿಸಲ್ಪಟ್ಟ ಹೊಲವಿದು. ಅಂದಿನದಿನಗಳಲ್ಲಿ ಅತಿಹೆಚ್ಚಿನ ತಂತ್ರಜ್ಞಾನ, ಹಾಗೂ ವಿಕಸಿತ-ವೈಜ್ಞಾನಿಕ ಪದ್ಧತಿಗಳು ಲಭ್ಯವಾಗದಿದ್ದರೂ, ಸಸ್ಯ-ಸಂರಕ್ಷಣೆ, ಮತ್ತು ಸಸ್ಯಗಳಲ್ಲಿ ಅಧಿಕ ಉತ್ಪಾದನೆಯನ್ನು ಪಡೆಯಲು ಮಾಡಿದ ಪ್ರಯತ್ನಗಳು, ಕ್ರಮೇಣ ಆಹಾರಧಾನ್ಯಗಳ, ಎಣ್ಣೆಕಾಳುಗಳ, ಹತ್ತಿ, ಸೆಣಬು, ಮುಂತಾದ ವಿಕಸಿತ ಸಸ್ಯಗಳು, ವಸ್ತ್ರ-ನಿರ್ಮಾಣವಲಯದಲ್ಲಿ ಕೊಡುತ್ತಿರುವ ಕೊಡುಗೆಗೆ ದಾರಿಯಾಗಿ, ಇಂದು ನಾವುಕಾಣುವ ಪ್ರಚಂಡ-ಉತ್ಪಾದನಾ ಸಾಮರ್ಥ್ಯಗಳಿಗೆ ನಾಂದಿಯಾಯಿತು. ತರಕಾರಿ, ಹಣ್ಣು-ಹಂಪಲುಗಳು ವರ್ಷ-ವಿಡೀ ದೊರೆಯುವಂತಾದವು. ಈ ಪ್ರಾಯೋಗಿಕಾ ಹೊಲದ ಸಮೀಪದಲ್ಲೇ, ಅಂದರೆ, 'ಮಿಸ್ಸೂರಿ ವಿಶ್ವವಿದ್ಯಾಲಯ'ದ ಹತ್ತಿರವಿರುವ, ಸುಪ್ರಸಿದ್ಧ ಬೀಜತಯಾರಿಕಾ ಕಂಪೆನಿ, 'ಮೋನ್ಸ್ಯಾಂಟೊ'[೪] 'ಮಿಸ್ಸೂರಿ ಕೃಷಿವಿಶ್ವವಿದ್ಯಾಲಯದ ಬೆಳೆ ಸಂಶೋಧನಾ ಕಾರ್ಯ'ಗಳಿಗೆ ವಿತ್ತೀಯ ಸಹಾಯವನ್ನು ನೀಡುತ್ತಾ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Sanborn Field helped develop an antibiotic from the ground up October 12, 2012". Archived from the original on ಸೆಪ್ಟೆಂಬರ್ 17, 2013. Retrieved ಜುಲೈ 7, 2014.
  2. "Plot No: 23, Sanborn field, UMC campus, USA" (PDF). Archived from the original (PDF) on 2010-06-06. Retrieved 2014-08-30.
  3. "'ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ, ವೆಂಕಟೇಶ್ ಬರಹ". Archived from the original on 2010-11-25. Retrieved 2014-07-08.
  4. ವಿಶ್ವವಿದ್ಯಾಲಯದ ಕೃಷಿ ಸಂಬಂಧಿ ಪರಿಯೋಜನೆಗಳಿಗೆ ವಿತ್ತೀಯ ಸಹಾಯದ ನೆರವನ್ನು ನೀಡುತ್ತಿದೆ. 'Monsanto grant will fund plant-science research Archived 2014-10-13 ವೇಬ್ಯಾಕ್ ಮೆಷಿನ್ ನಲ್ಲಿ.