ಸ್ಪ್ರಿಂಗ್ ರೋಲ್
ಗೋಚರ
ಸ್ಪ್ರಿಂಗ್ ರೋಲ್ (ಚೈನಿಸ್‍ನಲ್ಲಿ ಚುನ್ ಜುಯಾನ್) ಪೂರ್ವ ಏಷ್ಯಾದ ಮತ್ತು ಆಗ್ನೇಯ ಏಷ್ಯಾದ ಪಾಕಪದ್ಧತಿಯಲ್ಲಿ ಕಾಣಿಸುವ ದೊಡ್ಡ ವೈವಿಧ್ಯದ ತುಂಬಿದ, ಸುರುಳಿ ಮಾಡಿದ ಕ್ಷುಧಾವರ್ಧಕಗಳು. ಹೊದಿಕೆ, ಹೂರಣಗಳು, ಮತ್ತು ಬಳಸುವ ಅಡುಗೆ ತಂತ್ರ, ಜೊತೆಗೆ ಹೆಸರಿನ ರೀತಿ ಈ ದೊಡ್ಡ ಪ್ರದೇಶದಲ್ಲಿ, ಪ್ರದೇಶದ ಸಂಸ್ಕೃತಿಯನ್ನು ಆಧರಿಸಿ, ಗಣನೀಯವಾಗಿ ಬದಲಾಗುತ್ತದೆ. ಚೈನೀಸ್ ಪಾಕಪದ್ಧತಿಯಲ್ಲಿ, ಸ್ಪ್ರಿಂಗ್ ರೋಲ್‍ಗಳು ಸುತ್ತಿದ ಉರುಳೆಯಾಕಾರದ ತೆಳ್ಳಗಿನ ಪೇಸ್ಟ್ರಿಯ ಒಳಗೆ ಎಲೆಕೋಸು ಮತ್ತು ಇತರ ತರಕಾರಿ ಹೂರಣಗಳಿರುವ ಖಾರದ ಉರುಳೆಗಳು.