ಸ್ಪರ್ಧೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೀಡೆಗಳಲ್ಲಿ ಸ್ಪರ್ಧೆ.

ಕನಿಷ್ಠಪಕ್ಷ ಎರಡು ಪಕ್ಷಗಳು ಹಂಚಿಕೊಳ್ಳಲಾಗದಂಥ ಗುರಿಗಾಗಿ ಸೆಣಸಾಡಿದಾಗ ಸ್ಪರ್ಧೆ ಉಂಟಾಗುತ್ತದೆ: ಇದರಲ್ಲಿ ಒಬ್ಬರ ಲಾಭವು ಮತ್ತೊಬ್ಬರ ಹಾನಿಯಾಗಿರುತ್ತದೆ (ಶೂನ್ಯ ಫಲದ ಆಟವು ಇದರ ಒಂದು ಉದಾಹರಣೆಯಾಗಿದೆ).[೧]

ಇದು, ಸಾಮಾನ್ಯವಾಗಿ ಗುಂಪು ಅಥವಾ ಸಾಮಾಜಿಕ ಸ್ಥಾನಮಾನ, ನಾಯಕತ್ವ, ಲಾಭ ಮತ್ತು ಮಾನ್ಯತೆಗಾಗಿ (ಪ್ರಶಸ್ತಿಗಳು, ಸರಕುಗಳು, ಸಂಗಾತಿಗಳು, ಪ್ರತಿಷ್ಠೆ, ಗಣ್ಯಸ್ಥಾನ, ದುರ್ಲಭ ಸಂಪನ್ಮೂಲಗಳು, ಅಥವಾ ಒಂದು ಪ್ರದೇಶ) ಎರಡು ಅಥವಾ ಹೆಚ್ಚು ಪಕ್ಷಗಳ ನಡುವಿನ ಪೈಪೋಟಿಯಾಗಿರುತ್ತದೆ. ಪಕ್ಷಗಳ ಉದಾಹರಣೆಗಳೆಂದರೆ ಪ್ರಾಣಿಗಳು, ಜೀವಿಗಳು, ಆರ್ಥಿಕ ಗುಂಪುಗಳು, ವ್ಯಕ್ತಿಗಳು, ಸಾಮಾಜಿಕ ಗುಂಪುಗಳು, ಇತ್ಯಾದಿ.

ಪ್ರಕೃತಿಯಲ್ಲಿ, ಒಂದೇ ಪರಿಸರದಲ್ಲಿ ಜೊತೆಯಾಗಿರುವ ಜೀವಿಗಳ ನಡುವೆ ಸ್ಪರ್ಧೆ ಉಂಟಾಗುತ್ತದೆ. ಪ್ರಾಣಿಗಳು ನೀರಿನ ಪೂರೈಕೆ, ಆಹಾರ, ಸಂಗಾತಿಗಳು, ಮತ್ತು ಇತರ ಜೈವಿಕ ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತವೆ. ಮಾನವರು ಸಾಮಾನ್ಯವಾಗಿ ಆಹಾರ ಮತ್ತು ಸಂಗಾತಿಗಳಿಗಾಗಿ ಸ್ಪರ್ಧಿಸುತ್ತಾರೆ. ಆದರೆ ಈ ಅಗತ್ಯಗಳು ಈಡೇರಿದಾಗ ಹಲವುವೇಳೆ ಐಶ್ವರ್ಯ, ಅಧಿಕಾರ, ಪ್ರತಿಷ್ಠೆ, ಮತ್ತು ಪ್ರಸಿದ್ಧಿಯ ಬೆನ್ನಟ್ಟುವಿಕೆಯ ಸಂಬಂಧ ಆಳವಾದ ಪೈಪೋಟಿಗಳು ಉದ್ಭವಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Smith, K.G., Ferrier, W.J. and Ndofor, H., 2001. Competitive dynamics research: Critique and future directions. Handbook of strategic management, pp.315-361.
"https://kn.wikipedia.org/w/index.php?title=ಸ್ಪರ್ಧೆ&oldid=912043" ಇಂದ ಪಡೆಯಲ್ಪಟ್ಟಿದೆ