ವಿಷಯಕ್ಕೆ ಹೋಗು

ಸ್ಟೋರೇಜ್ ಏರಿಯಾ ನೆಟ್‌ವರ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸ್ಟೋರೇಜ್ ಏರಿಯಾ ನೆಟ್‌ವರ್ಕ್ ಅಥವಾ ಸಂಗ್ರಹ ಪ್ರದೇಶ ಜಾಲಸರಣಿ (SAN ) ಎಂಬುದೊಂದು ದೂರದಲ್ಲಿರುವ ಕಂಪ್ಯೂಟರ್ ಸಂಗ್ರಹ ಸಾಧನಗಳನ್ನು (ಉದಾಹರಣೆಗೆ, ಡಿಸ್ಕ್ ಆ‍ಯ್‌ರೆಗಳು, ಟೇಪ್ ಲೈಬ್ರರಿಗಳು, ಮತ್ತು ಆಪ್ಟಿಕಲ್ ಜ್ಯೂಕ್‌ಬಾಕ್ಸ್‌ಗಳು) ಸರ್ವರ್‌ಗಳಿಗೆ ಜೋಡಿಸುವ ಮೂಲಕ, ಅವುಗಳು ಸ್ಥಳೀಯವಾಗಿ ಕಾರ್ಯನಿರ್ವಹಣಾ ವ್ಯವಸ್ಥೆಗೆ ಸ್ಥಳೀಯವಾಗಿ ಜೋಡಿಸಿದಂತೆ ಕಾಣುವಂತೆ ಮಾಡಲು ಬಳಸಲಾಗುವ ವಿನ್ಯಾಸವಾಗಿದೆ. SAN ವಿಶಿಷ್ಟವಾಗಿ ತನ್ನದೇ ಆದ ಸಂಗ್ರಹ ಸಾಧನಗಳ ಜಾಲಸರಣಿಯನ್ನು ಹೊಂದಿರುತ್ತಿದ್ದು, ಸಾಮಾನ್ಯವಾಗಿ ಮುಖ್ಯ ನಿಯತ ಜಾಲಸರಣಿಯ ಮೂಲಕ ನಿಯತವಾದ ಸಾಧನಗಳಿಂದ ಆ ಜಾಲಸರಣಿಯನ್ನು ಪ್ರವೇಶಿಸಲು ಅವಕಾಶವಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ SANಗಳ ಬೆಲೆ ಮತ್ತು ಸಂಕೀರ್ಣತೆ ಕಡಿಮೆಯಾಗಿರುವ ಕಾರಣದಿಂದಾಗಿ[when?], ದೊಡ್ಡ ಉದ್ಯಮ ಹಾಗೂ ಸಣ್ಣದರಿಂದ ಮಧ್ಯಮ ವರ್ಗದ ಉದ್ದಿಮೆಗಳ ಪರಿಸರದಲ್ಲಿಯೂ ಇವುಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ಕೇವಲ ಒಂದು SAN ಮಾತ್ರದಿಂದ ಕಡತ ಅಪಕರ್ಷಣವನ್ನು ಪಡೆಯಲು ಸಾಧ್ಯವಿಲ್ಲ. ಅದರಿಂದ ಕೇವಲ ಕ್ಷೇತ್ರ-ಮಟ್ಟದ ಕಾರ್ಯಾಚರಣೆಗಳಿಗೆ ಮಾತ್ರ ಬಳಸಬಹುದು. ಹಾಗಿದ್ದರೂ, ಈ ಅಪಕರ್ಷಣವನ್ನು SANಗಳ ಮೇಲೆ ರಚಿಸಲ್ಪಟ್ಟ ಕಡತ ವ್ಯವಸ್ಥೆಗಳು ನೀಡಬಲ್ಲವಾಗಿವೆ, ಮತ್ತು ಅವುಗಳನ್ನು SAN ಕಡತವ್ಯವಸ್ಥೆಗಳು ಅಥವಾ ಹಂಚಲ್ಪಟ್ಟ ಡಿಸ್ಕ್ ಕಡತ ವ್ಯವಸ್ಥೆಗಳು ಎಂದು ಕರೆಯಲಾಗುತ್ತದೆ.


ಸಂಗ್ರಹ ಹಂಚಿಕೆ[ಬದಲಾಯಿಸಿ]

DAS vs NAS vs SAN
ಸಂಸ್ಥೆ

ಐತಿಹಾಸಿಕವಾಗಿ, ದತ್ತಾಂಶ ಕೇಂದ್ರಗಳು ಪ್ರಾರಂಭದಲ್ಲಿ SCSI ಡಿಸ್ಕ್ ಆ‍ಯ್‌ರೆಗಳ "ದ್ವೀಪ"ಗಳನ್ನು ನೇರ-ಜೋಡಣೆಯ ಸಂಗ್ರಹ(DAS)ಗಳಾಗಿ ರಚಿಸಿದವು ಮತ್ತು ಆ ಪ್ರತಿಯೊಂದನ್ನೂ ಒಂದೊಂದು ಪ್ರತ್ಯೇಕ ಅಪ್ಲಿಕೇಶನ್‌ಗಾಗಿ ಹೊಂದಿಸಲಾಯಿತು, ಮತ್ತು ಅವು ಅನೇಕ "ವರ್ಚುಅಲ್ ಹಾರ್ಡ್ ಡ್ರೈವ್‌ಗಳಾಗಿ" (ಅಂದರೆ LUNಗಳು) ಕಾಣುತ್ತವೆ. ಮೂಲಭೂತವಾಗಿ, SAN ಎಂಬುದು ಒಂದು ಅತ್ಯಂತ-ವೇಗದ ಜಾಲಸರಣಿಯನ್ನು ಉಪಯೋಗಿಸಿ ಅಂತಹ ಸಂಗ್ರಹ ದ್ವೀಪಗಳನ್ನು ಸಂಘಟಿಸುತ್ತದೆ. ಆಪರೇಟಿಂಗ್ ವ್ಯವಸ್ಥೆಗಳು ತಮ್ಮದೇ ಆದ ಕಡತ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಅವುಗಳನ್ನು ಸ್ಥಳೀಯವೆಂಬಂತೆ ಕಾಣುವ ಹಂಚಲ್ಪಡದ ಮೀಸಲು LUNSಗಳಲ್ಲಿ ಹೊಂದಿರುತ್ತವೆ. ಒಂದು ವೇಳೆ ಬಹುಸಂಖ್ಯೆಯ ವ್ಯವಸ್ಥೆಗಳು ಯಾವುದಾದರೂ ಒಂದು LUN ಅನ್ನು ಹಂಚಲು ಪ್ರಯತ್ನಿಸಿದರೆ, ಇವು ಪರಸ್ಪರ ಕಾರ್ಯದಲ್ಲಿ ಅಡ್ಡಬರುತ್ತವೆ ಮತ್ತು ಅದರಿಂದಾಗಿ ತಕ್ಷಣ ದತ್ತಾಂಶಗಳು ದೋಷಪೂರಿತವಾಗುತ್ತವೆ. ಒಂದು LUN ಜಾಲದ ಒಳಗೆ ಇರುವ ಬೇರೆ ಬೇರೆ ಕಂಪ್ಯೂಟರ್‌ಗಳ ನಡುವೆ ಮಾಡುವ ಯೋಜಿತ ದತ್ತಾಂಶ ಹಂಚಿಕೆಗೆ SAN ಕಡತ ವ್ಯವಸ್ಥೆಗಳು ಅಥವಾ ಸಮೂಹ ಗಣಕ ಪದ್ಧತಿಗಳಂತಹ ಸುಧಾರಿತ ಪರಿಹಾರಗಳ ಅಗತ್ಯವಿರುತ್ತದೆ. ಇಂತಹ ಮಿತಿಗಳ ನಡುವೆಯೂ ಸಂಗ್ರಹ ಸಾಮರ್ಥ್ಯ ಬಳಕೆಯನ್ನು ಹೆಚ್ಚಿಸಲು SAN ಸಹಾಯ ಮಾಡುತ್ತದೆ, ಏಕೆಂದರೆ ಬಹುಸಂಖ್ಯೆಯ ಸರ್ವರ್‌ಗಳು ತಮ್ಮ ವೈಯಕ್ತಿಕ ಸಂಗ್ರಹ ಸ್ಥಳವನ್ನು ಡಿಸ್ಕ್ ಆ‍ಯ್‌ರೆಗಳ ಮೇಲೆ ಕ್ರೋಢೀಕರಿಸುತ್ತವೆ. SAN ನ ಸಾಮಾನ್ಯವಾದ ಉಪಯೋಗಗಳಲ್ಲಿ ಒಂದೆಂದರೆ, ಇಮೇಲ್ ಸರ್ವರ್‌ಗಳು, ಡೇಟಾಬೇಸ್‌ಗಳು ಮತ್ತು ಹೆಚ್ಚಿನ ಬಳಕೆಯುಳ್ಳ ಕಡತ ಸರ್ವರ್‌ಗಳಿಗೆ ಹಾರ್ಡ್ ಡ್ರೈವ್‌ಗಳಿಗೆ ಹೆಚ್ಚಿನ-ವೇಗವಿರುವ ಕ್ಷೇತ್ರ-ಮಟ್ಟದ ಪ್ರವೇಶದ ಅಗತ್ಯವಿರುವ ದತ್ತಾಂಶವನ್ನು ವ್ಯಾವಹಾರಿಕವಾಗಿ ಪಡೆಯುವ ಸೌಲಭ್ಯ.

SAN ಮತ್ತು NAS[ಬದಲಾಯಿಸಿ]

SAN ಗೆ ಪ್ರತಿಯಾಗಿ ನೆಟ್‌ವರ್ಕ್‌ ಅಟ್ಯಾಚ್ಡ್ ಸ್ಟೋರೇಜ್ (NAS) ಎಂಬುದು NFS ಅಥವಾ SMB/CIFS ಎಂಬ ಕಡತಾಧಾರಿತ ಪ್ರೊಟೊಕಾಲ್‌ಗಳನ್ನು ಬಳಸುತ್ತಿದ್ದು, ಇದರಲ್ಲಿ ಸಂಗ್ರಹವು ಪರೋಕ್ಷವಾದದ್ದಾಗಿರುತ್ತದೆ, ಮತ್ತು ಇದರಲ್ಲಿ ಕಂಪ್ಯೂಟರ್‌ಗಳು ಒಂದು ಡಿಸ್ಕ್ ಕ್ಷೇತ್ರದ ಬದಲಾಗಿ ಒಂದು ಅಮೂರ್ತ ಕಡತದ ಒಂದು ಭಾಗಕ್ಕಾಗಿ ಕೋರುತ್ತವೆ. ಇತ್ತೀಚೆಗೆ, [when?] NAS ಹೆಡ್ಸ್[clarification needed] ನ ಬಳಕೆಯ ಪ್ರಾರಂಭದಿಂದಾಗಿ SAN ಸಂಗ್ರಹದಿಂದ NAS ಗೆ ಬದಲಾಯಿಸುವುದು ಸುಲಭವಾಗಿದೆ.

SAN-NAS ಸಂಕೀರ್ಣಜಾಲ[ಬದಲಾಯಿಸಿ]

DAS, NAS ಮತ್ತು SAN ತಂತ್ರಜ್ಞಾನಗಳನ್ನು ಬಳಸಿರುವ ಮಿಶ್ರಜ

NAS ಮತ್ತು SAN ಗಳ ನಡುವಿನ ವ್ಯತ್ಯಾಸಗಳ ಹೊರತಾಗಿಯೂ, ಈ ಎರಡೂ ತಂತ್ರಜ್ಞಾನಗಳನ್ನು ಉಪಯೋಗಿಸಿ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದ್ದು, ಅದಕ್ಕೆ ಉದಾಹರಣೆಯನ್ನು ಮೇಲಿನ ರೇಖಾಚಿತ್ರದಲ್ಲಿ ತೋರಿಸಲಾಗಿದೆ.

ಪ್ರಯೋಜನಗಳು[ಬದಲಾಯಿಸಿ]

ಸಂಗ್ರಹ ಹಂಚುವಿಕೆಯು ಸಾಮಾನ್ಯವಾಗಿ ಸಂಗ್ರಹದ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ ಮತ್ತು ಸಂಗ್ರಹವನ್ನು ಒಂದು ಸರ್ವರ್‌ನಿಂದ ಇನ್ನೊಂದು ಸರ್ವರ್‌ಗೆ ಸಾಗಿಸುವಾಗ ಕೇಬಲ್ ಮತ್ತು ಸಂಗ್ರಹ ಸಾಧನಗಳನ್ನು ಭೌತಿಕವಾಗಿ ಸಾಗಿಸಬೇಕಾದ ಅಗತ್ಯವಿಲ್ಲದ ಕಾರಣ ನಮ್ಯತೆಯನ್ನು ಹೆಚ್ಚಿಸುತ್ತದೆ. ಇದರ ಇತರ ಲಾಭಗಳಲ್ಲಿ ಒಂದೆಂದರೆ SAN ನಿಂದಲೇ ಸರ್ವರ್‌ಗಳನ್ನು ಚಾಲನೆ ಮಾಡಲು ಅವಕಾಶ ನೀಡುವ ಸಾಮರ್ಥ್ಯ. ಇದು ಯಾವುದೇ ಒಂದು ದೋಷಪೂರ್ಣವಾದ ಸರ್ವರನ್ನು ಬಹಳ ಸುಲಭದಲ್ಲಿ ಮತ್ತು ವೇಗವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಏಕೆಂದರೆ, SANನ್ನು ರೀ-ಕಾನ್ಫಿಗರ್ ಮಾಡಬಹುದು ಮತ್ತು ಆ ಮೂಲಕ ಬದಲಾಯಿಸಿದ ಸರ್ವರ್ ದೋಷಪೂರ್ಣವಾದ ಸರ್ವ್‌ನ LUN ಅನ್ನು ಬಳಸಿಕೊಳ್ಳಬಹುದು. ಈ ಒಟ್ಟು ಪ್ರಕ್ರಿಯೆ ಸುಮಾರು ಅರ್ಧಗಂಟೆಯನ್ನು ತೆಗೆದುಕೊಳ್ಳಬಹುದು ಮತ್ತು ಇದು ತುಲನಾತ್ಮಕವಾಗಿ ಹೊಸ ಉಪಾಯವಾಗಿದ್ದು ಇದನ್ನು ಹೊಸ ದತ್ತಾಂಶ ಕೇಂದ್ರಗಳಲ್ಲಿ ಪ್ರವರ್ತನಗೊಳಿಸಲಾಗುತ್ತಿದೆ. ಇದನ್ನು ಇನ್ನೂ ಹೆಚ್ಚು ಸುಗಮವಾಗಿಸಲು ಮತ್ತು ವೇಗವಾಗಿಸಲು ಸಹಾಯವಾಗುವಂತೆ ಅನೇಕ ಹೊಸ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಬ್ರೋಕೇಡ್ ಒಂದು ಅಪ್ಲಿಕೇಶನ್ ರಿಸೋರ್ಸ್ ಮ್ಯಾನೇಜರ್ ಉತ್ಪನ್ನವನ್ನು ನೀಡುತ್ತಿದ್ದು, ಅದು ಸ್ವಯಂಚಾಲಿತವಾಗಿ ಒಂದು SAN ಚಾಲನೆಯನ್ನು ಸ್ಥಗಿತಗೊಳಿಸುವ ಸೌಲಭ್ಯವನ್ನು ಸರ್ವರ್‌ಗಳಿಗೆ ನೀಡುತ್ತದೆ, ಮತ್ತು ಅದಕ್ಕೆ ಬೇಕಾದ ಸಮಯವನ್ನು ಲೆಕ್ಕಹಾಕಿದರೆ ಅದು ನಿಮಿಷಗಳಲ್ಲಿರುತ್ತದೆ. ಈ ತಂತ್ರಜ್ಞಾನದ ವ್ಯಾಪ್ತಿಯು ಇನ್ನೂ ಹೊಸತಾಗಿದ್ದರೂ ಅನೇಕರು ಇದನ್ನು ಉದ್ದಿಮೆ ಡಾಟಾಕೇಂದ್ರದ ಭವಿಷ್ಯವೆಂದು ಹೇಳುತ್ತಾರೆ[೧]. SANಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾದ ವಿಪತ್ತಿನಿಂದ ಹೊರಬರುವ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸಬಲ್ಲವಾಗಿವೆ. ಒಂದು SAN ಎರಡನೆಯ ಸಂಗ್ರಹ ಆ‍ಯ್‌ರೆಯನ್ನು ಹೊಂದಿರುವ ದೂರದ ಸ್ಥಳಕ್ಕೆ ವಿಸ್ತರಿಸಬಹುದಾದ ಸಾಧ್ಯತೆಯನ್ನು ಹೊಂದಿದೆ. ಇದು ಸಂಗ್ರಹ ಪ್ರತಿಕೃತಿಯನ್ನು ಸಕ್ರಿಯಗೊಳಿಸುತ್ತಿದ್ದು, ಇದನ್ನು ಡಿಸ್ಕ್ ಆ‍ಯ್‌ರೆ ನಿಯಂತ್ರಕಗಳು, ಸರ್ವರ್ ತಂತ್ರಾಂಶ, ಅಥವಾ ವಿಶೇಷ SAN ಸಾಧನಗಳು ಕಾರ್ಯಗತಮಾಡುತ್ತವೆ. ಹೆಚ್ಚಾಗಿ ದೂರದ ಸಾಗಣೆಗೆ IP WANಗಳು ಅತ್ಯಂತ ಕಡಿಮೆ ಬೆಲೆಯ ವಿಧಾನಗಳಾಗಿರುವುದರಿಂದ, IP ಜಾಲಸರಣಿಗಳ ಮೇಲೆ SAN ವಿಸ್ತರಣೆಯನ್ನು ಅನುಮತಿಸಲು IP ಮೇಲಿನ ಫೈಬರ್ ಚಾನಲ್ (FCIP) ಮತ್ತು iSCSI ಪ್ರೊಟೋಕೋಲ್‌‍ಗಳನ್ನು ಅಭಿವೃದ್ಧಿಪಡಿಸಲಾಯಿತು. ಸಾಂಪ್ರದಾಯಿಕ ಭೌತಿಕ SCSI ಪದರವು ಕೆಲವೇ ಮೀಟರ್‌ಗಳವರೆಗಿನ ದೂರಕ್ಕೆ ಮಾತ್ರ ಬೆಂಬಲವನ್ನು ನೀಡಬಹುದಾಗಿದ್ದು - ವಿಪತ್ತಿನ ಸಂದರ್ಭದಲ್ಲಿ ವ್ಯವಹಾರದ ನಿರಂತರತೆಯನ್ನು ಖಚಿತಪಡಿಸಲು ಇದರಿಂದ ಸಾಧ್ಯವಿಲ್ಲವಾಗಿದೆ. ಈ ಡಿಸ್ಕ್ ಆ‍ಯ್‌ರೆಗಳ ಆರ್ಥಿಕ ಘನೀಕರಣವು ಅನೇಕ ವೈಶಿಷ್ಟ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸಿದೆ, ಅವುಗಳಲ್ಲಿ I/O ಕ್ಯಾಶಿಂಗ್, ಸ್ನ್ಯಾಪ್‌ಶಾಟಿಂಗ್, ಮತ್ತು ವಾಲ್ಯೂಮ್ ಕ್ಲೋನಿಂಗ್ (ಬ್ಯುಸಿನೆಸ್ ಕಂಟಿನ್ಯುಅನ್ಸ್ ವಾಲ್ಯೂಮ್ಸ್ ಅಥವಾ BCVಗಳು) ಸೇರಿವೆ.

ಜಾಲಸರಣಿ ಪ್ರಕಾರಗಳು[ಬದಲಾಯಿಸಿ]

ಹೆಚ್ಚಿನ ಸಂಗ್ರಹ ಜಾಲಸರಣಿಗಳು ಸರ್ವರ್‌ಗಳು ಮತ್ತು ಡಿಸ್ಕ್ ಡ್ರೈವ್ ಸಾಧನಗಳ ನಡುವಿನ ಸಂವಹನಕ್ಕಾಗಿ SCSI ಪ್ರೊಟೊಕಾಲ್ ಬಳಸುತ್ತವೆ. ಇತರ ಪ್ರೊಟೊಕಾಲ್‌ಗಳ ಮೇಲಿನ ಮ್ಯಾಪಿಂಗ್ ಪದರವನ್ನು ಒಂದು ಜಾಲಸರಣಿಯನ್ನು ರೂಪಿಸಲು ಬಳಸಲಾಗುತ್ತದೆ:

SAN ಮೂಲಭೂತ ವ್ಯವಸ್ಥೆ[ಬದಲಾಯಿಸಿ]

ಆಪ್ಟಿಕಲ್ ಫೈಬರ್ ಚಾನೆಲ್ ಕನೆಕ್ಟರ್‌ಗಳನ್ನು ಸ್ಥಾಪಿಸಿರುವ Qlogic SAN-ಸ್ವಿಚ್.

SANಗಳು ಹೆಚ್ಚಾಗಿ ಫೈಬರ್ ಚಾನೆಲ್ ಫ್ಯಾಬ್ರಿಕ್ ತಂತಿಜಾಲವನ್ನು ಬಳಸಿಕೊಳ್ಳುತ್ತವೆ. ಅದೊಂದು ಸಂಗ್ರಹ ಸಂವಹನಗಳನ್ನು ನಿರ್ವಹಿಸಲು ರೂಪಿಸಲಾದ ಮೂಲಭೂತ ವ್ಯವಸ್ಥೆಯಾಗಿದೆ. ಇದು NAS ನಲ್ಲಿ ಬಳಸಲಾಗುವ ಉನ್ನತ-ಮಟ್ಟದ ಪ್ರೊಟೊಕಾಲ್‌ಗಳಿಗಿಂತಲೂ ಹೆಚ್ಚಿನ ವೇಗದ ಮತ್ತು ವಿಶ್ವಾಸಾರ್ಹವಾದ ಪ್ರವೇಶವನ್ನು ಒದಗಿಸುತ್ತದೆ. ಒಂದು ಫ್ಯಾಬ್ರಿಕ್ ಪರಿಕಲ್ಪನೆಯ ಮಟ್ಟದಲ್ಲಿ ಒಂದು ಸ್ಥಳೀಯ ಪ್ರದೇಶ ಜಾಲಸರಣಿಯಲ್ಲಿನ ಜಾಲಸರಣಿ ಖಂಡದ ರೀತಿಯದಾಗಿದೆ. ಒಂದು ವಿಶಿಷ್ಟ ಫೈಬರ್ ಚಾನೆಲ್ SAN ಫ್ಯಾಬ್ರಿಕ್ ಅನೇಕ ಫೈಬರ್ ಚಾನೆಲ್ ಸ್ವಿಚ್‌ಗಳಿಂದ ಮಾಡಲ್ಪಟ್ಟಿರುತ್ತದೆ. ಇಂದು ಎಲ್ಲಾ ಪ್ರಮುಖ SAN ಉಪಕರಣ ಮಾರಾಟಗಾರರು ಕೆಲವು ಪ್ರಕಾರದ ಫೈಬರ್ ಚಾನೆಲ್ ರೂಟಿಂಗ್ ಪರಿಹಾರವನ್ನೂ ನೀಡುತ್ತಾರೆ, ಮತ್ತು ಇದು ಬೇರೆ ಬೇರೆ ಫ್ಯಾಬ್ರಿಕ್‌ಗಳನ್ನು ಒಂದಕ್ಕೊಂದು ಜೋಡಿಸದೆಯೇ ಅವುಗಳ ನಡುವೆ ದತ್ತಾಂಶದ ಹರಿಯುವಿಕೆಯನ್ನು ಸಾಧಿಸುವ ಮೂಲಕ SAN ನ ಒಟ್ಟಾರೆ ಬಂಧಕ್ಕೆ ಬೃಹತ್ತಾದ ಅರೋಹ್ಯತೆಯ ಲಾಭಗಳನ್ನು ನೀಡುತ್ತದೆ. ಈ ಕೊಡುಗೆಗಳು ಸ್ವಾಮ್ಯದ ಕ್ರಮವಿಹಿತ ನಡವಳಿಕೆಯ ಅಂಶಗಳನ್ನು ಬಳಸುತ್ತವೆ, ಮತ್ತು ಪ್ರಚಾರ ಮಾಡುವ ಉನ್ನತ-ಮಟ್ಟದ ಯಾಂತ್ರಿಕಬಂಧಗಳು ಅಮೂಲಾಗ್ರವಾಗಿಯೇ ಬೇರೆಯಾಗಿರುತ್ತವೆ ಅವು ಹೆಚ್ಚಾಗಿ SONET/SDH ಮೇಲೆ ಅಥವಾ IP ಮೇಲೆ ಫೈಬರ್ ಚಾನೆಲ್ ಟ್ರಾಫಿಕ್ ಮ್ಯಾಪಿಂಗ್ ಮಾಡುವುದನ್ನು ಸಕ್ರಿಯಗೊಳಿಸುತ್ತವೆ.

ಹೊಂದಾಣಿಕೆ[ಬದಲಾಯಿಸಿ]

ಫೈಬರ್ ಚಾನೆಲ್ SAN ಗಳ ಪ್ರಾರಂಭಿಕ ಸಮಸ್ಯೆಗಳೆಂದರೆ ಬೇರೆ ಬೇರೆ ಉತ್ಪಾದಕರು ಒದಗಿಸುತ್ತಿದ್ದ ಸ್ವಿಚ್‌ಗಳು ಮತ್ತು ಇತರ ಯಂತ್ರಾಂಶಗಳು ಹೊಂದಿಕೊಳ್ಳುತ್ತಿರಲಿಲ್ಲ ಮೂಲ ಸಂಗ್ರಹ ಪ್ರೊಟೊಕಾಲ್ FCP ಗಳು ಯಾವಾಗಲೂ ಪ್ರಮಾಣಿತ ದರ್ಜೆಯವೇ ಆಗಿದ್ದರೂ, ಕೆಲವು ಉನ್ನತ-ಮಟ್ಟದ ಕಾರ್ಯಗಳು ಸರಿಯಾಗಿ ಅಂತರ್ಕ್ರಿಯೆ ನಡೆಸಲಿಲ್ಲ. ಅದೇ ರೀತಿ, ಅನೇಕ ಪ್ರಮುಖ ಕಾರ್ಯನಿರ್ವಹಣಾ ವ್ಯವಸ್ಥೆಗಳು ಅದೇ ಫ್ಯಾಬ್ರಿಕ್‌ ಅನ್ನು ಹಂಚಿಕೊಳ್ಳುತ್ತಿರುವ ಇತರೆ ಕಾರ್ಯನಿರ್ವಹಣಾ ವ್ಯವಸ್ಥೆಗಳೊಂದಿಗೆ ಕೆಟ್ಟದಾಗಿ ಪ್ರತಿಕ್ರಿಯಿಸುತ್ತಿದ್ದವು. ಪ್ರಮಾಣಿತವಾದ ಉತ್ಪನ್ನಕ್ಕೂ ಮೊದಲೇ ಅನೇಕ ಪರಿಹಾರಗಳು ಮಾರುಕಟ್ಟೆಗೆ ಬಂದಿದ್ದವು ಮತ್ತು ಮಾರಾಟಗಾರರು ಆಗಿನಿಂದಲೇ ಪ್ರಮಾಣಿತ ಉತ್ಪನ್ನಗಳ ಆಧಾರದಲ್ಲಿ ಅನೇಕ ಉತ್ಪನ್ನಗಳನ್ನು ಸಂಶೋಧಿಸಿದ್ದರು.

ಮನೆಯಲ್ಲಿ SANಗಳು[ಬದಲಾಯಿಸಿ]

SAN ಎಂಬುದು ಒಂದು ಅತ್ಯಂತ ದೊಡ್ಡ ಸಂಖ್ಯೆಯ ಡಿಸ್ಕ್ ಆ‍ಯ್‌ರೆಗಳ ಜಾಲಸರಣಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ ದೊಡ್ಡ ಮಟ್ಟದ, ಉನ್ನತ ಮಟ್ಟದ ಕಾರ್ಯನಿರ್ವಹಣೆಯ ಉದ್ದಿಮೆ ಸಂಗ್ರಹ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. SAN ಉಪಕರಣವು ತುಲನಾತ್ಮಕವಾಗಿ ದುಬಾರಿಯದಾಗಿರುವ ಕಾರಣ ಫೈಬರ್ ಚಾನೆಲ್ ಹೋಸ್ಟ್ ಬಸ್ ಅಡಾಪ್ಟರ್‌ಗಳನ್ನು ಹೆಚ್ಚಾಗಿ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಬಳಸಲಾಗುವುದಿಲ್ಲ. iSCSI SAN ತಂತ್ರಜ್ಞಾನವು ಕಾಲಕ್ರಮೇಣ ಕಡಿಮೆ ಬೆಲೆಯ SAN ಗಳನ್ನು ತಯಾರಿಸುವ ನಿರೀಕ್ಷೆಯಿದೆ, ಆದರೆ ಈ ತಂತ್ರಜ್ಞಾನವನ್ನು ಉದ್ದಿಮೆ ದತ್ತಾಂಶ ಕೇಂದ್ರ ಪರಿಸರದ ಹೊರಗೆ ಬಳಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಡೆಸ್ಕ್‌ಟಾಪ್ ಕ್ಲೈಂಟ್‌ಗಳು SMB ಮತ್ತು NFS ದಂತಹ NAS ಪ್ರೊಟೊಕಾಲ್‌ಗಳ ಬಳಕೆಯನ್ನು ಬಳಸುವುದನ್ನು ಮುಂದುವರೆಸುವರೆಂದು ನಿರೀಕ್ಷಿಸಲಾಗಿದೆ. ದೂರ ಸಂಗ್ರಹ ಪ್ರತಿಕೃತಿಯು ಇದಕ್ಕೆ ಹೊರತಾಗಿರಬಹುದು.

ಮಾಧ್ಯಮ ಮತ್ತು ಮನರಂಜನೆಯಲ್ಲಿ SAN ಗಳು[ಬದಲಾಯಿಸಿ]

ವೀಡಿಯೋ ಸಂಕಲನ ಮಾಡುವ ಕಾರ್ಯತಂಡಗಳಿಗೆ ಅತ್ಯಂತ ವೇಗದ ದತ್ತಾಂಶ ರವಾನೆಯು ಅಗತ್ಯವಾಗಿರುತ್ತದೆ. ಉದ್ದಿಮೆ ಮಾರುಕಟ್ಟೆಯ ಹೊರಗೆ ನೋಡುವುದಾದರೆ ಇದು SANಗಳಿಂದ ಅತ್ಯಂತ ಉನ್ನತವಾಗಿ ಲಾಭ ಪಡೆದುಕೊಳ್ಳುವ ವಿಭಾಗವಾಗಿದೆ. ಕೆಲವೊಮ್ಮೆ ಕ್ವಾಲಿಟಿ ಆಫ್ ಸರ್ವೀಸ್ (QoS) ಎಂದು ಕರೆಯಲಾಗುವ ಪರ್-ನೋಡ್ ಆವರ್ತನ ಶ್ರೇಣಿ ಬಳಕೆ ನಿಯಂತ್ರಣವು ಪ್ರಮುಖವಾಗಿ ವೀಡಿಯೋ ಕಾರ್ಯತಂಡಗಳಿಗೆ ಮಹತ್ವದ್ದಾಗಿದೆ. ಏಕೆಂದರೆ ಇದು, ಮುಕ್ತ ಆವರ್ತನ ಶ್ರೇಣಿಯು ಸಾಕಷ್ಟು ದೊರೆಯದಿದ್ದಾಗ ಜಾಲಸರಣಿಯುದ್ದಕ್ಕೂ ಉಚಿತವಾದ ಹಾಗೂ ಪ್ರಾಮುಖ್ಯತೆ ನೀಡಿದ ಆವರ್ತನ ಶ್ರೇಣಿ ಬಳಕೆಯನ್ನು ಖಚಿತಪಡಿಸುತ್ತದೆ. ಎವಿಡ್ ಯುನಿಟಿ, ಆ‍ಯ್‌ಪಲ್‌ನ Xsan ಮತ್ತು ಟೈಗರ್ ತಂತ್ರಜ್ಞಾನ MetaSAN ಇವುಗಳನ್ನು ಪ್ರಮುಖವಾಗಿ ವೀಡಿಯೋ ಜಾಲಸರಣಿಗಳಿಗಾಗಿ ರೂಪಿಸಲಾಗಿದ್ದು, ಅವುಗಳು ಈ ಕಾರ್ಯಸಾಧ್ಯತೆಯನ್ನು ನೀಡುತ್ತವೆ.

ಸ್ಟೋರೇಜ್ ವರ್ಚುವಲೈಸೇಶನ್[ಬದಲಾಯಿಸಿ]

ಸ್ಟೋರೇಜ್ ವರ್ಚುವಲೈಸೇಶನ್ ಎಂಬುದು ಭೌತಿಕ ಸಂಗ್ರಹದಿಂದ ತಾರ್ಕಿಕ ಸಂಗ್ರಹವನ್ನು ಸಂಪೂರ್ಣವಾಗಿ ಬೇರ್ಪಡಿಸುವ ಪ್ರಕ್ರಿಯೆಯಾಗಿದೆ. ಭೌತಿಕ ಸಂಗ್ರಹ ಸಂಪತ್ತುಗಳನ್ನು ಸಂಗ್ರಹ ಗುಂಪುಗಳಾಗಿ ಒಟ್ಟಾಗಿಸಿ, ಅದರಿಂದ ತಾರ್ಕಿಕ ಸಂಗ್ರಹವನ್ನು ರಚಿಸಲಾಗುತ್ತದೆ. ಇದು ಬಳಕೆದಾರರಿಗೆ ದತ್ತಾಂಶ ಸಂಗ್ರಹಕ್ಕೆ ಒಂದು ತಾರ್ಕಿಕ ಸ್ಥಳಾವಕಾಶವನ್ನು ಒದಗಿಸುತ್ತದೆ ಮತ್ತು ಅದರ ನೈಜ ಭೌತಿಕ ಪ್ರದೇಶಕ್ಕೆ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಿರ್ವಹಿಸುತ್ತದೆ. ಮಾರಾಟಗಾರ ಮಾಲಿಕತ್ವದ ಪರಿಹಾರಗಳನ್ನು ಬಳಸಿ ಇದನ್ನು ಆಧುನಿಕ ಡಿಸ್ಕ್ ಆ‍ಯ್‌ರೆಗಳಲ್ಲಿ ನೆರವೇರಿಸಲಾಗಿದೆ. ಆದರೂ, ಇಡೀ ಜಾಲಸರಣಿಯುದ್ದಕ್ಕೂ ಹರಡಿರುವ ಬಹುಸಂಖ್ಯೆಯ ಡಿಸ್ಕ್ ಆ‍ಯ್‌ರೆಗಳನ್ನು ಬೇರ್ಪಡಿಸಿ ಒಂದು ಏಕಶಿಲೆಯ ಸಂಗ್ರಹ ಸಾಧನವನ್ನಾಗಿ ರೂಪಿಸುವುದು ಮತ್ತು ಆ ಮೂಲಕ ಅದನ್ನು ಏಕರೂಪದಲ್ಲಿ ನಿರ್ವಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • SMI-S — ಸಂಗ್ರಹ ನಿರ್ವಹಣೆ ಪ್ರಾರಂಭ ನಿರ್ಧಿಷ್ಟತೆ


ಆಕರಗಳು[ಬದಲಾಯಿಸಿ]

  1. "SAN vs DAS: A Cost Analysis of Storage in the Enterprise". SAN vs DAS: A Cost Analysis of Storage in the Enterprise. 1900-1-0. Archived from the original on 2012-03-15. Retrieved 2010-1-28. {{cite web}}: Check date values in: |accessdate= and |date= (help)
  2. "TechEncyclopedia: IP Storage". Archived from the original on 2009-04-09. Retrieved 2007-12-09. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "TechEncyclopedia: SANoIP". Archived from the original on 2009-04-09. Retrieved 2007-12-09. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಹೊರಗಿನ ಕೊಂಡಿಗಳು[ಬದಲಾಯಿಸಿ]