ಸ್ಕೂಲ್ ಆಫ಼್ ಸೋಶಿಯಲ್ ವರ್ಕ್, ರೋಶನಿ ನಿಲಯ
ಮಂಗಳೂರಿನ ಹೃದಯ ಭಾಗವಾದ ವೆಲೆನ್ಸಿಯಾ ಎಂಬ ನಗರದಲ್ಲಿ ತಲೆಎತ್ತಿ ನಿಂತಂತಹ ‘ಸ್ಕೂಲ್ ಆಫ಼್ ಸೋಶಿಯಲ್ ವರ್ಕ್, ರೋಶನಿ ನಿಲಯ ಎಂಬ ವಿದ್ಯಾಸಂಸ್ಥೆಯು ಸತತ ೫೪ ವರ್ಷಗಳಿಂದ ತನ್ನ ಸೇವೆಯನ್ನು ಪೂರೈಸುತ್ತಾ ಬಂದಿದೆ. ಇದು ಪ್ರಸ್ತುತವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅಧಿಪತ್ಯಕ್ಕೆ ಒಳಪಟ್ಟಿದ್ದು, ೨೦೦೭ರಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ‘ವಿಶ್ವವಿದ್ಯಾನಿಲಯ ಅನುದಾನಿತ ಆಯೋಗ’ದ(ಯುನಿವರ್ಸಿಟಿ ಗ್ರಾನ್ಟ್ಸ್ ಕಮಿಶನ್) ವತಿಯಿಂದ ‘ಗುಣೋತ್ಕರ್ಶಕ್ಕೆ ಶಕ್ಯತೆ ಹೊಂದಿದ ಶಿಕ್ಷಣಸಂಸೆ’ಯಾಗಿ (ಕಾಲೇಜ್ ವಿದ್ ಪೊಟೆನ್ಶಿಯಲ್ ಫ಼ಾರ್ ಎಕ್ಸಲೆನ್ಸ್)೨೦೧೦ರಿಂದ ಗುರುತಿಸಲ್ಪಟ್ಟಿದೆ ಹಾಗೂ ನ್ಯಾಕ್‌ನಿಂದ ‘ಎ’ ದರ್ಜೆಯೊಂದಿಗೆ(ಒಟ್ಟು ೪ಕ್ಕೆ ೩.೪೨ ಸಿಜಿಪಿಎ) ೨೦೧೧ರಲ್ಲಿ ಮರು ಅಧಿಕೃತಗೊಂಡಿದೆ.
ಈ ಶಿಕ್ಷಣಸಂಸ್ಥೆಯು ೧೭೯೦ರಲ್ಲಿ ಸ್ಥಾಪಿತಗೊಂಡಂತಹ ಫ಼್ರಾನ್ಸ್ ಮೂಲದ ‘ಸೊಸೈಟಿ ಆಫ಼್ ಡಾಟರ್ಸ್ ಆಫ಼್ ದ ಹಾರ್ಟ್ ಆಫ಼್ ಮೇರಿ’ ಎಂಬ ಅಂತರಾಶ್ಟ್ರೀಯ ಕ್ಯಾಥೊಲಿಕ್ ಧಾರ್ಮಿಕ ಸಮುದಾಯದ ಸದಸ್ಯೆಯಾಗಿದ್ದುಕೊಂಡು ಭಾರತದಲ್ಲಿ ಈ ಸಮುದಾಯವನ್ನು ಪರಿಚಯಿಸಿದ(೧೯೫೧ರಲ್ಲಿ) ಖ್ಯಾತಿಯು ಮರಿಯ ಪೈವ ಕುಸೈರೊ ಎಂಬವರಿಂದ ೧೯೬೦ರಲ್ಲಿ ಸ್ಥಾಪಿತಗೊಂಡಿದೆ. ‘ಮಂಗಳೂರು ಸಮಾಜಸೇವಾ ಸಂಸ್ಥೆ, ಕರ್ನಾಟಕ ಶಾಖೆ’ ಇದರ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದೆ.
ಠಾಗೋರರ ಬರವಣಿಗೆಯಿಂದ ಆಯ್ದ‘ಪ್ರೀತಿಯು ಸೇವೆಯನ್ನು ರಸಭರಿತವನ್ನಾಗಿಸುತ್ತದೆ’(ಲವ್ ಈಸ್ ಮೇಡ್ ಫ಼್ರೂಟ್ ಫ಼ುಲ್ ಇನ್ ಸರ್ವಿಸ್) ಎಂಬ ಧ್ಯೇಯವಾಕ್ಯದೊಂದಿಗೆ, ಕರ್ನಾಟಕದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸ್ನಾತಕೋತ್ತರ ವಿಭಾಗದಲ್ಲಿ ‘ಸಮಾಜಕಾರ್ಯ’ ತರಬೇತಿಯನ್ನು ಪರಿಚಯಿಸಿ, ಆರಂಭಿಸಿದ(೧೯೬೦) ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಅದಾದ ಬಳಿಕ ೧೯೭೦ರಲ್ಲಿ ‘ಕಲಾ ವಿಭಾಗ’ದಲ್ಲಿ (ಬಿ.ಎ) ಪದವಿಯನ್ನು, ೧೯೮೩ರಲ್ಲಿ ‘ಸಮಾಜಕಾರ್ಯ’ ವಿಷಯದಲ್ಲಿ ಪಂಡಿತ ಪದವಿಯನ್ನು(ಡಾಕ್ಟರೇಟ್), ೧೯೮೪ರಲ್ಲಿ ‘ಸಮಾಜಕಾರ್ಯ’ ವಿಷಯದಲ್ಲಿ ಪದವಿ ತರಬೇತಿಯನ್ನು(ಬಿ.ಎಸ್.ಡಬ್ಲ್ಯೂ), ೨೦೦೭ರಲ್ಲಿ ‘ಹೊಲಿಸ್ಟಿಕ್ ಕೌನ್ಸಿಲಿಂಗ್’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು(ಎಮ್.ಎಸ್.ಸಿ) ಹಾಗೂ ೨೦೧೨ರಲ್ಲಿ ‘ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ’(ಕ್ರಿಮಿನೋಲೊಜಿ ಆಂಡ್ ಫೊರೆನ್ಸಿಕ್ ಸಯನ್ಸ್)ವಿಷಯದಲ್ಲಿಸ್ನಾತಕೋತ್ತರ ಪದವಿಯನ್ನು(ಎಮ್.ಎಸ್.ಸಿ) ಪ್ರಾರಂಭಿಸಿತು. ಇವಿಷ್ಟನ್ನು ಹೊರತುಪಡಿಸಿ ವಿವಿಧ ರೀತಿಯ ಇತರೆ ತರಬೇತಿಗಳೂ ಇಲ್ಲಿ ಲಭ್ಯವಿವೆ. ಅವುಗಳೆಂದರೆ;
- ಪಿ.ಜಿ. ಡಿಪ್ಲೋಮ ಇನ್ ಹ್ಯುಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್
- ಪಿ.ಜಿ. ಡಿಪ್ಲೋಮ ಇನ್ ಕೌನ್ಸಿಲಿಂಗ್
- ಪಿ.ಜಿ. ಡಿಪ್ಲೋಮ ಇನ್ ಇವೆಂಟ್ ಮ್ಯಾನೇಜ್ಮೆಂಟ್
- ಡಿಪ್ಲೋಮ ಇನ್ ಲೇಬರ್ ಲೋಸ್
- ಡಿಪ್ಲೋಮ ಇನ್ ಹ್ಯುಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್
- ಸರ್ಟಿಫ಼ಿಕೇಟ್ ಪ್ರೋಗ್ರಾಮ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್
- ಸರ್ಟಿಫ಼ಿಕೇಟ್ ಪ್ರೋಗ್ರಾಮ್ ಇನ್ ಕನ್ನಡ
- ಸರ್ಟಿಫ಼ಿಕೇಟ್ ಪ್ರೋಗ್ರಾಮ್ ಇನ್ ಸ್ಪೋಕನ್ ಇಂಗ್ಲೀಷ್
ವಿದ್ಯಾರ್ಥಿಗಳ ಸರ್ವತೋಮುಖ ಅಭಿವ್ರದ್ಧಿಗಾಗಿ ವಿವಿದ ರೀತಿಯ ಪಠ್ಯೇತರ ಚಟುವಟಿಕೆಗಳು ಮತ್ತು ವಿದ್ಯಾರ್ಥಿ ಸಂಘಗಳು ಇಲ್ಲಿ ಲಭ್ಯವಿದೆ. ಅವುಗಳು ಈ ಕೆಳಕಂಡಂತಿವೆ; ಚಟುವಟಿಕೆಗಳು:
ಕ್ರೀಡೆ
[ಬದಲಾಯಿಸಿ]- ರಾಶ್ಟೀಯ ಸೇವಾ ಯೋಜನೆ(ಎನ್.ಎಸ್.ಎಸ್)
- ಎನ್.ಸಿ.ಸಿ
- ಗ್ರಿಡ್ ಕಾರ್ಯಕ್ರಮಗಳು
- ವ್ಯಾಯಾಮ ಶಾಲೆ(ಜಿಮ್ನೇಸಿಯಮ್)
- ಯೋಗ
- ಭಾಷ ಪ್ರಯೋಗಾಲಯ(ಲ್ಯಾಂಗ್ವೇಜ್ ಲ್ಯಾಬ್)
ವಿಧ್ಯಾರ್ಥಿ ಸಂಘಗಳು
[ಬದಲಾಯಿಸಿ]- ಪದವಿ ವಿಭಾಗ
- ರೋಶನಿ ಗ್ಯಾವೆಲ್ ಕ್ಲಬ್
- ಸೋಶಿಯೋ-ಇಕೊನೋಮಿಕ್ ಫ಼ೋರಮ್
- ಕನ್ನಡ ಸಾಹಿತ್ಯ ಸಂಘ
- ಇಂಗ್ಲೀಷ್ ಲಿಟರರಿ ಕ್ಲಬ್
- ಸೈಕೋಲೊಜಿ ಫ಼ೋರಮ್
- ಐ.ಟಿ ಬಜ಼್
- ಯೂತ್ ಕ್ವೇಕ್
- ರೋಟರಿ ಕ್ಲಬ್
- ರೂರಲ್ ಡೆವೆಲಪ್ಮೆಂಟ್ ಫ಼ೋರಮ್
- ಕ್ರಿಮಿನೋ-ವಿಶನ್
ಸ್ನಾತಕೋತ್ತರ ವಿಭಾಗ
[ಬದಲಾಯಿಸಿ]- ರೆಡ್ ಆರ್ಮಿ
- ನರ್ಚರ್-ನೇಚರ್ ಕ್ಲಬ್
- ಫ಼್ಯಾಮಿಲಿ ಕೋಸ್ಮೋಸ್ ಫ಼ೋರಮ್
- ಎಚ್.ಆರ್ ಫ಼ೋರಮ್
- ಕಮ್ಯೂನಿಟಿ ಡೆವೆಲಪ್ಮೆಂಟ್ ಫ಼ೋರಮ್
- ಫ಼ೊರೆನ್ಸಿಸ್
ವಿದ್ಯಾರ್ಥಿಗಳ ಜ್ನಾನವನ್ನು ವಿಸ್ತ್ರತಗೊಳಿಸಬಲ್ಲಂತಹ ವಿವಿಧ ಮಜಲುಗಳ ಸಮಗ್ರ ಪುಸ್ತಕ ಭಂಡಾರವನ್ನು, ಹಲವು ಭಾಗಗಳ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳು ಮತ್ತು ಇ-ಸಂಪನ್ಮೂಲಗಳು ಅಡೆಲೈಡ್ ಗ್ರಂಥಾಲಯದಲ್ಲಿ ಲಭ್ಯವಿದೆ. ಹೊರರಾಜ್ಯದಿಂದ ಮತ್ತು ದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುತ್ತದೆ.
ಈ ಸಂಸ್ಥೆಯ ವ್ಯಾಪ್ತಿ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಮೀಸಲಾಗಿರದೆ, ಇದು ವಿವಿಧ ರೀತಿಯ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದರ ವ್ಯಾಪ್ತಿಯಲ್ಲಿ ಬರುವ ಸಲಹಾ ಕೇಂದ್ರಗಳು ಮತ್ತು ಸೇವಾಸಂಸ್ಥೆಗಳು ಇಂತಿವೆ:
- ಜನತಾಕೇಂದ್ರ-ನಗರ ಸಮುದಾಯ ಕೇಂದ್ರ(ಅರ್ಬನ್ ಕಮ್ಯೂನಿಟಿ ಸೆಂಟರ್)
- ಕುಟುಂಬ ಸೇವಾ ಸಂಸ್ಥೆ(ಫ಼್ಯಾಮಿಲಿ ಸರ್ವಿಸ್ ಏಜನ್ಸಿ)
- ಕುಟುಂಬ ಉಪಭೋದನಾ ಕೇಂದ್ರ(ಫ಼್ಯಾಮಿಲಿ ಕೌಂನ್ಸಿಲಿಂಗ್ ಸೆಂಟರ್)
- ನವಜೀವನ್ ಮಾರ್ಗ್-ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ(ಅಂಗನವಾಡಿ ವರ್ಕರ್ಸ್ ಟ್ರೈನಿಂಗ್ ಸೆಂಟರ್)
- ವಿಶ್ವಾಸ್-ವಯಸ್ಕರಿಗಾಗಿ ಯೋಜನೆ(ಪ್ರೋಜೆಕ್ಟ್ ಫ಼ಾರ್ ಎಲ್ಡರ್ಲಿ)
- ದೀಪಾಲಯ ಸಮಾಜಸೇವಾ ಸಂಸ್ಥೆ-ಇಂದಿ,ಬಿಜಾಪುರ
- ಮಕ್ಕಳ ಸಹಾಯವಾಣಿ(ಚೈಲ್ಡ್ ಲೈನ್)
- ಕಿಂಡರ್ ಗಾರ್ಡನ್
- ಆಡೆಲೈಡ್ ಸಂಶೋಧನಾ ಮತ್ತು ಮುದ್ರಣ ಕೇಂದ್ರ(ಆಡಲೈಡ್ ರಿಸರ್ಚ್ ಆಂಡ್ ಪಬ್ಲಿಕೇಶನ್ ಸೆಂಟರ್)
- ಜಾಗತಿಕ ಹೂಡಿಕಾ ಕೇಂದ್ರ(ಗ್ಲೋಬಲ್ ಫ಼ಂಡ್ ಪ್ರೋಜೆಕ್ಟ್)
ಇಷ್ಟು ಮಾತ್ರ ಅಲ್ಲದೆ ವಿವಿಧ ಸಮುದಾಯಗಳಲ್ಲಿ ಮಹಿಳೆಯರಿಗಾಗಿ, ಯುವಕರಿಗಾಗಿ ಹಾಗೂ ಮಕ್ಕಳಿಗಾಗಿ ನರ್ಚರ್-ನೇಚರ್ ಕ್ಲಬ್, ಹಳೆವಿದ್ಯಾರ್ಥಿ ಸಂಘ(ಅಲ್ಯುಮಿನೈ ಅಸೋಸಿಯೇಶನ್), ರೆಡ್ ಆರ್ಮಿ ಮುಂತಾದ ಸಂಘಗಳು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಜಂಟಿ ಆಶ್ರಯದೊಂದಿಗೆ ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತದೆ.
ಅಂತರಾಷ್ಟ್ರೀಯಮಟ್ಟದಲ್ಲೂ ಈ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದ್ದು, ವೋಲ್ಡಾ ಯುನಿವರ್ಸಿಟಿ, ನಾರ್ವೆ ಫ಼್ಲಿಂಡರ್ಸ್ ಯುನಿವರ್ಸಿಟಿ, ಆಸ್ಟ್ರೇಲಿಯ ಮತ್ತು ಕೆ.ಹೆಚ್ ಯುನಿವರ್ಸಿಟಿ ಬೆಲ್ಜಿಯಂ ಮುಂತಾದ ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ನಿರಂತರವಾದ ಸಂಪರ್ಕವನ್ನು ಹೊಂದಿದೆ.
ಈ ಸಂಸ್ಥೆಯಲ್ಲಿ ಲಭ್ಯವಿರುವಂತಹ ವಿವಿಧ ಶೈಕ್ಷಣಿಕ ತರಬೇತಿಗಳ ವಿವರಗಳು ಇಂತಿವೆ:
ಸ್ನಾತಕೋತ್ತರ ವಿಭಾಗ
[ಬದಲಾಯಿಸಿ]ಎಮ್.ಎಸ್.ಡ್ಬ್ಲ್ಯೂ
[ಬದಲಾಯಿಸಿ]ಇದು ಸೂಕ್ತ ತರಬೇತಿಯನ್ನು ಪಡೆದ ನೈಜ ಕ್ಷೇತ್ರ ಕಾರ್ಯ(ಫ಼ೀಲ್ಡ್ ವರ್ಕ್) ಅನುಭವಗಳೊಂದಿಗೆ ಉತ್ತಮ ಕೌಶಲ್ಯಗಳನ್ನು ಹೊಂದಿದ ಔದ್ಯೋಗಿಕ ಸಮಾಜಕಾರ್ಯಕರ್ತರನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಪ್ರತ್ಯೇಕ ೪ ಕ್ಷೇತ್ರಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳಬಹುದಾಗಿದೆ. ಅವೆಂದರೆ: ಸಮುದಾಯ ಅಭಿವ್ರದ್ಧಿ ವಿಭಾಗ(ಕಮ್ಯೂನಿಟಿ ಡೆವೆಲಪ್ಮೆಂಟ್) ವೈದ್ಯಕೀಯ ಮತ್ತು ಮನೋವೈದಿಕ ಸಮಾಜಕಾರ್ಯ(ಮೆಡಿಕಲ್ ಆಂಡ್ ಸೈಕ್ಯಾಟ್ರಿಕ್ ಸೋಶಿಯಲ್ ವರ್ಕ್) ವೈಯಕ್ತಿಕ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳು(ಪರ್ಸನಲ್ ಮ್ಯಾನೇಜ್ಮೆಂಟ್ ಆಂಡ್ ಇಂಡಸ್ಟ್ರಿಯಲ್ ರಿಲೇಷನ್ಸ್) ಅಪರಾಧಶಾಸ್ತ್ರ ಮತ್ತು ಆಡಳಿತಾತ್ಮಕ ತಿದ್ದುಪಡಿ(ಕ್ರಿಮಿನೋಲೊಜಿ ಅಂಡ್ ಕರೆಕ್ಷನಲ್ ಆಡ್ಮಿನಿಸ್ಟ್ರೇಷನ್)
ಎಮ್. ಎಸ್.ಸಿ -ಕೌನ್ಸಿಲಿಂಗ್
[ಬದಲಾಯಿಸಿ]ಸೈದ್ಧಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕವಾಗಿ ಮನೋವೈದಿಕ ತಂತ್ರಗಳು ಮತ್ತು ಕೌಶಲ್ಯಗಳನ್ನು ಭವಿಷ್ಯದ ಉಪಬೋಧಕರಲ್ಲಿ ಮೂಡಿಸುವ ಉದ್ದೇಶವನ್ನು ಈ ತರಬೇತಿ ಹೊಂದಿದೆ.
ಎಮ್.ಎಸ್.ಸಿ - ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ (ಕ್ರಿಮಿನೊಲೊಜಿ ಮತ್ತು ಫೊರೆನ್ಸಿಕ್ ಸೈನ್ಸ್)
[ಬದಲಾಯಿಸಿ]ಇದು ಅಪರಾಧ ಶಾಸ್ತ್ರ, ಪೋಲೀಸ್ ವಿಜ್ಞಾನ ಮತ್ತು ನ್ಯಾಯಾಂಗ ವ್ಯವಸ್ಥೆ, ರಕ್ಷಣಾ ವಿಧಾನ , ಪತ್ತೇದಾರಿ ತಂತ್ರಗಳು ಮತ್ತು ವಿಧಿವಿಜ್ಞಾನದ ವಿವಿಧ ವಿಷಯಗಳಲ್ಲಿ (ಬೆರಳಚ್ಚು, ವಂಶಿವಾಹಿ, ಮಣ್ಣು, ರಕ್ತಪರೀಕ್ಷೆ ಇತ್ಯಾದಿ) ವಿದ್ಯಾರ್ಥಿಗಳ ಕೌಶಲ್ಯ ಮತ್ತು ಜ್ಞಾನವನ್ನು ಪ್ರಾಯೋಗಿಕ ಹಾಗೂ ಸೈದ್ದಾಂತಿಕವಾಗಿ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಈ ಮೇಲಿನ ಎಲ್ಲಾ ತರಬೇತಿಗಳೂ ೨ ವರ್ಷಕಾಲದವುಳಾಗಿದ್ದು ಪ್ರಾಯೋಗಿಕ ಸೈದ್ದಾಂತಿಕ ಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತದೆ.
ಪದವಿ
[ಬದಲಾಯಿಸಿ]ಬಿ.ಎಸ್.ಡಬ್ಲ್ಯು
[ಬದಲಾಯಿಸಿ]ಸಮಾಜಕಾರ್ಯ ವಿಭಾಗದಲ್ಲಿ ೩ ವರ್ಷಗಳ ತರಬೇತಿಯೊಂದಿಗೆ ಕ್ಷೇತ್ರಕಾರ್ಯದ ಅನುಭವಗಳ ಮೂಲಕ ಈ ವಿಷಯದಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
ಬಿ.ಎ
[ಬದಲಾಯಿಸಿ]ಜೀವನ ಕೌಶಲ್ಯದ ಕಲೆಗೆ ಸಂಬಂಧಿಸಿದ ವಿವಿಧ ವಿಷಯಗಳ ಆಯ್ಕೆ ಇದರಲ್ಲಿ ಲಭ್ಯವಿದೆ. ಅವುಗಳೆಂದರೆ, ಅರ್ಥಶಾಸ್ತ್ರ (ಇಕೊನೊಮಿಕ್ಸ್), ಸಮಾಜಶಾಸ್ತ್ರ (ಸೋಶಿಯೋಲೊಜಿ), ಐಚ್ಛಿಕ ಕನ್ನಡ, ಸೇಕ್ರೇಟೇರಿಯಲ್ ಪ್ರ್ಯಾಕ್ಟಿಸ್, ಕಂಪ್ಯೂಟರ್ ಆಪ್ಲಿಕೇಷನ್ಸ್, ಇಂಗ್ಲೀಷ್ ಮೇಜರ್, ಮನಃಶಾಸ್ತ್ರ (ಸೈಕೊಲೊಜಿ) ಅಪರಾಧಶಾಸ್ತ್ರ (ಕ್ರಿಮಿನೋಲೊಜಿ) ಮತ್ತು ಗ್ರಾಮೀಣ ಅಭಿವ್ರದ್ಧಿ (ಅರ್.ಡಿ).
ಒಟ್ಟಿನಲ್ಲಿ ಇಲ್ಲಿ ಲಭ್ಯವಿರುವ ಎಲ್ಲಾ ವಿಷಯಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮಾಜಕಾರ್ಯಕ್ಕೆ ಸಂಬಂಧಿಸಿದವುಗಳಾಗಿವೆ.