ಸ್ಕಾರ್ಪಿಯಾನ್ಸ್‌ (ವಾದ್ಯ-ಮೇಳ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Scorpions
ಹಿನ್ನೆಲೆ ಮಾಹಿತಿ
ಮೂಲಸ್ಥಳHannover, Germany
ಸಂಗೀತ ಶೈಲಿHard rock, heavy metal
ಸಕ್ರಿಯ ವರ್ಷಗಳು1965 - present
L‍abelsRhino, RCA, Mercury, EMI, Atlantic, WEA, BMG
ಅಧೀಕೃತ ಜಾಲತಾಣOfficial website
ಸಧ್ಯದ ಸದಸ್ಯರುKlaus Meine
Matthias Jabs
Rudolf Schenker
Paweł Mąciwoda
James Kottak
ಮಾಜಿ ಸದಸ್ಯರುSee: List of former members

ಸ್ಕಾರ್ಪಿಯಾನ್ಸ್‌ ಒಂದು ಜರ್ಮನಿಯ ಹ್ಯಾನೋವರ್‌‌ನ ಹೆವಿ ಮೆಟಲ್‌[೧][೨][೩][೪]/ಹಾರ್ಡ್ ರಾಕ್‌[೫][೬][೭] ವಾದ್ಯ-ಮೇಳ. ಇದು ಅದರ 1980ರ ರಾಕ್‌ ಆಂಥೆಮ್ "ರಾಕ್ ಯು ಲೈಕ್ ಎ ಹರಿಕೇನ್‌" ಹಾಗೂ ಅದರ "ನೊ ಒನ್ ಲೈಕ್ ಯು", "ಸೆಂಡ್ ಮಿ ಆನ್ ಏಂಜೆಲ್‌, "ಸ್ಟಿಲ್ ಲವಿಂಗ್ ಯು" ಮತ್ತು "ವಿಂಡ್ ಆಫ್ ಚೇಂಜ್‌" ಮೊದಲಾದ ಏಕಗೀತಗಳಿಗೆ ಬಹುಪ್ರಸಿದ್ಧವಾಗಿದೆ. ವಾದ್ಯ-ಮೇಳವು ವಿಶ್ವದಾದ್ಯಂತ ಸುಮಾರು 100 ದಶಲಕ್ಷದಷ್ಟು ಆಲ್ಬಂಗಳನ್ನು ಮಾರಾಟ ಮಾಡಿದೆ.[೮] ಅಲ್ಲದೆ ಇದು VH1ಗ್ರೇಟೆಸ್ಟ್ ಆರ್ಟಿಸ್ಟ್ ಆಫ್ ಹಾರ್ಡ್ ರಾಕ್‌‌ ಕಾರ್ಯಕ್ರಮದಲ್ಲಿ #46ನೇ ಸ್ಥಾನ ಪಡೆದುಕೊಂಡಿದೆ.[೯] "ರಾಕ್ ಯು ಲೈಕ್ ಎ ಹ್ಯುರಿಕೇನ್‌" VH1100 ಗ್ರೇಟೆಸ್ಟ್ ಹಾರ್ಡ್ ರಾಕ್‌ ಸಾಂಗ್ಸ್ ಪಟ್ಟಿಯಲ್ಲಿ #18ನೇ ಸ್ಥಾನ ಗಳಿಸಿದೆ.[೧೦] ಸುಮಾರು 45 ವರ್ಷಗಳ ನಿರ್ವಹಣೆಯೊಂದಿಗೆ ವಾದ್ಯ-ಮೇಳವು ಪ್ರವಾಸ ಮತ್ತು ಸಂಗೀತ ಧ್ವನಿಮುದ್ರಣ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದೆ. ವಾದ್ಯ-ಮೇಳವು ಅದರ ಮುಂಬರುವ ಆಲ್ಬಂ ಸ್ಟಿಂಗ್ ಇನ್ ದ ಟೈಲ್‌ ಗೆ ಪೂರಕವಾಗಿ ಮಾಡುವ ಪ್ರವಾಸದ ನಂತರ ತನ್ನ ಆಲ್ಬಂ ತಯಾರಿಸುವ ಕಾರ್ಯವನ್ನು ಸಂಪೂರ್ಣವಾಗಿ ಕೊನೆಗೊಳಿಸುತ್ತದೆ, ಎಂದು 2010ರ ಜನವರಿ 24ರಲ್ಲಿ ಘೋಷಿಸಿದೆ.[೧೧][೧೨]

ಇತಿಹಾಸ[ಬದಲಾಯಿಸಿ]

ರಚನೆ ಮತ್ತು ಆರಂಭಿಕ ಇತಿಹಾಸ (1965-1973)[ಬದಲಾಯಿಸಿ]

ವಾದ್ಯ-ಮೇಳದ ಲಯಬದ್ಧ ಗಿಟಾರ್-ವಾದಕ ರುಡೋಲ್ಫ್ ಸ್ಕೆಂಕರ್‌ 1965ರಲ್ಲಿ ಈ ವಾದ್ಯ-ಮೇಳ ಆರಂಭಿಸಿದನು. ಆರಂಭದಲ್ಲಿ ವಾದ್ಯ-ಮೇಳವು ಭಾರಿ ಪ್ರಭಾವ ಬೀರಿತು. ಅದಲ್ಲದೇ ಸ್ಕೆಂಕರ್‌ ತಾನೇ ಸ್ವತಃ ಹಾಡುತ್ತಿದ್ದನು. ಸ್ಕೆಂಕರ್‌ನ 1969ರಲ್ಲಿ ತಮ್ಮ ಮತ್ತು ಗಾಯಕ ಮೈಕೆಲ್‌ ಕ್ಲಾಸ್ ಮೈನೆ ವಾದ್ಯ-ಮೇಳವನ್ನು ಸೇರುವುದರೊಂದಿಗೆ ಹಲವಾರು ಪರಿಣತಿಗಳು ಒಟ್ಟುಗೂಡಲು ಆರಂಭವಾಯಿತು. ಸುಮಾರು 1972ರಲ್ಲಿ ಈ ತಂಡವು, ಮಂದ್ರವಾದ್ಯ ವಾದಕನಾಗಿ ಲೋಥಾರ್ ಹೇಂಬರ್ಗ್ ಮತ್ತು ಡ್ರಮ್ ವಾದಕನಾಗಿ ವೋಲ್ಫ್‌ಗ್ಯಾಂಗ್ ಡಿಜಿಯೋನಿ ಒಂದಿಗೆ ಅದರ ಮೊದಲ ಆಲ್ಬಂ ಲೋನ್‌ಸಮ್ ಕ್ರೊ ಅನ್ನು ಧ್ವನಿಮುದ್ರಣಮಾಡಿ ಬಿಡುಗಡೆಗೊಳಿಸಿತು. ಲೋನ್‌ಸಮ್ ಕ್ರೊ ಪ್ರವಾಸದ ಸಂದರ್ಭದಲ್ಲಿ ಸ್ಕಾರ್ಪಿಯಾನ್ಸ್‌ ಮುಂದೆ ಬರಲಿದ್ದ ಬ್ರಿಟಿಷ್‌ ವಾದ್ಯ-ಮೇಳ UFOಗೆ ಅವಕಾಶ ಕಲ್ಪಿಸಿಕೊಟ್ಟಿತು. ಪ್ರವಾಸದ ಕೊನೆಯಲ್ಲಿ UFO ಸದಸ್ಯರು ಗಿಟಾರ್-ವಾದಕ ಮೈಕೆಲ್‌ ಸ್ಕೆಂಕರ್‌ಗೆ ಪ್ರಮುಖ ಗಿಟಾರ ನುಡಿಸುವ ಕೆಲಸ ನೀಡಿದರು. ಈ ಪ್ರಸ್ತಾಪವನ್ನು ಅವನು ಬೇಗನೆ ಒಪ್ಪಿಕೊಂಡನು. ಪ್ರವಾಸವನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲು ಸ್ಕೆಂಕರ್‌ ಸಹೋದರರ ಸ್ನೇಹಿತ ಯ‌ೂಲಿ ರೋತ್‌‌‌ನನ್ನು ತಾತ್ಕಾಲಿಕವಾಗಿ ಕರೆಸಿಕೊಳ್ಳಲಾಯಿತು.

ಮೈಕೆಲ್‌ ಸ್ಕೆಂಕರ್‌ನ ನಿರ್ಗಮನವು ವಾದ್ಯ-ಮೇಳದ ವಿಯೋಜನೆಗೆ ಕಾರಣವಾಯಿತು. ಅಂದರೆ 1973ರಲ್ಲಿ ಲೋನ್‌ಸಮ್ ಕ್ರೊ ಪ್ರವಾಸವನ್ನು ಪೂರ್ಣಗೊಳಿಸಲು ಸ್ಕಾರ್ಪಿಯಾನ್ಸ್‌‌ಗೆ ಸಹಾಯ ಮಾಡಿದ ಯ‌ೂಲಿ ರೋತ್‌ಗೆ ಪ್ರಮುಖ ಗಿಟಾರ್-ವಾದಕನ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಅವನು ಅದನ್ನು ಒಪ್ಪಿಕೊಳ್ಳುವ ಬದಲಿಗೆ ಡಾನ್ ರೋಡ್‌ ವಾದ್ಯ-ಮೇಳದಲ್ಲಿ ಉಳಿಯುವುದಕ್ಕೆ ಆದ್ಯತೆ ನೀಡುವ ಮೂಲಕ ಪ್ರಸ್ತಾಪವನ್ನು ತಳ್ಳಿಹಾಕಿದ. ಸ್ಕೆಂಕರ್‌ ಅಂತಿಮವಾಗಿ ರೋತ್‌ನೊಂದಿಗೆ ಕೆಲಸ ಮಾಡಬೇಕೆಂದು ನಿರ್ಧರಿಸಿದನು. ಆದರೆ ಸ್ಕಾರ್ಪಿಯಾನ್ಸ್‌ನ ಹಿಂದಿನ ತಂಡವನ್ನು ಮತ್ತೆ ಸಕ್ರಿಯಗೊಳಿಸಲು ಬಯಸಲಿಲ್ಲ. ಅವನು ಡಾನ್ ರೋಡ್‌ನ ಕೆಲವು ಪೂರ್ವಅಭ್ಯಾಸಗಳಲ್ಲಿ ಭಾಗವಹಿಸಿದ. ಕೊನೆಗೆ ರೋತ್, ಫ್ರಾನ್ಸಿಸ್ ಬುಚೋಲ್ಜ್‌ (ಮಂದ್ರವಾದ್ಯ), ಅಕಿಮ್ ಕಿರ್ಸ್‌ಕ್ನಿಂಗ್‌ (ಕೀಬೋರ್ಡ್‌) ಮತ್ತು ಜುರ್ಗೆನ್ ರೊಸೆಂತಾಲ್‌ (ಡ್ರಮ್ಮು) ಮೊದಲಾದವರನ್ನು ಹೊಂದಿದ್ದ ವಾದ್ಯ-ಮೇಳವನ್ನು ಸೇರಲು ನಿರ್ಧರಿಸಿದ. ರೋತ್‌ ಮತ್ತು ಬುಚೋಲ್ಜ್‌, ಕ್ಲಾಸ್ ಮೈನೆಯನ್ನು ತಮ್ಮ ವಾದ್ಯ-ವೃಂದಕ್ಕೆ ಸೇರುವಂತೆ ಆಹ್ವಾನಿಸಲು ರುಡೋಲ್ಫ್ ಸ್ಕೆಂಕರ್‌ನ ಮನವೊಲಿಸಿದರು. ಅದನ್ನು ಅವನು ಕೂಡಲೇ ಒಪ್ಪಿಕೊಂಡನು. ವಾದ್ಯ-ಮೇಳದಲ್ಲಿ ಸ್ಕಾರ್ಪಿಯಾನ್ಸ್‌ಗಿಂತ ಡಾವ್ನ್ ರೋಡ್‌ನ ಸದಸ್ಯರೇ ಹೆಚ್ಚಿದ್ದರು. ತಂಡದವರು ಸ್ಕಾರ್ಪಿಯಾನ್ಸ್‌ ಹೆಸರನ್ನೇ ಬಳಸಲು ನಿರ್ಧರಿಸಿದರು. ಏಕೆಂದರೆ ಇದು ಜರ್ಮನ್‌ ಹಾರ್ಡ್ ರಾಕ್‌ ಕಾರ್ಯಕ್ಷೇತ್ರದಲ್ಲಿ ಬಹುಪ್ರಸಿದ್ಧವಾಗಿತ್ತು. ಅಲ್ಲದೇ ಒಂದು ಆಲ್ಬಂ ಆ ಹೆಸರಿನಲ್ಲಿ ಬಿಡುಗಡೆಯಾಗಿತ್ತು.[೧೩]

ಪ್ರಸಿದ್ಧಿಯೆಡೆಗೆ ಬೆಳವಣಿಗೆ (1974-1978)[ಬದಲಾಯಿಸಿ]

ಸುಮಾರು 1974ರಲ್ಲಿ ಸ್ಕಾರ್ಪಿಯಾನ್ಸ್‌ನ ಹೊಸ ತಂಡವು ಫ್ಲೈ ಟು ದ ರೈನ್‌ಬೊ ಆಲ್ಬಂಅನ್ನು ಬಿಡುಗಡೆ ಮಾಡಿತು. ಈ ಆಲ್ಬಂ ಲೋನ್‌ಸಮ್ ಕ್ರೊ ಗಿಂತ ಹೆಚ್ಚು ಯಶಸ್ಸು ಗಳಿಸಿತು. "ಸ್ಪೀಡಿಸ್ ಕಮಿಂಗ್‌" ಮತ್ತು ಶೀರ್ಷಿಕೆ ಆಯ್ದ ಧ್ವನಿಮುದ್ರಿಕೆಯು ವಾದ್ಯ-ಮೇಳದ ಧ್ವನಿಯನ್ನು ದೃಢಪಡಿಸಿದವು. ಅಕಿಮ್ ಕಿರ್ಸ್‌ಕ್ನಿಂಗ್‌ ಧ್ವನಿಮುದ್ರಣದ ನಂತರ ವಾದ್ಯ-ವೃಂದವನ್ನು ಬಿಟ್ಟುಬಿಡಲು ನಿರ್ಧರಿಸಿದನು. ಆ ಕೂಡಲೇ ಜುರ್ಗೆನ್ ರೊಸೆಂತಾಲ್‌ ಸೇನೆಗೆ ಆಯ್ಕೆಯಾದುದರಿಂದ ಅವನೂ ಹೊರನಡೆದನು. ನಂತರ 1976ರಲ್ಲಿ ಎಲಾಯ್‌ ಎನ್ನುವ ಜರ್ಮನ್‌ನ ಪ್ರಗತಿಶೀಲ ರಾಕ್‌ ವಾದ್ಯ-ಮೇಳವನ್ನು ಸೇರಿದನು. ಅಲ್ಲಿ ಮ‌ೂರು ಆಲ್ಬಂಗಳನ್ನು ಧ್ವನಿಮುದ್ರಣ ಮಾಡಿದನು. ಅವನು ನಂತರ ಬೆಲ್ಜಿಯಂನ ಡ್ರಮ್‌ವಾದ್ಯ ಬಾರಿಸುವವ ರ‌್ಯುಡಿ ಲೆನ್ನೆರ್ಸ್‌ನಿಂದ ಸ್ಥಳಾಂತರಿಸಲ್ಪಟ್ಟನು.

1975ರಲ್ಲಿ ಇನ್ ಟ್ರಾನ್ಸ್‌ ‌ನ ಬಿಡುಗಡೆಯೊಂದಿಗೆ ವಾದ್ಯ-ಮೇಳವು ದಾಪುಗಾಲು ಹಾಕಿತು. ಇದು ಜರ್ಮನ್‌ ನಿರ್ಮಾಪಕ ಡೈಯಟರ್ ಡಯರ್ಕ್ಸ್‌‌ನೊಂದಿಗಿನ ಸ್ಕಾರ್ಪಿಯಾನ್ಸ್‌‍‌ನ ದೀರ್ಘಕಾಲ ಸಹಯೋಗದ ಆರಂಭವನ್ನು ಸೂಚಿಸುತ್ತದೆ. ಈ ಆಲ್ಬಂ ಸ್ಕಾರ್ಪಿಯಾನ್ಸ್‌ಗೆ ಭಾರಿ ಮುನ್ನಡೆಯಾಗಿದೆ. ಅದಲ್ಲದೇ ಅದರ ಹಾರ್ಡ್ ರಾಕ್‌ ಸೂತ್ರವನ್ನು ದೃಢವಾಗಿ ನೆಲೆಗೊಳಿಸಿತು. ಅಲ್ಲದೆ ಸ್ಥಳೀಯ ಮತ್ತು ಹೊರದೇಶ ಎರಡೂ ಕಡೆಗಳಲ್ಲಿ ಅಧಿಕ ಪ್ರಮಾಣದ ಅಭಿಮಾನಿ ಬಳಗವನ್ನು ಹುಟ್ಟುಹಾಕಿತು. "ಡಾರ್ಕ್ ಲೇಡಿ", "ರೋಬಟ್ ಮ್ಯಾನ್" ಮತ್ತು ಶೀರ್ಷಿಕೆ ಗೀತೆ ಇತ್ಯಾದಿ ಹಾಡುಗಳು ಇಂದಿಗೂ ಅಭಿಮಾನಿಗಳಿಂದ ಶ್ರೇಷ್ಠ ಕೃತಿಗಳೆಂದು ಪರಿಗಣಿಸಲ್ಪಟ್ಟಿವೆ.

ಸುಮಾರು 1976ರಲ್ಲಿ ಸ್ಕಾರ್ಪಿಯಾನ್ಸ್‌ ವರ್ಜಿನ್ ಕಿಲ್ಲರ್‌ ಆಲ್ಬಂನ್ನು ಬಿಡುಗಡೆಗೊಳಿಸಿತು. ಈ ಆಲ್ಬಂನ ಮುಖಪುಟವು ಒಡೆದ ಗಾಜಿನಿಂದ ಆವರಿಸಲ್ಪಟ್ಟ ಹರೆಯಪೂರ್ವದ ನಗ್ನ ಹುಡುಗಿಯ ಚಿತ್ರವನ್ನು ಹೊಂದಿತ್ತು. ಈ ಮುಖಪುಟದ ಕಲೆಯನ್ನು ಆ ಸಂದರ್ಭದಲ್ಲಿ ಸ್ಕಾರ್ಪಿಯಾನ್ಸ್‌ನ ಧ್ವನಿಮುದ್ರಣ ಸಂಸ್ಥೆಯಾಗಿದ್ದ RCA ರೆಕಾರ್ಡ್ಸ್‌ನ[೧೪] ಯೋಜನೆ ನಿರ್ವಾಹಕ ಸ್ಟೀಫನ್ ಬೊಹ್ಲೆಯು ರಚಿಸಿದ್ದನು. ಈ ಮುಖಪುಟದ ಚಿತ್ರದಿಂದಾಗಿ ವಾದ್ಯ-ಮೇಳವು ಹೆಚ್ಚಿನ ಟೀಕೆಗೊಳಗಾಯಿತು. ಅಲ್ಲದೆ ಅನೇಕ ರಾಷ್ಟ್ರಗಳಲ್ಲಿ ಇದನ್ನು ರದ್ದುಗೊಳಿಸಿ, ಬದಲಿಗೆ ಬೇರೆಯದನ್ನು ಬಳಸಲಾಯಿತು. ವಿವಾದದ ಹೊರತಾಗಿಯ‌ೂ ಆಲ್ಬಂ ಅದರ ಅತ್ಯುತ್ತಮ ಸಂಗೀತದಿಂದಾಗಿ ಟೀಕಾಕಾರರಿಂದ ಮತ್ತು ಅಭಿಮಾನಿಗಳಿಂದ ಗಮನಾರ್ಹ ಪ್ರಶಂಸೆಯನ್ನು ಸಮಾನವಾಗಿ ಗಳಿಸಿತು.

ನಂತರದ ವರ್ಷದಲ್ಲಿ ರ‌್ಯೂಡಿ ಲೆನ್ನರ್ಸ್‌ ಆರೋಗ್ಯ ಸಮಸ್ಯೆಯಿಂದಾಗಿ ರಾಜೀನಾಮೆ ನೀಡಿದ. ಅವನ ಬದಲಿಗೆ ಹರ್ಮನ್ ರೇರ್ಬೆಲ್‌‌ನನ್ನು ಸೇರಿಸಿಕೊಳ್ಳಲಾಯಿತು.

ಟೇಕನ್ ಬೈ ಫೋರ್ಸ್‌ ‌ನ ಮುನ್ನಡೆಗಾಗಿ, RCA ರೆಕಾರ್ಡ್ಸ್‌ ಈ ಆಲ್ಬಂನ ಬಗ್ಗೆ ಅಂಗಡಿಗಳಲ್ಲಿ ಮತ್ತು ರೇಡಿಯೊದಲ್ಲಿ ಪ್ರಚಾರ ಮಾಡಲು ನಿಶ್ಚಿತ ಪ್ರಯತ್ನ ಮಾಡಿತು. ಈ ಆಲ್ಬಂನ ಏಕಗೀತೆ "ಸ್ಟೀಮ್‌ರಾಕ್ ಫೀವರ್", RCAನ ರೇಡಿಯೊ ಪ್ರಚಾರದ ಧ್ವನಿಮುದ್ರಣಗಳಲ್ಲಿ ಸೇರ್ಪಡೆಗೊಂಡಿತು. ವಾದ್ಯ-ಮೇಳ ತೆಗೆದುಕೊಳ್ಳುತ್ತಿರುವ ವಾಣಿಜ್ಯ ದಿಕ್ಕಿನ ಬಗ್ಗೆ ರೋತ್‌ ಅಸಂತೋಷಗೊಂಡಿದ್ದನು. ಅವನು ವಾದ್ಯ-ಮೇಳದ ಜಪಾನ್ ಪ್ರವಾಸದಲ್ಲಿ ಪ್ರದರ್ಶನ ನೀಡಿದರೂ, ಅವನ ಸ್ವಂತ ವಾದ್ಯ-ಮೇಳ ಎಲೆಕ್ಟ್ರಿಕ್ ಸನ್‌ಅನ್ನು ರಚಿಸುವ ಸಲುವಾಗಿ ಜೋಡಿ ನೇರ ಪ್ರದರ್ಶನದ ಆಲ್ಬಂ ಟೋಕ್ಯೊ ಟೇಪ್ಸ್‌ ‌ ಬಿಡುಗಡೆಯಾಗುವುದಕ್ಕಿಂತ ಮುಂಚೆ ವಾದ್ಯ-ವೃಂದವನ್ನು ಬಿಟ್ಟುಹೋದ. ಟೋಕ್ಯೊ ಟೇಪ್ಸ್‌ ಜಪಾನ್‌ನಲ್ಲಿ ಬಿಡುಗಡೆಯಾದ ಆರು ತಿಂಗಳ ನಂತರ US ಮತ್ತು ಯುರೋಪ್‌ನಲ್ಲಿ ಬಿಡುಗಡೆಗೊಂಡಿತು. ಆ ಸಂದರ್ಭದಲ್ಲಿ 1978ರ ಮಧ್ಯಾವಧಿಯಲ್ಲಿ ಸುಮಾರು 140 ಗಿಟಾರ್-ವಾದಕರ ನಿರ್ವಹಣೆಯನ್ನು ಪರೀಕ್ಷಿಸಿದ ನಂತರ ಸ್ಕಾರ್ಪಿಯಾನ್ಸ್‌ ಹೊಸ ಗಿಟಾರ್-ವಾದಕ ಮ್ಯಾಥಿಯಸ್ ಜ್ಯಾಬ್ಸ್‌‌ನನ್ನು ನೇಮಿಸಿಕೊಂಡಿತು.

ವಾಣಿಜ್ಯ ಯಶಸ್ಸು (1979-1990)[ಬದಲಾಯಿಸಿ]

ಜ್ಯಾಬ್ಸ್‌ನನ್ನು ಸೇರಿಸಿಕೊಂಡ ನಂತರ ಸ್ಕಾರ್ಪಿಯಾನ್ಸ್‌ ಅದರ ಮುಂದಿನ ಆಲ್ಬಂ ಲವ್‌ಡ್ರೈವ್‌ ಅನ್ನು ಮರ್ಕ್ಯುರಿ ರೆಕಾರ್ಡ್ಸ್‌ನಲ್ಲಿ ಧ್ವನಿಮುದ್ರಣ ಮಾಡುವುದಕ್ಕಾಗಿ RCAಅನ್ನು ತ್ಯಜಿಸಿತು. ಮದ್ಯಸೇವನೆಯ ದುರ್ವ್ಯಸನದಿಂದಾಗಿ UFOನಿಂದ ಹೊರಹಾಕಲ್ಪಟ್ಟ ಕೆಲವು ವಾರಗಳ ನಂತರ ಮೈಕೆಲ್‌ ಸ್ಕೆಂಕರ್‌ ಸಹ ಆಲ್ಬಂನ ಧ್ವನಿಮುದ್ರಣದ ಸಂದರ್ಭದಲ್ಲಿ ಅಲ್ಪಾವಧಿಯ ಮಟ್ಟಿಗೆ ವಾದ್ಯ-ಮೇಳಕ್ಕೆ ಹಿಂದಿರುಗಿದ. ಇದರಿಂದಾಗಿ ವಾದ್ಯ-ಮೇಳದಲ್ಲಿ ಮ‌ೂವರು ಗಿಟಾರ್-ವಾದಕರು ಸೇರಿಕೊಂಡಂತಾಯಿತು (ಆದರೆ ಅಂತಿಮ ಬಿಡುಗಡೆಗೆ ಸ್ಕೆಂಕರ್‌ನ ಕೊಡುಗೆ ಮ‌ೂರು ಹಾಡುಗಳಿಗೆ ಮಾತ್ರ ಸೀಮಿತವಾಗಿತ್ತು). ಇದರ ಫಲಿತಾಂಶವೇ ಲವ್‌ಡ್ರೈವ್‌ ಆಲ್ಬಂ. ಈ ಆಲ್ಬಂನ ಬಗ್ಗೆ ಕೆಲವು ವಿಮರ್ಶಕರು ಅವರ ವೃತ್ತಿಜೀವನದ ಉತ್ಕರ್ಷ ಸ್ಥಿತಿ ಎಂದು ಪರಿಗಣಿಸಿದ್ದಾರೆ.[೧೫] "ಲವಿಂಗ್ ಯು ಸಂಡೆ ಮಾರ್ನಿಂಗ್", "ಆಲ್ವೇಸ್ ಸಮ್‌‌ವೇರ್", "ಹಾಲಿಡೇ" ಹಾಗೂ ವಾದ್ಯದಲ್ಲಿ ನುಡಿಸಿದ "ಕೋಸ್ಟ್ ಟು ಕೋಸ್ಟ್" ಮೊದಲಾದ ಅಭಿಮಾನಿಗಳ ಮೆಚ್ಚಿನ ಹಾಡುಗಳೊಂದಿಗೆ, ಇಂಪಾದ ಜನಪದ ಹಾಡುಗಳಿಂದ ಮಿಶ್ರವಾದ ಹಾರ್ಡ್ ರಾಕ್‌ ಹಾಡುಗಳ 'ಸ್ಕಾರ್ಪಿಯಾನ್ಸ್‌ ಸೂತ್ರ'ವು ದೃಢವಾದ ಸಂಯೋಜಕವಾಯಿತು. ಈ ಆಲ್ಬಂನ ಪ್ರಚೋದನಕಾರಿ ಕಲಾಕೃತಿಯು ಪ್ಲೇಬಾಯ್ ನಿಯತಕಾಲಿಕದಿಂದ "1979ರ ಅತ್ಯುತ್ತಮ ಆಲ್ಬಂ" ಎಂಬ ಹೆಸರು ಪಡೆಯಿತು. ಆದರೆ ಈ ಹೆಸರು ಅಂತಿಮವಾಗಿ ಅಮೆರಿಕದ ಬಿಡುಗಡೆಯಲ್ಲಿ ಬದಲಾವಣೆಗೊಂಡಿತು. ಲವ್‌ಡ್ರೈವ್‌ US ಪಟ್ಟಿಯಲ್ಲಿ #55ನೇ ಸ್ಥಾನ ಪಡೆದುಕೊಳ್ಳುವುದರೊಂದಿಗೆ, ಸ್ಕಾರ್ಪಿಯಾನ್ಸ್‌ ಅಂತಾರಾಷ್ಟ್ರೀಯ ಬೆಂಬಲಿಗರನ್ನು ಒಟ್ಟುಮಾಡಿದ್ದನ್ನು ಸಾಬೀತು ಮಾಡಿತು. ಆಲ್ಬಂ ಪೂರ್ಣಗೊಂಡು ಬಿಡುಗಡೆಯಾದ ನಂತರ ವಾದ್ಯ-ಮೇಳವು ಮೈಕೆಲ್‌ನನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿತು. ಹಾಗಾಗಿ ಜ್ಯಾಬ್ಸ್‌ನನ್ನು ವಾದ್ಯ-ಮೇಳವನ್ನು ಬಿಟ್ಟುಬಿಡುವಂತೆ ಬಲಪ್ರಯೋಗಿಸಿತು. ಆದಾಗ್ಯೂ, ಪ್ರವಾಸ ಆರಂಭವಾದ ಕೆಲವು ವಾರಗಳ ನಂತರ, ಮದ್ಯಸೇವನೆಯ ಚಟವನ್ನು ಸಂಬಾಳಿಸುತ್ತಿದ್ದ ಮೈಕೇಲ್,ಅನೇಕ ಗಿಗ್ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡನು. ಅಲ್ಲದೆ ಒಂದು ಬಾರಿ ವೇದಿಕೆಯಲ್ಲೇ ಕುಸಿದುಬಿದ್ದನು. ಹಾಗಾಗಿ ಅವನಿಗೆ ಕಾರ್ಯಕ್ರಮ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲೆಲ್ಲಾ ಅವನ ಸ್ಥಾನ ತುಂಬಲು ಜ್ಯಾಬ್ಸ್‌ನನ್ನು ಕರೆತರಲಾಗುತ್ತಿತ್ತು. ಏಪ್ರಿಲ್ 1979ರಲ್ಲಿ ಫ್ರಾನ್ಸ್‌ ಪ್ರವಾಸದ ಸಂದರ್ಭದಲ್ಲಿ ಮೈಕೆಲ್‌ನ ಬದಲಿಗೆ ಜ್ಯಾಬ್ಸ್‌ನನ್ನೇ ಶಾಶ್ವತವಾಗಿ ನೇಮಿಸಿಕೊಳ್ಳಲಾಯಿತು.

ಸ್ಕಾರ್ಪಿಯಾನ್ಸ್‌ನ ಲೋಗೋ

ಸುಮಾರು 1980ರಲ್ಲಿ ವಾದ್ಯ-ಮೇಳವು ಆನಿಮಲ್ ಮ್ಯಾಗ್ನೆಟಿಸಮ್‌ ಆಲ್ಬಂಅನ್ನು ಮತ್ತೊಮ್ಮೆ ಪ್ರಚೋದನಾಕಾರಿ ಮುಖಪುಟದೊಂದಿಗೆ ಬಿಡುಗಡೆ ಮಾಡಿತು. ಇದರಲ್ಲಿ ಹುಡುಗಿಯೊಬ್ಬಳು ಮಂಡಿಯ‌ೂರಿ ಕುಳಿತಿರುವಂತೆ ಮತ್ತು ಒಬ್ಬ ವ್ಯಕ್ತಿಯ ಮುಂದೆ ಡಾಬರ್‌ಮ್ಯಾನ್ ಪಿಂಸ್ಕರ್‌ ಕುಳಿತುಕೊಂಡಿರುವಂತೆ ತೋರಿಸಲಾಗಿತ್ತು. ಆನಿಮಲ್ ಮ್ಯಾಗ್ನೆಟಿಸಮ್‌ ಆಲ್ಬಂ "ದ ಜೂ" ಮತ್ತು "ಮೇಕ್ ಇಟ್ ರಿಯಲ್" ಮೊದಲಾದ ಶ್ರೇಷ್ಠ ಕೃತಿಗಳನ್ನು ಹೊಂದಿದೆ. ಈ ಆಲ್ಬಂ ಬಿಡುಗಡೆಯಾದ ಸ್ವಲ್ಪದರಲ್ಲೇ ಮೈನೆ ಗಂಟಲಿನ ಸಮಸ್ಯೆಗಳಿಗೆ ಒಳಗಾದನು. ಅವನ ಧ್ವನಿತಂತುಗಳ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇದರಿಂದ ಅವನು ಮುಂದೆ ಮತ್ತೆ ಹಾಡಲು ಸಾಧ್ಯವಾಗುವುದಿಲ್ಲವೊ ಎಂಬ ಸಂಶಯ ಹುಟ್ಟಿಕೊಂಡಿತು.

ಆ ನಡುವೆ ವಾದ್ಯ-ಮೇಳವು 1981ರಲ್ಲಿ ಅದರ ಮುಂದಿನ ಆಲ್ಬಂ ಬ್ಲ್ಯಾಕೌಟ್‌ ನ ಕೆಲಸವನ್ನು ಆರಂಭಿಸಿತು. ಮೈನೆ ಚೇತರಿಸಿಕೊಳ್ಳುವವರೆಗೆ ಮಾರ್ಗದರ್ಶನ ಮತ್ತು ಹಿಮ್ಮೇಳ ಗಾಯನ ನೀಡಲು ಡಾನ್ ಡೊಕ್ಕೆನ್‌‌ನನ್ನು ಕರೆತರಲಾಯಿತು.[೧೬] ಅಂತಿಮವಾಗಿ ಮೈನೆ ಸಂಪೂರ್ಣವಾಗಿ ಗುಣಮುಖವಾಗಿ, ಆಲ್ಬಂನ್ನು ಮುಕ್ತಾಯಗೊಳಿಸಲು ಸಮರ್ಥನಾದನು. ಬ್ಲ್ಯಾಕೌಟ್‌ 1982ರಲ್ಲಿ ಬಿಡುಗಡೆಗೊಂಡು ಅತಿಶೀಘ್ರವಾಗಿ ವಾದ್ಯ-ಮೇಳದ ಅತ್ಯುತ್ತಮ ಮಾರಾಟ ಕಂಡ ಆಲ್ಬಂ ಆಗುವುದರೊಂದಿಗೆ, ಅಂತಿಮವಾಗಿ ಪ್ಲಾಟಿನಂ ಶ್ರೇಷ್ಠತೆಯನ್ನು ಗಳಿಸಿತು. ಮೈನೆಯ ಧ್ವನಿಯು ಯಾವುದೇ ರೀತಿಯ ದೌರ್ಬಲ್ಯದ ಲಕ್ಷಣಗಳನ್ನು ತೋರಿಸಲಿಲ್ಲ. ಆಲ್ಬಂನ ವಿಮರ್ಶಾತ್ಮಕ ಪ್ರತಿಕ್ರಿಯೆಯು ಉತ್ತಮವಾಗಿತ್ತು. ಬ್ಲ್ಯಾಕೌಟ್‌ ಮ‌ೂರು ಜನಪ್ರಿಯ ಏಕಗೀತಗಳನ್ನು ನೀಡಿದೆ: "ಡೈನಮೈಟ್," "ಬ್ಲ್ಯಾಕೌಟ್‌" ಮತ್ತು "ನೊ ಒನ್ ಲೈಕ್ ಯು".

ಆಗ 1984ರಲ್ಲಿ ಲವ್ ಅಟ್ ಫರ್ಸ್ಟ್ ಸ್ಟಿಂಗ್‌ ಬಿಡುಗಡೆಗೊಂಡ ಸಂದರ್ಭದಲ್ಲಿ ವಾದ್ಯ-ಮೇಳವು ಅದರ ಸ್ಥಾನಮಾನವನ್ನು ರಾಕ್‌ ಸೂಪರ್‌ಸ್ಟಾರ್ ಎಂದು ಭದ್ರಪಡಿಸಿಕೊಂಡಿತು. ಏಕಗೀತೆ "ರಾಕ್ ಯು ಲೈಕ್ ಎ ಹ್ಯುರಿಕೇನ್‌"‌ನಿಂದ ಮುಂಚಲನೆ ಪಡೆದುಕೊಂಡು ಲವ್ ಅಟ್ ಫರ್ಸ್ಟ್ ಸ್ಟಿಂಗ್‌ ಪಟ್ಟಿಯಲ್ಲಿ ಮೇಲೇರಿ USAಯಲ್ಲಿ ಬಿಡುಗಡೆಯಾದ ಕೆಲವು ತಿಂಗಳಲ್ಲಿ ಎರಡು ಪ್ಲಾಟಿನಂ ಪಡೆಯಿತು. ಆದರೂ ಸ್ಕಾರ್ಪಿಯಾನ್ಸ್‌ ಅದರ ಪ್ರಚೋದನಕಾರಿ ಆಲ್ಬಂ ಮುಖಪುಟದಿಂದಾಗಿ ಮತ್ತೆ ವಿವಾದಕ್ಕೆ ಒಳಗಾಯಿತು. ಈ ಮುಖಪುಟವು ಪುರುಷನೊಬ್ಬ ಮಹಿಳೆಗೆ ಚುಂಬಿಸುತ್ತಿದ್ದು, ಅದೇ ಸಂದರ್ಭದಲ್ಲಿ ಅವಳ ನಗ್ನವಾದ ತೊಡೆಗೆ ಹಚ್ಚೆ ಗುರುತು ಹಾಕುತ್ತಿದ್ದ ಹೆಲ್ಮುಟ್ ನ್ಯೂಟನ್‌ನ ಛಾಯಾಚಿತ್ರವನ್ನು ಒಳಗೊಂಡಿತ್ತು. ಕೆಲವು ಮಾರಾಟ ಅಂಗಡಿಗಳು ಆಲ್ಬಂ ತುಂಬಾ ಪ್ರಚೋದನಕಾರಿಯೆಂದು ಅಭಿಪ್ರಾಯ ಪಟ್ಟು, ಅದನ್ನು ಮಾರಾಟ ಮಾಡಲು ನಿರಾಕರಿಸಿದವು. "ರಾಕ್ ಯು ಲೈಕ್ ಎ ಹ್ಯುರಿಕೇನ್‌", "ಬ್ಯಾಡ್ ಬಾಯ್ಸ್ ರನ್ನಿಂಗ್ ವೈಲ್ಡ್", "ಬಿಗ್ ಸಿಟಿ ನೈಟ್ಸ್" ಮೊದಲಾದ ಆಲ್ಬಂನ ವೀಡಿಯೊಗಳಿಗೆ ಮತ್ತು ಪ್ರಭಾವಿ ಜನಪದ ಹಾಡು "ಸ್ಟಿಲ್ ಲವಿಂಗ್ ಯು"ಗೆ MTV ಪ್ರಮುಖ ಪ್ರಸಾರ ಸಮಯವನ್ನು ನೀಡಿತು. ಇದು ಆಲ್ಬಂನ ಯಶಸ್ಸಿಗೆ ಉದಾತ್ತ ಕೊಡುಗೆ ಒದಗಿಸಿದೆ. ಅದಲ್ಲದೆ ಈ ಚಾನೆಲ್ ಸ್ಕಾರ್ಪಿಯಾನ್ಸ್‌ಗೆ "ದ ಅಂಬಾಸಿಡರ್ಸ್ ಆಫ್ ರಾಕ್‌" ಎಂಬ ಉಪನಾಮವನ್ನೂ ನೀಡಿತು. ವಾದ್ಯ-ಮೇಳವು ಲವ್ ಅಟ್ ಫರ್ಸ್ಟ್ ಸ್ಟಿಂಗ್‌ ಆಲ್ಬಂನ ಬೆಂಬಲವಾಗಿ ವಿಶ್ವದಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡಿತು. ಅಲ್ಲದೇ ಅದರ ಎರಡನೆ ನೇರ ಪ್ರದರ್ಶನದ ಆಲ್ಬಂ ವರ್ಲ್ಡ್ ವೈಡ್ ಲೈವ್‌ ಅನ್ನು ಧ್ವನಿಮುದ್ರಣ ಮಾಡಿ 1985ರಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿತು. ಸುಮಾರು ಒಂದು ವರ್ಷ-ಕಾಲದ ವಿಶ್ವ ಪ್ರವಾಸದ ಸಂದರ್ಭದಲ್ಲಿ ಧ್ವನಿಮುದ್ರಣ ಮಾಡಿ, ವಾದ್ಯ-ಮೇಳದ ಜನಪ್ರಿಯತೆಯ ಪರಮಾವಧಿಯಲ್ಲಿ ಬಿಡುಗಡೆಗೊಳಿಸಿದ ಈ ಆಲ್ಬಂ US ಪಟ್ಟಿಯಲ್ಲಿ #14ನೇ ಮತ್ತು UKಯಲ್ಲಿ #18ನೇ ಸ್ಥಾನ ಗಳಿಸುವುದರೊಂದಿಗೆ ವಾದ್ಯ-ಮೇಳಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟಿತು.

ವ್ಯಾಪಕ ವಿಶ್ವ ಪ್ರವಾಸದ ನಂತರ ವಾದ್ಯ-ಮೇಳವು ಸ್ಯಾವೇಜ್ ಅಮ್ಯೂಸ್ಮೆಂಟ್‌ ‌ನ ಧ್ವನಿಮುದ್ರಣ ಮಾಡುವುದಕ್ಕಾಗಿ ಸ್ಟುಡಿಯೊಗೆ ಹಿಂದಿರುಗಿತು. ಹಿಂದಿನ ಸ್ಟುಡಿಯೊ ಆಲ್ಬಂ ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ 1988ರಲ್ಲಿ ಬಿಡುಗಡೆಯಾದ ಸ್ಯಾವೇಜ್ ಅಮ್ಯೂಸ್ಮೆಂಟ್‌ , ಡೆಫ್ ಲೆಪ್ಪಾರ್ಡ್‌ ಯಶಸ್ಸು ಕಂಡ ಶೈಲಿಯಂತಹ ಹೆಚ್ಚು ನಯನಾಜೂಕಿನ ಪಾಪ್ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಈ ಆಲ್ಬಂ ಉತ್ತಮ ಮಾರಾಟ ಕಂಡಿತು. ಆದರೆ ಸ್ವಲ್ಪ ಪ್ರಮಾಣದಲ್ಲಿ ನಿರಾಶಾದಾಯಕ ವಿಮರ್ಶೆಯನ್ನು ಪಡೆಯಿತು. ಆದರೂ ಬ್ರಿಟಿಷ್‌ ಹೆವಿ ರಾಕ್‌ ನಿಯತಕಾಲಿಕ ಕೆರ‌್ಯಾಂಗ್! ಈ ಆಲ್ಬಂಗೆ ಐದರಲ್ಲಿ ಐದು Kಗಳನ್ನು ನೀಡಿ ಬಹುಮಾನಿಸಿತು.

ಸ್ಯಾವೇಜ್ ಅಮ್ಯೂಸ್ಮೆಂಟ್‌ ಪ್ರವಾಸದ ಸಂದರ್ಭದ 1988ರಲ್ಲಿ ಲೆನಿನ್‌ಗ್ರ್ಯಾಡ್‌‌‌ನಲ್ಲಿ ಪ್ರದರ್ಶನ ನೀಡುವುದರೊಂದಿಗೆ ಸ್ಕಾರ್ಪಿಯಾನ್ಸ್‌ ಸೋವಿಯತ್ ಒಕ್ಕೂಟದಲ್ಲಿ ಪ್ರದರ್ಶನ ನೀಡಿದ ಎರಡನೆ ಪಾಶ್ಚಿಮಾತ್ಯ ತಂಡವಾಯಿತು. (ಮೊದಲ ತಂಡವೆಂದರೆ 1987ರ ಡಿಸೆಂಬರ್‌ನಲ್ಲಿ ಪ್ರದರ್ಶನ ನೀಡಿದ ಉರಿಯಾಹ್ ಹೀಪ್‌). ಮುಂದಿನ ವರ್ಷ ವಾದ್ಯ-ಮೇಳವು ಮಾಸ್ಕೊ ಸಂಗೀತ ಶಾಂತಿ ಉತ್ಸವ‌ದಲ್ಲಿ ನಿರ್ವಹಿಸಲು ಮತ್ತೊಮ್ಮೆ ಇಲ್ಲಿಗೆ ಆಗಮಿಸಿತು. ಅದರ ಫಲವಾಗಿ ಸ್ಕಾರ್ಪಿಯಾನ್ಸ್‌ ರಷ್ಯಾದಲ್ಲಿ ಹೆಚ್ಚಿನ ಪ್ರಮಾಣದ ಅಭಿಮಾನಿಗಳ ನೆಲೆಯನ್ನು ಗಳಿಸಿಕೊಂಡಿತು. ಅಲ್ಲದೆ ರಷ್ಯಾದಾದ್ಯಂತ ಪ್ರದರ್ಶನ ನೀಡಲು ಇದು ಈಗಲೂ ನಿಯಮಿತವಾಗಿ ಹಿಂದಿರುಗುತ್ತಿದೆ.[೧೭]

ಸ್ಯಾವೇಜ್ ಅಮ್ಯೂಸ್ಮೆಂಟ್‌ ಶೈಲಿಯಿಂದ ಸ್ವತಃ ದೂರವಾಗಲು ಬಯಸಿದ ವಾದ್ಯ-ಮೇಳವು ಅದರ ದೀರ್ಘ-ಕಾಲದ ನಿರ್ಮಾಪಕ ಮತ್ತು "ಸಿಕ್ಸ್ತ್ ಸ್ಕಾರ್ಪಿಯಾನ್" ಡೈಯಟರ್ ಡಯರ್ಕ್ಸ್‌‌ನಿಂದ ಬೇರ್ಪಟ್ಟಿತು. ಅವನ ಬದಲಿಗೆ ವಾದ್ಯ-ಮೇಳವು 1990ರಲ್ಲಿ ಸ್ಟುಡಿಯೊಗೆ ಹಿಂದಿರುಗಿದಾಗ ಕೈತ್ ಓಲ್ಸೆನ್‌ನನ್ನು ಸೇರಿಸಿಕೊಂಡಿತು. ಅದೇ ವರ್ಷ ಕ್ರೇಜಿ ವರ್ಲ್ಡ್‌ ಆಲ್ಬಂ ಬಿಡುಗಡೆಗೊಂಡಿತು. ಇದು ಕಡಿಮೆ ಪರಿಷ್ಕೃತ ಧ್ವನಿಯ ಪ್ರದರ್ಶನ ನೀಡಿತು. "ವಿಂಡ್ ಆಫ್ ಚೇಂಜ್‌" ಹಾಡಿನ ಭಾರಿ ಯಶಸ್ಸಿನ ಮುಂಚಲನೆಯನ್ನು ಪಡೆದುಕೊಂಡು ಈ ಆಲ್ಬಂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತು. ಈ ಹಾಡು ಶೀತಲ ಸಮರದ ಅಂತ್ಯದಲ್ಲಿಪೌರಾತ್ಯ ಯುರೋಪ್ ಮತ್ತು ವಿಶ್ವದ ಇತರ ಕಡೆಗಳಲ್ಲಿ ಕಂಡುಬರುತ್ತಿದ್ದ ಸಾಮಾಜಿಕ-ರಾಜಕೀಯ ಬದಲಾವಣೆಗಳ ಬಗ್ಗೆ ಹೇಳುತ್ತದೆ. 1990ರ ಜುಲೈ 21ರಲ್ಲಿ ವಾದ್ಯ-ವೃಂದವು ಬರ್ಲಿನ್‌ನಲ್ಲಿನ ದ ವಾಲ್‌ ‌ನ ರೋಜರ್ ವಾಟರ್ಸ್‌ನ ಪ್ರಚಂಡ ನಿರ್ವಹಣೆಗಾಗಿ ಹಲವಾರು ಇತರ ಅತಿಥಿ ನಿರ್ವಾಹಕರನ್ನು ಸೇರಿಸಿಕೊಂಡಿತು. ಸ್ಕಾರ್ಪಿಯಾನ್ಸ್‌ ದ ವಾಲ್‌ ‌ನ "ಇನ್ ದ ಫ್ಲೆಶ್"ನ ಎರಡೂ ಆವೃತ್ತಿಗಳನ್ನು ನಿರ್ವಹಿಸಿತು. ಕ್ರೇಜಿ ವರ್ಲ್ಡ್‌ ನ ಬೆಂಬಲದ ಪ್ರವಾಸದ ನಂತರ ವಾದ್ಯ-ಮೇಳದಲ್ಲಿ ದೀರ್ಘ-ಕಾಲ ಸೇವೆ ಸಲ್ಲಿಸಿದ ಮಂದ್ರವಾದ್ಯ-ನುಡಿಸುವ ಫ್ರಾನ್ಸಿಸ್ ಬುಚೋಲ್ಜ್‌ ವಾದ್ಯ-ಮೇಳವನ್ನು ತ್ಯಜಿಸಿದ.

ನಂತರದ ದಿನಗಳು (1997-2009)[ಬದಲಾಯಿಸಿ]

1993ರಲ್ಲಿ ಸ್ಕಾರ್ಪಿಯಾನ್ಸ್‌ ಫೇಸ್ ದ ಹೀಟ್‌ ಆಲ್ಬಂನ್ನು ಬಿಡುಗಡೆಗೊಳಿಸಿತು. ಇದರಲ್ಲಿ ಮಂದ್ರವಾದ್ಯವನ್ನು ರಾಲ್ಫ್ ರೈಕರ್‌ಮ್ಯಾನ್‌ ನಿರ್ವಹಿಸಿದ. ಧ್ವನಿಮುದ್ರಣ ಕಾರ್ಯಕ್ಕಾಗಿ ಸ್ಕಾರ್ಪಿಯಾನ್ಸ್‌ ನಿರ್ಮಾಪಕ ಬ್ರೂಸ್ ಫೇರ್ಬೈರ್ನ್‌‌ನನ್ನು ಕರೆತಂದರು. ಈ ಆಲ್ಬಂನ ಹಾಡುಗಳು ಅಷ್ಟೊಂದು ಇಂಪಾಗಿರದೆ ಹೆಚ್ಚು ಕರ್ಕಶವಾಗಿದ್ದವು. ಹಾಗಾಗಿ ವಾದ್ಯ-ಮೇಳವು ಸ್ವಲ್ಪ ಮಟ್ಟಿಗೆ ಅಭಿಮಾನಿ ಬಳಗದಲ್ಲಿ ವಿಭಜನೆ ಉಂಟಾಯಿತು. ಈ ಆಲ್ಬಂನ ಬಗ್ಗೆ ಅನೇಕ "ಹೆಡ್‌ಬ್ಯಾಂಗರ್(ಹೆವಿ ಮೆಟಲ್ ರಾಕ್ ಸಂಗೀತವನ್ನು ಇಷ್ಟಪಡುವವರು)ಗಳು" ಗುಣಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದರೆ, ಹಲವಾರು ದೀರ್ಘಕಾಲದ ಅಭಿಮಾನಿಗಳಿಗೆ ಇದು ರುಚಿಸಲಿಲ್ಲ. ಹಾರ್ಡ್ ರಾಕ್‌ ಏಕಗೀತೆ "ಅಲೈನ್ ನೇಶನ್" ಅಥವಾ "ಅಂಡರ್ ದ ಸೇಮ್ ಸನ್" ಜನಪದ ಹಾಡು ಯಾವುದೊಂದೂ "ವಿಂಡ್ ಆಫ್ ಚೇಂಜ್‌"‌ನ ಯಶಸ್ಸಿಗೆ ಸರಿಸಮಾನವಾದ ಯಶಸ್ಸನ್ನು ಗಳಿಸಲಿಲ್ಲ. ಫೇಸ್ ದ ಹೀಟ್‌ ಆಲ್ಬಂ ಸಾಧಾರಣ ಯಶಸ್ಸನ್ನು ಮಾತ್ರ ಪಡೆಯಿತು.

1995ರಲ್ಲಿ ಹೊಸ ನೇರ ಪ್ರದರ್ಶನದ ಆಲ್ಬಂ ಲೈವ್ ಬೈಟ್ಸ್‌ ಅನ್ನು ತಯಾರಿಸಲಾಯಿತು. ಈ ಆಲ್ಬಂ ವಾದ್ಯ-ಮೇಳದ 1988ರ ಸ್ಯಾವೇಜ್ ಅಮ್ಯೂಸ್ಮೆಂಟ್‌ ಪ್ರವಾಸ ಮತ್ತು 1994ರ ಫೇಸ್ ದ ಹೀಟ್‌ ಪ್ರವಾಸದ ಸಂದರ್ಭದಲ್ಲಿ ನಡೆಸಿಕೊಟ್ಟ ನೇರ ಪ್ರದರ್ಶನಗಳನ್ನು ದಾಖಲಿಸಿತು. ವಾದ್ಯ-ವೃಂದದ ಅತ್ಯುತ್ತಮ ಮಾರಾಟ ಕಂಡ ನೇರ ಪ್ರದರ್ಶನದ ಆಲ್ಬಂ ವರ್ಲ್ಡ್ ವೈಡ್ ಲೈವ್‌ ‌ಗೆ ಹೋಲಿಸಿದರೆ ಈ ಆಲ್ಬಂ ಉತ್ತಮ ಸ್ಪಷ್ಟ ಧ್ವನಿಯನ್ನು ಹೊಂದಿದ್ದರೂ ಅದರಷ್ಟು ಯಶಸ್ಸು ಗಳಿಸಲಿಲ್ಲ.

ವಾದ್ಯ-ಮೇಳದ 13ನೇ ಸ್ಟುಡಿಯೊ ಆಲ್ಬಂ 1996ರ ಪ್ಯೂರ್ ಇಂಸ್ಟಿಂಕ್ಟ್‌ ಅನ್ನು ಧ್ವನಿಮುದ್ರಣ ಮಾಡುವ ಮೊದಲು ಡ್ರಮ್-ವಾದಕ ಹರ್ಮನ್ ರೇರ್ಬೆಲ್‌ ಧ್ವನಿಮುದ್ರಣ ಸಂಸ್ಥೆಯೊಂದನ್ನು ಸ್ಥಾಪಿಸುವುದಕ್ಕಾಗಿ ವಾದ್ಯ-ಮೇಳವನ್ನು ತ್ಯಜಿಸಿದ. ಆಲ್ಬಂಗೆ ಡ್ರಮ್-ವಾದ್ಯ ನುಡಿಸುವ ಮೇಲ್ವಿಚಾರಣೆಯನ್ನು ಕೆಂಟುಕಿಯಲ್ಲಿ ಜನಿಸಿದ ಜೇಮ್ಸ್ ಕೊಟ್ಟ್ಯಾಕ್ ಶಾಶ್ವತವಾಗಿ ತೆಗೆದುಕೊಳ್ಳುವ ಮೊದಲು ಕರ್ಟ್ ಕ್ರೆಸ್ ವಹಿಸಿಕೊಂಡನು. ಫೇಸ್ ದ ಹೀಟ್‌ ‌ನ ವಿರುದ್ಧ ಮಾಡಿದ ದೂರುಗಳಿಗೆ ಪ್ಯೂರ್ ಇಂಸ್ಟಿಂಕ್ಟ್‌ ಆಲ್ಬಂ ಒಂದು ಪ್ರತಿಕ್ರಿಯೆಯಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಆಲ್ಬಂ ಅನೇಕ ಜನಪದ ಹಾಡುಗಳನ್ನು ಹೊಂದಿತ್ತು. ಅದರಲ್ಲಿ ಏಕಗೀತ "ವೈಲ್ಡ್ ಚೈಲ್ಡ್" ಮತ್ತು ಆಪ್ಯಾಯಮಾನವಾದ ಜನಪದ ಹಾಡು "ಯು ಆಂಡ್ ಐ" ಎರಡೂ ಸಾಧಾರಣ ಯಶಸ್ಸನ್ನು ಗಳಿಸಿದವು.

ವಾದ್ಯ-ಮೇಳವು 1999ರಲ್ಲಿ ಐ II ಐ ಆಲ್ಬಂನ್ನು ಬಿಡುಗಡೆಗೊಳಿಸಿತು. ಈ ಆಲ್ಬಂ ಪಾಪ್ ಮತ್ತು ಟೆಕ್ನೊ ಎರಡರ ಮಿಶ್ರಣವನ್ನು ಹೊಂದಿರುವುದರೊಂದಿಗೆ ವಾದ್ಯ-ಮೇಳದ ಶೈಲಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿತು. ಈ ಆಲ್ಬಂನ್ನು ಜಾಣ್ಮೆಯಿಂದ ತಯಾರಿಸಲಾಗಿತ್ತು. ಪಾಪ್-ಮಾದರಿಯ ಹಿನ್ನೆಲೆ ಗಾಯಕರಿಂದ ಹಿಡಿದು ಅನೇಕ ಹಾಡುಗಳಲ್ಲಿ ಬಳಸಿದ ಎಲೆಕ್ಟ್ರಾನಿಕ್ ಡ್ರಮ್‌ಗಳವರೆಗೆ ಹೆಚ್ಚುಕಡಿಮೆ ಎಲ್ಲದರ ಬಗ್ಗೆಯ‌ೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಮ‌ೂಲಕ ಅಭಿಮಾನಿಗಳು ವಾದ್ಯ-ಮೇಳದ ಬಗ್ಗೆ ಏನು ತಿಳಿಯಬೇಕೆಂಬುದರ ಬಗ್ಗೆ ಅನಿಶ್ಚಿತರಾಗಿದ್ದರು. ಆಲ್ಬಂನ ಮೊದಲ ಯುರೋಪ್‌ನ ಏಕಗೀತೆ "ಟು ಬಿ ನಂ. 1"ರ ವೀಡಿಯೊದಲ್ಲಿ ಮೋನಿಕಾ ಲೆವಿಂಸ್ಕಿಯನ್ನು ಹೋಲುವ ಮಹಿಳೆಯನ್ನು ತೋರಿಸಲಾಗಿತ್ತು. ಆಲ್ಬಂ ಜನಪ್ರಿಯತೆ ಸುಧಾರಣೆಗೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ನಂತರದ ವರ್ಷದಲ್ಲಿ ಸ್ಕಾರ್ಪಿಯಾನ್ಸ್‌ ಬರ್ಲಿನ್ ಫಿಲ್ಹಾರ್ಮೋನಿಕ್‌‌ಸಹಯೋಗದೊಂದಿಗೆ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರ ಫಲವಾಗಿ ಹೊರಬಂದುದೇ 10-ಹಾಡುಗಳ ಆಲ್ಬಂ ಮೊಮೆಂಟ್ ಆಫ್ ಗ್ಲೋರಿ . ಈ ಆಲ್ಬಂ ಐ II ಐ ಆಲ್ಬಂನ ಕಟುವಾದ ವಿಮರ್ಶೆಯ ನಂತರ ವಾದ್ಯ-ಮೇಳದ ಪ್ರಸಿದ್ಧಿಯನ್ನು ಪುನಃನಿರ್ಮಿಸುವಲ್ಲಿ ಸುದೀರ್ಘ ಮಾರ್ಗವನ್ನು ಕ್ರಮಿಸಿತು. ಆದರೂ ವಾದ್ಯ-ಮೇಳವು ಹಿಂದಿನ ವರ್ಷ ಬಿಡುಗಡೆಯಾದ ಸ್ಯಾನ್ ಫ್ರಾನ್ಸಿಸ್ಕೊ ಸಿಂಫನಿಯೊಂದಿಗಿನ ಮೆಟಾಲಿಕಾದ ಅಂತಹುದೇ ಸಹಯೋಗದ (S&M ) ಕೋಟಿನ ತುದಿಯನ್ನು ಅನುಸರಿಸಿತೆಂದು ವಿಮರ್ಶಕರು ಅದನ್ನು ಟೀಕಿಸಿದರು. ವಾದ್ಯಗೋಷ್ಠಿಯು 1995ರಲ್ಲೇ ಸ್ಕಾರ್ಪಿಯಾನ್ಸ್‌ ಅನ್ನು ಮೊದಲು ಈ ಕಲ್ಪನೆಯೊಂದಿಗೆ ಸಂಧಿಸಿದ್ದರೂ ಹೀಗೆ ದೂರಲಾಯಿತು.

2007ರಲ್ಲಿ ಸ್ಕಾರ್ಪಿಯಾನ್ಸ್‌

2001ರಲ್ಲಿ ಸ್ಕಾರ್ಪಿಯಾನ್ಸ್‌ ಅಕೌಸ್ಟಿಕಾ ಎಂಬ ಆಲ್ಬಂನ್ನು ಬಿಡುಗಡೆಗೊಳಿಸಿತು. ಇದೊಂದು ವಾದ್ಯ-ಮೇಳದ ಅತಿಹೆಚ್ಚಿನ ಜನಪ್ರಿಯತೆಯ ಧ್ವನಿಯ ತರಂಗಗಳ ಮರುಬಳಕೆಯ ಹೊಸ ಹಾಡುಗಳನ್ನು ಒಳಗೊಂಡ ನೇರ ಪ್ರದರ್ಶನದ ಆಲ್ಬಂ. ಕೆಲವು ಅಭಿಮಾನಿಗಳಿಂದ ಪ್ರಶಂಸೆಯನ್ನು ಗಳಿಸಿದರೂ, ಕೆಲವರಿಗೆ ಹೊಸ ಸ್ಟುಡಿಯೊ ಆಲ್ಬಂನ ಕೊರತೆಯು ನಿರಾಶೆಗೊಳಿಸಿತು. ಅಕೌಸ್ಟಿಕಾ ವಾದ್ಯ-ಮೇಳವನ್ನು ಪುನಃ ಬೆಳಕಿಗೆ ತರಲು ಕಿಂಚಿತ್ ನೆರವಾಯಿತು.

2004ರಲ್ಲಿ ವಾದ್ಯ-ಮೇಳವು ಅನ್‌ಬ್ರೇಕೇಬಲ್‌ ಅನ್ನು ಬಿಡುಗಡೆ ಮಾಡಿತು. ಇದು ವಿಮರ್ಶಕರಿಂದ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಪುನಃ ಸುಸ್ಥಿತಿಗೆ ಹಿಂದಿರುಗಿದ ಆಲ್ಬಂ ಎಂಬುದಾಗಿ ಉತ್ತಮ ರೀತಿಯ ಶ್ಲಾಘನೆಯನ್ನು ಪಡೆಯಿತು. ಇದು ವಾದ್ಯ-ಮೇಳವು ಫೇಸ್ ದ ಹೀಟ್‌ ‌ನ ನಂತರ ಬಿಡುಗಡೆಗೊಳಿಸಿದ ಆಲ್ಬಂಗಳಲ್ಲೇ ಹೆಚ್ಚು ಬಲವಾದ ಸಂಗೀತವನ್ನು ಹೊಂದಿರುವ ಆಲ್ಬಂ ಆಗಿದೆ. "ನ್ಯೂ ಜನರೇಶನ್", "ಲವ್ ದೆಮ್ ಆರ್ ಲೀವ್ ದೆಮ್" ಮತ್ತು "ಡೀಪ್ ಆಂಡ್ ಡಾರ್ಕ್" ಮೊದಲಾದ ಹಾಡುಗಳಿಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದರು. ವಾದ್ಯ-ಮೇಳದ ಧ್ವನಿಮುದ್ರಣ ಸಂಸ್ಥೆಯ ಕಳಪೆ ಮಟ್ಟದ ಪ್ರಚಾರವೊ ಅಥವಾ ಸ್ಟುಡಿಯೊ ಬಿಡುಗಡೆಗಳ ನಡುವೆ ಹೆಚ್ಚು ಸುದೀರ್ಘ ಕಾಲದಿಂದಲೊ ಏನೊ ಅನ್‌ಬ್ರೇಕೇಬಲ್‌ ಆಲ್ಬಂ ರೇಡಿಯೊದಲ್ಲಿ ಪ್ರಸಾರವಾಗುವ ಅವಕಾಶವನ್ನು ಪಡೆಯಲಿಲ್ಲ. ಅಲ್ಲದೆ ಪಟ್ಟಿಯಲ್ಲೂ ಸ್ಥಾನವನ್ನು ಗಳಿಸಲಿಲ್ಲ. ಆಲ್ಬಂನ ಬೆಂಬಲವಾಗಿ ಸ್ಕಾರ್ಪಿಯಾನ್ಸ್‌ ವ್ಯಾಪಕವಾಗಿ ವಿಶ್ವ ಪ್ರವಾಸ ಮಾಡಿತು. 2005ರ ಬ್ರಿಟಿಷ್‌ ಪ್ರವಾಸದಲ್ಲಿ ಜ್ಯೂಡಾಸ್ ಪ್ರೀಸ್ಟ್ ಒಂದಿಗೆ 'ವಿಶೇಷ ಅತಿಥಿ'ಗಳಾಗಿ ಪ್ರದರ್ಶನ ನೀಡಿತು. ಇದು 1999ರ ತರುವಾಯ UKಯಲ್ಲಿ ನೀಡಿದ ಸ್ಕಾರ್ಪಿಯಾನ್ಸ್‌ನ ಮೊದಲ ಪ್ರದರ್ಶನವಾಗಿದೆ.

2006ರ ಆರಂಭದಲ್ಲಿ ಸ್ಕಾರ್ಪಿಯಾನ್ಸ್‌ DVD 1 ನೈಟ್ ಇನ್ ವಿಯೆನ್ನಾ ವನ್ನು ಬಿಡುಗಡೆಗೊಳಿಸಿತು. ಇದು 14 ನೇರ ಪ್ರದರ್ಶನದ ಹಾಡುಗಳನ್ನು ಮತ್ತು ಒಂದು ಸಂಪೂರ್ಣ ರಾಕ್ಯುಮೆಂಟರಿ(ರಾಕ್ ಸಂಗೀತದ ಸಾಕ್ಷ್ಯ ಚಿತ್ರ)ವನ್ನು ಒಳಗೊಂಡಿದೆ. LAನಲ್ಲಿ ವಾದ್ಯ-ಮೇಳವು ನಿರ್ಮಾಪಕರಾದ ಜೇಮ್ಸ್ ಮೈಕೆಲ್‌ ಮತ್ತು ಡೆಸ್ಮಂಡ್ ಚೈಲ್ಡ್ಒಂದಿಗೆ ಅದರ ಹೊಸ ಪರಿಕಲ್ಪನೆಯ ಆಲ್ಬಂನ ಕೆಲಸ ಮಾಡುತ್ತಾ ಸ್ಟುಡಿಯೊದಲ್ಲಿ ನಾಲ್ಕು ತಿಂಗಳು ಕಳೆಯಿತು. Humanity: Hour I ಎಂಬ ಶೀರ್ಷಿಕೆಯ ಈ ಆಲ್ಬಂ 2007ರ ಮೇಯಲ್ಲಿ ಬಿಡುಗಡೆಗೊಂಡಿತು.[೧೮] ನಂತರ "ಹ್ಯುಮಾನಿಟಿ ವಿಶ್ವ ಪ್ರವಾಸ"ವನ್ನು ಕೈಗೊಂಡಿತು.

2007ರಲ್ಲಿ ವಾದ್ಯ-ಮೇಳದ ಎರಡು ವಿಶಿಷ್ಟ ಹಾಡುಗಳನ್ನು ಪ್ರಖ್ಯಾತ ವೀಡಿಯೊ ಗೇಮ್ ಸರಣಿ "ಗಿಟಾರ್ ಹೀರೊ"ದಲ್ಲಿ ಅಳವಡಿಸಿಕೊಳ್ಳಲಾಯಿತು. "ನೊ ಒನ್ ಲೈಕ್ ಯು"ಅನ್ನು ಆಟದ "ರಾಕ್ಸ್ ದ '80" ಆವೃತ್ತಿಯಲ್ಲಿ ಹಾಗೂ "ರಾಕ್ ಯು ಲೈಕ್ ಎ ಹ್ಯುರಿಕೇನ್‌" ಹಾಡನ್ನು "ಗಿಟಾರ್ ಹೀರೊ 3: ಲೆಜೆಂಡ್ಸ್ ಆಫ್ ರಾಕ್‌"‌ನಲ್ಲಿ ಬಿಡುಗಡೆಗೊಳಿಸಲಾಯಿತು.

2007ರ ಮೇ 14ರಲ್ಲಿ ಸ್ಕಾರ್ಪಿಯಾನ್ಸ್‌ ಹ್ಯುಮಾನಿಟಿ - ಅವರ್ I ಅನ್ನು ಯುರೋಪ್‌ನಲ್ಲಿ ಬಿಡುಗಡೆಗೊಳಿಸಿತು. ಹ್ಯುಮಾನಿಟಿ - ಅವರ್ I U.S.ನಲ್ಲಿ ಆಗಸ್ಟ್ 28ರಲ್ಲಿ ನ್ಯೂ ಡೋರ್ ರೆಕಾರ್ಡ್ಸ್‌ನಲ್ಲಿ ಬಿಡುಗಡೆಗೊಂಡಿತು. ಅಲ್ಲಿ ಅದು ಬಿಲ್ಬೋರ್ಡ್ ಪಟ್ಟಿಯಲ್ಲಿ #63ನೇ ಸ್ಥಾನವನ್ನು ಪ್ರವೇಶಿಸಿತು.

ಸೆಪ್ಟೆಂಬರ್ 2007ರ ಪೋಡ್‌ಕಾಸ್ಟ್ ಸಂದರ್ಶನದಲ್ಲಿ ಮೈನೆ, ಈ ಹೊಸ ಆಲ್ಬಂ ಹೆಚ್ಚು "ಹೊಸ ಪರಿಕಲ್ಪನೆಯ ಆಲ್ಬಂ" ಅಲ್ಲ, ಇದೊಂದು ಬರಿಯ ಸಾಮಾನ್ಯ ಕಥಾವಸ್ತು ಹೊಂದಿದ ಹಾಡುಗಳ ಸಂಗ್ರಹ ಎಂದು ಹೇಳಿದ್ದಾನೆ. "ಹುಡುಗಿಯರ ಬೆನ್ನತ್ತಿ ಹೋಗುವ ಹುಡುಗರ ಬಗೆಗಿನ ಹಾಡುಗಳ ಮತ್ತೊಂದು ಧ್ವನಿಮುದ್ರಣವನ್ನು ಮಾಡಲು ನಾವು ಬಯಸಲಿಲ್ಲ. ಅಂದರೆ ಇಂತಹುದಕ್ಕೆ ಒಂದು ವಿರಾಮ ನೀಡಿ" ಎಂದು ಮೈನೆ ಹೇಳಿಕೊಂಡಿದ್ದಾನೆ.[೧೯]

2007ರಲ್ಲಿ ವಾದ್ಯ-ಮೇಳವು ಹ್ಯುಮಾನಿಟಿ - ಅವರ್ II ಅನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆಯೇ ಎಂದು ಕೇಳಿದಾಗ, ಮೈನೆ ಹೀಗೆಂದು ಉತ್ತರಿಸಿದನು:

That is what everybody is asking. There might be. Who knows? Right now we are at the beginning of the world tour. It is exciting to play the new songs and they go very well with the classics. It is exciting that there is a whole new audience out there. There are many longtime fans but there are a lot of young kids. We just played in London and in Paris and there were young kids rocking out to songs that were written way before they were born. It is amazing. I don’t want to think about Hour II right now because Hour I is so exciting. It is very inspiring to see how much the audience enjoys this new music.
 
— Klaus Meine[೨೦]

ಡಿಸೆಂಬರ್ 20 2007ರಲ್ಲಿ ಸ್ಕಾರ್ಪಿಯಾನ್ಸ್‌ ರಷ್ಯಾದ ಭದ್ರತಾ ದಳದ ಗಣ್ಯರಿಗಾಗಿ ಕ್ರೆಮ್ಲಿನ್‌ನಲ್ಲಿ ಗಾನಗೋಷ್ಠಿಯೊಂದನ್ನು ನಡೆಸಿಕೊಟ್ಟಿತು. ಆ ಗಾನಗೋಷ್ಠಿಯು KGBಗೆ ಹಿಂದಿನ ಸಂಸ್ಥೆಯಾದ ಚೆಕದ 90ನೇ ಸಂಸ್ಥಾಪನಾ ವಾರ್ಷಿಕೋತ್ಸವದ ಆಚರಣೆಯಾಗಿತ್ತು. ತಾವು ಕ್ರಿಸ್ಮಸ್ ಗಾನಗೋಷ್ಠಿಯನ್ನು ನಡೆಸುತ್ತಿದ್ದೇವೆಂದು ಭಾವಿಸಿದೆವು ಎಂಬುದಾಗಿ ವಾದ್ಯ-ಮೇಳದವರು ಹೇಳಿದ್ದಾರೆ. ಆ ಸಂಗೀತ ಕಛೇರಿಯು ನಿಶ್ಚಯವಾಗಿಯ‌ೂ ಚೇಕ, ಕಮ್ಯೂನಿಸಂ ಅಥವಾ ರಷ್ಯಾದ ಕ್ರೂರ ಗತಕಾಲಕ್ಕೆ ಸಲ್ಲಿಸಿದ ಗೌರವವಲ್ಲ ಎಂದು ವಾದ್ಯ-ಮೇಳದವರು ಹೇಳಿಕೊಂಡಿದ್ದಾರೆ. ಈ ಗಾನಗೋಷ್ಠಿಯಲ್ಲಿ ಶ್ರೋತೃಗಳಾಗಿದ್ದವರಲ್ಲಿ ವ್ಲಾಡಿಮಿರ್ ಪುತಿನ್ ಮತ್ತು ಡಿಮಿಟ್ರಿ ಮೆಡ್ವೆಡೆವ್ ಮೊದಲಾದವರೂ ಸೇರಿಕೊಂಡಿದ್ದಾರೆ.[೨೧]

ಫೆಬ್ರವರಿ 21 2009ರಲ್ಲಿ ಸ್ಕಾರ್ಪಿಯಾನ್ಸ್‌ ಬರ್ಲಿನ್‌ನ O2 ವರ್ಲ್ಡ್‌ನಲ್ಲಿನ ಜೀವಮಾನ ಸಾಧನೆಗಾಗಿ ಜರ್ಮನಿಯ ECHO ಗೌರವ ಪ್ರಶಸ್ತಿಯನ್ನು ಪಡೆಯಿತು.[೨೨]

ಕೊನೆಯ ಆಲ್ಬಂ ಮತ್ತು ನಿವೃತ್ತಿ (2010-ಇತ್ತೀಚಿನವರೆಗೆ)[ಬದಲಾಯಿಸಿ]

2014ರಲ್ಲಿ ಸ್ಕಾರ್ಪಿಯಾನ್ಸ್‌

ನವೆಂಬರ್ 2009ರಲ್ಲಿ ಸ್ಕಾರ್ಪಿಯಾನ್ಸ್‌ ಅದರ 17ನೇ ಸ್ಟುಡಿಯೊ ಆಲ್ಬಂ ಸ್ಟಿಂಗ್ ಇನ್ ದ ಟೈಲ್‌ ಅನ್ನು 2010ರ ಆರಂಭದಲ್ಲಿ ನಿರೀಕ್ಷಿಸಬಹುದೆಂದು ಘೋಷಿಸಿದೆ.[೨೩] ಇದರ CDಯನ್ನು ಸ್ವೀಡನ್‌ ದೇಶದ ನಿರ್ಮಾಪಕರಾದ ಮೈಕೆಲ್ "ನಾರ್ಡ್" ಆಂಡರ್ಸನ್ ಮತ್ತು ಮಾರ್ಟಿನ್ ಹ್ಯಾನ್ಸೆನ್ ಒಂದಿಗೆ ಜರ್ಮನಿಯ ಹ್ಯಾನೋವರ್‌ನ ಸ್ಟುಡಿಯೊದಲ್ಲಿ ಧ್ವನಿಮುದ್ರಣ ಮಾಡಲಾಗುತ್ತಿದೆ.

ಜನವರಿ 24 2010ರಲ್ಲಿ ವಾದ್ಯ-ಮೇಳವು ಸ್ಟಿಂಗ್ ಇನ್ ದ ಟೈಲ್‌ ಕೊನೆಯ ಆಲ್ಬಂ ಹಾಗೂ ಅದರ ಬೆಂಬಲವಾಗಿ ಮಾಡುವ ಪ್ರವಾಸವೂ ಸಹ ಅದರ ಅಂತಿಮ ಪ್ರವಾಸ ಎಂದು ಪ್ರಕಟಿಸಿತು.[೨೪] ಪ್ರವಾಸವು 2012ರಲ್ಲಿ ಅಥವಾ 2013ರಲ್ಲಿ ಕೊನೆಗೊಳ್ಳಬಹುದು.

ಮಾರ್ಚ್ 23 2010ರಲ್ಲಿ ವಾದ್ಯ-ಮೇಳವು ಸ್ಟಿಂಗ್ ಇನ್ ದ ಟೈಲ್‌ ಶೀರ್ಷಿಕೆಯ ಅದರ ಕೊನೆಯ ಆಲ್ಬಂನ್ನು ಬಿಡುಗಡೆಗೊಳಿಸಿತು.

ವಾದ್ಯ-ಮೇಳದ ಸದಸ್ಯರು[ಬದಲಾಯಿಸಿ]

ಸದ್ಯದ ಸದಸ್ಯರು[ಬದಲಾಯಿಸಿ]

ಮಾಜಿ ಸದಸ್ಯರು[ಬದಲಾಯಿಸಿ]

  • ಲೋಥಾರ್ ಹೇಂಬರ್ಗ್ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (1965-1973)
  • ವೋಲ್ಫ್‌ಗ್ಯಾಂಗ್ ಡ್ಜಿಯೋನಿ - ಡ್ರಮ್, ತಾಳವಾದ್ಯ ವಾದಕ, ಹಿಮ್ಮೇಳ ಗಾಯಕ (1965-1973)
  • ಮೈಕೆಲ್‌ ಸ್ಕೆಂಕರ್‌ - ಪ್ರಮುಖ & ಲಯಬದ್ಧ ಗಿಟಾರ್-ವಾದಕ, ಹಿಮ್ಮೇಳ ಗಾಯಕ (1970-1973, 1979)
  • ಉಲ್ರಿಚ್ ರೋತ್‌ - ಪ್ರಮುಖ & ಲಯಬದ್ಧ ಗಿಟಾರ್-ವಾದಕ, ಹಿಮ್ಮೇಳ ಗಾಯಕ, "ಡ್ರಿಫ್ಟಿಂಗ್ ಸನ್", "ಫ್ಲೈ ಟು ದ ರೈನ್‌ಬೊ", "ಡಾರ್ಕ್ ಲೇಡಿ", "ಸನ್ ಇನ್ ಮೈ ಹ್ಯಾಂಡ್", "ಹೆಲ್ ಕ್ಯಾಟ್", "ಪೋಲಾರ್ ನೈಟ್ಸ್" ಮೊದಲಾದ ಹಾಡುಗಳ ಪ್ರಮುಖ ಗಾಯಕ (1973-1978)
  • ಫ್ರಾನ್ಸಿಸ್ ಬುಚೋಲ್ಜ್‌ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (1973-1983, 1984-1992, 1994)
  • ಅಕಿಮ್ ಕಿರ್ಸ್‌ಕ್ನಿಂಗ್‌ - ಕೀಬೋರ್ಡ್‌ ವಾದಕ (1973-1974)
  • ಜುರ್ಗೆನ್ ರೊಸೆಂತಾಲ್‌ - ಡ್ರಮ್ಮು, ತಾಳವಾದ್ಯ ವಾದಕ, ಹಿಮ್ಮೇಳ ಗಾಯಕ (1973-1975)
  • ರ‌್ಯೂಡಿ ಲೆನ್ನರ್ಸ್‌ - ಡ್ರಮ್ಮು, ತಾಳವಾದ್ಯ ವಾದಕ (1975-1977)
  • ಹರ್ಮನ್ ರೇರ್ಬೆಲ್‌ - ಡ್ರಮ್ಮು, ತಾಳವಾದ್ಯ ವಾದಕ, ಹಿಮ್ಮೇಳ ಗಾಯಕ (1977-1983, 1984-1995)
  • ರಾಲ್ಫ್ ರೈಕರ್‌ಮ್ಯಾನ್‌ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (1993-2000, 2000-2003)
  • ಕರ್ಟ್ ಕ್ರೆಸ್ - ಡ್ರಮ್ಮು, ತಾಳವಾದ್ಯ ವಾದಕ (1996)
  • ಕೆನ್ ಟೈಲರ್ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (2000)
  • ಬ್ಯಾರಿ ಸ್ಪಾರ್ಕ್ಸ್ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (2004)
  • ಇಂಗೊ ಪೊವಿಟ್ಜರ್ - ಮಂದ್ರವಾದ್ಯ ವಾದಕ, ಹಿಮ್ಮೇಳ ಗಾಯಕ (2004)

ನಿರ್ವಾಹಕ[ಬದಲಾಯಿಸಿ]

  • ಸ್ಟೆವಾರ್ಟ್ ಯಂಗ್ (1995-ಇತ್ತೀಚಿನವರೆಗೆ)

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಆಲ್ಬಂಗಳು[ಬದಲಾಯಿಸಿ]

ಪ್ರವಾಸಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. Ingham, Chris. The Book of Metal. Thunder's Mouth Press. pp. g. 104. ISBN 978-1560254195.
  2. ವೈನ್‌ಸ್ಟೈನ್, ಡೀನ. ಹೆವಿ ಮೆಟಲ್‌: ದ ಮ್ಯೂಸಿಕ್ ಆಂಡ್ ಇಟ್ಸ್ ಕಲ್ಚರ್ . ಡಕ್ಯಾಪೊ, 2000. ISBN 0-306-80970-2, ಪುಟ 29, 36.
  3. Christe, Ian. Sound of the Beast. Allison & Busby. pp. g. 2. ISBN 0749083514.
  4. Walser, Robert. Running with The Devil. Wesleyan University Press. pp. gs. 2. ISBN 0819562602.
  5. M. C. Strong (1998). The great rock discography. Giunti. pp. g. 722. ISBN 8809215222.
  6. Philip Dodd (2005). The Book of Rock: from the 1950s to today. Thunder's Mouth Press. ISBN 1560257296.
  7. "Scorpions Biography". www.bighairmetal.com. Retrieved 2008-04-12.
  8. "Scorpions Forsee Fantastic Future Following Farewell". billboard.com. Retrieved 2010-01-29.
  9. ಗ ಗ್ರೇಟೆಸ್ಟ್: 100 ಗ್ರೇಟೆಸ್ಟ್ ಆರ್ಟಿಸ್ಟ್ಸ್ ಆಫ್ ಹಾರ್ಡ್ ರಾಕ್‌ (40 - 21) Archived 2011-08-21 ವೇಬ್ಯಾಕ್ ಮೆಷಿನ್ ನಲ್ಲಿ. - VH1.comನಲ್ಲಿ
  10. "VH1's 100 Greatest Hard Rock Songs". Stereogum.com. January 5, 2009. Archived from the original on ಫೆಬ್ರವರಿ 16, 2009. Retrieved December 24, 2009.
  11. "Scorpions to retire". TheGauntlet.com. January 24, 2010. Archived from the original on ಮಾರ್ಚ್ 4, 2016. Retrieved January 24, 2010.
  12. "ಆರ್ಕೈವ್ ನಕಲು". Archived from the original on 2010-05-10. Retrieved 2010-04-14.
  13. ದ ಸ್ಟೋರಿ ಆಫ್ "ಸ್ಕಾರ್ಪಿಯಾನ್ಸ್‌" Archived 2008-04-10 ವೇಬ್ಯಾಕ್ ಮೆಷಿನ್ ನಲ್ಲಿ. (ulijonroth.com)]
  14. Syrjälä, Marko. "Interview with Uli Jon Roth". Metal-rules.com. Archived from the original on ಸೆಪ್ಟೆಂಬರ್ 17, 2012. Retrieved May 12, 2008. {{cite web}}: Unknown parameter |dateformat= ignored (help)
  15. "Allmusic review of the album". allmusic.com. Retrieved 2007-05-18.
  16. ಡಾನ್ ಡೊಕ್ಕೆನ್‌ ಇಂಟರ್‌ವ್ಯೂ Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ. (classicrockrevisited.com)
  17. ಇಂಟರ್‌ವ್ಯೂ ವಿತ್ ಕ್ಲಾಸ್ ಮೈನೆ (metal-rules.com)
  18. ನ್ಯೂ SCORPIONSಆಲ್ಬಂ ಟೈಟಲ್, ಆರ್ಟ್‌ವರ್ಕ್ ರಿವೀಲ್ಡ್ (bravewords.com)
  19. "Klaus Meine podcast interview". Stuck in the 80s. 2007. Retrieved 2007-11-26.
  20. "Interview with Klaus Meine". Classic Rock Revisited. 2007. Archived from the original on 2007-11-14. Retrieved 2007-11-17.
  21. http://www.ocnus.net/artman2/publish/International_3/Scorpions_Give_Spies_a_Perestroika_Ballad.shtml
  22. "Scorpions performs at Germany's ECHO Awards". Blabbermouth.net. February 22, 2009. Retrieved February 22, 2009.
  23. http://www.roadrunnerrecords.com/blabbermouth.net/news.aspx?mode=Article&newsitemID=130836
  24. http://www.the-scorpions.com/english/news/news_item.asp?NewsID=100

ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]


ಟೆಂಪ್ಲೇಟು:Scorpions