ಸೋಹಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಹಂ (सो ऽहम्) ಒಂದು ಹಿಂದೂ ಮಂತ್ರವಾಗಿದೆ. ಸಂಸ್ಕೃತದಲ್ಲಿ ಇದರರ್ಥ "ನಾನು ಅವನು/ಅದು" ಎಂದು.[೧]

ವೈದಿಕ ತತ್ತ್ವಶಾಸ್ತ್ರದಲ್ಲಿ ಇದರರ್ಥ ತಮ್ಮನ್ನು ಬ್ರಹ್ಮಾಂಡ ಅಥವಾ ಪರಮ ವಾಸ್ತವದೊಂದಿಗೆ ಗುರುತಿಸಿಕೊಳ್ಳುವುದು.


ಇತಿಹಾಸ[ಬದಲಾಯಿಸಿ]

ಈ ಪದಗುಚ್ಛವು ಪ್ರಧಾನ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ, ಉದಾಹರಣೆಗೆ ಈಶಾವಾಸ್ಯೋಪನಿಷತ್‍ (ಶ್ಲೋಕ ೧೬) ಹೀಗೆ ಕೊನೆಗೊಳ್ಳುತ್ತದೆ:

(...) तेजो यत्ते रूपं कल्याणतमं तत्ते पश्यामि योऽसावसौ पुरुषः सोऽहमस्मि ॥१६॥
ತೇಜೋ ಯತ್ ತೇ ರೂಪಂ ಕಲ್ಯಾಣತಮಂ ತತ್ ತೇ ಪಶ್ಯಾಮಿ ಯೋ 'ಸಾವ್ [ಅಸೌ ಪುರುಷಃ] ಸೋಹಂ ಅಸ್ಮಿ
"ನಿನ್ನ ಅತ್ಯಂತ ಸುಂದರ ರೂಪವಾದದ್ದು ಬೆಳಕು, ನಾನು ಅದನ್ನು ಕಾಣುತ್ತಿದ್ದೇನೆ. ಅವನೇನೋ ಅದೇ ನಾನು" (ಆಂಗ್ಲದಿಂದ. ಮ್ಯಾಕ್ಸ್‌ ಮುಲ್ಲರ್)[೨]

ಸೋಹಂ, ಅಥವಾ "ಅವನು ನಾನೇ", ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯದಲ್ಲಿ ಬಹಳ ಸಾಮಾನ್ಯವಾಗಿದೆ. ಕೆಲವು ಉದಾಹರಣೆಗಳೆಂದರೆ:

ಉಪನಿಷತ್‍ಗಳು

  • ಸಂನ್ಯಾಸ ಉಪನಿಷತ್ತುಗಳು, ಉದಾ. ನಾರದಪರಿವ್ರಾಜಕ ಉಪನಿಷತ್ತು, ನಿರ್ವಾಣ ಉಪನಿಷತ್ತು, ಆಶ್ರಮ ಉಪನಿಷತ್ತು, ಮೈತ್ರೇಯ ಉಪನಿಷತ್ತು ಮತ್ತು ಸತ್ಯಾಯನೀಯ ಉಪನಿಷತ್ತು.
  • ಯೋಗ ಉಪನಿಷತ್ತುಗಳು, ಉದಾ. ಧ್ಯಾನಬಿಂದು ಉಪನಿಷತ್ತು ಹಾಗೂ ಯೋಗಶಿಖಾ ಉಪನಿಷತ್ತು.
  • ಹಂಸ ಉಪನಿಷತ್ತು

ಉಲ್ಲೇಖಗಳು[ಬದಲಾಯಿಸಿ]

  1. Mariasusai Dhavamony (1999), Hindu Spirituality, GB Press,
  2. The Upanishads, Part 1 1879, p. 313. Müller gives the footnote: "Asau purushah should probably be omitted", taking these words as an explanatory gloss that was accidentally incorporated in the text.
"https://kn.wikipedia.org/w/index.php?title=ಸೋಹಂ&oldid=1119579" ಇಂದ ಪಡೆಯಲ್ಪಟ್ಟಿದೆ