ಸೋನಂ ವಾಂಗ್ ಚುಕ್
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಜುಲೈ ೨೦೧೭) |
ಸೋನಂ ವಾಂಗ್ ಚುಕ್ (ಸೆ ೧, ೧೯೬೬) ಲಡಾಖ್ ಮೂಲದ ಇಂಜಿನಿಯರ್, ಸಂಶೋಧಕ ಮತ್ತು ಶಿಕ್ಷಣತಙ್ಣ. ಶಾಲಾ ಶಿಕ್ಷಣದಲ್ಲಿ ಹೊಸತನವನ್ನು ತಂದ ಹಿರಿಮೆ ಸೋನಂರದ್ದು.
ಜನನ
[ಬದಲಾಯಿಸಿ]ಲಡಾಖ್ ನ ಉಲೆಯ್ ಟೊಕ್ಪೊ ಎಂಬ ಗ್ರಾಮದಲ್ಲಿ ೧೯೬೬ರ ಸೆಪ್ಟೆಂಬರ್೧ರಂದು ರಾಜಕಾರಣಿ ಸೋನಂ ವಾಂಗ್ಯಾಲ್ ರ ಮಗನಾಗಿ ಜನಿಸಿದ ಸೋನಂ ೮.೫ ವರ್ಷದವರೆಗೆ ಶಾಲೆ ಸೇರಲಿಲ್ಲ. ತಮ್ಮ ತಾಯಿಯಿಂದ ಓದು-ಬರಹವನ್ನು ಮಾತೃಭಾಷೆಯಲ್ಲಿಯೇ ಕಲಿತ ಸೋನಂ, ಅದನ್ನು ತಮ್ಮ ಅದೃಷ್ಟ ಎಂದೇ ಭಾವಿಸುತ್ತಾರೆ.
ಅಧ್ಯಯನ
[ಬದಲಾಯಿಸಿ]೧೯೭೫ರಲ್ಲಿ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಮಂತ್ರಿಯಾದ ಸೋನಂ ವಾಂಗ್ಯಾಲ್ ಮಗ ಸೋನಂರನ್ನು ಶ್ರೀನಗರದಲ್ಲಿ ಶಾಲೆಗೆ ಸೇರಿಸುತ್ತಾರೆ. ಭಾಷೆಯ ಸಂವಹನದ ಕೊರತೆಯಿಂದ ೨ ವರ್ಷ ಬಳಲಿದ ಸೋನಂ, ೧೯೭೭ರಲ್ಲಿ ಶಾಲೆಯಿಂದ ದೆಹಲಿಗೆ ಒಡಿಬರುತ್ತಾರೆ. ದೆಹಲಿಯ ವಿಶೇಷ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಲ್ಲಿ ತಮ್ಮ ಅಳಲು ತೋಡಿಕೊಂಡು, ಅವರ ಮನಗೆದ್ದು ಅಲ್ಲಿಯೇ ವಿದ್ಯಾರ್ಥಿಯಾಗಿ ಸೇರುತ್ತಾರೆ. ಅಲ್ಲಿ ಸೋನಂರ ಪ್ರತಿಭೆ ಅರಳುತ್ತದೆ. ೧೯೮೩-೮೭ರ ಶ್ರೀನಗರದ ಆರ್ ಈ ಸಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಲು ಆಯ್ಕೆಯಾಗುತ್ತಾರೆ. ಸಿವಿಲ್ ಇಂಜಿನಿಯರ್ ಆಗು ಎಂದ ತಂದೆಯ ಮಾತನ್ನು ಧಿಕ್ಕರಿಸಿ, ತಮ್ಮ ಸ್ವಂತ ಖರ್ಚಿನಲ್ಲಿಯೇ ಇಂಜಿನಿಯರಿಂಗ್ ಓದಿದ್ದು ಸೋನಂರ ಹೆಗ್ಗಳಿಕೆ. ೧೦ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ತಮ್ಮ ಖರ್ಚು ನೋಡಿಕೊಳ್ಳುವಾಗಲೇ, ಪ್ರತಿಭಾವಂತ ವಿದ್ಯಾರ್ಥಿಗಳು ನಪಾಸಾಗುವುದನ್ನು ತಡೆಯುವುದು ಸೋನಂರ ಗುರಿಯಾಗುತ್ತದೆ. ತಾನು ಹತ್ತರಲ್ಲಿ ಮತ್ತೊಬ್ಬ ಇಂಜಿನಿಯರ್ ಆಗಲಾರೆ ಎಂದು ಸೋನಂ ದೃಢ ನಿಶ್ಚಯ ಮಾಡುತ್ತಾರೆ.[೧]
ವೃತ್ತಿ
[ಬದಲಾಯಿಸಿ]೧೯೮೭ರಲ್ಲಿ ಲಡಾಖ್ ಪ್ರಾಂತ್ಯಕ್ಕೆ ಹಿಂತಿರುಗಿ SECMOL (ಲಡಾಖ್ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಾಂಸ್ಕೃತಿಕ ಚಳವಳಿ) ಎಂಬ ಸಂಸ್ಥೆ ಹುಟ್ಟುಹಾಕಿದ ಸೋನಂ ಸಾಸ್ಪೊಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಮ್ಮ ನೂತನ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಾಣುತ್ತಾರೆ.
ಸೋನಂರ ಶ್ರಮದಿಂದ ೧೦ ತರಗತಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆ ಶೇ ೫ರಿಂದ ೭೫ಕ್ಕೆ ಏರುತ್ತದೆ.
೨೦೦೧-೨೦೦೪ರಲ್ಲಿ ಲಡಾಖ್ ಗಿರಿಗಳ ಆಡಳಿತ ಕೌನ್ಸಿಲ್ ನ ಸಲಹೆಗಾರರಾಗಿ ದುಡಿದ ಸೋನಂ, ಲಡಾಖ್ ೨೦೨೫ ಎಂಬ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಾರೆ.
ಸಲಹಾ ವೃತ್ತಿ
[ಬದಲಾಯಿಸಿ]೨೦೦೫ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪ್ರಾಥಮಿಕ ಶಿಕ್ಷಣ ಸಮಿತಿಗೆ ಸಲಹೆಗಾರರಾಗಿ ನೇಮಕಗೊಂಡರು.
೨೦೦೭-೨೦೧೦ರ ಅವಧಿಗೆ ನೇಪಾಳ ಸರ್ಕಾರಕ್ಕೆ ಶಿಕ್ಷಣ ಮಾರ್ಪಾಡು ಸಮಿತಿಗೆ ಸಲಹೆಗಾರರಾಗಿ ದುಡಿದರು.
ಸಂಶೋಧನೆ ಐಸ್ ಸ್ತೂಪ
[ಬದಲಾಯಿಸಿ]೨೦೧೧ರಲ್ಲಿ ಫ಼್ರಾನ್ಸ್ ನ ಗ್ರೆನೊಬಲ್ ನಲ್ಲಿ ವಾಸ್ತುಶಿಲ್ಪ ಅಧ್ಯಯನದಲ್ಲಿ ಉನ್ನತ ವ್ಯಾಸಂಗಗೈದ ಸೋನಂ, ಐಸ್ ಸ್ತೂಪ ಎಂಬ ಮಾನವನಿರ್ಮಿತ ಊಟೆಯನ್ನು ಸಂಶೋಧಿಸುತ್ತಾರೆ.
ಚಳಿಗಾಲದಲ್ಲಿ ಹರಿವ ನೀರನ್ನು ಮಂಜುಗಡ್ಡೆಗಳಾಗಿ ಘನೀಕರಿಸಿ, ಬೃಹತ್ ಊಟೆಗಳನ್ನಾಗಿಸಿ ಬೇಸಿಗೆಯಲ್ಲಿ ಗದ್ದೆಗಳಿಗೆ ಅದೇ ಊಟೆಗಳನ್ನು ಕರಗಿಸಿ ಬೇಸಾಯಕ್ಕೆ ಬಳಸುವುದು ಐಸ್ ಸ್ತೂಪದ ಕ್ರಮ.
ಇದು ಪರ್ವತ ಪ್ರಾಂತ್ಯ ಲಡಾಖ್ ನಲ್ಲಿ ಹೆಚ್ಚು ಪ್ರಯೋಜನಕಾರಿ. ಸದ್ಯಕ್ಕೆ (೨೦೧೭ರವರೆಗೆ) ೧.೫ ಲಕ್ಷ ಲೀಟರ್ ನೀರನ್ನು ಹಿಡಿದು ಇಡಬಲ್ಲ ಐಸ್ ಸ್ತೂಪಗಳ ನಿರ್ಮಾಣವಾಗಿವೆ.
[೨]
೨೦೧೬ರಲ್ಲಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಪೊಂಟ್ರೆಸಿನ ನಗರದಲ್ಲಿ ಐಸ್ ಸ್ತೂಪ ನಿರ್ಮಿಸಲು ಸ್ವಿಸ್ ಸರ್ಕಾರದ ಆಮಂತ್ರಣವನ್ನು ಮನ್ನಿಸಿದ ಸೋನಂ, ಅಲ್ಲಿ ಐಸ್ ಸ್ತೂಪ ನಿರ್ಮಿಸಿಕೊಟ್ಟರು.
[೩]
ಸಂಶೋಧನೆ ಸೌರಶಕ್ತಿ ಮನೆಗಳು
[ಬದಲಾಯಿಸಿ]ಲಡಾಖ್,ನೇಪಾಳ, ಸಿಕ್ಕಿಂ ಇವೇ ಮುಂತಾದ ಕಡೆ ಸೌರಶಕ್ತಿಯಿಂದ ಮಣ್ಣಿನ ಮನೆಗಳ ಸಂಪೂರ್ಣ ಚಟುವಟಿಕೆಗಳನ್ನು (ಉರುವಲು, ಅಡಿಗೆ, ಸ್ನಾನಕ್ಕೆ ಬಿಸಿನೀರು, ಮನೆಗೆಲಸ, ಹೀಗೆ ಎಲ್ಲಾ ಚಟುವಟಿಕೆಗಳು) ಮಾಡಲು ಅನುವಾಗುವ ನಿರ್ಮಿತಿಗಳನ್ನು ಶುರುವಿಟ್ಟುಕೊಂಡರು.
[೪]
ತಾವೇ ನಿರ್ಮಿಸಿದ ಶಾಲೆಯಲ್ಲಿ -೩೦ರ ಛಳಿಯಲ್ಲಿಯೂ ವಿದ್ಯಾರ್ಥಿಗಳು ಬೆಚ್ಚಗೆ ಓದಬಲ್ಲ ವ್ಯವಸ್ಥೆಯನ್ನು ಕಂಡುಹಿಡಿದರು.[೫]
ಸಂಶೋಧನೆ ಸೈಫ಼ನ್ ಕೊಳವೆ
[ಬದಲಾಯಿಸಿ]೨೦೧೫ರಲ್ಲಿ ಝಂಕ್ಸರ್ ಎಂಬಲ್ಲಿ ಫ಼ುಗ್ತಲ್ ನದಿಯ ಒಡ್ಡು ಒಡೆದು ೧೫ ಕಿಮೀ. ಉದ್ದದಷ್ಟು ಹಳ್ಳ ನೀರು ನಿಂತು ನದಿಯ ಕೆಳಭಾಗದ ಕಣಿವೆಯ ೧೨ ಗ್ರಾಮಗಳಲ್ಲಿ ಆತಂಕ ಉಂಟು ಮಾಡಿತು.[೬]
ನದಿಯ ನೀರನ್ನು ಸೈಫ಼ನ್ ಕೊಳವೆಗಳ ಮೂಲಕ ಬರಿದು ಮಾಡುವ ಸುಲಭ ವಿಧಾನವನ್ನು ಸೋನಂ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದರು. ಆದರೆ, ಸೋನಂರ ವಿಧಾನವನ್ನು ತಿರಸ್ಕರಿಸಿದ ಸರ್ಕಾರ, ನದೀಪಾತ್ರವನ್ನು ಸಿಡಿಸಿ ನೀರು ಬರಿದು ಮಾಡುವ ಯೋಜನೆ ಕೈಗೊಂಡಿತು.[೭]
ದುರದೃಷ್ಟವಶಾತ್, ೭ ಮೇ ೨೦೧೫ರಂದು ಸಿಡಿಸುವ ಕಾಮಗಾರಿಯಿಂದ ಹಠಾತ್ ಪ್ರವಾಹವಾಗಿ ೧೨ ಸೇತುವೆಗಳು ಮತ್ತು ಅಸಂಖ್ಯ ಗದ್ದೆಗಳು ನೀರುಪಾಲಾದವು.[೮][೯]
ರಾಜಕೀಯ
[ಬದಲಾಯಿಸಿ]ಲಡಾಖ್ ಗಿರಿಗಳ ಆಡಳಿತ ಕೌನ್ಸಿಲ್ ನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನ್ಯೂ ಲಡಾಖ್ ಮೂವ್ ಮೆಂಟ್ ಎಂಬ ಪಕ್ಷವನ್ನು ೨೦೧೩ರಲ್ಲಿ ಕಟ್ಟಿದರು.೨೦೧೫ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತರು.
ಖ್ಯಾತಿ
[ಬದಲಾಯಿಸಿ]ಥ್ರೀ ಈಡಿಯಟ್ಸ್ ಚಿತ್ರದಲ್ಲಿ ಸೋನಂರನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು, ಆಮೀರ್ ಖಾನ್ ಪಾತ್ರವನ್ನು ಲಡಾಖ್ ಪ್ರಾಂತ್ಯದಲ್ಲಿ ಶಾಲೆ ನಡೆಸುವ ಸಂಶೋಧಕನ ಮಾದರಿಯಲ್ಲಿ ರೂಪಿಸಲಾಗಿದೆ.[೧೦]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2017-06-21. Retrieved 2017-06-26.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ http://timesofindia.indiatimes.com/india/Ice-stupas-to-end-water-woes/articleshow/46357875.cms
- ↑ http://www.huffingtonpost.in/shailendra-yashwant-/sonam-wangchuks-ice-stupas-are-firing-up-interest-from-ladakh-t/
- ↑ http://news.statetimes.in/secmol-wins-international-terra-award-best-building/
- ↑ https://www.youtube.com/watch?v=cX-hbTZjgHQ
- ↑ http://www.tribuneindia.com/news/jammu-kashmir/community/river-blockage-40-zanskar-villages-face-flood-threat/41658.html
- ↑ "ಆರ್ಕೈವ್ ನಕಲು". Archived from the original on 2015-09-26. Retrieved 2017-06-27.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ http://www.thehindu.com/news/national/other-states/artificial-lake-burst-triggers-floods-in-ladakh/article7182786.ece
- ↑ http://www.greaterkashmir.com/news/186346-story.html
- ↑ http://timesofindia.indiatimes.com/city/thane/Real-Phunsuk-Wangdu-inspires-city-students/articleshow/45507423.cms