ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊರ್ ಜುಆನಾ ಐನಿಸ್ ಡಿ ಲಾ ಕ್ರಜ಼್
ಸೊರ್ ಜುಆನಾ ಐನಿಸ್ ಡಿ ಲಾ ಕ್ರಜ಼್
ವೃತ್ತಿನನ್ಸ್, ಕವಯಿತ್ರಿ,ಬರೆಯುಗಾತ್ರಿ
ರಾಷ್ಟ್ರೀಯತೆಮೆಕ್ಸಿಕೊ

ಸಹಿ

ಜುಆನಾ ಐನೆಸ್ ಡೆ ಲಾ ಕ್ರಜ಼್

ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್ [೧೬೫೧- ೧೬೯೫ ] ೧೭ ನೆಯ ಶತಮಾನದ 'ಮೆಕ್ಸಿಕೊ' ನಗರದಲ್ಲಿ ಗಮನ ಸೆಳೆದ ನನ್ಸ್. ಇವರು ಒಳ್ಳೆಯ ಕವಯಿತ್ರಿ. ಜುಆನಾ ಮೊದಲನೆಯ ಸ್ತ್ರೀ ಮೆಕ್ಸಿಕೊ ನಗರದಲ್ಲಿ ಪ್ರಸಿದ್ಧರಾದವರು

ಜೀವನ ಚರಿತ್ರೆ[ಬದಲಾಯಿಸಿ]

ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್ ಅವರ ಪೂರ್ಣ ಹೆಸರು ಜುಆನಾ ಐನೆಸ್ ಡೆ ಅಸ್ಬಾಜೆ ವೈ ರಾಮಿರೆಸ್ ಡೆ ಸ್ಯಾಂಟಿಲಾನಾ ನವೆಂಬರ್ ೧೨, ೧೬೫೧ ರಲ್ಲಿ ಸ್ಯಾನ್ ಮಿಗ್ಯುಲ್ ನೆಪಾಂಟ್ಲಾ ಮೆಕ್ಸಿಕೋ ನಗರದಲ್ಲಿ ಜನಿಸಿದರು. ಇವರ ತಂದೆ ಪೆಡ್ರೊ ಮ್ಯಾನ್ಯುಲ್ ಡೆ ಆಸ್ಬಾಜೆ ಹಾಗು ತಾಯಿ ಇಸಬೆಲ್ ರಾಮಿರಜ಼್ ಇವರು ಬರೊಕ್ ಶಾಲೆಯ ಕವಯಿತ್ರಿ ಮತ್ತು ಸ್ವಯಂ ಕಲಿಕ ವಿಧ್ವಾಂಸರಾಗಿದ್ದರು. ಇವರನ್ನು ಬರಹಗಾರ್ತಿಯಾಗಿ ಮತ್ತು ಸ್ಪ್ಯಾನಿಷ್ ಚಿನ್ನಾಕಾಲದ ಯೋಗಾದಾರರಾಗಿ ಗುರುತಿಸಲಾಗಿದೆ. ಇವರು ಮೆಕ್ಸಿಕನ್ ಸಾಹಿತ್ಯದ ಸ್ಪ್ಯಾನಿಷ್ ಭಾಷೆಯಲ್ಲಿ ಮೊದಲನೆಯವರೆಂದು ಪರಿಗಣಿಸಲಾಗಿದೆ. ಇವರ ತಾಯಿಯ ಜನ್ಮಸ್ಥಳವಾದ 'ಅಮೆಕ್ಯಾಮೇಕ'ದಲ್ಲಿ ಬೆಳೆದರು. ಜುಆನಾ ಸಾರ್ವಜನಿಕವಾಗಿ ಚರ್ಚಿನ ಮಗಳೆಂದು ದಾಖಲೆಯಾಗಿದೆ ಏಕೆಂದರೆ ಜುಆನಾರ ಹೆತ್ತವರು ಅವಿವಾಹಿತರು. ಮೂರು ವಯಸ್ಸಿನಲ್ಲಿ ಜುಆನಾ ತನ್ನ ಅಕ್ಕನನ್ನು ಸ್ಕೂಲ್ ಗೆ ಹಿಂಬಾಲಿಸಿ ಶಿಕ್ಷಕರನ್ನು ಮನವರಿಕೆ ಮಾಡಿ ಯಾವ ರೀತಿ ಓದಬೇಕೆಂದು ಕೇಳಿದರು.ಜುಆನಾ ತನ್ನ ತಾತನ ಗ್ರಂಥಾಲಯದಲ್ಲಿ ಹಲವು ಪುಸ್ತಕಗಳನ್ನು ಓದಿ ಸ್ವಯಂ ಕಲಿತರು, ಮೂರು ವಯಸ್ಸಿನ ಅಂತರದಲ್ಲಿ ಇವರು ಲ್ಯಾಟಿನ್ ಭಾಷೆಯನ್ನು ಸಂಪೂರ್ಣವಾಗಿ ಓದಲು ಮತ್ತು ಬರೆಯಲು ಕಲಿತರು. ಜುಆನಾ ತಮ್ಮ ಐದನೇ ವರ್ಷದ ಅವಧಿಯಲ್ಲೇ ಲೆಕ್ಕಾಚಾರವನ್ನು ಕಲಿತರು.ಪರಮಪ್ರಸಾದದ ಬಗ್ಗೆ ತಮ್ಮ ಎಂಟನೆ ವಯಸ್ಸಿನಲ್ಲಿ ಕವನ ಬರೆದರು. ತಮ್ಮ ಹದಿಮೂರನೇಯ ವಯಸ್ಸಿನಲ್ಲಿ ಲ್ಯಾಟಿನ್ ಭಾಷೆಯನ್ನು ಮಕ್ಕಳಿಗು ಸಹ ಕಲಿಸುತ್ತಿದ್ದರು. ಇವರು ಆಜ಼್ಟೆಕ್ ಭಾಷೆಯನ್ನು ಕಲಿತು ಅದರಲ್ಲಿ ಹಲವಾರು ಸಣ್ಣ ಕವನವನ್ನೂ ಸಹ ಬರೆದರು.[೧]

೧೬೬೪, ಹನ್ನೆರಡನೆಯ ವಯಸ್ಸಿನಲ್ಲಿ 'ಮೆಕ್ಸಿಕೊ' ನಗರದಲ್ಲಿ ತನ್ನ ಮಾವನ ಕುಟುಂಬದ ಜೊತೆ ಇರಬೇಕೆಂದು ಜುಆನಾರನ್ನು ಕಳುಹಿಸಿದರು. ಜುಆನಾ ಹುಡುಗನಾಗಿ ವೇಷಾಂತರ ಮಾಡಿ ವಿಶ್ವವಿದ್ಯಾಲಯದಲ್ಲಿ ಸೇರಲು ತನ್ನ ತಾಯಿಯ ಒಪ್ಪಿಗೆ ಕೇಳಿದರು. ಆದರೆ ಒಪ್ಪಿಗೆ ಸಿಗದ ಕಾರಣದಿಂದ ತನ್ನ ಶಿಕ್ಷಣವನ್ನು ಗುಟ್ಟಾಗಿ ಮಾಡಿದರು. ಪ್ರತಿನಿಧಿ ಹದಿನೇಳನೆಯ ವರ್ಷದ ಜುಆನಾದ ಬುದ್ಧಿಯ ಪರೀಕ್ಷೆ ಮಾಡಲು ಇಚ್ಛಿಸಿದರು. ಇದ್ದರಿಂದ ಅನೇಕ ಧರ್ಮಶಾಸ್ತ್ರರು, ತಾತ್ವಿಕರು ಮತ್ತು ಕವಿಗಳನ್ನು ಕರೆದು ಅವರ ಪ್ರಶ್ನೆಗೆ ಜುಆನಾ ಉತ್ತರ ನೀಡಬೇಕಾಗಿತ್ತು. ಇದ್ದರಿಂದ ಜುಆನಾದ ಕೀರ್ತಿ ಇಡೀ 'ಸ್ಪೇನ್' ನಲ್ಲಿ ಹರಡಿತ್ತು. ಇವರ ಕೌಶಲ್ಯದ ಆಲೋಚನೆ ಮತ್ತು ಪ್ರಯೋಗ ಮಾಡುವ ಆಸಕ್ತಿದಿಂದ,ಇವರು 'ಐಸಾಕ್ ನ್ಯೂಟನ್' ಜೊತೆ ಕುಶಲ ಮಾತುಕತೆ ಮಾಡಲು ಅವಕಾಶ ಸಿಕ್ಕಿತ್ತು.[೨]

ಕ್ರೈಸ್ತ ಸನ್ಯಾಸಿನಿ[ಬದಲಾಯಿಸಿ]

ಇವರು ೧೬೬೭ ರಲ್ಲಿ ಸನ್ಯಾಸಿನಿಗಳ ಮಠವಾದ 'ಸೈಂಟ್ ಜೋಸೆಫ್ ಕೂಟ'ವನ್ನು ಸೇರಿದರು. ಆದರೆ ಅಲ್ಲಿ ಕಟ್ಟುನಿಟ್ಟಿನ ತಿದ್ದುಪಾಟು ಇದ್ದುದರಿಂದ ಅವರು ಮೂರು ತಿಂಗಳ ನಂತರ ಈ ಕೂಟವನ್ನು ಬಿಟ್ಟು ಕ್ರಿ. ಶ. ೧೬೬೯ ರಲ್ಲಿ 'ಹೀರೋನೈಟ್' ನನ್ಸ್ 'ಸ್ಯಾಂಟಾ ಪೌಲ ಕಾನ್ವೆಂಟ್' ಎಂಬ ಸನ್ಯಾಸಿನಿ ಮಠವನ್ನು ಸೇರಿದರು. ಇವರು ಅನೇಕ ಪುಸ್ತಕಗಳನ್ನು ಓದಿ ಬರೆಯುತ್ತಿದರು. ಜುಆನಾ ತಮ್ಮ ಮಠದಲ್ಲಿ 'ಡಾನ್ ಕಾರ್ಲೋಸ್ ಡೆ ಸಿಗ್ಯುಎಂಜ಼್ಸಾ ವೈ ಗೊಂಗೊರ' ಜೊತೆ ಸ್ನೇಹಿತರಾದರು. ನ್ಯೂ ಸ್ಪೇನ್ ನ ಪ್ರತಿನಿಧಿ ಮತ್ತು ರಾಜಸಮೀಪರು ಜುಆನಾಗೆ ಆಶ್ರಯದಾತರಾದರು. ಇವರು ಜುಆನಾರನ್ನು ತಮ್ಮ ಪತ್ರಿಕೆಯಲ್ಲಿ ಅವರ ಕವನಗಳನ್ನು ಸ್ಪೇನ್ ನಲ್ಲಿ ಪ್ರಕಟಿಸುವುದರ ಮೂಲಕ ಬೆಂಬಲಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಜ್ಞಾನದ ಬಾಯಾರಿಕೆಯನ್ನು ನೋಡಬಹುದಾಗಿತ್ತು. ಕಾನ್ವೆಂಟ್ ಜೀವನ ಅವರಿಗೆ ನೆಲೆಸಲು ಕೊಠಡಿಯನ್ನು ಬರೆಯಲು ಮತ್ತು ಓದಲು ಸಮಯ ಮಾಡಿದರು. 'ಸಂತ ಪೌಲಾಸ್' ಶಾಲೆಯಲ್ಲಿನ ಹುಡುಗಿಯರಿಗೆ ಸಂಗೀತ ಮತ್ತು ನಾಟಕ ಕಲಿಸುವ ಅವಕಾಶ ಸಿಕ್ಕಿತು. ಜುಆನಾ ಲ್ಯಾಟಿನ್, ಸ್ಪ್ಯಾನಿಷ್, ಆಸ್ಟೆಕ್ ಭಾಷೆಯಲ್ಲಿ ಕವನವನ್ನು ಬರೆದರು. ಅವರು ನಿಗಧಿತ ಸಮಯದಲ್ಲಿ ಕವನವನ್ನು ಬರೆಯಲು ಸಾಧ್ಯವಾಗದಿದ್ದರೆ ಅವರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುವ ಮೂಲಕ ತಮ್ಮನು ತಾವೇ ಶಿಕ್ಷಿಸುತ್ತಿದ್ದರು. ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ 'ಜೆರೋಮ್ ಕಾನ್ವೆಂಟ್ ಸೇರಿ ನನ್ಸ್' (ಸನ್ಯಾಸಿಯಾಗಿ) ಪ್ರತಿಜ್ಞೆ ಪಡೆದರು. ಇವರು ತತ್ವಜ್ಞಾನ ಮತ್ತು ನೈಸರ್ಗಿ ವಿಜ್ಞಾನವನ್ನು ಸಹ ಓದಿದರು. ಜುಆನಾ ಒಂದು ದೊಡ್ಡ ಪುಸ್ತಕಾಲಯವನ್ನೇ ಸಂಚಯಿಸಿದರು. ಜುಆನಾ ಹೆಂಗಸರು ರೋಷಕ್ಕಿಂತ ಸಲವು ಮತ್ತು ಅರಿಕೆಯೆಂದು ಕೊಂಡಾಡಿದರು.

ಜೆರೋಮ್ ಕಾನ್ವೆಂಟ್, ಮೆಕ್ಸಿಕೊ

ಒಂದು ಹೆಸರಾಂತ ಗುಣದ ಬರವಣಿಗೆ ಎಂದರೆ ಪ್ಯೂಬ್ಲಾ ಕ್ರೈಸ್ತ ಧರ್ಮದ ಗುರು 'ಮ್ಯಾನ್ಯುಲ್ ಫರ್ನಾನ್ಡೇಸ್ ಡೆ ಸಾಂಟಾ ಕ್ರಜ಼್' ಅವರು ಕ್ರಿ. ಶ. ೧೬೯೦, ನವೆಂಬರ್ ೧ ರಂದು ಜುಆನಾವಿರ ವಿಮರ್ಶೆಯನ್ನು ಒಬ್ಬ ಕ್ರೈಸ್ತ ಪಾದ್ರಿಯಿಂದ ಪ್ರಕಟಿಸಿದರು. ಈ ವಿಷಯವನ್ನು ಜುಆನಾವಿರ ಅನುಮತಿ ಪಡೆಯದೆ ಪ್ರಕಟಿಸಿರುವುದರಿಂದ, ಅವರು ಜುಆನಾವಿಗೆ ಐಹಿಕ ಶಿಕ್ಷಣ ಓದುವುದನ್ನು ಬಿಟ್ಟು ಆಸ್ತಿಕಭಾವದ ಶಿಕ್ಷಣದ ಬಗ್ಗೆ ಗಮನಹರಿಸಲು ಉಪದೇಶಿಸಿದರು.

ಈ ವಿಮರ್ಶೆಯ ಜವಾಬಿನಿಂದ, ಜುಆನಾ ತಮ್ಮ 'ಸೊರ್ ಫೈಲೊಟ್ಯಿ'ಗೆ ಮಹಿಳೆಯರ ಹಕ್ಕಿನ ಶಿಕ್ಷಣದ ಬಗ್ಗೆ ಒಂದು ಪತ್ರ ಬರೆದರು. ಸ್ತ್ರೀಯರನ್ನು ಅವಿದ್ಯಾವಂತರಾಗಿ ಇಟ್ಟಿರುವುದು ಏಕೆಂದು ಜುಆನಾ ಚರ್ಚ್ ನ್ನು ದೂಷಿಸಿದರು. ಜುಆನಾ ವಿದ್ಯೆಯಿಂದ ದೇವರಿಗೆ ಸೇವೆ ಸಲ್ಲಿಸಬಹುದೆಂದು ನಂಬಿದರು. ಇದ್ದರಿಂದ ಜುಆನಾ ತನ್ನ ಇಡೀ ಜೀವನ ವಿದ್ಯೆ ಪಡೆಯುವುದಲ್ಲಿಯೇ ಮುಳುಗಿಬಿಟ್ಟರು. ಜುಆನಾವಿನ ಈ ಹಕ್ಕಿಗೆ ಮೆಕ್ಸಿಕೊವಿನ ಪ್ರಧಾನಗುರುಗಳು ಪ್ರತಿಭಟಿಸಿದರು. ಅವರು ಈ ಪ್ರತಿಭಟನೆಯಲ್ಲಿ ಜುಆನಾ ಬರೆದ ಪುಸ್ತಕಗಳನ್ನು ಮಾರಲಾಗಿದೆಂದು ಇತಿಹಾಸ ಹೇಳುತ್ತದೆ. ಜುಆನಾರ ಕೆಲವು ಲೇಖನಗಳು ಮಾತ್ರ ಈಗ ಜೀವಂತವಾಗಿದೆ.

ಜುಆನಾ ಮೆಕ್ಸಿಕೊ ನಾಡಿನ ಪ್ರತಿಮೆ

ಕಾರ್ಯ[ಬದಲಾಯಿಸಿ]

ಜುಆನಾ ಸೊನೆಟ್, ಹಾಸ್ಯ, ವಿಧ್ವಾಂಸ, ನಾಟಕವನ್ನು ಸಹ ಬರೆದಿದ್ದಾರೆ.

ಇವರ ಪ್ರಮುಖ ಪದ್ಯವೆಂದರೆ-

  • ಅರೈಗ್ಮ್ಂಟ್ ಆಫ್ ಮೆನ್
  • ಯು ಲೇಡಿ
  • ಫೈಲ್ಲಿಸ್
  • ಮೈ ಡಿವೈನ್ ಲೈಸಿಸ್
  • ಐ ಅಪ್ರೋಚ್ & ಐ ವಿತ್ಡ್ರಾ
  • ಯು ಮೆನ್ ಟು ಹೆರ್ ಪೋಟ್ರೆಯ್ಟ್

ಅವರು ಬರೆದ ಪ್ರಮುಖ ಕವನಗಳೆಂದರೆ-

  • ಹೋಂಬ್ರೆಸ್ ನೀಸಿಹೊಸ್ (ದಡ್ಡ ಮನುಷ್ಯ) ,
  • ಪ್ರಿಮೆರೋ ಸೂಇನೊ (ಮೊದಲ ಕನಸು)
ಅವರ ಸಣ್ಣ ನಾಟಕ -
  • ಎಲ್ ಡಿವಿನೊ ನಾರ್ಸಿಸೊ( ದ ಡಿವೈನ್ ನಾರ್ಸಿಯೋಸಸ್).

ಮರಣ[ಬದಲಾಯಿಸಿ]

ಇವರು ಪ್ಲೇಗ್ ರೋಗದ ಕಾರಣದಿಂದಾಗಿ ಕ್ರಿ. ಶ. ೧೬೯೫ನ ಏಪ್ರಿಲ್ ೧೭ರಂದು ಮರಣ ಹೊಂದಿದರು. ಅವರ ಅಂತಿಮ ಸಂಸ್ಕಾರವನ್ನು ಪಾದ್ರಿ ಸಿಗ್ಯುಎಂಜ಼್ಸ್ ವೈ ಗೊಂಗೊರ ಅವರು ನಡೆಸಿದರು. ಸೊರ್ ಜುಆನಾ ಈಗ ಮೆಕ್ಸಿಕೊ ನಾಡಿನ ಪ್ರತಿಮೆಯಾಗಿದ್ದಾರೆ. ಇವರ ದೃಶ್ಯ ಮೆಕ್ಸಿಕೊ ಕರೆನ್ಸಿ ನಲ್ಲಿ ನೋಡಬಹುದು. ಜುಆನಾ ಮೆಕ್ಸಿಕೊ ನಗರದ ಗುರುತಾಗಿದ್ದಾರೆ, ೨೦ ನೇಯ ಶತಮಾನದಲ್ಲಿ ಇವರ ಹೆಸರು ಸ್ತ್ರೀ ಸಮಾನತಾವಾದ ಮತ್ತು ಹೆಂಗಸರ ಲೇಖನ ಜೊತೆ ಬಂದಿತ್ತು. ಸೊರ್ ಜುಆನಾ ಮೊದಲ ಸ್ತ್ರೀ, ಲೇಖನವನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೊಸ ಲೋಖಕ್ಕೆ ಪ್ರಚಾರಮಾಡಿದವರು.


ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಜುಆನರವರ ಜೀವನ ಚರಿತ್ರೆ http://www.biography.com/people/sor-juana-in%C3%A9s-de-la-cruz-38178#synopsis Archived 2019-01-21 ವೇಬ್ಯಾಕ್ ಮೆಷಿನ್ ನಲ್ಲಿ.
  2. ಜುಆನರವರ ಬಗ್ಗೆ ಪೂರ್ಣಪ್ರಮಾಣದ ಮಾಹಿತಿ https://www.poets.org/poetsorg/poet/sor-juana-in%C3%A9s-de-la-cruz