ವಿಷಯಕ್ಕೆ ಹೋಗು

ಸೇವಾಲಾಲ್ ಮಹಾರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇವಾಲಾಲ್ ಮಹಾರಾಜ್( ೧೫ ಫೆಬ್ರುವರಿ ೧೭೩೯-೦೪ ಡಿಸೆಂಬರ್ ೧೮೦೬).[] ಇವರು ಭಾರತೀಯ ಆಧ್ಯಾತ್ಮಿಕ ನಾಯಕ, ಬಂಜಾರ ಸಮುದಾಯದ ಸಂತ ಮತ್ತು ಸಂಸ್ಥಾಪಕ

ಬಂಜಾರ ಸಮುದಾಯದ ಖಾತೆಗಳ ಪ್ರಕಾರ, ಇವರು ರಾಮ್ ಜೀ ನಾಯಕ್ ತಾಂಡಾ, ಬಾವನ್ ಬರಾಡ್, ಗುತ್ತಿ- ಬಳ್ಳಾರಿ ಪ್ರಾಂತ್, ರಸ್ತುತ ಕರೆಯಲ್ಪಡುವ , ಆಂಧ್ರ ಪ್ರದೇಶದ ,ಅನಂತಪುರ ಜಿಲ್ಲೆಯ,  ಗುತ್ತಿತಾಲೂಕುನ,  ಸೇವಾಗಡ ಎಂಬ ಗ್ರಾಮದಲ್ಲಿ ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ದಂಪತಿಗಳಿಗೆ ೧೫ ಫೆಬ್ರುವರಿ ೧೭೩೯ ರಂದು ಜನಿಸಿದರು.

ಇವರು ವೃತ್ತಿಯ ಮೂಲಕ ಪಶು ಸಾಕಣೆ ಹಾಗೂ ಸಂಗೋಪನೆ ಮಾಡುವ ವ್ಯಕ್ತಿ. ಅವರು ಸಂಗೀತಗಾರ, ದೈರ್ಯಶಾಲಿ ಯೋಧ, ಮೂಢನಂಬಿಕೆ ವಿರುಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಂದು ಹಾಗೂ ಜಗದಂಬಾ ದೇವಿಯ ಭಕ್ತರು ಆಗಿದ್ದರು ಎಂದು ಹೇಳಲಾಗುತ್ತಿದೆ. ವಸಾಹತುಶಾಹ ಬ್ರಿಟಿಷ್ ಆಡಳಿತಗಾರರು ತಮ್ಮ ಕಥೆಗಳನ್ನು ಇವರ ಬಗ್ಗೆ ಉಲ್ಲೇಖಿಸುತ್ತಾರೆ. ಆದರೆ ಅವರು ೧೯ನೇ ಶತಮಾನದಲ್ಲಿ ಇಟ್ಟು ಅವರ ಮೂಲ ಹೆಸರನ್ನು ಸೆವ ರಾಥೋಡ್ ಎಂದು ಗುರುತಿಸುತ್ತಾರೆ.[]

ಸೇವಾಲಾಲರು ೦೪ ಡಿಸೆಂಬರ್ ೧೮೦೬ ರಂದು ನಿಧನರಾದರು.

ಜಾನಪದ ಹಾಡುಗಳು

[ಬದಲಾಯಿಸಿ]

ಸೇವಾಲಾಲ್ ಮಹಾರಾಜನ್ನು ಪ್ರಸನ್ನಿಸುವ ಜಾನಪದ ಹಾಡುಗಳು ಬಂಜಾರ ಉತ್ಸವಗಳಲ್ಲಿ ಜನಪ್ರಿಯವಾಗಿವೆ.

ಸೇವಾಲಾಲ್ ಮಹಾರಾಜ್ ದೇವಸ್ತಾನಗಳು

[ಬದಲಾಯಿಸಿ]

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೋಹೊರಾ ದೇವಿ ಎಂಬ ಗ್ರಾಮದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಪ್ರಮುಖ ದೇವಾಲಯವಿದೆ. ಬಂಜಾರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗದಾಂಬ ಮಾತಾ ದೇವಸ್ಥಾನ, ಜಗದಾಂಬ ಯಾಡಿ ಮಂದಿರ ಕೂಡ ಇಲ್ಲಿದೆ. ಮತ್ತೊಂದು ಸೇವಾಲಾಲ್ ಮಹಾರಾಜ್ ದೇವಸ್ಥಾನವು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲುಕಿನ ಸುರಗೊಂಡನಕೊಪ್ಪ ಗ್ರಾಮದಲ್ಲಿದೆ.ದೇವಸ್ಥಾನಗಳಿಗೆ ಸೇವಾಲಾಲ್ ಮಹಾರಾಜರ ಭಕ್ತರು ಮಾಲಾಧಾರಣೆ ಮಾಡಿ ವ್ರತದಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮತ್ತು ಜಪ ಮಾಡುತ್ತಾ ಪಾದಯಾತ್ರೆ ಹೋಗುತ್ತಾರೆ.

ಇದನ್ನೂ ಓದಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Bañjārā hejjegurutugaḷu : lēkha saṅkalana, B. T. Lalitha naik,2009
  2. http://m.goarbanjara.com/sant-sevalal-samajsudharak-maharaourush/