ಸೇಲಾ ಕಣಿವೆಮಾರ್ಗ
ಸೇಲಾ ಕಣಿವೆಮಾರ್ಗವು ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿನ ತವಾಂಗ್ ಮತ್ತು ಪಶ್ಚಿಮ ಕಾಮೆಂಗ್ ಜಿಲ್ಲೆಗಳ ನಡುವಿನ ಗಡಿಯ ಮೇಲೆ ಸ್ಥಿತವಾಗಿರುವ ಎತ್ತರದ ಪರ್ವತ ಕಣಿವೆಮಾರ್ಗವಾಗಿದೆ. ಇದು ಭಾರತೀಯ ಬೌದ್ಧ ಪಟ್ಟಣವಾದ ತವಾಂಗ್‍ನ್ನು ಡಿರಾಂಗ್ ಮತ್ತು ಗೌಹಾತಿಗೆ ಜೋಡಿಸುತ್ತದೆ. ಈ ಕಣಿವೆಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 13 (ಹಿಂದೆ NH 229) ಇದೆ. ಈ ಕಣಿವೆಮಾರ್ಗದಲ್ಲಿ ಅಲ್ಪ ಪ್ರಮಾಣದ ಸಸ್ಯಗಳಿವೆ ಮತ್ತು ಸಾಮಾನ್ಯವಾಗಿ ವರ್ಷವಿಡೀ ಸ್ವಲ್ಪ ಮಟ್ಟಿಗೆ ಹಿಮದಿಂದ ಆವೃತವಾಗಿರುತ್ತದೆ. ಕಣಿವೆಮಾರ್ಗದ ಶಿಖರದ ಸಮೀಪದಲ್ಲಿರುವ ಸೇಲಾ ಸರೋವರವು ಟಿಬೆಟಿಯನ್ ಬೌದ್ಧ ಧರ್ಮದಲ್ಲಿ ಪವಿತ್ರವಾಗಿರುವ ಸುಮಾರು 101 ಸರೋವರಗಳಲ್ಲಿ ಒಂದಾಗಿದೆ. ಸೇಲಾ ಕಣಿವೆಮಾರ್ಗವು ಚಳಿಗಾಲದಲ್ಲಿ ಭಾರೀ ಹಿಮಪಾತವನ್ನು ಪಡೆಯುತ್ತದೆಯಾದರೂ, ಭೂಕುಸಿತಗಳು ಅಥವಾ ಹಿಮವು ಕಣಿವೆಮಾರ್ಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸದ ಹೊರತು ಇದು ಸಾಮಾನ್ಯವಾಗಿ ವರ್ಷಪೂರ್ತಿ ತೆರೆದಿರುತ್ತದೆ.
ಸೇಲಾ ಸರೋವರವು ಚಳಿಗಾಲದಲ್ಲಿ ಆಗಾಗ್ಗೆ ಹೆಪ್ಪುಗಟ್ಟುತ್ತದೆ ಮತ್ತು ತವಾಂಗ್ ನದಿಯ ಉಪನದಿಯಾದ ನುರಾನಾಂಗ್ ನದಿಯಿಂದ ಬರಿದಾಗುತ್ತದೆ. ಸರೋವರದ ಸುತ್ತಲೂ ಸೀಮಿತ ಸಸ್ಯಗಳವು ಬೆಳೆಯುತ್ತವೆ. ಇವನ್ನು ಬೇಸಿಗೆಯಲ್ಲಿ ಚಮರೀಮೃಗಗಳಿಗೆ ಮೇಯಿಸುವ ತಾಣವಾಗಿ ಬಳಸಲಾಗುತ್ತದೆ.[೧]
ಚಿತ್ರಸಂಪುಟ
[ಬದಲಾಯಿಸಿ]-
ಸೇಲಾ ಕಣಿವೆಮಾರ್ಗದ ಪ್ರವೇಶದ್ವಾರ
-
ಮೋಡಗಳು ಕಣಿವೆಮಾರ್ಗದೊಳಗೆ ಚಲಿಸುತ್ತಿವೆ
-
ಸೇಲಾ ಕಣಿವೆಮಾರ್ಗ
-
ಜೈನಾಥ ಸೇತುವೆ, ಸೇಲಾ ಕಣಿವೆಮಾರ್ಗ
-
ಜಸ್ವಂತ್ಗಢದ ನೋಟ
-
ಸೇಲಾ ಕಣಿವೆಮಾರ್ಗ, ಅರುಣಾಚಲ ಪ್ರದೇಶ, ಭಾರತ
-
ಸೇಲಾ ಕಣಿವೆಮಾರ್ಗವು ಭಾರೀ ಭೂಕುಸಿತಕ್ಕೆ ಗುರಿಯಾಗುತ್ತದೆ
-
ಸೇಲಾ ಕಣಿವೆಮಾರ್ಗದ ಮಧ್ಯದಲ್ಲಿರುವ ಒಂದು ಹಳ್ಳಿ
ಉಲ್ಲೇಖಗಳು
[ಬದಲಾಯಿಸಿ]
- ↑ "Sela Passmountain pass". travelomy.com. Archived from the original on 2013-05-05. Retrieved 2013-04-18.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)