ವಿಷಯಕ್ಕೆ ಹೋಗು

ಸೇಂಟ್ ಮೇರೀಸ್ ಚರ್ಚ್, ಸಿಕಂದರಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೇಂಟ್ ಮೇರೀಸ್ ಚರ್ಚ್

ಸೇಂಟ್ ಮೇರೀಸ್ ಚರ್ಚ್, ಸಿಕಂದರಾಬಾದ್ ಭಾರತದ ತೆಲಂಗಾಣ ರಾಜ್ಯದ ಸಿಕಂದರಾಬಾದ್‌ನಲ್ಲಿರುವ ಒಂದು ಚಿಕ್ಕ ಬೆಸಿಲಿಕಾ . ಇದನ್ನು ಬೆಸಿಲಿಕಾ ಎಂದು ಗೊತ್ತುಪಡಿಸುವ ಆದೇಶವನ್ನು 7 ನವೆಂಬರ್ 2008 ರಂದು ಹೊರಡಿಸಲಾಯಿತು. ಸೇಂಟ್ ಮೇರೀಸ್ ಚರ್ಚ್‌ನ ನಿರ್ಮಾಣ 1850 ರಲ್ಲಿ ಪೂರ್ಣಗೊಂಡಿತು.

ಸೇಂಟ್ ಮೇರೀಸ್ ಚರ್ಚ್ ಭಾರತದ ಸಿಕಂದರಾಬಾದ್ ನಗರದಲ್ಲಿರುವ ಅತ್ಯಂತ ಹಳೆಯ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಇದು ಪೂಜ್ಯ ಕನ್ಯಾ ಮೇರಿಗೆ ಸಮರ್ಪಿತವಾಗಿದೆ.[] ಚರ್ಚ್‌ನ ಪಕ್ಕದಲ್ಲಿ ಸೇಂಟ್ ಆ್ಯನ್ಸ್ ಕಾನ್ವೆಂಟ್ ಇದೆ, ಇದು ಸಿಕಂದರಾಬಾದ್‌ನ ಸೇಂಟ್ ಆ್ಯನ್ಸ್ ಪ್ರೌಢಶಾಲೆಯನ್ನು ನಡೆಸುತ್ತದೆ.

ಇತಿಹಾಸ

[ಬದಲಾಯಿಸಿ]

ಫ಼ಾದರ್ ಡ್ಯಾನಿಯಲ್ ಮರ್ಫ಼ಿ 1839 ರಲ್ಲಿ ಭಾರತಕ್ಕೆ ಆಗಮಿಸಿದರು ಮತ್ತು 1840ರಲ್ಲಿ ಸೇಂಟ್ ಮೇರೀಸ್ ಚರ್ಚ್ ಅನ್ನು ಕ್ಯಾಥೆಡ್ರಲ್ ಆಗಿ ನಿರ್ಮಿಸಲು ಪ್ರಾರಂಭಿಸಿದರು. ಇದು 1850 ರಲ್ಲಿ ಪೂರ್ಣಗೊಂಡಿತು ಮತ್ತು ಆಶೀರ್ವದಿಸಲ್ಪಟ್ಟಿತು ಮತ್ತು ಆ ಸಮಯದಲ್ಲಿ ಹೈದರಾಬಾದ್ ರಾಜ್ಯದ ಅತಿದೊಡ್ಡ ಚರ್ಚ್ ಆಗಿತ್ತು.[]

ವಾಸ್ತುಕಲೆ

[ಬದಲಾಯಿಸಿ]

ಚರ್ಚ್ ಭಾರತೀಯ ಗೋಥಿಕ್ ಶೈಲಿಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಬಾಗಿದ ಕಮಾನುಗಳು ಮತ್ತು ಮೊನಚಾದ ಆನಿಕೆಗಳನ್ನು ಹೊಂದಿದೆ. ಇತರ ಕ್ಯಾಥೋಲಿಕ್ ಚರ್ಚುಗಳಂತೆ, ಸೇಂಟ್ ಮೇರೀಸ್ ಸಂತರಿಗೆ ಮೀಸಲಾಗಿರುವ ಹಲವಾರು ಪಕ್ಕದ ಬಲಿಪೀಠಗಳನ್ನು ಹೊಂದಿದೆ.

ಗಂಟೆಗಳು

[ಬದಲಾಯಿಸಿ]
ಸೆಂಟ್ ಮೇರೀಸ್ ಚರ್ಚ್, ಕ್ರಿಸ್ಮಸ್ ಮುನ್ನಾದಿನದಂದು ಮಧ್ಯರಾತ್ರಿಯ ಮಾಸ್ ತಯಾರಿಗಾಗಿ ಅಲಂಕರಿಸಲ್ಪಟ್ಟಿದೆ

ಚರ್ಚ್ ನಾಲ್ಕು ಗಂಟೆಗಳನ್ನು ಹೊಂದಿದೆ. ಇವುಗಳನ್ನು 1901 ರಲ್ಲಿ[] ಇಟಲಿಯಿಂದ ತರಲಾಯಿತು. ಗಂಟೆಗಳ ಪೈಕಿ ಒಂದರಲ್ಲಿ ಬಿರುಕುಗಳು ಮೂಡಿವೆ ಎಂದು ವರದಿಯಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "St Mary'S Basilica Secunderabad". Stmarysbasilicasecunderabad.org. Archived from the original on 2013-12-15. Retrieved 2013-11-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "St. Mary's Church- Bell Tower & Water Proofing renovation work". Archived from the original on 16 July 2011. Retrieved 3 April 2014. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. ೩.೦ ೩.೧ "The Hindu : Entertainment Hyderabad / Heritage : Sound of history". Hinduonnet.com. 2005-07-08. Archived from the original on 17 April 2008. Retrieved 2013-11-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)