ಸೇಂಟ್ ಥಾಮಸ್ ಕೆಥೆಡ್ರಲ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಭವ್ಯ ಚರ್ಚ್ ನ ಹೊರಾಂಗಣದಲ್ಲಿ ಒಂದು ಸೊಗಸಾದ ನೀರಿನಕಾರಂಜಿಯನ್ನು ನಿರ್ಮಿಸಿದವರು, ಬ್ರಿಟನ್ ದೇಶದ ಮಹಾನ್ ವಾಸ್ತುಶಿಲ್ಪಕಾರ, ಸರ್.ಜಾರ್ಜ್ ಗಿಲ್ಬರ್ಟ್ ಸ್ಕಾಟ್ ರವರು.ಇದಲ್ಲದೆ, ಅವರು ನಿರ್ಮಿಸಿದ ಮುಂಬಯಿ ವಿಶ್ವವಿದ್ಯಾಲಯದ ಕಾನ್ವೊಕೇಶನ್ ಹಾಲ್, ಮತ್ತು ಅಮೋಘ ರಾಜಾಬಾಯಿ ಟವರ್ ಅವರ ಕೌಶಲ್ಯಕ್ಕೆ,ವಾಸ್ತುಶಿಲ್ಪಶಾಸ್ತ್ರದಲ್ಲಿನ ನಿಪುಣತೆಗೆ ನಿದರ್ಶನಗಳು. ಇವರ ನೂರಾರು ಸುಂದರ ಚರ್ಚ್ ಗಳು, ಕೆಥೆಡ್ರಲ್ ಗಳು, ಮಹಲ್ ಗಳು, ವಿಶ್ವವಿದ್ಯಾಲಯದ ಕಟ್ಟಡಗಳು, ಹಾಗೂ ಮತ್ತಿತರ ಸಾರ್ವಜನಿಕ, ಹಾಗೂ ಖಾಸಗಿವಲಯದ ಕಟ್ಟಡಗಳು, ಹೆಚ್ಚಾಗಿ ಕಾಣಿಸುವುದು, ಗ್ರೇಟ್ ಬ್ರಿಟನ್ ಹಾಗೂ ಬೇರೆದೇಶಗಳಲ್ಲಿ.