ಸೂಪರ್ ಮೂನ್
ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತು ಬರುವಾಗ ಕೆಲವೊಂದು ಸಲ ಭೂಮಿಗೆ ಬಹಳ ಹತ್ತಿರದಲ್ಲಿ ಸುತ್ತು ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುತ್ತಾನೆ ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ.ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ ೧೪ ಪಾಲು ದೊಡ್ಡದಾಗಿರುತ್ತದೆ .ಹಾಗು ಬೆಳಕು ಕೂಡ ೩೦ ಪಾಲು ಜಾಸ್ತಿ ಇರುತ್ತದೆ .ಇಂತಹ ಒಂದು ಘಟನೆ ೨೦೧೬ ನವೆಂಬರ್ ೧೪ ಸೋಮವಾರ ರಾತ್ರಿ ನಡೆದಿದೆ ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ .ವರ್ಷಕ್ಕೆ ಒಂದು ಎರಡು ಸಲ ಸೂಪರ್ ಮೂನ್ ಬರುತ್ತದೆ .ಆದರೆ ೭೦ ವರ್ಷದ ನಂತರ ಬಂದಿರುವ ನವೆಂಬರ್ ೧೪ರ ಸೂಪರ್ ಮೂನ್ ತುಂಬಾ ವಿಶೇಷ.[೧]
ವಿಶೇಷ ಸೂಪರ್ ಮೂನ್
[ಬದಲಾಯಿಸಿ]೧೯೪೮ರಲ್ಲಿ ಚಂದ್ರ ಭೂಮಿಯ ತುಂಬ ಹತ್ತಿರ ಬಂದು ಸುಂದರವಾದ ಸೂಪರ್ ಮೂನ್ ಕಾಣಿಸಿಕೊಂಡಿತ್ತು. ಆನಂತರ ೨೦೧೬ ನವೆಂಬರ್ ೧೪ ಸೋಮವಾರ ರಾತ್ರಿ ಕಾಣಿಸಿಕೊಂಡಿತ್ತು.ಇನ್ನು ಇಂತಹ ಒಂದು ಘಟನೆ ನೋಡಲು ೨೦೩೪ ಇಸವಿ ತನಕ ಕಾಯಬೇಕು . ಇದಕ್ಕಿಂತ ಮೊದಲು ಸೂಪರ್ ಮೂನ್ ಕಾಣಿಸಿಕೊಂಡಿದ್ದರು ಇಷ್ಟು ಬೆಳಕಾಗಿ ,ಇಷ್ಟು ದೊಡ್ಡದಾಗಿ ಇಷ್ಟು ಸುಂದರವಾಗಿ ಕಾಣಿಸಿಕೊಂಡಿರಲು ಸಾಧ್ಯ ಇಲ್ಲ.
ಭೂಮಿ ಮತ್ತು ಚಂದ್ರನ ದೂರ
[ಬದಲಾಯಿಸಿ]ಸೌರಮಂಡಲೊವನ್ನು ಗಮನದಲ್ಲಿಟ್ಟು ಕೊಂಡು ಪ್ರತೀ ತಿಂಗಳು ಚಂದ್ರ ಮತ್ತು ಭೂಮಿಯ ನಡುವಿನ ದೂರ ಹೆಚ್ಚುಕಡಿಮೆ ೩೫೭,೦೦೦ ಮತ್ತು ೪೦೬,೦೦೦ ಕಿಲೋಮೀಟರ್.(೨೨೨,೦೦೦ ಮತ್ತು ೨೫೨,೦೦೦ ಮೈಲ್)[೨],[೩],[೪]
ಪೂರ್ಣ ಚಂದ್ರ ಮಾಮೂಲಿ ಚಂದ್ರನ ಗಾತ್ರಕ್ಕಿಂತ ೧೪% ದೊಡ್ಡದು ಮತ್ತು ೩೦% ಪ್ರಕಾಶಮಾನವಾಗಿರುತ್ತದೆ.[೫] ಚಂದ್ರ ಒಂದೊಂದು ಸಲ ಭೂಮಿಯಿಂದ ತುಂಬಾ ದೂರವೆಂದರೆ ೪೦೬೦೦೦ ಕಿ.ಮೀ ದೂರದಲ್ಲಿರುತ್ತಾನೆ . ಆದರೆ ೨೦೧೩ ಜನವರಿ ೨೩ಕ್ಕೆ ೩೫೬೯೯೧ ಕಿ ಮೀ ,೨೦೧೪ ಅಗೋಸ್ತ್ ೧೦ಕ್ಕೆ ೩೫೬೮೯೬ ಕಿ ಮೀ ಹಾಗು೨೦೧೫ ಸೆಪ್ಟೆಂಬರ್ ೨೮ಕ್ಕೆ ೩೫೬೮೭೭ ಕಿ.ಮೀ ಹತ್ತಿರದಲ್ಲಿ ಚಂದ್ರ ಕಾಣಿಸಿಕೊಂಡಿರುತ್ತಾನೆ.ಈ ಎಲ್ಲಾ ದಿವಸಕ್ಕಿಂತಲು ತುಂಬಾ ಹತ್ತಿರದಲ್ಲಿ ೨೦೧೬ ನವೆಂಬರ್೧೪ಕ್ಕೆ ೩೫೬೫೦೯ ಕಿ ಮೀ ಹತ್ತಿರದಲ್ಲಿ ಚಂದ್ರ ಕಾಣಿಸಿಕೊಂಡಿರುತ್ತಾನೆ .ಈ ವಿಶೇಷ ದಿನ ೭೦ ವರ್ಷದ ನಂತರ ಬಂದಿರುತ್ತದೆ ಇನ್ನು ೨೦೩೪ಕ್ಕೆ ಈ ಸೂಪರ್ ಮೂನ್ ವಿಶೇಷ ದಿನ ಬರಲಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ.
ಸೂಪರ್ ಮೂನ್ ಪದದ ಹುಟ್ಟು
[ಬದಲಾಯಿಸಿ]ಸೂಪರ್ ಮೂನ್ /SuperMoon ಇದನ್ನು ರಿಚರ್ಡ್ ನೊಲ್ಲೆ ಎಂಬವನು ಭವಿಷ್ಯ ಹೇಳುವವ ೧೯೭೯ ಹೇಳಿರುತ್ತಾನೆ.[೬],[೭] ರಿಚರ್ಡ್ ನೊಲ್ಲೆಯ ಪ್ರಕಾರ, ಭೌಗೋಳಿಕ ಒತ್ತಡದ ಸಮಯಯದಲ್ಲಿ ಈ ಸೂಪರ್ ಮೂನ್ ಉಂಟಾಗುತ್ತದೆ.
ಪರಿಣಾಮ
[ಬದಲಾಯಿಸಿ]ಸೂಪರ್ ಮೂನ್ ಉಂಟಾಗುವುದರಿಂದ ಮೃಗ ,ಪಕ್ಷಿ ಹಾಗು ಜನ ಜೀವನದ ಮೇಲೆ ಏನು ಕೆಟ್ಟ ಪರಿಣಾಮ ಆಗುವುದಿಲ್ಲ.ಆದರೆ ಸಮುದ್ರದ ಉಬ್ಬರ ಇಳಿತ ಹೆಚ್ಚಾಗುವ ಸಾಧ್ಯತೆ ಇದೆ.ಚಂದ್ರನ ಬೆಳಕು ಭೂಮಿಯ ಮೇಲೆ ಜಾಸ್ತಿ ಇರುತ್ತದೆ.[೮]
ಉಲ್ಲೇಕೊ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-11-15. Retrieved 2017-07-11.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Mathematical Astronomy Morsels |last=Meeus |first=Jean |authorlink=Jean Meeus |year=1997 |publisher=Willmann-Bell |location=Richmond, Virginia |isbn=0-943396-51-4 |page=15
- ↑ cite web |last=Plait |first=Phil |title=No, the 'supermoon' didn't cause the Japanese earthquake |url=http://blogs.discovermagazine.com/badastronomy/2011/03/11/no-the-supermoon-didnt-cause-the-japanese-earthquake/ Archived 2019-10-22 ವೇಬ್ಯಾಕ್ ಮೆಷಿನ್ ನಲ್ಲಿ. |work=Discover Magazine |accessdate=14 March 2011 |date=March 11, 2011
- ↑ cite web |last=Hawley |first=John |title=Appearance of the Moon Size |url=http://www.stab-iitb.org/newton-mirror/askasci/phy99/phy99371.htm Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. |work=Ask a Scientist |publisher=Newton |accessdate=14 March 2011 |type=No publication date
- ↑ cite web |url=http://science.nasa.gov/science-news/science-at-nasa/2011/16mar_supermoon/ |title=Super Full Moon |last=Phillips |first=Tony, Dr. |date=March 16, 2011 |work=Science@NASA Headline News |publisher=NASA |accessdate=22 June 2013 |archiveurl=https://web.archive.org/web/20120507035348/http://science.nasa.gov/science-news/science-at-nasa/2011/16mar_supermoon/ |archivedate=May 7, 2012
- ↑ quote|...a new or full moon which occurs with the Moon at or near (within 90% of) its closest approach to Earth in a given orbit (perigee). In short, Earth, Moon and Sun are all in a line, with Moon in its nearest approach to Earth
- ↑ cite web |last=Nolle |first=Richard |title=Supermoon |url=http://www.astropro.com/features/articles/supermoon/ |work=Astropro |accessdate=14 March 2011 |type=No publication date; modified March 10, 2011
- ↑ http://kannada.oneindia.com/astrology/super-moon-aries-libra-be-careful-109227.html