ವಿಷಯಕ್ಕೆ ಹೋಗು

ಸುಸನ್ ಕೀಟಿಂಗ್ ಗ್ಲಾಸ್ಪೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಸಾನ್ ಕೀಟಿಂಗ್ ಗ್ಲಾಸ್ಪೆಲ್
ಪ್ರಕಾರ/ಶೈಲಿನಾಟಕಕಾರ್ತಿ, ಕಥನ ಸಾಹಿತ್ಯ ಲೇಖಕಿ
ವಿಷಯಮಹಿಳಾವಾದಿ

ಸುಸನ್ ಕೀಟಿಂಗ್ ಗ್ಲಾಸ್ಪೆಲ್(ಜುಲೈ೧,೧೮೭೬-ಜುಲೈ೨೭,೧೯೪೮)ಅವರು ಪುಲಿಟ್ಜರ್ ಪ್ರಶಸ್ತಿ[೧] ವಿಜೇತ ಅಮೆರಿಕದ ನಾಟಕಕಾರ್ತಿ[೨]. ಅವರ ಪತಿ ಜಾರ್ಜ್ ಕ್ರಮ್ ಕೂಕ್ ಅವರೊಂದಿಗೆ "ಪ್ರಾವಿನ್ಸ್‌ಟೌನ್ ಪ್ಳೇಯರ್‌ಸ್" ಎಂಬ ಮೊದಲ ಆಧುನಿಕ ಅಮೆರಿಕನ್ ತಿಯೇಟರ್ ಕಂಪನಿಯನ್ನು ಪ್ರಾರಂಭಿಸಿದರು. ಆರ್ಥಿಕ ಕುಸಿತದ ಸಂರ್ಭದಲ್ಲಿ ಸುಸಾನ್ ರವರು ಸಮಾಜ ಸೀವೆ ಮಾಡಿದರು. ಸುಸಾನ್‍ರವರು ಒಂಬತ್ತು ಕಾದಂಬರಿ,ಹದಿನೈದು ನಾಟಕಗಳು, ಐವತ್ತು ಸಣ್ಣ ಕಥೆಗಳು ಒಂದು ಜೀವನಚರಿತ್ರೆಯನ್ನು ಬರೆದು ಹೆಸೆರು ವಾಸಿಯಾಗಿದ್ದಾರೆ. ಇವರ ಕೃತಿಗಳು ಸಮಕಾಲೀನ ಸಮಸ್ಯೆಯನ್ನು ಕುರಿತು ಹೇಳುತ್ತವೆ. ಇವರು ಅವರ ಕಾಲದ ಅತ್ಯುತ್ತಮ ಮಾರಾಟದ ಲೇಖಕಿಯಂಬ ಬಿರುದಿಗೆ ಪಾತ್ರರಾಗಿದ್ದಾರೆ. ಇವರು ಮೊದಲ ಮಹಿಳಾವಾದಿ ಲೇಖಕಿ ಎಂದು ಪ್ರಸಿದ್ಧರಾಗಿದ್ದಾರೆ. ಪದವಿಯ ನಂತರ , ಗ್ಲಾಸ್ಪೆಲ್ ಅವರಿಗೆ ರಾಜ್ಯ ಶಾಸಕಾಂಗ ಮತ್ತು ಕೊಲೆ ಪ್ರಕರಣಗಳನ್ನು ಸರಿದೂಗಿಸುವ ಕೆಲಸ ವಹಿಸಲಾಗಿತ್ತು ಅದರಲ್ಲೂ ವರದಿಗಾರ ಪ್ರಕಾರ ಮಹಿಳೆಗೆ ಅಪರೂಪದ ಸ್ಥಾನ ಅದು. ಅವರ ಟ್ರೈಫಲ್ಸ ಎಂಬ ನಾಟಕ ಬಹಳ ಪ್ರಸಿದ್ಧ.


ಆರಂಭಿಕ ಜೀವನ[ಬದಲಾಯಿಸಿ]

ಸುಸಾನ್ ರವರ ತಂದೆ ಎಲ್ಮರ್ ಗ್ಲಾಸ್ಪೆಲ್ ಒಬ್ಬ ರೈತ. ತಾಯಿ ಆಲಿಸ್ ಕೀಟಿಂಗ್ ಸರ್ಕಾರಿ ಶಾಲೆಯ ಶಿಕ್ಷಕಿ. ಅವರು ಹಳ್ಳಿಯ ವಾತಾವರಣದಲ್ಲಿ ಮಿಸ್ಸಿಸ್ಸಿಪ್ಪಿ ನದಿಯ ದಡದಲ್ಲಿ ಬೆಳೆದರು. ಅವರು ಅವರ ಅಜ್ಜಿಯ ಕೆಥೆಗಳು ಹಾಗು ಗ್ಲಾಸ್ಪೆಲ್ ರವರು ಸೌಕ್ ನಾಯಕನ ಆತ್ಮಚರಿತ್ರೆಇಂದ ಪ್ರಭಾವಿತರಾದರು. ಸುಸಾನ್‌ರವರು ಶಾಲೆಯಲ್ಲಿ ಪ್ರಥಿಭಾನ್ವಿತ ವಿರ್ದ್ಯಾಥಿನಿಯಾಗಿದ್ದರು. ಅವರು ಡೆವನ್ಪೋರ್ಟ್ ಶಾಲೆಯಲ್ಲಿ ವಿದ್ಯಭ್ಯಾಸ ಮುಗಿಸಿ. ಹದಿನೆಂಟನೆ ವಯಸ್ಸಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿ ಸಂಬಳ ಪಡೆಯುತಿದ್ಧರು. ಇಪ್ಪತ್ತನೆ ವಯಸ್ಸಿನಲ್ಲಿ ವಾರ ಪತ್ರಿಕೆಯಲ್ಲಿ ಬರೆಯಲು ಪ್ರರಂಭಿಸಿದರು.

ನಂತರ ಜೀವನ[ಬದಲಾಯಿಸಿ]

ಇಪ್ಪತ್ತೊಂದನೆ ವಯಸ್ಸಿನಲ್ಲಿ ಡ್ರೇಕ್ ವಿಶ್ವವಿದ್ಯಾಲಯ ಸೇರಿದರು. ಪುರುಷ ಪ್ರಧಾನ ಚರ್ಚೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಡ್ರೇಕ್ ವಿಶ್ವವಿದ್ಯಾಲಯವನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದರು. ಪದವಿಯ ಸಮಯದಲ್ಲಿ ಒಂದು ಡೆಮೋಯಿನ್‌ಯಂಬ ದೈನಂದಿನ ಲೇಖನ ಸುಸಾನ್ ಗ್ಲಾಸ್ಪೆಲ್‍ರವರನ್ನು ವಿಶ್ವವಿದ್ಯಾಲಯದ ಸಾಮಾಜಿಕ ಮತ್ತು ಬೌದ್ಧಿಕ ನಾಯಕಿ ಎಂದು ಕರೆಯುವಂತೆ ಮಾಡಿತು. ಆನಂತರ ಸುಸಾನ್‌ರವರು ಪತ್ರಿಕೆಗಳಲ್ಲಿ ಕೆಲಸ ಪ್ರಾರಂಭಿಸಿದರು. ಅವರು ಒಬ್ಬ ಮಹಿಳೆ ಅವಳ ಗಂಡನ್ನು ಕೋಂದ ಅಪರಾಧದಲ್ಲಿ ಸಿಲುಕಿದ ಪ್ರಕರ್ಣವನ್ನು ಕುರಿತು ವರದ್ಧಿ ಮಾಡಿದ ನಂತರ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟು ಡೆವನ್ಪೋರ್ಟ್ಗಗೆ ಹೋಗಿ ಕಥನ ಸಾಹಿತ್ಯ ಬರೆಯಲು ಆರಂಭಿಸಿದರು. ಅವರ ಬರವಣಿಗೆಗಳು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾದವು. ಸುಸಾನ್‌ ಅವರಿಗೆ ಮ್ಯಾಟ್ಸನ್ ಜೊತೆ ಸಂಬಂಧವಿತ್ತು ಎಂಟು ವರ್ಷದ ನಂತರ ಅವರ ನಡುವಿನ ಸಂಬಂಧ ಮುರಿದು ಬಿತ್ತು. ಅ ನಂತರ ಅವರು ಮಾನಸಿಕವಾಗಿ ಕ್ಷೀಣಿತಗೊಂಡು ಅವರ ಅರೋಗ್ಯ ಹಾಳಾಯಿತು.

ಕೃತಿಗಳು[ಬದಲಾಯಿಸಿ]

ಅವರಿಗೆ ಪತ್ರಿಕೆಯೊಂದರಿಂದ ನಗದು ಬಹುಮಾನ ದೊರೆಯಿತು ಆ ಹಣದಿಂದ ಅವರು ಚಿಕಾಗೊಗೆ ಹೋಗಿ, ೧೯೦೯ರಲ್ಲಿ "ದೀ ಗೋರಿ ಆಫ್ ಕೊನಕ್ಯರ್ದ" ಎಂಬ ಮೊದಲ ಕಾದಂಬರಿ ಪ್ರಕತಿಸಿದರು.ಅವರ ಎರಡನೆ ಕಾದಂಬರಿ "ದಿ ವಿಶಿನಿಂಗ್" ೧೯೧೧ರಲ್ಲಿ ಪ್ರಕಟವಾಗಿತು. ಮೂರನೆಯ ಕಾದಂಬರಿ "ಫೆದೆಲಿಟಿ" ೧೯೧೫ರಲ್ಲಿ ಪ್ರಕಟವಾಗಿತು. ಇದನ್ನು ನ್ಯೂಯಾರ್ಕ್ ಟೈಮ್ಸ್ ಅತ್ಯುತ್ತಮ ಕಾದಂಬರಿ ಎಂದು ಗೋಶಿಸಿತು. ಗ್ಲಾಸ್ಪೆಲ್‌ ಅವರನ್ನು ಅಮೆರಿಕದ ಅತ್ಯಂತ ಮಹತ್ವದ ಹೊಸ ನಾಟಕಗಾರ್ತಿ ಎಂದು ಪರಿಗಣಿಸಲಾಗಿತ್ತು. ಸುಸಾನ್ ಕೀಟಿಂಗ್ ಗ್ಲಾಸ್ಪೆಲ್‌ರವರು ಹೆತಿರೊಸಿಟಿ ಎಂಬ ಸಂಸ್ಥೆಯ ಸದಸ್ಯರಾದರು. ಜಾಕ್ವೆಸ್ ಕೊಪಿಯೊ ಅವರನ್ನು ಅತ್ಯುತ್ತಮ ನಟಿ ಎಂದು ಮೆಚ್ಚಿದರು. ಅವರು ಪ್ರಾರಂಭಿಸಿದರು, ಪ್ರಾವಿನ್ಸನನ್ ಟ್ವನ್ ತಿಯೇಟರ್ ಕಂಪನಿ ಬಹಳ ಪ್ರಸಿಧಾವಾಗಿತು ಡೆವನ್ಪೋರ್ಟ್ ಗ್ಲಾಸ್ಪೆಲ್ ರೂಪಿಸಲು ಇತರ ಸ್ಥಳೀಯ ಬರಹಗಾರರು ಸಂಬಂಧಿಸಿದ ಡೆವನ್ಪೋರ್ಟ್ ಗುಂಪು ಅವರಿಗೆ ಸಹಯ ಮಾಡಿತು ಅದರಲ್ಲಿ ಎಡ್ನಾ ಸ್ಟ ವಿನ್ಸೆಂಟ್ ಮಿಲ್ಲೆ, ಥಿಯೋಡೋರ್ ದ್ರೇಸಿಯರ್,ಫ್ಲಾಯ್ಡ್ ಡೆಲ್ ಇದ್ದರು. ಕೂಕ್ ಮತ್ತು ಗ್ಲಸ್ಪೆಲ್ ಕಂಪನಿಯನ್ನು ಬಿಟ್ಟು ಹೊದರು. ೧೯೨೨ರಲ್ಲಿ ಕೂಕ್ ಮತ್ತು ಗ್ಲಸ್ಪೆಲ್ ದೆಲ್ಫಿ ಗ್ರೀಕ್‌ನಲ್ಲಿದರು.

ಕೊನೆಯದಿನಗಳು[ಬದಲಾಯಿಸಿ]

೧೯೨೪ಅಲ್ಲಿ ಕೊಕ್ ಮೃತಪಟ್ಟರು.ಸುಸಾನ್ ಕೊಕ್ ಸತ್ತ ನಂತರ ಕೇಪ್ ಕೋಡ್ಗೆ ಮರಳಿದರು. ಅಲ್ಲಿ ಜೀವನಚರಿತ್ರೆ ಮತ್ತು ಗಂಡನ ಮೇಲಿನ ಗೌರವದಿಂದ "ದಿ ರೊಡ್ ಟು ದಿ ಟೆಂಪ್ಲ್" ಎಂಬ ಕೃತಿಯನ್ನು ಬರೆದರು. ನಂತರ ಅವರು ೧೯೩೬ರಲ್ಲಿ ಚಿಕಾಗೊಗೆ ಮರಳಿ ಅಲ್ಲಿ "ಮಿಡ್ವೆಸ್ಟ್ ಬ್ಯೂರೋ ಫಡರಲ್ ಥಿಯೇಟರ್" ಯೋಜನೆಯ ನಿರ್ದೇಶಕರಾಗಿ ಸೀವೆ ಸಲ್ಲಿಸಿದರು. ೧೯೩೯ರಲ್ಲಿ ಮೊರ್ನಿಂಗ್ ಇಸ್ ನೆಯರ್ ಹಸ್, ೧೯೪೨ರಲ್ಲಿ ನಾರ್ಮ ಅಶೆ, ೧೯೪೫ರಲ್ಲಿ ಜುದ್ದ್ ರಾಂಕಿನ ಡಾಟರ್, ಕೃತಿಗಳನ್ನು ಬರೆದರು ಸುಸಾನ್ ಗ್ಲಾಸ್ಪೆಲ್ ರವರು ೧೯೪೮ ಜುಲೈ ಪ್ರಾವಿನ್ಸನನ್ ಟ್ವನ್‌ನಲ್ಲಿ ವೈರಲ್ ನ್ಯುಮೋನಿಯದಿಂದ ನಿಧನರಾದರು.

ಬಿರಿದು[ಬದಲಾಯಿಸಿ]

ಗ್ಲಾಸ್ಪೆಲ್ ಅವರಿಗೆ "ಅಮೆರಿಕನ್ ನಾಟಕದ ಪ್ರಥಮ ಮಹಿಳೆ" ,"ಅಮೆರಿಕನ್ ನಾಟಕ ಮಾತೆ" ಎಂಬ ಬಿರಿದುಗಳು ದೊರೆತ್ತಿದೆ. ೨೦೦೩ರಲ್ಲಿ ಅಂತರರಾಷ್ಟ್ರೀಯ ಸುಸಾನ್ ಗ್ಲಾಸ್ಪೆಲ್ ಸೊಸೈಟಿ ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮ ನೆಡೆಸಲಾಗುತ್ತದೆ. ಪ್ರಮುಖ ಅಮೆರಿಕನ್ ನಾಟಕಗಾರ್ತಿ ಮತ್ತು ಕಥನ ಸಾಹಿತ್ಯ ಬರಹಗಾರ್ತಿ ಎಂದು ಸುಸಾನ್ ಗ್ಲಾಸ್ಪೆಲ್‌ರವರನ್ನು ಗುರುತಿಸಲಾಗಿದೆ. ಅವರ ನಾಟಕಗಳು ಆಗಾಗ ಕಾಲೇಜು ಮತ್ತು ವಿಶ್ವವಿದ್ಯಾಲಯದ ರಂಗಭೂಮಿಯ ವಿಭಾಗಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ನಾಟಕಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದ ಎರಡನೆ ಮಹಿಳೆ
  2. ಗ್ಲಾಸ್ಪೆಲ್ ಅವರ ಆರೆಂಜ್ ಟ್ರೀ ನಾಟಕ

http://onlinelibrary.wiley.com/doi/10.1111/j.1542-734X.1984.0703_65.x/abstract https://www.theguardian.com/stage/2009/oct/11/alisons-house-susan-glaspell-review https://www.nytimes.com/2005/06/30/theater/newsandfeatures/rediscovering-a-playwright-lost-to-time.html