ವಿಷಯಕ್ಕೆ ಹೋಗು

ಸುವರ್ಣ ಬೆನ್ನಿನ ಮರಕುಟಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುವರ್ಣ ಬೆನ್ನಿನ ಮರಕುಟಿಕ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಡಿ.ಬೆಂಗಾಲೆನ್ಸ್
Binomial name
ಡಿನೋಪಿಯಮ್ ಬೆಂಗಾಲೆನ್ಸ್
(Linnaeus, 1758)
Subspecies
 • ಡಿಲೂಟಮ್ (Edward Blyth, 1852)
  (ಪಾಕಿಸ್ಥಾನ ಮತ್ತು ವಾಯುವ್ಯ ಭಾರತ)
 • ಬೆಂಗಾಲೆನ್ಸ್ (Linnaeus, 1758)
  (ಉತ್ತರ ಭಾರತದಿಂದ ಆಸ್ಸಾಂ ಮತ್ತು ಮ್ಯನ್ಮಾರ್)
 • ಪಂಕ್ಟಿಕೊಲ್ಲೆ (Malherbe, 1845)
  (ಭಾರತ ಪರ್ಯಾಯ ದ್ವೀಪ,ಉತ್ತರ ಶ್ರೀಲಂಕಾ)
 • ಸೋರ್ಡೆಸ್ (A. A. H. Lichtenstein, 1793)
  (ದಕ್ಷಿಣ ಶ್ರೀಲಂಕಾ)
Synonyms

Brachypternus benghalensis
Brachypternus aurantius

ಬ್ಲ್ಯಾಕ್-ರಂಪ್ಡ್ ಫ್ಲೇಮ್‌ಬ್ಯಾಕ್‌ ಅಥವಾ ಲೆಸ್ಸರ್ ಗೋಲ್ಡನ್ ಬ್ಯಾಕ್ಡ್ ವುಡ್‌ಪೆಕ್ಕರ್ (ಸುವರ್ಣ ಬೆನ್ನಿನ ಮರಕುಟಿಕ) (Dinopium benghalense ) ವು ಒಂದು ರೀತಿಯ ಮರಕುಟಿಕವಾಗಿದ್ದು,ಇವು ದಕ್ಷಿಣ ಏಷ್ಯಾದ ತುಂಬಾ ವಿಸ್ತಾರವಾಗಿ ಹರಡಿಕೊಂಡಿದ್ದನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲ ಮರಕುಟಿಕಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದನ್ನು ಲೊಡಗುಟ್ಟುವ-ಕೆನೆಯುವ ಮತ್ತು ಅಲೆಯಾಗಿ ಹಾರುವ ಹಕ್ಕಿ ಎಂದು ಬಣ್ಣಿಸಲಾಗುತ್ತದೆ. ಸುವರ್ಣ ಬೆನ್ನಿನ ಮರಕುಟುಕ ಮಾತ್ರ ಕಪ್ಪು ಗಂಟಲು ಮತ್ತು ಕಪ್ಪು ಪುಷ್ಠವನ್ನು ಹೊಂದಿದ ಮರಕುಟಿಕವಾಗಿದೆ.[೨]

ವಿವರಣೆ[ಬದಲಾಯಿಸಿ]

ಪ್ರಥಮವಾಗಿ ಹೆಸರಿಸಿದ ಜಾತಿ, ಕಲ್ಕತ್ತಾ, ಭಾರತ.

ಈ ಬ್ಲ್ಯಾಕ್-ರಂಪ್ಡ್ ಫ್ಲೇಮ್‌ಬ್ಯಾಕ್‌ ಎಂಬ ಮರಕುಟಿಗವು ದೊಡ್ಡ ಪಕ್ಷಿ ಜಾತಿಯಾಗಿದ್ದು, ಇವು ೨೬-೨೯ ಸೆಂ.ಮೀ. ಉದ್ದವನ್ನು ಹೊಂದಿರುತ್ತವೆ. ಇದು ವಿಶಿಷ್ಟ ಮರಕುಟಿಕದ ಆಕಾರವನ್ನು ಹೋಲುತ್ತದೆ ಮತ್ತು ಇದರ ಬುಡದ ಗರಿಯು ಬಂಗಾರದ ಹಳದಿ ರೆಕ್ಕೆಯನ್ನು ಹೊಂದಿರುವುದು ಮತ್ತೊಂದು ವಿಶೇಷತೆಯಾಗಿದೆ. ಇದರ ಪುಷ್ಠ ಭಾಗವು ಕಪ್ಪು ಇದ್ದು, ಗ್ರೇಟರ್ ಫ್ಲೇಮ್‌ಬ್ಯಾಕ್‌ನ ಹಾಗೆ ಕೆಂಪಾಗಿಲ್ಲ.ಇದರ ಕೆಳಗಿನ ಭಾಗಗಳು ಬಿಳಿ ಜತೆಗೆ ಕಪ್ಪು ಬಣ್ಣದ ತಲೆಕೆಳಗಾದ V ಆಕಾರದ ಗುರುತನ್ನು ಹೊಂದಿದೆ. ಕಪ್ಪು ಗಂಟಲು ಬಿಳಿ ಬಣ್ಣದ ಗುರುತನ್ನು ಹೊಂದಿದ್ದಲ್ಲಿ ಅವು ಭಾರತದ ಪ್ರದೇಶಗಳಲ್ಲಿರುವ ಉಳಿದ ಹಳದಿ ಬೆನ್ನಿನ ಮರಕುಟುಕಗಳಿಗಿಂತ ಭಿನ್ನವಾಗಿರುತ್ತವೆ. ತಲೆಯು ಬಿಳಿ ಬಣ್ಣದ್ದಾಗಿದ್ದು,ಕುತ್ತಿಗೆಯ ಹಿಂಭಾಗ ಹಾಗೂ ಗಂಟಲು ಕಪ್ಪಾಗಿರುತ್ತದೆ ಮತ್ತು ನಸುಬೂದುಬಣ್ಣದ ಕಣ್ಣನ್ನು ಹೊಂದಿದೆ. ಗ್ರೇಟರ್ ಫ್ಲೇಮ್‌ಬ್ಯಾಕ್‌ (Chrysocolaptes lucidus ) ವು ಭಿನ್ನವಾಗಿದ್ದು, ಇದು ಕಪ್ಪು ಮೀಸೆಗಳ ಪಟ್ಟಿಯನ್ನು ಹೊಂದಿಲ್ಲ.[೨][೩] ದೊಡ್ಡ ಗಂಡು ಬ್ಲ್ಯಾಕ್-ರಂಪ್ಡ್ ಫ್ಲೇಮ್‌ಬ್ಯಾಕ್‌ ವು ಕೆಂಪು ತಲೆಯನ್ನು ಮತ್ತು ಜುಟ್ಟನ್ನು ಹೊಂದಿರುತ್ತದೆ. ಹೆಣ್ಣು ಮರಕುಟಿಕವು ಕಪ್ಪು ತಲೆಯನ್ನು ಬಿಳಿ ಬಣ್ಣದ ಜತೆ ಹೊಂದಿರುತ್ತದೆ.ಇವುಗಳ ಜುಟ್ಟಿನಲ್ಲಿ ಕೆಂಪು ಬಣ್ಣವು ವಿರಳವಾಗಿ ಕಾಣಸಿಗುತ್ತವೆ. ಸಣ್ಣ ಹಕ್ಕಿಗಳು ಹೆಣ್ಣು ಪಕ್ಷಿಗಳಂತೆ ಕಾಣುತ್ತವೆ. ಆದರೆ ಕಳೆಗುಂದಿರುತ್ತವೆ.[೨] ಉಳಿದ ಮರಕುಟಿಕಗಳಿಗೆ ಹೋಲಿಸಿದಲ್ಲಿ, ಈ ಜಾತಿಯವು ನೇರ ತುದಿಯ ಕೊಕ್ಕನ್ನು ಹೊಂದಿವೆ. ಇದರ ಗಟ್ಟಿ ಬಾಲವು ಮರಗಳ ಕಾಂಡವನ್ನು ಆಧಾರಕ್ಕಾಗಿ ಬಳಸಿಕೊಳ್ಳಲು ಸಹಾಯಕವಾಗಿದೆ ಮತ್ತು ಜೋಡಿ ಬೆರಳುಗಳಿರುವ ಪಾದಗಳಾದ ಎರಡು ಬೆರಳು ಹಿಂದಕ್ಕೆ ಮತ್ತು ಎರಡು ಮುಂದಕ್ಕೆ ಇರುವ ಹಾಗೆ ರಚನೆಯಾಗಿದೆ. ಉದ್ದನೆಯ ನಾಲಿಗೆಯನ್ನು ಚೂಪವಾಗಿ ಚಾಚಿ ಕೀಟಗಳನ್ನು ಹಿಡಿಯಲು ಸಹಾಯಕವಾಗುವಂತೆ ಇದೆ.[೪] ಬಿಳಿಯ ಬಣ್ಣದ ಶ್ರೇಣಿಯ ಹಕ್ಕಿಗಳು ಪಟ್ಟಿಯಲ್ಲಿ ಸೇರಿವೆ.[೫] ಎರಡು ಮಾದರಿಯ ಗಂಡು ಹಕ್ಕಿಗಳನ್ನು ಉತ್ತರೀಯ ಮತ್ತು ಪಶ್ಚಿಮ ಭಾಗಗಳ ಗಾಟ್ ಗಳಲ್ಲಿ ಗುರುತಿಸಲಾಗಿದ್ದು, ಕೆಂಪು-ಮೂತಿಯ ಗರಿಗಳನ್ನು ಗಲ್ಲದ ಭಾಗದಲ್ಲಿ ಹೊಂದಿದ್ದು, ಗಲ್ಲದ ಪಟ್ಟಿಯ ಹೆಚ್ಚಿನ ಭಾಗದಲ್ಲಿ ಇವು ರಚನೆಯಾಗಿದೆ. ಲಕ್ನೌ‌ನಲ್ಲಿನ ಹೆಣ್ಣು ಜಾತಿಯ ಪಕ್ಷಿಯ ಬೆಳವಣಿಗೆ ಅಸಹಜವಾಗಿದ್ದು, ಹೂಪೂ ಹಕ್ಕಿ (ತಲೆಯ ಮೇಲೆ ಬೀಸಣಿಕೆಯಾಕಾರದ ಶಿಖೆಯುಳ್ಳ) ಯು ಕೆಳವಕ್ರರೇಖೆಯುಳ್ಳ ಕೊಕ್ಕನ್ನು ಹೊಂದಿದೆ.[೬]

ಉಪಜಾತಿಗಳು[ಬದಲಾಯಿಸಿ]

ಭಾರತ ಮತ್ತು ಪಾಕಿಸ್ತಾನಗಳ, ಡಿಲುಟಮ್ (dilutum), ವಾಯವ್ಯ ಭಾಗಗಳ ಶುಷ್ಕ ಪ್ರದೇಶಗಳಲ್ಲಿ ಈ ಸಂತತಿಗಳಿದ್ದು,ಇದ್ದೂ ಇಲ್ಲದಂತೆ ಕಾಣುವ ಹಳದಿ ಬಣ್ಣವನ್ನು ಹೊಂದಿದ್ದು, ಗಂಗೆಯ ಬಯಲಿನಲ್ಲಿರುವ ಸಂತತಿಗಿಂತ ಹೆಚ್ಚು ಉದ್ದನೆಯ ಜುಟ್ಟು ಮತ್ತು ಬಿಳಿಯ ಕೆಳಗಿನ ಭಾಗಗಳನ್ನು ಹೊಂದಿವೆ. ಮೇಲಿನ ಭಾಗಗಳು ಕಡಿಮೆ ಸ್ಥಳವನ್ನು ಹೊಂದಿವೆ. ಇವು ಹಳೆಯ ಗಂಟು ಗಂಟಾದ ಅಥವಾ ಒರಟಾದ ಟಾಮರಿಸ್ಕ್ (ಸಾಮಾನ್ಯವಾಗಿ ಗರಿಗಳಂತ ಕೊಂಬೆಗಳಿರುವ ಮತ್ತು ಚಿಕ್ಕ ಚಿಕ್ಕ ಹೂವುಗಳನ್ನು ಬಿಡುವ), ಅಕೇಶಿಯಾ ಮತ್ತು ದಲ್ಬೆರ್ಜಿಯಾ ಗಿಡಗಳನ್ನು ತಮ್ಮ ಸಂತಾನೋತ್ಪತ್ತಿಗೆ ಆಶ್ರಯಿಸಿಕೊಳ್ಳುತ್ತವೆ. ಭಾರತಾದಾದ್ಯಂತ ನಾಮಕರಣಗೊಂಡ ಪಕ್ಷಿಗಳ ಸಂಖ್ಯೆಯು ಸಣ್ಣ ಪ್ರಮಾಣದಲ್ಲಿ ಹೆಚ್ಚುತ್ತಾ ೧೦೦೦m ಆಗಿದೆ. ಉತ್ತರದ ಪರ್ಯಾಯ ದ್ವೀಪ ಮಾದರಿಯ ಪಂಕ್ಟೀಕೋಲೆ ಯು ಕಪ್ಪು ಗಂಟಲ ಜತೆ ಸಣ್ಣ ತ್ರೀಕೋನಾಕಾರದ ಬಿಳಿ ಭಾಗವನ್ನು ಹೊಂದಿದೆ. ಮತ್ತು ಮೇಲಿನ ಭಾಗಗಳು ಕಾಂತೀಯ ಬಂಗಾರದ ಹಳದಿ ಬಣ್ಣವನ್ನು ಹೊಂದಿವೆ. ಪಶ್ಚಿಮಘಟ್ಟಗಳಲ್ಲಿ ಕಾಣಸಿಗುವ ಉಪಜಾತಿ ಪಕ್ಷಿಗಳು ಕೆಲ ವೇಳೆ ತೆಹ್ಮಿನೆ ಆಗಿ ಬೇರೆಯಾಗುತ್ತದೆ ( ಸಲೀಮ್ ಅಲಿ ಹೆಂಡತಿಯ ಹೆಸರನ್ನು ಇಡಲಾಗಿ) ಮತ್ತು ಹೆಚ್ಚು ಹಳದಿ ಕಂದು ಬಣ್ಣದ, ಕಪ್ಪು ಗಂಟಲು ಪ್ರದೇಶದ ಮತ್ತು ರೆಕ್ಕೆಯ ಬುಡದ ಗರಿಯು ಒಂದೇ ರೀತಿಯಾಗಿ ಇರುವುದಿಲ್ಲ. ದಕ್ಷಿಣ ಶ್ರೀಲಂಕಾದಲ್ಲಿ ಇವುಗಳ ಉಪಜಾತಿಗಳಾದ D. b. psarodes ವಿನ ಹಿಂದಿನ ಭಾಗವು ಕಡುಕೆಂಪಾಗಿದ್ದು, ಎಲ್ಲ ದಪ್ಪ ಗುರುತುಗಳು ಕಪ್ಪು ಬಣ್ಣಗಳಿಂದಿದ್ದು, ವಿಸ್ತಾರವಾಗಿದೆ. ಉತ್ತರ ಶ್ರೀಲಂಕಾದ ಜಾಫ್ನೆನ್ಸೆ ಯು ಮಿಶ್ರತಳಿಯಾಗಿದ್ದು, ಇದು ಸಣ್ಣ ಕೊಕ್ಕನ್ನು ಹೊಂದಿದೆ.[೨] ಶ್ರೀಲಂಕಾದ ತಳಿಯಾದ ಸಾರ್ಡೆಸ್ (psarodes ) ಕೆಲವೊಮ್ಮೆ ಒಂದೇ ರೀತಿಯಲ್ಲಿರದ ಜಾತಿಗಳನ್ನು ಹೊಂದಿವೆ. ಆದಾಗ್ಯೂ ಇವುಗಳನ್ನು ಜಾಫ್ನೆನ್ಸೆ ಜತೆ ಕ್ರಮೇಣವಾಗಿ ರೂಪಾಂತರ ಹೊಂದುತ್ತವೆ. ಇವುಗಳು ಪುಟ್ಟಾಲಮ್, ಕೆಕಿರವಾ ಮತ್ತು ಟ್ರಿಂಕೋಮಲೀ ಗಳಲ್ಲಿ ಕಾಣಸಿಗುತ್ತವೆ.[೭]

ಹರಡುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಈ ಫ್ಲೇಮ್‌ಬ್ಯಾಕ್‌ ಪಕ್ಷಿಗಳು ಹೆಚ್ಚಾಗಿ ವಿಮಾನಗಳು ಹಾರಾಡುವ ಪ್ರದೇಶದ ೧೨೦೦ ಮೀಟರ್ ಎತ್ತರ ಭಾಗಗಳಲ್ಲಿ ಹಾರಾಡುತ್ತವೆ. ಪಾಕಿಸ್ತಾನ, ಭಾರತದ ಉತ್ತರ ಭಾಗವಾದ ಹಿಮಾಲಯ ಮತ್ತು ಪೂರ್ವ ಜತೆಗೆ ಪಶ್ಚಿಮದ ಅಸ್ಸಾಂ ಕಂದರಗಳಲ್ಲಿ ಮತ್ತು ಮೇಘಾಲಯ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿ ಕಾಣಸಿಗುತ್ತವೆ. ಇವುಗಳು ತೆರೆದ ಕಾಡುಗಳು ಮತ್ತು ಕೃಷಿ ಭೂಮಿಗಳ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವು ಗ್ರಾಮೀಣ ಭಾಗಗಳ ಸಾಲುಮರದ ಬೀದಿಗಳಲ್ಲಿ ಕಂಡುಬರುತ್ತವೆ.[೪] ಇವುಗಳು ಕಚ್ ಮತ್ತು ರಾಜಸ್ಥಾನಿನ ಮರಳುಗಾಡು ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿವೆ.[೮]

ನಡಾವಳಿ ಮತ್ತು ಪರಿಸರ ವಿಜ್ಞಾನ[ಬದಲಾಯಿಸಿ]

ಒಂದು ಹೆಣ್ಣು ಹಕ್ಕಿ

ಈ ಜಾತಿಗಳು ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಸಣ್ಣ ತಂಡಗಳಾಗಿ ಮತ್ತು ಕೆಲಸಮಯ ಮಿಶ್ರಜಾತಿಗಳು ಸೇರಿ ಹಕ್ಕಿಗಳ ಹಿಂಡಾಗಿ ಮೇವಿಗಾಗಿ (ಆಹಾರಕ್ಕಾಗಿ) ಹುಡುಕಾಡುತ್ತವೆ.[೯] ಇವು ಆಹಾರವನ್ನು ಬಯಲು ಪ್ರದೇಶದ ಮೇಲ್ಚಾವಣಿಯಲ್ಲಿ ಹುಡುಕಾಡುತ್ತವೆ. ಅವು ಕೀಟಗಳನ್ನು ತಿನ್ನುತ್ತವೆ, ಮುಖ್ಯವಾಗಿ ಮರದ ತೊಗಟೆಯಲ್ಲಿ ಚಾಚಿಕೊಂಡಿರುವ ಲಾರ್ವಾಗಳನ್ನು ತಿನ್ನುತ್ತವೆ. ದಿಬ್ಬಗಳಲ್ಲಿರುವ ಗೆದ್ದಲು ತಿನ್ನುತ್ತವೆ ಮತ್ತು ಕೆಲವೊಮ್ಮೆ ಮಕರಂದ (ಸಸ್ಯಗಳು ಸ್ರವಿಸುವ ದ್ರವ)ವನ್ನು ಹೀರುತ್ತವೆ.[೧೦][೧೧] ಅವುಗಳು ವಿವಿದೆಡೆ ಚಲಿಸುವ ಸಂದರ್ಭ ಶಕ್ತಿಯುತ ಪರಭಕ್ಷಕ ಪ್ರಾಣಿಯಿಂದ ರಕ್ಷಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಹಸ್ಯವಾಗಿ ಅಡಗಿಕೊಳ್ಳುತ್ತವೆ.[೧೨] ಇವುಗಳು ಮಾನವ ನಿರ್ಮಿತ ಕೃತಕ ಗೂಡುಗಳನ್ನು ಸಹಾ ತಮ್ಮ ವಾಸಕ್ಕೆ ಬಳಸಿಕೊಳ್ಳಲು ಅವು ಮುಂದಾಗುತ್ತವೆ[೧೩] ಮತ್ತು ಬಿದ್ದ ಹಣ್ಣುಗಳನ್ನು[೧೪] ಮತ್ತು ಆಹಾರ ಪದಾರ್ಥಗಳ ತುಂಡುಗಳನ್ನು[೧೫] ಸಹಾ ಬಳಸಿಕೊಳ್ಳುತ್ತವೆ. ಇವುಗಳ ಮೊಟ್ಟೆ ಇಡುವಿಕೆಯನ್ನು ಹವಾಮಾನಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತವೆ. ಇದು ಫೆಬ್ರವರಿ ಮತ್ತು ಜುಲೈ ನಡುವೆ ನಡೆಯುತ್ತದೆ. ಇವು ಪ್ರಸವ ಕಾಲದಲ್ಲಿ ಪದೇ ಪದೇ ಕುಟ್ಟುವುದನ್ನು ಗಮನಿಸಬಹುದಾಗಿದೆ.[೧೬] ಇವುಗಳ ಗೂಡಿನ ಕುಳಿಯು ಅವುಗಳೇ ತೆಗೆಯಲ್ಪಟ್ಟದ್ದಾಗಿರುತ್ತದೆ. ಹುಟ್ಟುವ ಹಕ್ಕಿ ಮರಿಗಳಿಗೆ ಅನುಕೂಲವಾಗುವ ಸಲುವಾಗಿ ಸಾಮಾನ್ಯವಾಗಿ ನೇರ ದ್ವಾರವಿದ್ದು ಮುಂದಕ್ಕೆ ಹೊಂಡದಂತೆ ನಿರ್ಮಾಣವಾಗಿರುತ್ತದೆ. ಕೆಲವೊಮ್ಮೆ ಈ ಹಕ್ಕಿಗಳು ಇತರ ಹಕ್ಕಿಗಳ ಗೂಡನ್ನು ಆಕ್ರಮಿಸಿಕೊಳ್ಳುತ್ತವೆ.[೧೭] ಕೆಲವೊಮ್ಮೆ ಗೂಡುಗಳನ್ನು ಮಣ್ಣಿನ ಕಟ್ಟೆಗಳಿಂದ ರೂಪಿಸಲಾಗಿರುವುದನ್ನೂ ಗಮನಿಸಲಾಗಿದೆ.[೧೮] ಈ ಹಕ್ಕಿಗಳ ಮೊಟ್ಟೆಯು ಪೊಟರೆಯ ಒಳಗೆ ಇಡಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಮೂರು ಕಾವಿನ ಮೊಟ್ಟೆಗಳು ಮತ್ತು ಮೊಟ್ಟೆಗಳು ನೀಳವಾಗಿ ಹಾಗೂ ಬಿಳಿ ಹೊಳಪಿನ ಬಣ್ಣವನ್ನು ಹೊಂದಿರುತ್ತದೆ.[೪][೧೯] ೧೧ ದಿನಗಳ ವರೆಗೆ ಕಾವುಕೊಟ್ಟ ಮೇಲೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಹೀಗೆ ಹೊರಬಂದ ಹಕ್ಕಿ ಮರಿಗಳು ಪೊಟರೆಯ ಗೂಡಿನಲ್ಲಿ 20 ದಿನಗಳ ವರೆಗೆ ವಾಸವಾಗಿರುತ್ತವೆ.[೨೦]

ಸಂಸ್ಕೃತಿಯಲ್ಲಿ[ಬದಲಾಯಿಸಿ]

ಶ್ರೀಲಂಕಾದ ಈ ಮರಕುಟಿಕಗಳು ಸಾರ್ವತ್ರಿಕ ಹೆಸರನ್ನು ಹೊಂದಿದ್ದು,ಸಿಂಹಳದಲ್ಲಿ ಇದನ್ನು ಕೇರಳಾ ಎಂದು ಕರೆಯಲಾಗುತ್ತದೆ. ದ್ವೀಪ ಪ್ರದೇಶಗಳ ಕೆಲ ಪ್ರದೇಶಗಳಲ್ಲಿ ಇವುಗಳನ್ನು ಕೊಟ್ಟೋರುವಾ ಎಂದೂ ಕರೆಯುತ್ತಾರೆ. ಆದಾಗ್ಯೂ ಹೆಚ್ಚಿನವರು ಇದನ್ನು ಬಾರ್ಬೆಟ್ ಎಂದು ಗುರುತಿಸುತ್ತಾರೆ.[೨೧] ಈ ಹಕ್ಕಿಯ ಚಿತ್ರವನ್ನು ಶ್ರೀಲಂಕಾದ ಅಂಚೆ ಇಲಾಖೆಯು 4.50 ರುಪಾಯಿ ಮೌಲ್ಯದ ಸ್ಟಾಂಪ್ ನಲ್ಲಿ ರೂಪಿಸಿದೆ.[೨೨] ಬಾಂಗ್ಲಾದೇಶದ ಟಾಕಾ ಅಂಚೆ ಸ್ಟಾಂಪ್ ಮೇಲೆಯೂ 3.75 ರುಪಾಯಿ ಮೌಲ್ಯವನ್ನು ಚಿತ್ರಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 1. BirdLife International (2009). Dinopium benghalense. In: IUCN 2008. IUCN Red List of Threatened Species. Retrieved 30 December 2009.
 2. ೨.೦ ೨.೧ ೨.೨ ೨.೩ Rasmussen, PC & JC Anderton (2005). Birds of South Asia: The Ripley Guide. Volume 2. Smithsonian Institution and Lynx Edicions. p. 289.
 3. Blanford, WT (1895). The Fauna of British India. Birds. Volume 3. Taylor and Francis, London. pp. 58–60.
 4. ೪.೦ ೪.೧ ೪.೨ Whistler, Hugh (1949). Popular handbook of Indian birds (4 ed.). Gurney and Jackson, London. pp. 285–287. ISBN 1406745766.
 5. Khacher,Lavkumar (1989). "An interesting colour phase of the Lesser Goldenbacked Woodpecker (Dinopium benghalense)". J. Bombay Nat. Hist. Soc. 86 (1): 97.
 6. Goodwin, Derek (1973). "Notes on woodpeckers (Picidae)". Bulletin of the British Museum (Natural History). 17 (1): 1–44.
 7. Ali S & Ripley SD (1983). Handbook of the Birds of India and Pakistan. Volume 4 (2 ed.). New Delhi: Oxford University Press. pp. 196–201.
 8. Himmatsinhji,MK (1979). "Unexpected occurrence of the Goldenbacked Woodpecker Dinopium benghalense (Linnaeus) in Kutch". J. Bombay Nat. Hist. Soc. 76 (3): 514–515.
 9. Kotagama, SW & E Goodale (2004). "The composition and spatial organisation of mixedspecies flocks in a Sri Lankan rainforest" (PDF). Forktail. 20: 63–70. Archived from the original (PDF) on 2011-06-10. Retrieved 2011-03-19.
 10. Chakravarthy,AK (1988). "Predation of Goldenbacked Woodpecker, Dinopium benghalense (Linn.) on Cardamom Shoot-and-Fruit Borer, Dichocrocis punctiferalis (Guene)". J. Bombay Nat. Hist. Soc. 85 (2): 427–428.
 11. Balasubramanian,P (1992). "Southern Goldenbacked Woodpecker Dinopium benghalense feeding on the nectar of Banana Tree Musa paradisiaca". J. Bombay Nat. Hist. Soc. 89 (2): 254.
 12. Nair, Manoj V (1995). "Unusual escape behaviour in Goldenbacked Woodpecker Dinopium benghalense (Linn.)". J. Bombay Nat. Hist. Soc. 92 (1): 122.
 13. Rajan,S Alagar (1992). "Unusual foraging site of Goldenbacked Woodpecker Dinopium benghalense (Linn.)". J. Bombay Nat. Hist. Soc. 89 (3): 374.
 14. Nameer, PO (1992). "An unusual get together between a squirrel and a woodpecker". Newsletter for Birdwatchers. 32 (3&4): 9–10.
 15. Mukherjee,A (1998). "Lesser Goldenbacked Woodpecker and Koel feeding on cooked rice". Newsl. for Birdwatchers. 38 (4): 70.
 16. Neelakantan,KK (1962). "Drumming by, and an instance of homo-sexual behaviour in, the Lesser Goldenbacked Woodpecker (Dinopium benghalense)". J. Bombay Nat. Hist. Soc. 59 (1): 288–290.
 17. Santharam,V (1998). "Nest usurpation in Woodpeckers". J. Bombay Nat. Hist. Soc. 95 (2): 344–345.
 18. Singh,Thakur Dalip (1996). "First record of the Lesser Golden Backed Woodpecker nesting in an earthen wall". Newsl. for Birdwatchers. 36 (6): 111.
 19. Hume, AO (1890). The nests and eggs of Indian birds. Volume 2 (2 ed.). R H Porter, London. pp. 309–311.
 20. Osmaston, BB (1922). "Woodpecker occupying nesting box". J. Bombay Nat. Hist. Soc. 28 (4): 1137–1138.
 21. Anonymous (1998). "Vernacular Names of the Birds of the Indian Subcontinent" (PDF). Buceros. 3 (1): 53–109. Archived from the original (PDF) on 2010-04-01. Retrieved 2011-03-19.
 22. http://www.birdtheme.org/country/srilanka.html

ಬಾಹ್ಯ ಕೊಂಡಿಗಳು‌[ಬದಲಾಯಿಸಿ]