ಸುಳ್ಳುಸಾಕ್ಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಳ್ಳುಸಾಕ್ಷ್ಯ (ಸುಳ್ಳು ಸಾಕ್ಷಿ, ಕೂಟಸಾಕ್ಷಿ) ಎಂದರೆ ಅಧಿಕೃತ ವ್ಯವಹರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ, ಬಾಯಿಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ, ಸುಳ್ಳು ಪ್ರಮಾಣ ಮಾಡುವ ಅಥವಾ ಸತ್ಯವನ್ನು ಹೇಳುವ ದೃಢೀಕರಣವನ್ನು ಸುಳ್ಳಾಗಿಸುವ/ಬದಲಾಯಿಸುವ ಉದ್ದೇಶಪೂರ್ವಕ ಕ್ರಿಯೆ.[೧] ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಜನರ ತಪ್ಪುಗ್ರಹಿಕೆಗೆ ವಿರುದ್ಧವಾಗಿ, ಪ್ರಮಾಣದಡಿ ಅಥವಾ ದಂಡಕ್ಕೆ ಒಳಪಟ್ಟ ಸಂದರ್ಭದಲ್ಲಿ (ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ) ತಪ್ಪು ಹೇಳಿಕೆ ನೀಡಿದಾಗ ಯಾವುದೇ ಅಪರಾಧ ಸಂಭವಿಸುವುದಿಲ್ಲ. ಬದಲಾಗಿ, ಪ್ರಮಾಣಕರ್ತನು ಮೊಕದ್ದಮೆಯ ಫಲಿತಾಂಶಕ್ಕೆ ವಿಷಯಕವಾದ, (ಮಾಡಲಾದ ಅಥವಾ ಮಾಡಲಾಗುವ) ಹೇಳಿಕೆಗಳ ಸತ್ಯತೆಯನ್ನು ತಪ್ಪಾಗಿ ದೃಢಪಡಿಸುವ ಕ್ಷಣದಲ್ಲಿ ಮಾತ್ರ ಅಪರಾಧಿಕ ದೋಷಪೂರಿತತೆಯು ಸೇರಿಕೊಳ್ಳುತ್ತದೆ. ಉದಾಹರಣೆಗೆ, ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುವುದು ಸುಳ್ಳುಸಾಕ್ಷ್ಯವಲ್ಲ. ಆದರೆ, ಕಾನೂನಿನ ಫಲಿತಾಂಶದ ಮೇಲೆ ಪ್ರಭಾವ ಬೀರಲು ವಯಸ್ಸು ಮಹತ್ವದ ವಾಸ್ತವಾಂಶವಾಗಿದ್ದರೆ ಸುಳ್ಳುಸಾಕ್ಷ್ಯವಾಗುತ್ತದೆ, ಉದಾಹರಣೆಗೆ ವೃದ್ಧಾಪ್ಯ ನಿವೃತ್ತಿ ಲಾಭಗಳಿಗೆ ಅರ್ಹತೆ ಅಥವಾ ಒಬ್ಬ ವ್ಯಕ್ತಿಯು ಕಾನೂನು ಸಾಮರ್ಥ್ಯವನ್ನು ಹೊಂದುವ ವಯಸ್ಸಿನವನೇ ಅಥವಾ ಅಲ್ಲವೇ.

ಉಲ್ಲೇಖಗಳು[ಬದಲಾಯಿಸಿ]

  1. "Perjury - What is it?". Law Advice: White Collar Crimes. FreeAdvice. December 2008. Retrieved 3 February 2014.