ವಿಷಯಕ್ಕೆ ಹೋಗು

ಸುಲಭ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಲಭ ಕಾಶೀನಾಥ್ ಕುಲಕರ್ಣಿ
ಜನನ (1949-06-01) ೧ ಜೂನ್ ೧೯೪೯ (ವಯಸ್ಸು ೭೫)
ಪುಣೆ, ಮಹಾರಾಷ್ಟ್ರ
ವಾಸಸ್ಥಳಪುಣೆ
ಪೌರತ್ವಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರನ್ಯಾನೋ ತಂತ್ರಜ್ಞಾನ
ವಸ್ತು ವಿಜ್ಞಾನ
ಮೇಲ್ಮೈ ವಿಜ್ಞಾನ
ಸಂಸ್ಥೆಗಳುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆಂಡ್ ರಿಸರ್ಚ್
ಅಭ್ಯಸಿಸಿದ ವಿದ್ಯಾಪೀಠಪುಣೆ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣನ್ಯಾನೋ ತಂತ್ರಜ್ಞಾನ
ವಸ್ತು ವಿಜ್ಞಾನ
ಮೇಲ್ಮೈ ವಿಜ್ಞಾನ

ಡಾ. ಸುಲಭ ಕೆ ಕುಲಕರ್ಣಿ (೦೧-೦೬- ೧೯೪೯..) ಭಾರತದ ನ್ಯಾನೋತಂತ್ರಜ್ಞಾನದ ವಿಜ್ಞಾನಿ.[೧] ಪುಣೆಯಲ್ಲಿನ ಐಐಎಸ್ ಈ ಆರ್ ಸಂಸ್ಥೆಯಲ್ಲಿ ಬಹುಕಾಲ ಪ್ರಾಧ್ಯಾಪಕಿಯಾಗಿದ್ದ ಡಾ ಸುಲಭ, ಪ್ರಸಕ್ತ ಸಂದರ್ಶಕ ಪ್ರಾಧ್ಯಾಪಕಿಯಾಗಿ ದುಡಿಯುತ್ತಲಿದ್ದಾರೆ.

ಡಾ. ಸುಲಭ ಕೆ ಕುಲಕರ್ಣಿ ೦೧-೦೬- ೧೯೪೯ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಇವರು ಪುಣೆ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಎಂ.ಎಸ್ಸಿ. ಮತ್ತು ಪಿಎಚ್. ಡಿ ಪದವಿ ಗಳಿಸಿದರು.

ಶೈಕ್ಷಣಿಕ ಸಾಧನೆ

[ಬದಲಾಯಿಸಿ]

ಡಾ. ಸುಲಭ ೧೯೭೬-೭೭ರಲ್ಲಿ ಮ್ಯೂನಿಚ್‍ನಲ್ಲಿನ ಟೆಕ್ನಿಕಲ್ ವಿವಿಯಲ್ಲಿ, ಡಾಕ್ಟರೇಟ್ ಅಧ್ಯಯನ ಕೈಗೊಂಡರು.[೨] ೧೯೭೭ರಿಂದ ೩೨ ವರ್ಷ ಸುಲಭ ಕುಲಕರ್ಣಿಯವರು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆಂಡ್ ರಿಸರ್ಚ್ ನಲ್ಲಿ ( ಐಐಎಸ್ ಈ ಆರ್ ಸಂಸ್ಥೆ) ಭೌತಶಾಸ್ತ್ರದ ಪ್ರೊಫೆಸರ್ ಆಗಿ ದುಡಿದವರು. ಸಂಶೋಧನೆ , ಅಧ್ಯಾಪನದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿ ಕೊಂಡಿದ್ದಾರೆ. ೨೭೦ ಸಂಶೋಧನಾ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರೊಂದಿಗೆ, ವಿಷಯ ಮಂಡನೆಯನ್ನು ಮಾಡಿದ್ದಾರೆ. ನ್ಯಾನೋಟೆಕ್ನಾಲಜಿ: ಪ್ರಿನ್ಸಿಪಲ್ಸ್ ಮತ್ತು ಪ್ರಾಕ್ಟೀಸಸ್ -ಇದು ಡಾ ಸುಲಭಾ ರಚಿಸಿದ ಜನಪ್ರಿಯ ಕೃತಿ. ಇಂಗ್ಲೀಷ್ ಮತ್ತು ಮರಾಠಿಯಲ್ಲಿ ನ್ಯಾನೋಟೆಕ್ನಾಲಜಿ ಬಗ್ಗೆ ಹಲವು ಪುಸ್ತಕ ಬರೆದಿರುವ ಡಾ. ಸುಲಭಾ, ಸಾಲಿಡ್ ಸ್ಟೇಟ್ ಭೌತಶಾಸ್ತ್ರದ ಬಗ್ಗೆ ಪಿಯುಸಿ ವಿದ್ಯಾರ್ಥಿಗಳಿಗೆ ಮ್ಯಾನುಯಲ್ ಗಲನ್ನು ಬರೆದಿದ್ದಾರೆ.

ವೃತ್ತಿ

[ಬದಲಾಯಿಸಿ]

ಕುಲಕರ್ಣಿ ಭಾರತಕ್ಕೆ ಮರಳಿದ ನಂತರ ಪುಣೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕ ಸದಸ್ಯರಾಗಿ ಸೇರಿಕೊಂಡರು. ಅವರು ೩೨ ವರ್ಷಗಳ ಕಾಲ ಸಂಶೋಧನೆ ಮತ್ತು ಬೋಧನೆಯನ್ನು ಮುಂದುವರೆಸಿದರು, ಸ್ನಾತಕೋತ್ತರ ಹಂತದಲ್ಲಿ ನ್ಯಾನೊತಂತ್ರಜ್ಞಾನದ ಕೋರ್ಸ್ ಅನ್ನು ಪರಿಚಯಿಸಿದರು. ಮಾರ್ಚ್ ೨೦೦೯ ರಲ್ಲಿ, ಅವರು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ಗೆ ಸೇರಿದರು ಮತ್ತು ಯುಜಿಸಿ ವಿಜ್ಞಾನಿಯಾಗಿ ಮುಂದುವರೆದರು. ೨೦೧೦ ರಿಂದ ೨೦೧೧ ರವರೆಗೆ ಅವರು ರಾಜಸ್ಥಾನದ ಬನಸ್ಥಾಲಿ ವಿಶ್ವವಿದ್ಯಾಲಯದಲ್ಲಿ ಪ್ರೊ ವೈಸ್ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು. ಅವರು ಯುಜಿಸಿ ಪ್ರಾಧ್ಯಾಪಕರಾಗಿ ಐಐಎಸ್ಇಆರ್ ಪುಣೆಗೆ ಮರಳಿದರು ಮತ್ತು ಪ್ರಸ್ತುತ ಐಐಎಸ್ಇಆರ್ ಪುಣೆಯಲ್ಲಿ ಸಂದರ್ಶಕ ಅಧ್ಯಾಪಕರಾಗಿದ್ದಾರೆ.[೩]

ಸಂಶೋಧನೆ

[ಬದಲಾಯಿಸಿ]

ಲೋಹಗಳು, ಸೆಮಿಕಂಡಕ್ಟರ್ ಮತ್ತು ಆಕ್ಸೈಡ್ ನ್ಯಾನೊ ಪಾರ್ಟಿಕಲ್‍ಗಳು, ಲೋಹದ ಗಾಜು, ಲೋಹದ ಬಹುಧನ್ಯಾತ್ಮಕ ವಸ್ತುಗಳು - ಈ ವಿಷಯಗಳ ಮೇಲೆ ಡಾ. ಸುಲಭ ಸಂಶೋಧನೆ ಮತ್ತು ಪೇಪರ್ ಪ್ರಕಟಣೆ ಮಾಡಿದ್ದಾರೆ.

ಬೋಧನೆ

[ಬದಲಾಯಿಸಿ]

ಸುಲಭ ಕುಲಕರ್ಣಿಯವರು ೨೦೦೯ರ ತನಕ ಪುಣೆ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ಡಾ. ಸುಲಭ ೩೮ ಜನ ಸಂಶೋಧನಾ ವಿದ್ಯಾರ್ಧಿಗಳಿಗೆ ಪಿಎಚ್.ಡಿ ಮಾರ್ಗದರ್ಶಕಿಯಾಗಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳು

[ಬದಲಾಯಿಸಿ]
 1. "Women and Technological Innovation National Award (2007)", ಭಾರತೀಯ ಸ್ತ್ರೀ ಶಕ್ತಿ[೪].
 2. ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ (for Book Writing- 2009)
 3. ಸದಸ್ಯರು, ಕಾರ್ಯಕ್ರಮದ ಸಲಹೆಗಾರರು, All India Radio (ಆಕಾಶವಾಣಿ) ಪುಣೆ (2008-2010)
 4. ಸದಸ್ಯರು, ಶೈಕ್ಷಣಿಕ ಪರಿಷತ್ ಮತ್ತು ಸಿಂಡಿಕೆಟ್ ಸಭೆ, IUAC, ಹೊಸದೆಹಲಿ, (2007-2010)
 5. ಸಹಸಂಪಾದಕರು, ಅಂತರರಾಷ್ಟ್ರೀಯ ಪತ್ರಿಕೋದ್ಯಮ Nanoscience & Nanotechnology (2006- )[೫]
 6. ಸದಸ್ಯರು, Board of Studies, ಗೋವಾ ವಿಶ್ವವಿದ್ಯಾನಿಲಯ (2002-2005)
 7. ಸದಸ್ಯರು, ಶೈಕ್ಷಣಿಕ ಪರಿಷತ್ , Nuclear Science Centre (1998-2000)

ಬಾಹ್ಯ ಸಂಪರ್ಕ

[ಬದಲಾಯಿಸಿ]

ಇಂಡಿಯನ್ ನ್ಯಾಶನಲ್ ಸಯನ್ಸ್ ಅಕಾಡೆಮಿ ಜಾಲತಾಣ Archived 2014-04-04 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

[ಬದಲಾಯಿಸಿ]
 1. http://www.iiserpune.ac.in/people/faculty-details/33
 2. "ಆರ್ಕೈವ್ ನಕಲು". Archived from the original on 2014-04-04. Retrieved 2013-12-12.
 3. "Fellowship | Indian Academy of Sciences". www.ias.ac.in. Retrieved 21 March 2020.
 4. "ಆರ್ಕೈವ್ ನಕಲು". Archived from the original on 2014-10-19. Retrieved 2015-05-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 5. http://www.ijnnonline.net/journal/editorial.board