ಸುಭಾಷ್ ಪಾಳೇಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಭಾಷ್ ಪಾಳೇಕರ್
Subhash Palekar
ಸುಭಾಷ್ ಪಾಳೇಕರ್
Born(೧೯೪೯-೦೭-೦೧)೧ ಜುಲೈ ೧೯೪೯
ಮಹರಾಷ್ಟ್ರ, ಭಾರತ
Nationalityಭಾರತೀಯ
Occupation(s)ಕೃಷಿ ವಿಜ್ಞಾನಿ, ಕೃಷಿಕ, ಲೇಖಕ
Known forತತ್ವಶಾಸ್ತ್ರ, ನೈಸರ್ಗಿಕ ಕೃಷಿ
Notable work'ಹೋಲಿಸ್ಟಿಕ್ ಆಧ್ಯಾತ್ಮಿಕ ಕೃಷಿ'
Websitepalekarzerobudgetspiritualfarming

ಸುಭಾಷ್ ಪಾಳೇಕರ್ ಒಬ್ಬ ಭಾರತೀಯ ಕೃಷಿಕ. ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವುದನ್ನು ಅಭ್ಯಾಸ ಮಾಡಿ ಹಾಗು ಅದರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸುಭಾಷ್ ಪಾಳೇಕರ್ ಅವರು ೧೯೪೯ ರಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ್ದು, ಕೃಷಿ ಹಿನ್ನೆಲೆಯನ್ನು ಹೊಂದಿದ್ದಾರೆ. ಇವರು ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಬೆಳಸದೆ,  ಶೂನ್ಯ ಹೂಡಿಕೆಯಲ್ಲಿ ನೈಸರ್ಗಿಕ ಕೃಷಿ ಅಭ್ಯಾಸ ಮಾಡಿದ್ದಾರೆ. ಈ ಸಲುವಾಗಿ ಅವರು ಭಾರತದಾದ್ಯಂತ ಹಲವು ಕಾರ್ಯಾಗಾರಗಳನ್ನು ನಡೆಸಿದರು.[೧]

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಅವರು ನಾಗ್ಪುರದಲ್ಲಿ ಕೃಷಿ ಪದವಿಯನ್ನು ಪಡೆದರು. ಕಾಲೇಜು ಶಿಕ್ಷಣದ ಸಮಯದಲ್ಲಿ ಅವರು ಸ್ಯಾಟ್ಪುಡಾ ಬುಡಕಟ್ಟು ಪ್ರದೇಶದಲ್ಲಿನ ತಮ್ಮ ಸಮಸ್ಯೆಗಳ ಬಗ್ಗೆ ಬುಡಕಟ್ಟು ಜನಾಂಗದೊಂದಿಗೆ ಕೆಲಸ ಮಾಡುತ್ತಿದ್ದರು.

ಪ್ರಶಸ್ತಿ[ಬದಲಾಯಿಸಿ]

  • ೨೦೧೬ ರಲ್ಲಿ ಸುಭಾಷ್ ಪಾಳೇಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. [೨][೩]

ಉಲ್ಲೇಖ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]

Official site: http://palekarzerobudgetspiritualfarming.org