ಸುಧರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Iyengar.jpg

ಸುಧರ್ಮಾ, ವಿಶ್ವದಲ್ಲೇ ಸಂಸ್ಕೃತ ಭಾಷೆಯಲ್ಲಿ ಪ್ರಚಾರದಲ್ಲಿರುವ ಮೊಟ್ಟ ಮೊದಲ ದಿನಪತ್ರಿಕೆಯೆಂದು ಪರಿಗಣಿಸಲ್ಪಟ್ಟಿದೆ. ಈ ಪತ್ರಿಕೆ, ಕರ್ಣಾಟಕ ರಾಜ್ಯದ ಮೈಸೂರು ನಗರದಿಂದ ಮೂಡಿ ಬರುತ್ತಿದೆ. ಈ ಪತ್ರಿಕೆ ಈಗ ೪ ದಶಕಗಳ ದಾರಿಯಲ್ಲಿ ಅಡೆ-ತಡೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ, ಆತ್ಮ ವಿಶ್ವಾಸದಿಂದ ದಾಪುಗಾಲಿಡುತ್ತಾ ಮುನ್ನುಗ್ಗುತ್ತಿರುವ ಸಂಭ್ರಮದಲ್ಲಿದೆ.

ಪತ್ರಿಕೆಯ ಸ್ಥಾಪಕರು[ಬದಲಾಯಿಸಿ]

ಕಳಾಲೆ ನಾಡೂರ್ ವರದರಾಜ ಅಯ್ಯಂಗಾರ್ 'ಸುಧರ್ಮಾ ಪತ್ರಿಕೆ'ಯನ್ನು ಸನ್, ೧೯೭೦ ರಲ್ಲಿ ಹುಟ್ಟು ಹಾಕಿದರು. ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿದ್ದ ಅಯ್ಯಂಗಾರ್ಯರು, ಭಾರತದ ದೇವಭಾಷೆಯಾದ ಸಂಸ್ಕೃತವನ್ನು ಸಾಮಾನ್ಯ ಜನರೂ ಕಲಿತು, ಅದರ ಉಪಯೋಗವನ್ನು ಗಳಿಸಲೆಂಬ ಮಹದಾಶಯದಿಂದ ಪ್ರಾರಂಭಿಸಿದ ಅಭಿಯಾನವಿದು.

ಸುಧರ್ಮಾ, ಈಗ ಆನ್‍ಲೈನ್ ನಲ್ಲೂ ಲಭ್ಯವಿದೆ[ಬದಲಾಯಿಸಿ]

ಚಿತ್ರ:Rwbsudharma2008081.jpg
ಸುಧರ್ಮಾ-ಸಂಸ್ಕೃತ ದಿನ ಪತ್ರಿಕೆ

ವರದರಾಜರಿಗೆ, ಸಂಸ್ಕೃತದ ಪುಸ್ತಕಗಳನ್ನು ಪ್ರಕಟಿಸುವ ತೀವ್ರವಾದ ಅಭಿಲಾಷೆಯಿತ್ತು. ಎಷ್ಟೋ ಸಂಸ್ಕೃತ ಹಸ್ತಪ್ರತಿಗಳು ಅವರ ಬಳಿ ಇದ್ದವು. ಇವುಗಳ ಸಮರ್ಥ ಬಳಕೆಯನ್ನು ಮಾಡುವುದೆಂದರೆ, ಅವನ್ನು ಸಮರ್ಪಕವಾಗಿ ಸಂಪಾದಿಸಿ, ಪ್ರಕಟಿಸುವುದು. ಇವು ಪ್ರಮುಖವಾಗಿ ಅವರ ಮುಂದಿದ್ದ ಗುರಿಗಳು. ಇದಲ್ಲದೆ, ಅವುಗಳ ಪ್ರಸಾರ ಅತಿಮುಖ್ಯ. ಸಂಸ್ಕೃತ ಭಾಷೆಯಲ್ಲಿ ಪ್ರಸಕ್ತ, ಪ್ರಚಲಿತ ವಿಷಯಗಳನ್ನು ಸಮರ್ಥವಾಗಿ ಹೇಳುವ ಸಾಧಕ-ಬಾಧಾಕಗಳ ಬಗ್ಗೆ, ತಕ್ಕ ಪದ-ಪುಂಜಗಳ ಬಗ್ಗೆ ಅವರಿಗೆ ಮೊದಲು ಸ್ವಲ್ಪ ಕಷ್ಟವಾಯಿತು. ಆದರೆ ಅದಕ್ಕೆ ತಕ್ಕ ಭೂಮಿಕೆಯನ್ನು ಸೃಷ್ಟಿಸುವ ಅಗತ್ಯವನ್ನು ವರದರಾಜರು, ಮನಗಂಡಾಗ, ಕನ್ನಡ ಪತ್ರಿಕೆಯೊಂದರ ಸಂಪಾದಕ, ಅಗರಮ್ ರಂಗಯ್ಯನವರು, ಅವರಿಗೆ ನೆರವಾದರು. ಮಾಜೀ ವಾರ್ತಾ ಇಲಾಖೆಯ ಜಂಟಿ-ನಿರ್ದೇಶಕರಾಗಿದ್ದ ಪಿ.ನಾಗಾಚಾರ್ ರವರ ಪ್ರೋತ್ಸಾಹದ

ಚಿತ್ರ:K. v. sampath ayyaMgAr.jpg
ಸುಧರ್ಮಾ-ಸಂಸ್ಕೃತ ದಿನಪತ್ರಿಕೆಯ ಸಂಪಾದಕ, ಶ್ರೀ.ಕೆ.ವಿ.ಸಂಪತ್ಕುಮಾರ ಅಯ್ಯಂಗಾರ್

ಮಾತುಗಳಿಂದಲೇ ಪ್ರೇರಿತರಾದ ವರದರಾಜ ಅಯ್ಯಂಗಾರ್ಯರು, ಯಾವ ಪ್ರತಿಕ್ರಿಯೆಯನ್ನೂ ನೀಡದ ಗೆಳೆಯರನ್ನು ಕಡೆಗಣಿಸಿ, ತಮ್ಮ ಪ್ರಥಮ ಸಂಚಿಕೆಯನ್ನು ಜುಲೈ, ೧೪, ಸನ್, ೧೯೭೦ ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನ, ಸಂಸ್ಕೃತ ವಿಭಾಗದ, ಗಣಪತಿ ತೊಟ್ಟಿಯೆಂಬ ಸ್ಥಾನದಲ್ಲಿ ಸ್ಥಾಪಿಸಿದರು. ಭಾರತ ಸರ್ಕಾರದ ಆಗಿನ ವಾರ್ತಾ ಇಲಾಖೆಯ ಸಚಿವರಾದ, ಐ.ಕೆ.ಗುಜ್ರಾಲ್ ಅವರ ಮನವೊಪ್ಪಿಸಿ ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನೋದಿಸುವ ಅಭಿಯಾನವನ್ನು, ವರದರಾಜ ಅಯ್ಯಂಗಾರ್ಯರ ಮಗ, ಕೆ.ವಿ.ಸಂಪತ್ಕುಮಾರ್ ಪ್ರಾರಂಭಿಸಿದರು. ಈಗ ಸುಧರ್ಮಾ ಪತ್ರಿಕೆ, ಮೈಸೂರಿನ ಉಪನಗರವಾದ ರಾಮಚಂದ್ರ ಅಗ್ರಹಾರದಲ್ಲಿ ಮುದ್ರಿಸಲಾಗುತ್ತಿದೆ.

ಪತ್ರಿಕೋದ್ಯಮಕ್ಕೆ (ಸಾಹಿತ್ಯ ಮತ್ತು ಶಿಕ್ಷಣ ವಿಭಾಗದ ಅಡಿಯಲ್ಲಿ) ನೀಡಿದ ಕೊಡುಗೆಗಾಗಿ ಸಂಪಾದಕ ದಿವಂಗತ ಶ್ರೀ ಕೆ.ವಿ. ಸಂಪತ್ ಕುಮಾರ್ ಮತ್ತು ಅವರ ಪತ್ನಿ ಶ್ರೀಮತಿ ಕೆಎಸ್ ಜಯಲಕ್ಷ್ಮಿ ಅವರನ್ನು 2020 ರಲ್ಲಿ ಭಾರತ ಸರ್ಕಾರವು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.[೧]

ಪತ್ರಿಕೆಯ ಓದುಗ ವರ್ಗ[ಬದಲಾಯಿಸಿ]

ಹೆಚ್ಚಾಗಿ ಓದುಗರು, ಚಂದಾದಾರರು, ಸಂಸ್ಕೃತ ಪಂಡಿತರು, ವಿದ್ಯಾರ್ಥಿಗಳು, ಮತ್ತು ಭಾಷಾಸಕ್ತರು. ಕೆಲವರು ವಿದೇಶದಲ್ಲಿ ನೆಲೆಸಿದ ಭಾರತೀಯರು. ಮತ್ತು ವಿದೇಶದವರು. ಈಗ ಸುಮಾರು ೨,೦೦೦ ಪ್ರತಿಗಳು ಮಾಹೆಯಾನ ಖರ್ಚಾಗುತ್ತಿವೆ. ಪತ್ರಿಕೆಯ ವಾರ್ಷಿಕ ಚಂದ, ೨೫೦ ರೂಪಾಯಿಗಳು. (೬ ಡಾಲರ್), ಸಾರ್ವಜನಿಕ ವಾಚನಾಲಯಗಳು, ಶಿಕ್ಷಣ ಸಂಸ್ಥೆಗಳು, ಹಾಗೂ ಕೆಲವು ಆಸಕ್ತರಿಗೆ, ದೇಶದಾದ್ಯಂತ, ಅಂಚೆಯಲ್ಲಿ ತಲುಪಿಸಲಾಗುತ್ತಿದೆ. ಅಮೆರಿಕ, ಜಪಾನ್ ಮುಂತಾದ ದೇಶಗಳ ಪುಸ್ತಕ ಓದುಗರಿಗೆ, ೫೦ ಡಾಲರ್ ವಾರ್ಷಿಕ ಚಂದ ವಿಧಿಸಲಾಗುತ್ತದೆ. ಪತ್ರಿಕೆಯ ಮಾರಾಟದಿಂದ ಲಾಭವನ್ನು ಅಪೇಕ್ಷಿಸುವುದು ಕಠಿಣ. ಇಂದಿನ ದಿನಗಳಲ್ಲಿ ವಿದೇಶಿ ಓದುಗರಿಂದ ಚಂದಾಹಣ ಸ್ವಲ್ಪ ಬರುತ್ತಿದ್ದು, ಅದು ಒಂದೇ ಸಮನೆ ಇರದೆ, ಈ ತರಹದ ಹೆಚ್ಚು ಕಡಿಮೆಗಳಿಗೆ ಜಗ್ಗದೆ ಸಂಪತ್ಕುಮಾರ್ ರವರು, ತಮ್ಮ ಮನೆತನದ ಗೌರವವೆಂದು ಭಾವಿಸಿ, ತಂದೆಯವರಿಂದ ಪ್ರಾರಂಭವಾದ ಅಭಿಯಾನವನ್ನು ಮುಂದುವರೆಸಲು ತಮ್ಮ ತನು-ಮನ-ಧನಗಳನ್ನು ಸಮರ್ಪಿಸಿದ್ದಾರೆ. ಇದಲ್ಲದೆ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿಯನ್ನು ಮೈಗೂಡಿಸಿಗೊಂಡ ಸಂಪತ್ ಕುಮಾರ್ ರವರು, ಸಮೃದ್ಧವಾದ ದೇವಭಾಷೆ ಸಂಸ್ಕೃತವನ್ನು, ಎಲ್ಲರಿಗೂ ದೊರಕಿಸಿಕೊಟ್ಟ ಗೌರವವನ್ನು ಹೊಂದಿದ್ದಾರೆ.

ಸುಧರ್ಮಾ ಪತ್ರಿಕೆಯ, ೩೮ ನೇ ವಾರ್ಷಿಕೋತ್ಸವ[ಬದಲಾಯಿಸಿ]

ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ೩೮ ನೇ ವಾರ್ಷಿಕೋತ್ಸವವನ್ನು ೧೫, ಜುಲೈ, ೨೦೦೭ ರಂದು ಮೈಸೂರಿನಲ್ಲಿ ಅದ್ಧೂರಿಯಿಂದ ಆಚರಿಸಲಾಯಿತು. ವಿಶೇಷವೆಂದರೆ, ಆ ಸಮಾರಂಭದ ದಿನದ, ಎಲ್ಲಾ ಪ್ರಸಂಗಗಳೂ ಸಂಸ್ಕೃತ ಭಾಷೆಯಲ್ಲೇ ಸಕ್ಷಮವಾಗಿ ನೆರೆವೇರಿದವು. ಈ ಅಪರೂಪದ ಸಮಾರಂಭದಲ್ಲಿ ಇಬ್ಬರು ಶ್ರೇಷ್ಠ ಸಂಸ್ಕೃತ-ವಿದ್ವಾಂಸರನ್ನು ಗೌರವಿಸಲಾಯಿತು. ಅವರೆಂದರೆ-

ಈ ಕೊಂಡಿಗಳನ್ನೂ ಓದಿ[ಬದಲಾಯಿಸಿ]

೧.^ a b Muralidhara Khajane (2007-07-21). "Keeping Sanskrit alive". Online Edition of The Hindu, dated 2007-07-21 (Chennai, India). http://www.hindu.com/2007/07/21/stories/2007072158620300.htm Archived 2008-06-03 ವೇಬ್ಯಾಕ್ ಮೆಷಿನ್ ನಲ್ಲಿ.. Retrieved 2007-08-16.

೨.^ Rashmee Roshan Lall (2006-10-12). "Cambridge closes door on Sanskrit, Hindi". Online Edition of The Times of India, dated 2006-10-12. http://timesofindia.indiatimes.com/World/Rest_of_World/Cambridge_closes_door_on_Sanskrit_Hindi/articleshow/msid-2161235,curpg-1.cms. Retrieved 2007-08-21.

೩.^ a b c "Sanskrit daily celebrates 30th anniversary". Online Edition of DnaIndia.com, dated 2007-07-15. http://www.dnaindia.com/report.asp?NewsID=1110041. Retrieved 2007-08-21.

೪.^ Sharath S. Srivatsa (2006-07-03). "Fighting against odds to keep the daily afloat". Online Edition of The Hindu, dated 2006-07-03 (Chennai, India). http://www.hindu.com/2006/07/03/stories/2006070310150500.htm Archived 2012-11-07 ವೇಬ್ಯಾಕ್ ಮೆಷಿನ್ ನಲ್ಲಿ.. Retrieved 2007-08-16.

೫.^ ""Sudharma The only Sanskrit newspaper"". http://sudharma.epapertoday.com Archived 2019-01-30 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. Jan 25, Shrinivasa M. | TNN | Updated; 2020; Ist, 22:17. "Editors of Mysuru-based Sanskrit daily selected for Padma Shri | Mysuru News - Times of India". The Times of India (in ಇಂಗ್ಲಿಷ್). Retrieved 2020-01-26. {{cite web}}: |last2= has numeric name (help)CS1 maint: numeric names: authors list (link)
"https://kn.wikipedia.org/w/index.php?title=ಸುಧರ್ಮಾ&oldid=1165931" ಇಂದ ಪಡೆಯಲ್ಪಟ್ಟಿದೆ