ವಿಷಯಕ್ಕೆ ಹೋಗು

ಸೀನ್ ಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Sean Paul
Sean Paul at the B-live concert, September 2007.
ಹಿನ್ನೆಲೆ ಮಾಹಿತಿ
ಜನ್ಮನಾಮSean Paul Ryan Francis Henriques
ಮೂಲಸ್ಥಳKingston, ಜಮೈಕ
ಸಂಗೀತ ಶೈಲಿDancehall, Reggae, Rap
ವೃತ್ತಿDeejay, musician, Rapper
ವಾದ್ಯಗಳುVocals
ಸಕ್ರಿಯ ವರ್ಷಗಳು1996–present
L‍abelsVP/Atlantic Records
Associated actsDutty Cup Crew, Busta Rhymes, Estelle, Jay Sean, Akon, Kardinal Offishall, Beyoncé, Sasha, Rihanna, Keisha Cole, Nina Sky
ಅಧೀಕೃತ ಜಾಲತಾಣOfficial Web Site

ಸೀನ್ ಪಾಲ್ ಎಂಬ ರಂಗನಾಮದಿಂದ ಪ್ರದರ್ಶನವನ್ನು ನೀಡುವ ಸೀನ್ ಪಾಲ್ ರೇನ್ ಫ್ರಾನ್ಸಿಸ್ ಹೆನ್ರಿಕ್ವಿಸ್ [] (1973ರ ಜನವರಿ 9 ರಂದು ಜನಿಸಿದರು),[][] ಎಂಬುವವನು ಜಮೈಕಾದ ಗ್ರಾಮಿಪ್ರಶಸ್ತಿಯನ್ನು ಗೆದ್ದ ರೆಗೇ/ಡ್ಯಾನ್ಸ್ ಹಾಲ್ ನ ಕಲಾವಿದನಾಗಿದ್ದಾನೆ. ಇವನು ಡಟ್ಟಿ ಕಪ್ ಕ್ರಿವ್‌ತಂಡದಲ್ಲಿ ಮುಂಚೆ ಪ್ರಧಾನ ಗಾಯಕನಾಗಿ ಕಾರ್ಯನಿರ್ವಹಿಸಿದ್ದಾನೆ.

ಜೀವನ ಮತ್ತು ವೃತ್ತಿಜೀವನ

[ಬದಲಾಯಿಸಿ]

1973-1996: ಪ್ರಾರಂಭಿಕ ಜೀವನ

[ಬದಲಾಯಿಸಿ]

ಸೀನ್ ಪಾಲ್ ಜಮೈಕಾದ ಕಿಂಗ್‌ಸ್ಟನ್ ನಲ್ಲಿ ಜನಿಸಿದನು ಹಾಗು ಅವನ ಬಾಲ್ಯದ ದಿನಗಳನ್ನು ಕಿಂಗ್‌ಸ್ಟನ್ ಉತ್ತರಕ್ಕೆ ಕೆಲವು ಮೈಲಿಗಳ ದೂರದಲ್ಲಿರುವ ಅಪ್ಪರ್ ಸೆಂಟ್ ಅಂಡ್ರೀವ್ ಪ್ಯಾರಿಷ್(ಪಾದ್ರಿ ಹೋಬಳಿ)ನಲ್ಲಿ ಕಳೆದನು.[] ಅವನ ಪೋಷಕರಾದ ಗಾರ್ತ್ ಮತ್ತು ಫ್ರಾನ್ಸಸ್ ಇಬ್ಬರೂ ಕೂಡ ಪ್ರತಿಭಾಶಾಲಿ ಕ್ರೀಡಾಪಟುಗಳಾಗಿದ್ದರು ಹಾಗು ಅವನ ತಾಯಿ ಪ್ರಖ್ಯಾತ ವರ್ಣಚಿತ್ರಕಾರ್ತಿಯಾಗಿದ್ದಾಳೆ.[] ಅವನ ತಂದೆಯ ತಂದೆ(ಅಜ್ಜ) ಪೋರ್ಚುಗಲ್‌ನಿಂದ ವಲಸೆಬಂದ ಸಿಫಾರ್ಡಿಕ್ ಯಹೂದಿ ಜನಾಂಗದ ಕುಟುಂಬಕ್ಕೆ ಸೇರಿದ್ದವರಾಗಿದ್ದರು. ಅವನ ತಂದೆಯ ತಾಯಿ(ಅಜ್ಜಿ) ಆಫ್ರೊ-ಕ್ಯಾರಿಬಿಯನ್ ಆಗಿದ್ದರು; ಅವನ ತಾಯಿ ಇಂಗ್ಲೀಷ್ಮತ್ತು ಚೀನೀ ಜಮೈಕನ್ ಕುಲಕ್ಕೆ ಸೇರಿದ್ದರು.[][] ಸೀನ್ ಪಾಲ್ ಒಬ್ಬ ಕ್ಯಾಥೋಲಿಕ್ ಕ್ರೈಸ್ತಧರ್ಮಿಯಾಗಿ ಬೆಳೆದರು.[] ಇವನ ಕುಟಂಬದ ಅನೇಕ ಸದಸ್ಯರು ಈಜುಗಾರರಾಗಿದ್ದರು. ಅವನ ಅಜ್ಜ ಜಮೈಕಾದ ಮೊದಲನೆಯ ಪುರುಷರ ರಾಷ್ಟ್ರೀಯ ವಾಟರ್ ಪೋಲೋ ತಂಡದಲ್ಲಿದ್ದರು. ಅವನ ತಂದೆಯೂ ಕೂಡ 1960ರ ದಶಕದಲ್ಲಿ ವಾಟರ್ ಪೋಲೋ ತಂಡಕ್ಕಾಗಿ ಆಡಿದ್ದಾರೆ ಹಾಗು ದೂರದ ಈಜುಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ. ಅವನ ತಾಯಿ ಬ್ಯಾಕ್‌ಸ್ಟ್ರೋಕ್(ಹಿಂಗೈಬೀಸು) ಈಜುಗಾರ್ತಿಯಾಗಿದ್ದಳು. ಸೀನ್‌ಪಾಲ್ ಅವನ ಹದಿಮೂರನೇ ವಯಸ್ಸಿನಿಂದ ಇಪ್ಪತ್ತೊಂದನೆ ವಯಸ್ಸಿನವರೆಗೆ ರಾಷ್ಟ್ರೀಯ ವಾಟರ್ ಪೋಲೋ ತಂಡಕ್ಕಾಗಿ ಆಡಿದ್ದಾನೆ. ಸಂಗೀತ ಕ್ಷೇತ್ರದಲ್ಲಿ ಅವನ ವೃತ್ತಿಜೀವನವನ್ನು ಆರಂಭಿಸುವ ಸಲುವಾಗಿ ಅವನು ಕ್ರೀಡೆಯನ್ನು ಕೈಬಿಟ್ಟನು. ಅವನು ವಾಲ್ಮರ್ ಬಾಲಕರ ಪ್ರೌಢ ಶಾಲೆಯಲ್ಲಿ, ಬೆಲೈರ್ ಪ್ರೌಢಶಾಲೆಯಲ್ಲಿ, ಹಾಗು ಪ್ರಸ್ತುತ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಎಂದು ಹೆಸರಾಗಿರುವ ಕಲೆ,ವಿಜ್ಞಾನ ಮತ್ತು ತಂತ್ರಜ್ಞಾನದ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದನು. ಹೋಟೆಲ್ ವ್ಯವಸ್ಥಾಪನೆಯಲ್ಲಿ ಉದ್ಯೋಗ ನಿರ್ವಹಿಸುವ ಉದ್ದೇಶದಿಂದ ಈ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯವಿಷಯದ ಬಗ್ಗೆ ತರಬೇತಿ ಪಡೆದ.

1996–2004: ಸ್ಟೇಜ್ ಒನ್ ಮತ್ತು ಡಟ್ಟಿ ರಾಕ್

[ಬದಲಾಯಿಸಿ]
2005 ಸೆಪ್ಟೆಂಬರ್ ನಲ್ಲಿ ಸೀನ್ ಪಾಲ್.

ರಂಗ ಪ್ರದರ್ಶನ ಕುರಿತ 1998 ರ ಬೆಲ್ಲಿ ಎಂಬ ಚಲನಚಿತ್ರದ ಕಿರು ದೃಶ್ಯದಲ್ಲಿ ಅವನು ಪಾತ್ರವಹಿಸಿದ. ಅವನು DMX ಮತ್ತು Mr. ವೆಗಸ್ (ಇಲ್ಲಿ ಕಾಮ್ಸ್ ಡಾ ಬೂಮ್) ರ ಸಹಯೋಗದೊಂದಿಗೆ ಚಲನಚಿತ್ರಕ್ಕೆ ಧ್ವನಿಫಥವನ್ನು ರಚಿಸುವ ಮೂಲಕ ಯಶಸ್ವಿಯಾದನು. ಸೀನ್ ಪಾಲ್ VP ರೆಕಾರ್ಡ್ಸ್‌ನೊಂದಿಗೆ ಅವನ ಮೊದಲನೆಯ ಆಲ್ಬಂ ಸ್ಟೇಜ್ ಒನ್ ನನ್ನು 2000ನೇ ಇಸವಿಯಲ್ಲಿ ಬಿಡುಗಡೆ ಮಾಡಿದನು. 2002 ರಲ್ಲಿ ಟೊರೆಂಟೊ ದ ಜಾ ಬ್ಲೇಸ್ ಮತ್ತು ಬ್ಲೇಸ್ ಎಂಟರ್‌ಟೇನ್‌ಮೆಂಟ್ ಎಂಬ ನಿರ್ಮಾಪಕರ ಮತ್ತು ನೃತ್ಯ ಸಂಯೋಜಕರ ಜತೆ ಸೇರಿ ವ್ಯಾಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದನು ಹಾಗು ಅವನ ಎರಡನೇ ಆಲ್ಬಂ ಡಟ್ಟಿ ರಾಕ್ ನ ಬಿಡುಗಡೆ ಘೋಷಿಸಿದನು. "ಗಿಮ್ಮಿ ದಿ ಲೈಟ್" ಮತ್ತು ಬಿಲ್ ಬೋರ್ಡ್ ಹಾಟ್ 100 ಟಾಪರ್ "ಗೆಟ್ ಬಿಸಿ" ಎಂಬ ಏಕಗೀತೆಗಳ ಯಶಸ್ಸಿನಿಂದ ಅಂತಿಮವಾಗಿ ಆಲ್ಬಂನ ಆರು ಸಾವಿರ ಪ್ರತಿಗಳು ಮಾರಾಟವಾಗುವ ಮೂಲಕ ಇದು ಪ್ರಪಂಚದಾದ್ಯಂತ ಯಶಸ್ವಿಯಾಯಿತು. ಏಕಕಾಲದಲ್ಲಿ, ಸೀನ್ ಪಾಲ್ ಯುರೋಪ್‌ನ ಪ್ರಮುಖ ಪಟ್ಟಿಯಲ್ಲಿ ಜನಪ್ರಿಯವಾದ ಬೆಯಾನ್ಸ್ U.S. #1 ಏಕಗೀತೆ "ಬೇಬಿ ಬಾಯ್" ಮತ್ತು ಬ್ಲೂ ಕ್ಯಾಂಟ್ರೆಲ್ ಳ "ಬ್ರೀತ್" ಎಂಬ ಹಾಡನ್ನು ಹಾಡಿದನು. ಅವರಿಬ್ಬರು ಮುಂದೆ ಇಲ್ಲಿಯವರೆಗೂ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಅವನ ಖ್ಯಾತಿಯನ್ನು ಹೆಚ್ಚಿಸಲು ನೆರವಾದರು.

ಅವನು ಪುಂಕ್'ಡಿ , 106 ಅಂಡ್ ಪಾರ್ಕ್ , ಸೀನ್ ಪಾಲ್ ರೆಸ್ಪೆಕ್ಟ್ , ಮೇಕಿಂಗ್ ದಿ ವಿಡಿಯೋ ("ಗೆಟ್ ಬ್ಯುಸಿ", "ಗಿಮ್ಮಿ ದಿ ಲೈಟ್ ", ಮತ್ತು "ಲೈಕ್ ಗ್ಲೂ") ನಲ್ಲಿ ಕಾಣಿಸಿಕೊಂಡನು.ಅಲ್ಲದೇ ಅವನ ಸಂಗೀತದ ವಿಡಿಯೋಗಳು MTV ಮತ್ತು BET ನಲ್ಲಿ ಪ್ರಸಾರವಾದವು. ಪಾಲ್ ನ ಅತ್ಯಂತ ಜನಪ್ರಿಯವಾದ ಹಾಡುಗಳು "ಗೆಟ್ ಬ್ಯುಸಿ", "ಲೈಕ್ ಗ್ಲೂ", "ಗಿಮ್ಮಿ ದಿ ಲೈಟ್", "ಬೇಬಿಬಾಯ್", ಮತ್ತು "ಐಆಮ್ ಸ್ಟಿಲ್ ಇನ್ ಲವ್ ವಿತ್ ಯು" ಹಾಡುಗಳನ್ನು ಒಳಗೊಂಡಿವೆ.

2005–2008: ದಿ ಟ್ರಿನಿಟಿ

[ಬದಲಾಯಿಸಿ]

ಸೀನ್ ಪಾಲ್ ನ ಮೂರನೆಯ ಆಲ್ಬಂ ದಿ ಟ್ರಿನಿಟಿ ಯನ್ನು 2005 ರ ಸೆಪ್ಟೆಂಬರ್ 27 ರಂದು ಬಿಡುಗಡೆಮಾಡಲಾಯಿತು. ಈ ಆಲ್ಬಂ "ವಿ ಬಿ ಬರ್ನಿನ್'", "ಎವರ್ ಬ್ಲ್ಯಾಸಿನ್'", "ಗಿವ್ ಇಟ್ ಅಪ್ ಟು ಮಿ","ನೆವರ್ ಗೋನ ಬಿ ದಿ ಸೇಮ್" ಮತ್ತು U.S. ಪಟ್ಟಿಯಲ್ಲಿ ಮೊದಲನೇ ಸ್ಥಾನಗಳಿಸಿ ಭಾರಿ ಜನಪ್ರಿಯತೆ ಪಡೆದ "ಟೆಂಪ್ರೆಚರ್" ಹಾಡುಗಳಂತ ಅತ್ಯಂತ ಜನಪ್ರಿಯವಾದ ಐದು ಹಾಡುಗಳನ್ನು ನೀಡಿತು.

2006 ರಲ್ಲಿ "(ವೆನ್ ಯು ಗೋನ) ಗಿವ್ ಇಟ್ ಅಪ್ ಟು ಮಿ" ಹಾಡಿನ ವಿಡಿಯೋವನ್ನು ( ಕೆಷಿಯ ಕೋಲೆ ಕಾಣಿಸಿಕೊಂಡಿರುವ) "ಸ್ಟೆಪ್ ಅಪ್" ಎಂಬ ಚಲನಚಿತ್ರದಲ್ಲಿಯೂ ತೋರಿಸಲಾಗಿದೆ.

2006 ರ ಬಿಲಿಬೋರ್ಡ್ ಸಂಗೀತ ಪ್ರಶಸ್ತಿಯಲ್ಲಿ ಅವನು ವರ್ಷದ ಪುರುಷ ಕಲಾವಿದ, ವರ್ಷದ ರಾಪ್ ಕಲಾವಿದ, ವರ್ಷದ ಹಾಟ್ 100 ಏಕಗೀತೆ ಮತ್ತು ಅವನ "ಟೆಂಪ್ರೆಚರ್" ಎಂಬ ಜನಪ್ರಿಯ ಹಾಡಿಗಾಗಿ ವರ್ಷದ ಪಾಪ್ ಏಕಗೀತೆಯನ್ನು ಒಳಗೊಂಡಂತೆ ನಾಲ್ಕು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡನು.[] ಅವನು "(ವೆನ್ ಯು ಗೋನ) ಗಿವ್ ಇಟ್ ಅಪ್ ಟು ಮಿ" ಎಂಬ ಹಾಡಿಗಾಗಿ ಅಮೇರಿಕ ಸಂಗೀತ ಪ್ರಶಸ್ತಿಯನ್ನು ಗೆದ್ದುಕೊಂಡನು. ಈ ಪ್ರಶಸ್ತಿಗೆಂದು ನಾಮನಿರ್ದೇಶನಗೊಂಡಿದ್ದ ಕ್ಯಾನೆ ವೆಸ್ಟ್ ಮತ್ತು ನಿಕ್ ಲ್ಯಾಚೆ ಇಬ್ಬರನ್ನು ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದುಕೊಂಡನು.

"ದಿಟ್ರಿನಿಟಿ" ಆಲ್ಬಂ ನಿಂದ "ಸೆಂಡ್ ಇಟ್ ಆನ್" ಎಂಬ ಅವನ ಹಾಡು 2005 ರ ವ್ಯಾಕ್ಸ್ ಹಾಲ್ ಕೊರ್ಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದೆ. ಸೀನ್ ಪಾಲ್ ಅನೇಕ ರಿಡಿಮ್ ಡ್ರೈವನ್ ಆಲ್ಬಂಗಳಿಗೂ (VP ಹಾಡುಗಳಿಂದ) ಅವನ ಹಾಡುಗಳ ಕೊಡುಗೆ ನೀಡಿದ್ದಾನೆ. ಕ್ರಿಕೆಟ್ ವರ್ಲ್ಡ್ ಕಪ್ 2007 ರ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನವನ್ನು ನೀಡಲು 2007 ರ ಮಾರ್ಚ್ ತಿಂಗಳಿನಲ್ಲಿ ಅವನ ಹುಟ್ಟೂರಾದ ಜಮೈಕಾಕ್ಕೆ ತೆರಳಿದನು.

ಸೀನ್ ಪಾಲ್ ಸ್ನೂಪ್ ಡಾಗ್ ಸಿಬ್ಬಂದಿಯ ಭಾಗವಾದ ಡೈಫ್ ಜ್ಯಾಮ್ ಫೈಟ್ ಫಾರ್ NY ಎಂಬ ಆಟದಲ್ಲಿ ಹಾಗು ಮತ್ತೊಮ್ಮೆ ಆ ಆಟದ ಮುಂದಿನ ಭಾಗದಲ್ಲಿ ಕಾಣಿಸಿಕೊಂಡನು,Def Jam: Icon.

2009: ಇಂಪಿರಿಯಲ್ ಬ್ಲೇಸ್

[ಬದಲಾಯಿಸಿ]

"ಇಂಪಿರಿಯಲ್ ಬ್ಲೇಸ್" ಎಂಬ ಹೆಸರಿನ ಸೀನ್ ಪಾಲ್ ನ ಹೊಸ ಆಲ್ಬಂ ಅನ್ನು 2009 ರ ಆಗಸ್ಟ್ 18 ರಂದು ಬಿಡುಗಡೆಮಾಡಲಾಯಿತು. ಸ್ಟೀಫನ್ “ಡಿ ಜೀನಿಯಸ್" ಮ್ಯಾಕ್ ಗ್ರೆಗಾರ್ ನಿರ್ಮಿಸಿದ “ಸೊ ಫೈನ್” ಎಂಬ ಪ್ರಧಾನ ಏಕಗೀತೆಯ ಪ್ರಥಮ ಪ್ರದರ್ಶನವನ್ನು 2009 ರ ಏಪ್ರಿಲ್ 26 ರಂದು ಸೀನ್ ಪಾಲ್ ನ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಯಿತು.[][]

ಸೀನ್ ಪಾಲ್ 2009 ರ ಆಗಸ್ಟ್ ತಿಂಗಳಿನಲ್ಲಿ ಪೀಟ್ ಲೆವಿಸ್ ನ 'ಬ್ಲೂಸ್ ಅಂಡ್ ಸೋಲ್' ಎಂಬ ನಿಯತಕಾಲಿಕೆಯೊಂದಿಗೆ ಮಾತನಾಡುತ್ತಾ, 'ಇಂಪಿರಿಯಲ್ ಬ್ಲೇಸ್' "ವಾಸ್ತವವಾಗಿ 'ಕಿಂಗ್ಸ್ ಫೈರ್'ಅನ್ನು ಸೂಚಿಸುತ್ತದೆ. ಇದು ನೀನು ಮಾಡುವುದೆಲ್ಲವನ್ನು ಮಾಡುವಂತೆ ನಿನಲ್ಲಿ ಆಸೆಹುಟ್ಟಿಸುತ್ತಿರುವ ನಿನ್ನ ಒಳಗಿರುವ ವಸ್ತುವಾಗಿದೆ ಹಾಗು ಇದರಿಂದಾಗಿ ನೀನು ಪ್ರಪಂಚದಲ್ಲೆ ಅತ್ಯಂತ ಉತ್ತಮನಾಗಬಲ್ಲೆ " ಎಂದು ಹೇಳಿದನು.[೧೦]

20 ಹಾಡುಗಳನ್ನು ಒಳಗೊಂಡಿರುವ ಹೊಸ ಆಲ್ಬಂ "ಸೊ ಫೈನ್", "ಪ್ರೆಸ್ ಇಟ್ ಅಪ್", "ಶಿ ವಾಂಟ್ ಮಿ" "ಪ್ರೈವೇಟ್ ಪಾರ್ಟಿ" ಎಂಬ ಪಾರ್ಟಿ ಹಾಡುಗಳನ್ನು, ಹಾಗು ಇತರ ಹಾಡುಗಳಲ್ಲಿ "ಹೋಲ್ಡ್ ಮೈ ಹ್ಯಾಂಡ್" (ಫೀಟ್ ಕೆರಿ ಹಿಲ್ಸನ್), "ಲೇಟ್ಲಿ", "ನವ್ ಧೆಟ್ ಐ ಹ್ಯಾವ್ ಗಾಟ್ ಯುವರ್ ಲವ್" ಎಂಬ ಪ್ರೀತಿಗೆ ಸಂಬಂಧಿಸಿದ ಹಾಡುಗಳನ್ನು ಕೂಡ ಒಳಗೊಂಡಿದೆ. ಈ ಆಲ್ಬಂ ಡಾನ್ ಕಾರ್ಲಿಯಾನೊ, ಜೆರ್ಮಿ ಹಾರ್ಡಿಂಗ್, ಮತ್ತು ಸೀನ್ ನ ಸಹೋದರ ಜ್ಯಾಸನ್ 'ಜಿಗ್ಸಗುಲಾ' ಹೆನ್ರಿಕ್ವಿಕ್ಸ್ ಎಂಬ ನಿರ್ಮಾಪಕರನ್ನು ಒಳಗೊಂಡಿದೆ.[೧೦] ಆಲ್ಬಂನ ಬಿಡುಗಡೆಯ ದಿನವೇ ಆಲ್ಬಂ ನ ಸಂಪೂರ್ಣ ಎಲ್ಲಾ ಹಾಡುಗಳನ್ನು ಸೀನ್ ಪಾಲ್ ನ ಮೈಸ್ಪೇಸ್ ಪುಟದಲ್ಲಿ ಸೇರಿಸಲಾಯಿತು.[೧೧]

ಇಲ್ಲಿಯವರೆಗೂ ಒಟ್ಟು ಎಂಟು ಸಂಗೀತದ ವಿಡಿಯೋಗಳು ಹೊರಬಂದಿವೆ: "ಆಲ್ ವೇಸ್ ಆನ್ ಮೈ ಮೈಂಡ್ ( ಡಾವಿಲ್ಲೆಯ ಜೊತೆಯಲ್ಲಿ)","ಗೀವ್ ಇಟ್ ಟು ಯು (ಈವ್ ನ ಜೊತೆಯಲ್ಲಿ)", "ವಾಚ್ ದೆಮ್ ರೋಲ್", "ಬ್ಯಾಕ್ ಇಟ್ ಅಪ್" (ಎಡಗಡೆಯಲ್ಲಿ/Mr. ಇವಿಲ್ ನ ಜೊತೆಯಲ್ಲಿ), "(ಐ ವನ ಸಿ ಯು) ಪುಷ್ ಇಟ್ ಬೇಬಿ" (ಪ್ರೆಟ್ಟಿ ರಿಕಿಯ ಜೊತೆಯಲ್ಲಿ), "ಹಿಟ್ 'ಎಮ್" ( ಫ್ಯಾರೆನ್ ಹಿಟ್ ಮತ್ತು ಅವನ ಸಹೋದರ ಜ್ಯಾಸನ್ "ಜಿಗ್ ಜಗುಲಾ" ಹೆನ್ರಿಕ್ವಿಕ್ಸ್ ನೊಂದಿಗೆ), "ಕಮ್ ಒವರ್" ಎಸ್ಟೆಲ್.[೧೨] ಹಾಗು ಹೊಸ ಆಲ್ಬಂ ನಿಂದ ಅವನ ಮೊದಲ ಏಕಗೀತೆಯಾದ "ಸೊ ಫೈನ್" ವಿಡಿಯೋವನ್ನು ನೋಡಬಹುದು.

ಇತ್ತೀಚೆಗೆ ಶಾಗಿಯ "ಸೇವ್ ಅ ಲೈಫ್ " ವಿಡಿಯೋದಲ್ಲಿ ಕಂಡುಬಂದಿದ್ದಾನೆ.ಇದರಲ್ಲಿ ಎಲಿಫ್ಯಾಂಟ್ ಮ್ಯಾನ್ ಮತ್ತು ಡಾವಿಲ್ಲೆ ಕೂಡ ಕಾಣಿಸಿಕೊಂಡಿದ್ದಾರೆ. ಮಕ್ಕಳ ಆಸ್ಪತ್ರೆಗೆಂದು ಹಣ ಸಂಗ್ರಹಿಸುವ ಪ್ರಯತ್ನವಾಗಿ ಶಾಗಿ ಮತ್ತು ಸೀನ್ ಸೇರಿದಂತೆ ಇತರರು ಸೇರಿಕೊಂಡು ಸಹಾಯಾರ್ಥ ಗಾನಗೋಷ್ಠಿಯನ್ನು ಏರ್ಪಡಿಸಲಿದ್ದಾರೆ. ಇದರಿಂದ ಸಂಗ್ರಹಿಸಿದ ಎಲ್ಲ ಹಣವು ಬಸ್ಟ್ ಮನ್ ಮಕ್ಕಳ ಆಸ್ಪತ್ರೆ ನೆರವಿಗೆ ಹೊಸ ಪರಿಕರಗಳು ಮತ್ತು ತಂತ್ರಜ್ಞಾನ ಖರೀದಿಗೆ ವಿನಿಯೋಗವಾಗಲಿದೆ. ಕಾರ್ಡಿನಲ್ ಮತ್ತು ಅಕಾನ್ ನೊಂದಿಗೆ ಸೇರಿಕೊಂಡು ಡೇಂಜರಸ್ ನ ಮರು ಮಿಶ್ರಿತ ಧ್ವನಿ ಮುದ್ರಣಕ್ಕೂ ಕೂಡ ಪ್ರದರ್ಶನವನ್ನು ನೀಡಿದ.

ಇಂಪಿರಿಯಲ್ ಬ್ಲೇಸ್ ಅನ್ನು ಪ್ರೋತ್ಸಾಹಿಸಲು ಮತ್ತು ಅವನ ಅಭಿಮಾನಿಗಳಿಗೆ ಗೌರವವನ್ನು ತೋರಿಸಲು ಅವನು @ಡ್ಯೂಟಿpaul ಟ್ವಿಟರ್ ನನ್ನು ಬಳಸಲು ಪ್ರಾರಂಭಿಸಿದನು. ಇದರಲ್ಲಿ ಅವನ ಹೊಸ ಹಾಡುಗಳ ಬಗ್ಗೆ , ಅವನ ದಿನಚರಿಯ ಬಗ್ಗೆ, ಪ್ರವಾಸದ ದಿನಾಂಕಗಳ ಬಗ್ಗೆ , ಸಹಯೋಗಗಳು ಮತ್ತು ಅವನ ವೃತ್ತಿ ಜೀವನದ ಬೇರೆ ಬೇರೆ ಘಟನೆಗಳ ಬಗ್ಗೆ ಬರೆದನು. ಅವನ ಅಧಿಕೃತ ಸೈಟ್ Allಸೀನ್Paul.com ಆಗಿದೆ.2010 ನೇ ಇಸವಿಯಲ್ಲಿ ಒಂದು ಹೊಸ ಆಲ್ಬಂಅನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು 2009 ರ ಒಂದು ಸಂದರ್ಶನದಲ್ಲಿ ತಿಳಿಸಿದ್ದಾನೆ.

MNET ನ ಬಿಗ್ ಬ್ರದರ್ ಆಫ್ರಿಕ 5:ಆಲ್-ಸ್ಟಾರ್ ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ 2010 ರ ಜುಲೈ 18 ರಂದು ಅವನು ಅವನ "ಟೆಂಪ್ರೆಚರ್", "ಹೋಲ್ಡ್ ಮೈ ಹ್ಯಾಂಡ್", ಮತ್ತು "ಸೊ ಫೈನ್" ಹಾಡುಗಳನ್ನು ಪ್ರದರ್ಶಿಸಿದನು.

ಸಂಗೀತ ಸಂಪುಟಗಳು

[ಬದಲಾಯಿಸಿ]
  • ಸ್ಟೇಜ್ ಒನ್ (2000)
  • ಡ್ಯುಟಿ ರಾಕ್ (2002)
  • ದಿ ಟ್ರಿನಿಟಿ (2005)
  • ಇಂಪಿರಿಯಲ್ ಬ್ಲೇಸ್ (2009)

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
2007 ಮೇ ತಿಂಗಳಿನಲ್ಲಿ ಪ್ರಪಂಚದ ಸಂಗೀತ ಪ್ರಶಸ್ತಿಗಳು.
  • ಅಮೆರಿಕನ್‌ ಸಂಗೀತ ಪ್ರಶಸ್ತಿಗಳು
    • 2006, ಅಚ್ಚುಮೆಚ್ಚಿನ ಪಾಪ್/ರಾಕ್ ಪುರುಷ ಕಲಾವಿದ (ವಿಜೇತ)
    • 2003, ಅಚ್ಚುಮೆಚ್ಚಿನ ಹಿಪ್-ಹಾಪ್/ರಾಪ್ ಪುರುಷ ಕಲಾವಿದ (ನಾಮನಿರ್ದೇಶನಗೊಂಡಿದೆ)
    • 2003, ಅಚ್ಚುಮೆಚ್ಚಿನ ಹಿಪ್-ಹಾಪ್/ರಾಪ್ ಆಲ್ಬಂ ಡ್ಯೂಟಿ ರಾಕ್ (ನಾಮನಿರ್ದೇಶನಗೊಂಡಿದೆ)
  • BET ಪ್ರಶಸ್ತಿಗಳು
    • 2003, ಅತ್ಯುತ್ತಮ ಹೊಸ ಕಲಾವಿದ (ನಾಮನಿರ್ದೇಶನಗೊಂಡಿದೆ)
  • MTV ರೊಮೆನಿಯ ಸಂಗೀತ ಪ್ರಶಸ್ತಿಗಳು
    • 2007, ಅತ್ಯುತ್ತಮ ಅಂತರರಾಷ್ಟ್ರೀಯ ಕಲಾವಿದ (ವಿಜೇತ)
  • ಗ್ರಾಮಿ ಪ್ರಶಸ್ತಿಗಳು
    • 2010, ಅತ್ಯುತ್ತಮ ರೆಗ್ಗಿ ಆಲ್ಬಂ: ಇಂಪಿರಿಯಲ್ ಬ್ಲೇಸ್ (ನಾಮನಿರ್ದೇಶನಗೊಂಡಿದೆ)
    • 2006, ಅತ್ಯುತ್ತಮ ರೆಗ್ಗಿ ಆಲ್ಬಂ: ದಿ ಟ್ರಿನಿಟಿ (ನಾಮನಿರ್ದೇಶನಗೊಂಡಿದೆ)
    • 2004, ಅತ್ಯುತ್ತಮ ಹೊಸ ಕಲಾವಿದ:(ನಾಮನಿರ್ದೇಶನಗೊಂಡಿದೆ)
    • 2004, ಅತ್ಯುತ್ತಮ ರೆಗ್ಗಿ ಆಲ್ಬಂ: ಡ್ಯೂಟಿ ರಾಕ್ (ವಿಜೇತ)
    • 2004, ಅತ್ಯುತ್ತಮ ಪುರುಷ ರಾಪ್ ಸೋಲೋ ಪ್ರದರ್ಶನ: "ಗೆಟ್ ಬ್ಯುಸಿ" (ನಾಮನಿರ್ದೇಶನಗೊಂಡಿದೆ)
  • MOBO ಪ್ರಶಸ್ತಿಗಳು
    • 2009, ಅತ್ಯುತ್ತಮ ರೆಗ್ಗಿ ಪ್ರದರ್ಶನ (ವಿಜೇತ)
    • 2006, ಅತ್ಯುತ್ತಮ ರೆಗ್ಗಿ ಪ್ರದರ್ಶನ (ವಿಜೇತ)
    • 2005, ಅತ್ಯುತ್ತಮ ರೆಗ್ಗಿ ಪ್ರದರ್ಸನ (ನಾಮನಿರ್ದೇಶನಗೊಂಡಿದೆ)
  • MTV ವಿಡಿಯೋ ಸಂಗೀತ ಪ್ರಶಸ್ತಿಗಳು
    • 2006, ಅತ್ಯುತ್ತಮ ನೃತ್ಯ ವಿಡಿಯೋ "ಟೆಂಪ್ರೆಚರ್" (ನಾಮನಿರ್ದೇಶನಗೊಂಡಿದೆ)
    • 2003, ಅತ್ಯುತ್ತಮ ನೃತ್ಯ ವಿಡಿಯೋ "ಗೆಟ್ ಬ್ಯುಸಿ" (ನಾಮನಿರ್ದೇಶನಗೊಂಡಿದೆ)
    • 2003, ಅತ್ಯುತ್ತಮ ಹೊಸ ಕಲಾವಿದ "ಗೆಟ್ ಬ್ಯುಸಿ" (ನಾಮನಿರ್ದೇಶನಗೊಂಡಿದೆ)
  • ಸೋಲ್ ಟ್ರೇನ್ ಪ್ರಶಸ್ತಿಗಳು
    • 2009, ಅತ್ಯುತ್ತಮ ರೆಗ್ಗಿ ಕಲಾವಿದ (ವಿಜೇತ)
    • 2007, ಅತ್ಯುತ್ತಮ ಡ್ಯಾನ್ಸ್ ಕಟ್ "ವೆನ್ ಯು ಗೋನ (ಗಿವ್ ಇಟ್ ಅಪ್ ಟು ಮಿ)" (ನಾಮನಿರ್ದೇಶನಗೊಂಡಿದೆ)

ಸಹಯೋಗಗಳು

[ಬದಲಾಯಿಸಿ]

ಸೀನ್ ಪಾಲ್ ಈ ಕೆಳಕಂಡವರ ಸಹಯೋಗದೊಂದಿಗೆ ಕಾರ್ಯನಿರ್ವಹಿಸಿದ್ದಾರೆ: ಬೆಯಾನ್ಸ್ ನಾವೆಲ್ಸ್, ರಿಹನ್ನ, ಬ್ಲು ಕ್ಯಾಂಟ್ರೆಲ್, ಅಕಾನ್, ಪಿಟ್ ಬುಲ್, ಕೆರಿ ಹಿಲ್ಸನ್, ಜೇ ಸೀನ್, ಸೀನ್ ಕಿಂಗ್ಸ್ಟನ್, ಇಸ್ಟೆಲ್, ಕ್ರಿಸ್ ಬ್ರೌನ್, ಜೇ-Z, 50 ಸೆಂಟ್, ಈವ್, ಸೂಪ್ ಡಾಗ್ಗ್, ಶಾಗಿ, ಜಿಗ್ಗಿ ಮಾರ್ಲೆ, ಬೀನಿ ಮ್ಯಾನ್, ಎಲಿಫೆಂಟ್ ಮ್ಯಾನ್, ಬುಸ್ಟ ರೈಮ್ಸ್, ಕೆಲಿಸ್, ಕಾರ್ಲಾಸ್ ಸ್ಯಾನ್ಟನ, ಗ್ವೆನ್ ಸ್ಟೆಫನಿ ಕಾರ್ಡಿನಲ್ ಆಫಿಶಲ್, ಕೇಷಿಯ ಕೊಲೆ, ಪ್ರಿಟಿರಿಕಿ ಮಿಸ್ಸಿ ಎಲಾಯ್ಟ್, ವಿಬ್ಜ್ ಕಾರ್ಟೆಲ್, ಜಾಸ್ ಸ್ಟೋನ್, T-ಪೇನ್, ವೈಕ್ಲೆಫ್ ಜೀನ್, ಶಾಬಾಬಾ ರಾಂಕ್ಸ್, ಮ್ಯಾ, ಲಿಲ್ ಜಾನ್, ಟ್ವಿಸ್ಟ, Mr. ವೇಗಾಸ್, ಡಿ ಲಾ ಸೋಲ್, ಫಾಬುಲಸ್, ವಿಸಿನ್ ಮತ್ತು ಯಾಂಡೆಲ್ , ಪ್ಯಾಟ್ ಮ್ಯಾನ್ ಸ್ಕೂಪ್, ಕಿಡ್ ಕ್ರೂಪ್, ಜುಲಿ ಬ್ಲ್ಯಾಕ್, ವೇನೆ ವಂಡರ್, ರಿಚೆ ಸ್ಟೀಫನ್ , ಲೋಗ ಮ್ಯಾನ್, ಶ್ಯಾನೋ, ಲಿಲ್' ಸ್ಕ್ರಾಪಿ, ನಿನ ಸ್ಕೈ, ಡ್ಯಾಡಿ ಯಾಂಕೀ, ಅಲಿಸನ್ ಹಿಂಡಸ್, ಸಾಶ್, ಟೈಮ್ ಚಿನ್, ಬ್ಯುನಿ ರುಗ್ಸ್, ಟಿಂಬಾಲೆಂಡ್, ಲಿಸಾ, ಡೆಬಿ ನೋವ, ಟೋನಿ ಟಚ್, ವಾಯ್ನೆ ಮಾರ್ಶಲ್, ಲಾಬ, ಡೆಲ್ಲಿ ಹಾವ್ ಕೆಯೆ, ಸೆಸಿಲ್, ಚಿಕೊ, ಮುಂಗ, Mr. ಈಸಿ, Mr. ಚಿಕನ್, ಬ್ರಾಂಡಿ, ಟೋನಿ ಗೋಲ್ಡ್ , ಡೈಸ್ಟ್ರ ಗ್ಯಾರ್ಸಿಯ, ಲೆಗಿಟಿಮೇಟ್, ಜಿಮ್ಮಿ ಕಾಯ್ ಸರ್, ಬ್ಲಿಂಗ್ ಡವ್ಗ್, ಜೋಸೀ, R. ಕೆಲ್ಲಿ, Mr.ಇವಿಲ್, ಬ್ಯುಸಿ ಸಿಗ್ನಲ್, ಡವಿಲ್ಲೆ, ಲೇಡಿ ಸಾ, ಚುಬಾಕ ಡ್ಯಾಸ್ EFX, ಡೆಬಿ ನೋವ, ರಿಚ್ಚೆ ಸ್ಟೀಫನ್ಸ್, ಟೋನಿ ಬ್ರಾಕ್ಸ್ ಟೋನ್, ವಿಲ್ ಸ್ಮಿತ್ , ಡಾನ್ ಕಾರೆಲೋನ್, DMX, ಲಿಟ್ಟಲ್ ಕಿರ್ಕ್, ಕೂಲ್ ಮತ್ತು ಗ್ಯಾಂಗ್, ಸ್ಪ್ಯಾನರ್ ಬ್ಯಾನರ್, ಸ್ಪ್ರಾಗ ಬೆನ್ಸ್, ರಾಮ್ ಪೇಜ್, ಪ್ರಾಸ್, ರಾಹ್ ಜೆಲ್, ಜಾಹೋ, ನಿಕಿ ಮಿನಾಜ್, ಚಿನೂ, ಅವನ ಹೈಪ್ಮೆನ್ ಫೇರೆನ್ ಹಿಟ್ ಮತ್ತು ಜಿಗ್ಜಗುಲಾ (ಅವನ ಸಹೋದರ)'

ಆಕರಗಳು

[ಬದಲಾಯಿಸಿ]
  1. ೧.೦ ೧.೧ "ಸೀನ್ ಪಾಲ್ ಬಯೋಗ್ರಫಿ – AllSeanPaul.com". Archived from the original on ಅಕ್ಟೋಬರ್ 1, 2012. Retrieved ಆಗಸ್ಟ್ 24, 2010.
  2. ೨.೦ ೨.೧ "ಸೀನ್ ಪಾಲ್ |ವ್ಯೂ ದಿ ಮ್ಯೂಸಿಕ್ ಆರ್ಟಿಸ್ಟ್ ಬಯೋಗ್ರಫಿ ಆನ್ ಲೈನ್| VH1.com". Archived from the original on ಜನವರಿ 3, 2010. Retrieved ಆಗಸ್ಟ್ 24, 2010.
  3. "ಸೀನ್ ಪಾಲ್". Archived from the original on ಮೇ 4, 2014. Retrieved ಆಗಸ್ಟ್ 24, 2010.
  4. ಸೀನ್ ಪಾಲ್: ಅಪ್ ಟೌನ್ ಟಾಪ್ ರಾಂಕಿಂಗ್
  5. "ಸೀನ್ ಪಾಲ್ | www.somethingjewish.co.uk". Archived from the original on ಮಾರ್ಚ್ 5, 2009. Retrieved ಆಗಸ್ಟ್ 24, 2010.
  6. ಅ ಯಿಡಿಷಿಯರ್ ರಾಸ್ಟ ಮ್ಯಾನ್
  7. "ಮ್ಯೂಸಿಕ್ ಅವಾರ್ಡ್ ಶೋಸ್ ವಿನ್ನರ್ಸ್ ಫ್ರಮ್ Billboard.com – ದಿ ರಿಸೋರ್ಸ್ ಫಾರ್ ಮ್ಯೂಸಿಕ್ ಅವಾರ್ಡ್ಸ್ ನ್ಯೂಸ್". Archived from the original on ನವೆಂಬರ್ 1, 2005. Retrieved ನವೆಂಬರ್ 1, 2005.
  8. "ಆರ್ಕೈವ್ ನಕಲು". Archived from the original on ಜೂನ್ 4, 2009. Retrieved ಆಗಸ್ಟ್ 24, 2010.
  9. http://www.rap-up.com/2009/04/25/new-music-sean-paul-so-fine/
  10. ೧೦.೦ ೧೦.೧ "ಆರ್ಕೈವ್ ನಕಲು". Archived from the original on ಜುಲೈ 18, 2011. Retrieved ಆಗಸ್ಟ್ 24, 2010.
  11. ಸೀನ್ ಪಾಲ್ ಸ್ ಮೈಸ್ಪೇಸ್
  12. "ಆರ್ಕೈವ್ ನಕಲು". Archived from the original on ಜುಲೈ 17, 2011. Retrieved ಆಗಸ್ಟ್ 24, 2010.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖನ

[ಬದಲಾಯಿಸಿ]

[] [] []

ಟೆಂಪ್ಲೇಟು:Sean Paul

  1. https://twitter.com/duttypaul?ref_src=twsrc%5Egoogle%7Ctwcamp%5Eserp%7Ctwgr%5Eauthor
  2. http://allseanpaul.com/
  3. https://www.billboard.com/music/sean-paul