ವಿಷಯಕ್ಕೆ ಹೋಗು

ಸೀದಿ ಸೈಯದ್ ಮಸೀದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀದಿ ಸೈಯದ್ ಮಸೀದಿ (ಸ್ಥಳೀಯವಾಗಿ ಸೀದಿ ಸೈಯಿದ್ ನಿ ಜಾಲಿ ಎಂದು ಜನಪ್ರಿಯವಾಗಿ ಪರಿಚಿತವಾಗಿದೆ) ಕ್ರಿ.ಶ. 1572-73 ನಲ್ಲಿ ನಿರ್ಮಿಸಲ್ಪಟ್ಟ ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಅತ್ಯಂತ ಪ್ರಸಿದ್ಧ ಮಸೀದಿಗಳಲ್ಲಿ ಒಂದಾಗಿದೆ.

ಮಸೀದಿಯು ಸಂಪೂರ್ಣವಾಗಿ ಕಮಾನುಗಳುಳ್ಳದ್ದಾಗಿದೆ ಮತ್ತು ಪಾರ್ಶ್ವದಲ್ಲಿ ಹಾಗೂ ಹಿಂಭಾಗದ ಕಮಾನುಗಳ ಇದರ ಹತ್ತು ಸಂಕೀರ್ಣವಾಗಿ ಕೆತ್ತಲ್ಪಟ್ಟ ಜಾಲರಿಕೆಲಸವಿರುವ ಕಿಟಕಿಗಳಿಗೆ ಪ್ರಸಿದ್ಧವಾಗಿದೆ. ಹಿಂಭಾಗದ ಗೋಡೆಯು ಜ್ಯಾಮಿತೀಯ ವಿನ್ಯಾಸದಲ್ಲಿರುವ ಚೌಕ ಕಲ್ಲಿನಿಂದ ಚುಚ್ಚಲ್ಪಟ್ಟ ಫಲಕಗಳಿಂದ ತುಂಬಿದೆ. ಕೇಂದ್ರ ಹಜಾರದ ಪಾರ್ಶ್ವದಲ್ಲಿರುವ ಎರಡು ವಿಭಾಗಗಳು ಹೆಣೆದುಕೊಂಡ ಮರಗಳು ಮತ್ತು ಎಲೆಗೊಂಚಲು ಹಾಗೂ ಒಂದು ತಾಳೆ ಅಲಂಕಾರದ ವಿನ್ಯಾಸಗಳಲ್ಲಿ ಕೆತ್ತಲ್ಪಟ್ಟ ಜಾಲಾಕಾರದ ಕಲ್ಲಿನ ಚಪ್ಪಡಿಗಳನ್ನು ಹೊಂದಿವೆ.

ಸಂಕೀರ್ಣವಾದ ಜಾಲರಿ ಕೆಲಸವನ್ನು ನೋಡಬಹುದೆಂದು ನಿರೀಕ್ಷಿಸಲಾದ ಮಸೀದಿಯ ಕೇಂದ್ರ ಕಿಟಕಿಯನ್ನು ಕಮಾನು ಗೋಡೆ ಕಟ್ಟಿ ಮುಚ್ಚಲಾಗಿದೆ.[] ಮುಘಲರು ಗುಜರಾತ್ ಮೇಲೆ ದಾಳಿ ಮಾಡುವ ಮುನ್ನ ಯೋಜನೆಯ ಪ್ರಕಾರ ಮಸೀದಿಯು ಸಮಾಪ್ತಿಗೊಂಡಿಲ್ಲದಿರದಿದ್ದ ಕಾರಣದಿಂದ ಇದು ಆಗಿರಬಹುದು.[]

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Khan, KDL (4 June 2011). "The Symbol of Ahmedabad". Navhind Times. Archived from the original on 10 June 2012. Retrieved 1 July 2011.
  2. Commissariat, M. S. (1938). History of Gujarat. Vol. I. Longman, Greens & Co. pp. 502–505.