ಸಿ ಎಸ್ ಸಂತೋಷ್

ವಿಕಿಪೀಡಿಯ ಇಂದ
Jump to navigation Jump to search
ಸಿ ಎಸ್ ಸಂತೋಷ್

ಸಿ ಎಸ್ ಸಂತೋಷ್ ರವರು ಭಾರತೀಯ ಆಫ್ ರೋಡ್ ಮತ್ತು ಎಂಡ್ಯೂರೋ ಮೋಟಾರ್ಸೈಕಲ್ ಸ್ಪರ್ಧಿ. ಇವರು ರಾಷ್ಟ್ರೀಯ ಸೂಪರ್ ಕ್ರಾಸ್ ಮತ್ತು ಮೋಟಾರ್ ಕ್ರಾಸ್ ನಲ್ಲಿ ವಿಜಯ ಸಾಧಿಸಿದ್ದಾರೆ. ಸಂತೋಷ್ ರವರು ಒಂದು ದಶಕಕ್ಕಿಂತಲೂ ಹೆಚ್ಚಿನ ಸಮಯದಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇವರು ಹೀರೊ ಮೋಟಾರ್ ನ ಮೋಟಾರ್ ಸವಾರ. ಇವರು ಭಾರತದಲ್ಲಿ ಮೋಟಾರ್ ಸ್ಪರ್ಧೆ ಪ್ರಚಲಿತಗೊಳ್ಳಲು ಕಾರಣ.[೧]


ಜನನ[ಬದಲಾಯಿಸಿ]

ಇವರು ಡಿಸೆಂಬರ್ ೦೧ ೧೯೮೩ ರಲ್ಲಿ ಜನಿಸಿದರು. ಇವರ ಪೂರ್ಣನಾಮ ಚುಂಚುನಗುಪ್ಪೆ ಶಿವಶಂಕರ ಸಂತೋಷ್.


ಆರಂಭಿಕ ಮತ್ತು ವೃತ್ತಿ ಜೀವನ[ಬದಲಾಯಿಸಿ]

ತಮ್ಮ ೧೭ ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನೆಡೆದ ಸೂಪರ್ ಕ್ರಾಸ್ ಮೋಟಾರ್ ಸ್ಪರ್ಧೆಯನ್ನು ಮೊದಲ ಬಾರಿಗೆ ವೀಕ್ಷಿಸಿದ್ದರು ಮತ್ತು ಇದೇ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದರು. ಇದರಿಂದ ಉತ್ತೇಜಿತರಾಗಿ, ಆಫ್ ರೋಡ್ ಮೋಟಾರ್ ಸೈಕಲ್ ಸವಾರನಾಗುವ ಕನಸು ಕಂಡಿದ್ದರು. ನಾಲ್ಕು ವರ್ಷಗಳಿಂದ ಡಕರ್ ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಮೋಟಾರ್ ಸವಾರನಾಗಿದ್ದಾರೆ ಮತ್ತು ವೃತ್ತಿಯನಾಗಿಸಿ ಕೊಂಡಿದ್ದಾರೆ. ಸಂತೋಷ್ ರವರಿಗೆ ಭಾರತದ ಶ್ರೇಷ್ಠ ಆಫ್ ರೋಡ್ ಮೋಟಾರ್ ಸ್ಪರ್ಧಿ ಎಂದು ಬಿರುದನ್ನು ನೀಡಲಾಗಿದೆ. ಇವರ ಧೈರ್ಯ ಮತ್ತು ನಿರ್ಣಯದಿಂದಾಗಿ ಡಕರ್ ಸ್ಪರ್ಧೆಯಲ್ಲಿ ಭಾಗವಹಿಸುವಂತಾಯಿತು.[೨]


ಸಾಧನೆಗಳು[ಬದಲಾಯಿಸಿ]

  • ತಮ್ಮ ೨೨ ನೇ ವಯಸ್ಸಿನಲ್ಲಿ ಗಲ್ಫ್ ರಾಷ್ಟ್ರೀಯ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಶಿಪ್ ೨೦೦೫ ರಲ್ಲಿ ಪ್ರಶಸ್ತಿಯನ್ನು ಪಡೆದರು.
  • ೨೦೦೬ ರಲ್ಲಿ ದುಬೈನಲ್ಲಿ ನೆಡೆದ ಅಲ್ ಐನ್ ಮೋಟೊಕ್ರಾಸ್ ನಲ್ಲಿ ಪ್ರಶಸ್ತಿಯನ್ನು ಪಡೆದರು. ಜೊತೆಗೆ ದುಬೈ ರಾಷ್ಟ್ರೀಯ ಎಮ್ ಎಕ್ಸ್ ಸ್ಪರ್ಧೆ ಯಲ್ಲಿ ೫ ನೇ ಸ್ಥಾನ ಗಳಿಸಿದರು. ನಂತರದ ವರ್ಷಗಳಲ್ಲಿ ‌‌ರಾಷ್ಟ್ರೀಯ ಸೂಪರ್ ಕ್ರಾಸ್ ಸ್ಪರ್ಧೆಯಲ್ಲಿ ಜಯವನ್ನು ಗಳಿಸಿದರು.
  • ೨೦೦೮ ರಲ್ಲಿ ಇವರು ಏಷಿಯನ್ ಮೋಟೊ ಸ್ಪರ್ಧೆಯಲ್ಲಿ ಜಯಗಳಿಸಿದ ಮೊದಲ ಭಾರತೀಯ ಎನಿಸಿಕೊಂಡರು.
  • ೨೦೦೮ ರಲ್ಲಿ ಇರಾನ್ ನಲ್ಲಿ ನೆಡೆದ ಮೋಟೊ ೨ ಸ್ಪರ್ಧೆಗೆ ಆಯ್ಕೆಯಾದರು. ಜೊತೆಗೆ ಆ ಸ್ಪರ್ಧೆಯನ್ನು ೪ ನೇ ಸ್ಥಾನ ದಿಂದ ಪೂರ್ಣಗೊಳಿಸಿದರು.
  • ೨೦೦೯ ರಲ್ಲಿ ಶ್ರೀ ಲಂಕಾದಲ್ಲಿ ನೆಡೆದ ಮಹರಗಮ ಮೋಟೊ ಸ್ಪರ್ಧೆಯಲ್ಲಿ ವಿಜಯ ಸಾಧಿಸಿದರು.
  • ೨೦೧೧ ರಲ್ಲಿ ಗಜಬಾ ಸೂಪರ್ ಕ್ರಾಸ್ ನಲ್ಲಿ ಜಯಗಳಿಸಿದ್ದಾರೆ.
  • ೨೦೧೨ ರಲ್ಲಿ ರೈಡ್-ದೆ-ಹಿಮಾಲಯ ದಲ್ಲಿ ಭಾಗವಹಿಸಿದ್ದರು. ಇದು ಭಾರತದಲ್ಲಿ ನೆಡೆದ ಮೊದಲ ಮೋಟೊಸ್ಪೋರ್ಟ್ ಸ್ಪರ್ಧೆಯಾಗಿತು. ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಜಯ ಗಳಿಸಿದರು.
  • ೨೦೧೩ ರಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ರ‌್ಯಾಲಿರಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]