ಸಿ. ಎ. ಶ್ರೀಧರ

ವಿಕಿಪೀಡಿಯ ಇಂದ
Jump to navigation Jump to search
ಸಿ. ಎ. ಶ್ರೀಧರ
ಜನ್ಮ ನಾಮಸಿ. ಎ. ಶ್ರೀಧರ
ಜನನ (1961-10-06) ೬ ಅಕ್ಟೋಬರ್ ೧೯೬೧ (age ೫೯)
ಮೂಲಸ್ಥಳಮೈಸೂರು ಜಿಲ್ಲೆ, ಕರ್ನಾಟಕ
ಶೈಲಿ/ಗಳುಕರ್ನಾಟಕ ಸಂಗೀತ ಪಿಟೀಲು ವಾದಕ
ವೃತ್ತಿಗಳುಪ್ರಾಂಶುಪಾಲರು, ಮೈಸೂರು ವಿಶ್ವವಿದ್ಯಾನಿಲಯ ಲಲಿತಕಲಾ ಕಾಲೇಜು

ಡಾ.ಸಿ.ಎ.ಶ್ರೀಧರ ಅಕ್ಟೋಬರ್ ೦೬ ೧೯೬೧ ರಲ್ಲಿ ಚಿಲಕುಂದ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕದಲ್ಲಿ ಜನಿಸಿದರು. ಇವರು ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರು. ಸಂಗೀತಾಭ್ಯಾಸವನ್ನು ವಿದ್ವಾನ್ ಶ್ರೀ. ವೆಂಕಟನಾರಾಯಣ ಉಡುಪ ಶಾಸ್ತ್ರಿ ಅವರ ಶಿಷ್ಯ, ಶ್ರೀ ತ್ಯಾಗರಾಜರ ಶಿಷ್ಯ ಪರಂಪರ (ಶಿಷ್ಯರ ವಂಶ) ನೇರ ವಂಶಸ್ಥರು ಇವರಬಳಿ ಕಲಿತರು. ಇವರು 14 ನೇ ವಯಸ್ಸಿನಲ್ಲೇ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳು, ಸಂಸ್ಥೆಗಳು, ಸಂಗೀತ ಸಮ್ಮೇಳನಗಳು ಇತ್ಯಾದಿಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.[೧]

ಜನನ[ಬದಲಾಯಿಸಿ]

ಪ್ರಸಿದ್ಧ ಸಂಗೀತಗಾರರ ಮನೆತನಕ್ಕೆ ಸೇರಿದ ಶ್ರೀಧರರವರು ಹುಟ್ಟಿದ್ದು ಹುಣಸೂರು ತಾಲ್ಲೂಕಿನ ಚಿಲಕುಂದದಲ್ಲಿ. ತಂದೆ ವಿದ್ವಾನ್‌ ಸಿ. ಕೆ. ಅನಂತರಾಮಯ್ಯನವರು, ತಾಯಿ ಸಿ.ಎಸ್‌. ಸತ್ಯಲಕ್ಷ್ಮಿ. ವೆಂಕಟನಾರಾಯಣ ಶಾಸ್ತ್ರಿ ಉಡುಪರಲ್ಲಿ ೪ನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣ, ವಿ. ದೇಶಿಕಾಚಾರ್ಯರ ಮಾರ್ಗದರ್ಶನ. ಗಾಯನ ಮತ್ತು ವೇಣುವಾದನದಲ್ಲಿ ವಿದ್ವತ್‌ ಪದವಿ. ಮೈಸೂರು ವಿಶ್ವವಿದ್ಯಾಲಯದ ಬಿ.ಎಸ್ಸಿ, ಬಿ.ಎಫ್.ಎ, ಎಂ.ಎ ಮತ್ತು ಲಲಿತಕಲೆ – ಸಂಗೀತದಲ್ಲಿ ಪಡೆದ ಪಿಎಚ್‌.ಡಿ. ಪದವಿ. ಲಲಿತ ಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆ. ೧೪ನೇ ವಯಸ್ಸಿನಿಂದಲೇ ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತದ ವೇಣುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದ ’ಎ’ ಶ್ರೇಣಿಯ ಕಲಾವಿದರು. ಹಲವಾರು ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನದಿಂದ ಪ್ರಸಾರ. ರಾಷ್ಟ್ರೀಯ, ಅಂತಾರಾಷ್ಟ್ರಿಯ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗಿ. ಹಲವಾರು ವಿಚಾರ ಸಂಕಿರಣಗಳಲ್ಲಿ ವಿದ್ವತ್‌ಪೂರ್ಣ, ಸಂಶೋಧನಾ ಪ್ರಬಂಧಗಳ ಮಂಡನೆ. ಪ್ರಾತ್ಯಕ್ಷಿಕೆ ಮತ್ತು ಸಂಗೀತ ಕಚೇರಿ. ಸಂಗೀತ ಕಲಾವರ್ಧಿನಿ, ಕಲಾಭಾರತಿ, ಕರ್ನಾಟಕ ಗಾನಕಲಾ ಪರಿಷತ್‌, ದೆಹಲಿಯ ಇಂಟರ್‌ನ್ಯಾಷನಲ್‌ ಕಲ್ಚರಲ್‌ ರೂರಲ್‌ ಸೆಂಟರಿನ ಯುವಜನೋತ್ಸವ, ಉಡುಪಿ, ಧರ್ಮಸ್ಥಳ ಮುಂತಾದೆಡೆ ನೀಡಿದ ಕಾರ್ಯಕ್ರಮಗಳು. ಲೋಹವಂಶಿ ಎಂಬ ವಿಶಿಷ್ಟಕೊಳಲಿನ ಆವಿಷ್ಕಾರ. ೧೭೧ ಮೇಳಕರ್ತ ಪದ್ಧತಿಗಳನ್ನು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ, ೧೦೦ಕ್ಕೂ ಹೆಚ್ಚು ಕೃತಿಗಳ ರಚನೆ. ಹಲವಾರು ಸಂಗೀತ ಸಂಬಂಧಿ ಗ್ರಂಥಗಳನ್ನು ರಚಿಸಿದ್ದಾರೆ, ನಿಯತಕಾಲಿಕಗಳಲ್ಲಿ ಲೇಖನಗಳು ಪ್ರಕಟಿತ. [೨]

ಕರ್ನಾಟಕ ಶಾಸ್ತ್ರೀಯ ಸಂಯೋಜನೆ[ಬದಲಾಯಿಸಿ]

ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ವಿಭಿನ್ನ ಸಂಗೀತ ಸಂಯೋಜನೆಗಳನ್ನು ರಚಿಸಿದ್ದಾರೆ. ಅವರು ಲೋಹಾ ವಂಶಿ '- ಒಂದು ವಿಶೇಷ ರೀತಿಯ ಕೊಳಲು - ಸಂಗೀತ ವಾದ್ಯ ಪ್ರಪಂಚಕ್ಕೆ ಹೊಸದಾಗಿ ಕಂಡುಹಿಡಿದಿದು ಪರಿಚಯಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ

171 ಮೆಳಕರ್ತ ಪದ್ದತಿ ಸಹ ಕಂಡುಹಿಡಿದಿದ್ದಾರೆ.

ಪ್ರಸಕ್ತ ಮಾಹಿತಿ[ಬದಲಾಯಿಸಿ]

ಪ್ರಸ್ತುತ ಡಾ.ಸಿ.ಎ.ಶ್ರೀಧರರವರು ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು ಹಲವಾರು ಸಂಶೋಧಕ (ಪಿ.ಹೆಚ್ಡಿ) ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ[೩]

ಪ್ರಶಸ್ತಿಗಳು[ಬದಲಾಯಿಸಿ]

೨೦೦೬ರ ಸುವರ್ಣಕರ್ನಾಟಕ ಹೊಯ್ಸಳ ಪ್ರಶಸ್ತಿ[೨]

೧೯೮೦ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಪುರಸ್ಕಾರ[೨]

ಉಲ್ಲೇಖಗಳು[ಬದಲಾಯಿಸಿ]

  1. http://kanaja.in/?tribe_events=ಡಾ-ಸಿ-ಎ-ಶ್ರೀಧರ
  2. ೨.೦ ೨.೧ ೨.೨ http://kanaja.in/?tribe_events=ಡಾ-ಸಿ-ಎ-ಶ್ರೀಧರ
  3. http://www.uni-mysore.ac.in/english-version/university-college-fine-arts/fine-arts-college-women/faculty