ಸಿಸ್ ಮೋಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಸ್ ಮೋಂಡಿಯ ಪೂರ್ಣ ಹೆಸರು ಜೀನ್ ಚಾರ್ಲ್ಸ್ ಲಿಯೋನಾರ್ಡ್ ಸೈಮೋನ್ ಡೆ ಡಿ ಸಿಸ್ ಮೋಂಡಿ ಎಂಬುದಾಗಿದೆ. ಅವನು ಅರ್ಥಿಕ ಚಿಂತನೆಯ ಇತಿಹಾಸದಲ್ಲಿ ಸಿಸ್ ಮೋಂಡಿ ಎಂದೇ ಪ್ರಖ್ಯಾತನಾಗಿದ್ದಾನೆ. ಸಂಪ್ರದಾಯ ಪಂಥದವರು ಪ್ರತಿಪಾದಿಸಿದ ವ್ಯಕ್ತಿವಾದವನ್ನು ಟೀಕಿಸಿ ತನ್ನ ಸಮಾಜವಾದಿ ಚಿಂತನೆಗಳನ್ನು ಹರಿಬಿಟ್ಟ ಅವನು ಪ್ರಮುಖ ಸಮಾಜವಾದಿಗಳಲ್ಲಿ ಒಬ್ಬನಾಗಿದ್ದಾನೆ.

ಜೀವನ ಚಿತ್ರಣ[ಬದಲಾಯಿಸಿ]

ಸಿಸ್ ಮೋಂಡಿ ಸ್ವಿಡ್ಜರ್ ಲೆಂಡಿನ ಜಿನೀವಾದಲ್ಲಿ ೧೭೭೩ರಲ್ಲಿ ಜನಿಸಿದನು. ಫ಼್ರೆಂಚ್ ಕ್ರಾಂತಿಯು ಭುಗಿಲೆದ್ದ ಸಂದರ್ಭದಲ್ಲಿ ಅವನು ಜಿನೀವಾದಿಂದ ಹೊರಬಂದು ಇಂಗ್ಲೆಂಡನಲ್ಲಿ ನೆಲೆಸಿದನು.ಅತ್ಯುತ್ತಮ ಶಿಕ್ಷಣ ಪಡೆದ ಆತ ಸೀನಿಯರ್, ರಿಕಾರ್ಡೋ,ಫ಼್ರೆಡರಿಕ್ ಲಿಸ್ಟ್, ಜೆ. ಬಿ. ಸೇ ಮತ್ತು ಮಾಲ್ಥ್ಸನ್ ಸಮಕಾಲೀನನಾಗಿದ್ದ. ಈತ ಇವರೆಲ್ಲರ ಪ್ರಭಾವಕ್ಕೆ ಒಳಗಾದ. ಫ಼್ರಾನ್ಸಿನ ಮಹಾಕ್ರಾಂತಿ, ನೆಪೋಲಿಯನ್ನನ ಯುದ್ದಗಳು ಮತ್ತು ಕೈಗಾರಿಕಾ ಕ್ರಾಂತಿಯ ಅನೇಕ ಅನಿಷ್ಟಗಳನ್ನು ಕಣ್ಣಾರೆ ಕಂಡ. ೧೮೧೫ ಮತ್ತು ೧೮೨೫ರ ನಡುವಿನ ಫ಼್ರಾನ್ಸ್ ಮತ್ತು ಇಂಗ್ಲೆಂಡಿನಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಅಭ್ಯಸಿಸಿದ. ಈ ಎಲ್ಲಾ ಬಿಕ್ಕಟ್ಟುಗಳಿಗೆ ಆರ್ಥಿಕ ಅಸಮತೋಲನ ಸೃಷ್ಟಿಸುವ ಬಂಡವಾಳ ಶಾಹಿ ವ್ಯವಸ್ಥೆಯೇ ಕಾರಣ ಎಂಬ ತೀರ್ಮಾನಕ್ಕೆ ಸಿಸ್ಮ ಮೋಂಡಿ ಬಂದನು. ಅವನು ೧೮೪೨ರಲ್ಲಿ ಕಾಲವಾದನು.

ಅವನ ಕೃತಿಗಳು[ಬದಲಾಯಿಸಿ]

ಅವನ ಪ್ರಮುಖ ಕೃತಿಗಳು ಈ ಕೆಳಗಿನಂತಿವೆ. ೧.ಕಮರ್ಶಿಯಲ್ ವೇಲ್ತ್(೧೮೦೩) ೨.ನ್ಯೂ ಪ್ರಿನ್ಸೀಪಲ್ಸ್ ಆಫ಼್ ಪೋಲಟಿಕಲ್ ಎಕೋನಮಿ(೧೮೧೯) ೩.ಸ್ಟಡೀಸ್ ಇನ್ ಪೋಲಟಿಕಲ್ ಎಕೋನಮಿ(೧೮೩೭-೩೮) ೪.ಇಸ್ಟರೀ ಆಫ಼್ ಫ಼್ರೇಂಚ್ ಪೀಪಲ್(೨೯ ಸಂಪುಟಗಲಳು) ೫.ಇಸ್ಟರೀ ಆಫ಼್ ಇಟಾಲಿಯನ್ ರಿಪಬ್ಬ್ಲಿಕ್ಸ್(೧೬ ಸಂಪುಟಗಳು) ೬.ಪೋಲಟಿಕಲ್ ಎಕೋನಮಿ ಮತ್ತು ಫೀಲೋಸಫ಼ಿ ಆಫ಼್ ಗವರ್ಮೆಂಟ್(೧೮೪೭).

ರಾಜಕೀಯ ಅರ್ಥಶಾಸ್ತ್ರದ ಗುರಿ ಮತ್ತು ವ್ಯಾಪ್ತಿ[ಬದಲಾಯಿಸಿ]

ಸಿಸ್ ಮೋಂಡಿ ಅರ್ಥಶಸ್ತ್ರವನ್ನು ಒಂದು ಕಲೆ ಎಂದು ಪರಿಗಣಿಸಿದನು. ಅವನು ಮಾನವ ಸಂತೋಷವನ್ನು ಹೆಚ್ಚಿಸುವ ಮಾರ್ಗವನ್ನು ಪ್ರತಿಪಾದಿಸಿ ಸಂಪತ್ತು ಭೌತಿಕ ಮತ್ತು ನೈತಿಕ ಸಂತೋಷವನ್ನು ಹೆಚ್ಚಿಸುವುದಕ್ಕೆ ಇರುವಂತಹದ್ದು ಎಂದು ಸಾರಿದ್ದಾನೆ. ಅವನ ಪ್ರಕಾರ ಸಂಪತ್ತು ಎಂದರೆ ಮಾನವನ ಶ್ರಮವು ಉತ್ಪಾದಿಸಿ ಅವನ ಬಯಕೆಗಳ ತೃಪ್ತಿಗಾಗಿ ಬಳಸಲಾಗುವ ವಸ್ತುಗಳ ಯಥೇಚ್ಚ ಲಭ್ಯತೆಯಾಗಿದೆ.ಅವನು ಶ್ರೀಮಂತರಿಗೆ ಎರಡು ವಿಶೇಷ ಹಕ್ಕುಗಳನ್ನು ನೀಡಿದ್ದಾನೆ. ಅವುಗಳೆಂದರೆ:1. ಬಿಡುವಿನ ವೇಳೆಯಲ್ಲಿ ಅವರು ತಮ್ಮ ಬುದ್ದಿ ಮಟ್ಟವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು 2. ತಮ್ಮ ಹೆಚ್ಚುವರಿ ಸಂಪತ್ತನ್ನು ಅವರು ಎಲ್ಲಾ ಕೆಡುಕುಗಳ ಪರಿಹಾರಕ್ಕೆ ಉಪಯೋಗಿಸಬೇಕು.ಹೀಗೆ ಸಿಸ್ ಮೋಂಡಿ ಅನುಭೋಗ ಮತ್ತು ನೈತಿಕ ಪರಿಗಣನೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾನೆ.

ರಾಜಕೀಯ ಅರ್ಥಶಾಸ್ತ್ರದ ವಿಧಾನ[ಬದಲಾಯಿಸಿ]

ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಣರು ಅಮೂರ್ತ ನಿಗಮನ ವಿಧಾನವನ್ನು ಬಳಸಿರುರವ ಕ್ರಮವನ್ನು ಸಿಸ್ ಮೋಂಡಿ ಕಟುವಾಗಿ ಟೀಕಿಸಿದ್ದಾನೆ.ಅವನ ಪ್ರಕಾರ ರಾಜಕೀಯ ಅರ್ಥಶಾಸ್ತ್ರವನ್ನು ನೈತಿಕ ಎಂದು ಪರಿಗಣಿಸಬೇಕು.ಇಲ್ಲಿ ಎಲ್ಲಾ ಸಂಗತಿಗಳು ಪರಸ್ಪರ ಹೆಣೆದುಕೊಂಡಿರುತ್ತದೆ.ಅವನು ಐತಿಹಾಸಿಕ ಸಂಶೋಧನೆಗಳನ್ನು ನಡೆಸಿದ ಕಾರಣ ಯಾವುದೇ ಅಧ್ಯಯನ ವಿಧಾನವು ವಿಶಾಲ ಅನುಭವ, ಐತಿಹಾಸಿಕ ಬೆಳವಣಿಗೆ ಮತ್ತು ಸರಿಯಾದ ವೀಕ್ಷಣೆಗಳನ್ನು ಆಧರಿಸಬೇಕು ಎಂದು ಆತ ಅಭಿಪ್ರಾಯ ಪಟ್ಟಿದ್ದಾನೆ. ಈ ಕಾರಣದಿಂದಾಗಿ ಅವನು ಐತಿಹಾಸಿಕ ಅನುಗಮನ ವಿಧಾನವನ್ನು ಆಯ್ದುಕೊಂಡ.

ರೈತವಾರಿ ವ್ಯವಸಾಯ[ಬದಲಾಯಿಸಿ]

ಫ್ರಾನ್ಸ್, ಸ್ವಿಜರ್ಲೆಂಡ್ ಮತ್ತು ಇಟಲಿಯಲ್ಲಿನ ಕೃಷಿಯ ಸ್ಥಿತಿಗತಿಗಳನ್ನು ಅಭ್ಯಸಿಸಿದ ತರುವಾಯ ಸಿಸ್ ಮೋಂಡಿಯು ರೈತವಾರಿ ವ್ಯವಾಸಯವು ಅತ್ಯುತ್ತಮ ಕೃಷಿ ಪದ್ದತಿ ಎಂಬ ತಿರ್ಮಾನಕ್ಕೆ ಬಂದನು. ಅವನ ಪ್ರಕಾರ ಉಳುಮೆಯ ಪ್ರತಿಫ಼ಲವನ್ನು ಉಳುಮೆ ಮಾಡುವ ರೈತರು ಪಡೆಯಬೇಕೇ ಹೊರತು ಗೈರುಹಾಜರಿ ಸಾಗುವಳಿದಾರ ಭೂಮಾಲಿಕರಲ್ಲ. ಭೂಮಿಯನ್ನು ಭೂಮಾಲಿಕರಿಂದ ಮುಕ್ತಗೊಳಿಸಿದ ತರವಾಯ ಫ಼್ರಾನ್ಸಿನಲ್ಲಿತಯ ಸಣ್ಣ ರೈತರು ಒಕ್ಕಲುತನದ ಸುಧಾರಣೆಗೆ ಕೈಗೊಂಡ ಕ್ರಮಗಳನ್ನು ಸಿಸ್ ಮೋಂಡಿ ಶ್ಲಾಪಿಸಿದ್ದಾನೆ. ಅದೇ ರೀತಿ ಇಟಲಿ ಮತ್ತು ಸ್ವಿಜರ್ಲೆಂಡಿನ ರೈತರು ಮಾಡಿದ ಸಾಧನೆಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾನೆ.

ಜನಸಂಖ್ಯೆ[ಬದಲಾಯಿಸಿ]

ಗರಿಷ್ಟ ಮಾನವ ಕ್ಷೇಮಾಭ್ಯದಯ ಸಾಧನೆಯಾಗುವ ರೀತಿಯಲ್ಲಿ ಜನಸಂಖ್ಯೆ ಮತ್ತು ಸಂಪ್ತತಿನ ಅನುವಾತವಿರಬೇಕು ಎಂದು ಸಿಸ್ ಮೋಂಡಿ ಹೇಳುತ್ತಾನೆ. ಅವನು ಬೃಹತ್ ಗಾತ್ರದ ಜನಸಂಖ್ಯೆಯನ್ನು ಎಂದಿಗೂ ಇಚ್ಚಿಸಲಿಲ್ಲ. ಅವನ ಸಿದ್ದಾಂತದ ಪ್ರಕಾರ ಜನಸಂಖ್ಯೆಯನ್ನು ಎರಡು ಅಂಶಗಳು ನಿರ್ಧರಿಸುತ್ತವೆ. ಅವುಗಳೆಂದರೆ : 1. ವಿವಾಹದ ಇಚ್ಚೆಗೆ ಕಾರಣವಾಗುವ ಒಲವು ಮತ್ತು 2. ಜನಸಂಖ್ಯಾ ಬೆಳವಣಿಗೆಗೆ ತಡೆಯೊಡ್ಡುವ ಅಹಂಭಾವ ಮತ್ತು ಲೆಖ್ಖಾಚಾರ . ಸಿಸ್ ಮೋಂಡಿಯು ಮಾಲ್ದಸನ ಅಂಕಗಣಿತ ಮತ್ತು ರೇಖಾಗಣಿತ ಪ್ರಮಾಣದ ಕಲ್ಪನೆಯನ್ನು ಅವಾಸ್ತವಿಕ ಎಂದು ಟೀಕಿಸುತ್ತಾನೆ.

ವಿತರಣೆ[ಬದಲಾಯಿಸಿ]

ಸಿಸ್ ಮೋಂಡಿಯು ಸಂಪತ್ತಿನ ಸರಿಯಾದ ವಿತರಣೆಯ ವಿಚಾರಕ್ಕೆ ಹೆಚ್ಚು ಮಹತ್ವ ನೀಡಿದ. ಅವನ ಪ್ರಕಾರ ಅತ್ಯಧಿಕ ಉತ್ಪಾದನೆ ಮಾಡುವುದಕ್ಕಿಂತ ಅದನ್ನು ಸರಿಯಾಗಿ ವಿತರಣೆ ಮಾಡುವುದು ಮುಖ್ಯವಾಗಿರುತ್ತದೆ. ಅವನ ಅಭಿಪ್ರಾಯದಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿಯೂ ಸಹ ಸರಿಯಾದ ವಿತರಣೆ ಮೂಲಕ ಗರಿಷ್ಟ ಮಾನವ ಸಂತೋಷ ಪಡೆಯುವುದು ಸಾಧ್ಯವಿರುತ್ತದೆ.ಅದ್ದರಿಂದ ಸಿಸ್ ಮೋಂಡಿ ತನ್ನ ವಿತಾರಣೆ ತತ್ವದಲ್ಲಿ ಸಂಪತ್ತಿನ ಉತ್ಪಾದನೆಗಿಂತ ಅದರ ವಿತರಣೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ.

ಪೈಪೋಟಿ[ಬದಲಾಯಿಸಿ]

ಸಿಸ್ ಮೋಂಡಿಯು ಮುಕ್ತ ಪೈಪೋಟಿಯನ್ನು ವಿರೋಧಿಸಿದರು. ಅವನ ಪ್ರಕಾರ ಅನುಭೋಗಿಗಳಿಂದ ಬರುವ ಹೆಚ್ಚುತ್ತಿರುವ ಬೇಡಿಕೆಯನ್ನು ತೃಪ್ತಿಪಡಿಸುವುದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಉತ್ಪಾದಕರು ಬಯಸುತ್ತಿದ್ದಲ್ಲಿ ಪೈಪೋಟಿಯ ಅವಶ್ಯಕತೆ ಇರುತ್ತದೆ.ಆದರೆ ಅಂತಹ ಸಂದರ್ಭಗಳು ಅಪರೂಪ. ಅವನ ಪ್ರಕಾರ ಪೈಪೋಟಿಯಲ್ಲಿ ಸಣ್ಣ ಉತ್ಪಾದಕರಿಗೆ ಸ್ಥಾನವೇ ಇರುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಆಡ್ಂ ಸ್ಮಿತ್ ಮತ್ತು ಆತನ ಅನುಯಾಯಿಗಳು ಮುಕ್ತ ಪೈಪೋಟಿ ಲಾಭದಯಕ ಎಂದು ಪರಿಗನಿಸಿದರೆ ಸಿಸ್ ಮೋಂಡಿ ಅದರ ವಿರುದ್ದವಾದಂತಹ ವಾದವನ್ನು ಮಂಡಿಸಿದ್ದಾನೆ.

ಸುಧಾರಣಾ ಯೋಜನೆಗಳು[ಬದಲಾಯಿಸಿ]

ಸಿಸ್ ಮೋಂಡಿಯು ರಾಷ್ಟ್ರವೊಂದರ ಆರ್ಥಿಕತೆಯಲ್ಲಿ ಸಮತೋಲನ ಸ್ಥಿತಿಯನ್ನು ಸೃಷ್ಟಿ ಮಾಡುವುದರಲ್ಲಿ ಉತ್ಸುಕನಾಗಿದ್ದ. ಬಂಡವಾಳಶಾಹಿಯ ದೋಷಗಳನ್ನು ಬಿಡಿಸಿಟ್ಟ ಆತ ಸರ್ಕಾರದ ಹಸ್ತಕ್ಷೇಪಕ್ಕೆ ಕರೆ ನೀಡಿದ. ಅವನ ಪ್ರಮುಖ ಸುಧಾರಣಾ ಯೋಜನೆಗಳು ಈ ಮುಂದಿವೆ. 1 . ಅವನು ಉತ್ಪಾದನೆ ಮತ್ತು ಅನುಭೋಗದ ನಡುವೆ ಸಮತೋಲನ ಮತ್ತು ಶ್ರಮ ಮತ್ತು ಬಂಡವಾಳದ ಒಗ್ಗಟ್ಟನ್ನು ಬಯಸಿದನು. ಆದ್ದರಿಂದ ಅವನು ರೈತವಾರಿ ಕೃಷಿ ಮತ್ತು ಸ್ವತಂತ್ರ ಕಸುಬುದಾರಿಕೆಯನ್ನು ಬೆಂಬಲಿಸಿದನು. 2 . ಅವನು ಕೃಷಿ ಮತ್ತು ಕೈಗಾರಿಕೆಯಲ್ಲಿ ಸಣ್ಣ ಪ್ರಮಾಣದ ಉತ್ಪಾದನೆಯನ್ನು ಪ್ರತಿಪಾದಿಸೊದನು. ಇದರಿಂದ ಕಾರ್ಖಾನೆ ವ್ಯವಸ್ಥೆಯ ಅನಿಷ್ಟಗಳನ್ನು ತಡೆಗಟ್ಟಬಹುದು ಎಂದು ತಿಳಿದಿದ್ದನು. 3 . ಅವನು ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆಗೆ ಸರ್ಕಾರ ಹಸ್ತಕ್ಷೇಪವನ್ನು ಬೆಂಬೆಲಿಸಿದನು. 5 . ಸಂಶೋಧನೆ ಮತ್ತು ಯಾಂತ್ರೀಕೃತಿ ಉತ್ಫಾದನೆ ನಿರೂದ್ಯೋಗವನ್ನು ಅವುಗಳನ್ನು ಸರ್ಕಾರ ನಿಯಂತ್ರಿಸಬೇಕೆಂದನು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-08-03. Retrieved 5 ಸೆಪ್ಟೆಂಬರ್ 2016.
  2. https://www.marxists.org/archive/grossman/1934/ess-sismondi.htm. Retrieved 5 ಸೆಪ್ಟೆಂಬರ್ 2016. {{cite web}}: Missing or empty |title= (help)