ವಿಷಯಕ್ಕೆ ಹೋಗು

ಸಿಸ್ಟರ್ ಕ್ಲೇರ್ (ಕಲಾವಿದೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಸಿಸ್ಟರ್ ಕ್ಲೇರ್
ಜನನ
ಮೀರಾ

೧೯೩೭
ಆ೦ಧ್ರ ಪ್ರದೇಶ
ಮರಣ೧೧ ಫೆಬ್ರವರಿ ೨೦೧೮
ಬೆ೦ಗಳೂರು
ರಾಷ್ಟ್ರೀಯತೆಭಾರತೀಯ
ವೃತ್ತಿಕ್ಯಾಥೊಲಿಕ್ ಸನ್ಯಾಸಿನಿ ಮತ್ತು ಕಲಾವಿದೆ
Organizationಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ)

ಸಿಸ್ಟರ್ ಮೇರಿ ಕ್ಲೇರ್ (೧೯೩೭ - ೧೧ ಫೆಬ್ರವರಿ ೨೦೧೮) ಬೆಂಗಳೂರಿನವರು. ಕಲಾವಿದೆ ಮತ್ತು ಕ್ಯಾಥೋಲಿಕ್ ಸನ್ಯಾಸಿನಿ ಆಗಿದ್ದರು. ಅವರ ಹೆಸರಿನಲ್ಲಿ ೭೫೦ ಕ್ಕೂ ಹೆಚ್ಚು ವರ್ಣಚಿತ್ರಗಳು ಮತ್ತು ಕಲಾಕೃತಿಗಳು ಇವೆ. [] ಅವರ ಕೃತಿಗಳು ವಿಶೇಷವಾಗಿ ಕ್ರಿಶ್ಚಿಯನ್ ದೃಶ್ಯಗಳಲ್ಲಿ ಭಾರತೀಯ ಚಿತ್ರಣವನ್ನು ಬಳಸುವುದಕ್ಕೆ ಹೆಸರುವಾಸಿಯಾಗಿದೆ. ಅಂತೆಯೇ, ಅವರು ಹೆಚ್ಚು ತಿಳಿದಿರುವ ಸಮಕಾಲೀನ ಭಾರತೀಯ ಕ್ರಿಶ್ಚಿಯನ್ ಕಲಾವಿದರಲ್ಲಿ ಒಬ್ಬರು. [] []

ಆರಂಭಿಕ ಜೀವನ

[ಬದಲಾಯಿಸಿ]

ಆಂಧ್ರಪ್ರದೇಶದಲ್ಲಿ ಜನಿಸಿದ ಕ್ಲೇರ್ ರವರು, ಒಂಬತ್ತು ಜನ ಮಕ್ಕಳಲ್ಲಿ ಎರಡನೆಯವರಾಗಿದ್ದಾರೆ. [] ಅವರು ಮೇಲ್ಜಾತಿ ಹಿಂದೂ ಕುಟುಂಬದಲ್ಲಿ ಜನಿಸಿ, ಮೀರಾ ಎಂಬ ಹೆಸರನ್ನು ಪಡೆದಿದ್ದರು. [] [] ಆಕೆಯ ತಂದೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿ೦ದ ಆಗಾಗ್ಗೆ ವರ್ಗಾವಣೆಗಳನ್ನು ಪಡೆಯುತ್ತಿದ್ದರು. ಅವರು ವರ್ಗಾವಣೆಯಾದಾಗಲೆಲ್ಲ ಕುಟುಂಬದವರು ಸಹ ಅವರೊಂದಿಗೆ ತೆರಳುತ್ತಿದ್ದರು. [] ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, Sr. ಕ್ಲೇರ್ ಅವರನ್ನು ಕ್ರಿಶ್ಚಿಯನ್ ಶಾಲೆಗೆ ಕಳುಹಿಸಲಾಯಿತು. ಅಲ್ಲಿ ಅವರು ಯೇಸುವಿನಲ್ಲಿ ಪ್ರೀತಿಯನ್ನು ಕಂಡುಕೊಂಡರು. []

೧೭ ನೇ ವಯಸ್ಸಿನಲ್ಲಿ, ನಿಯೋಜಿತ ಮದುವೆಯನ್ನು ತಪ್ಪಿಸಲು, ಅವರು ತನ್ನ ಮನೆಯಿಂದ ಬೆಂಗಳೂರಿನಲ್ಲಿರುವ ಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ) ನಡೆಸುತ್ತಿರುವ ಸೇಂಟ್ ಮೇರಿ ಕಾನ್ವೆಂಟ್‌ಗೆ ಓಡಿಹೋದರು. ೧೮ ನೇ ವಯಸ್ಸಿನಲ್ಲಿ, ಅವರು ದೀಕ್ಷೆಯನ್ನು ಪಡೆದುಕೊ೦ಡು ಎಸ್.ಎಮ್.ಎಮ್.ಐ ಗೆ ಸೇರಿದರು. [] ಆರು ಮತ್ತು ಏಳನೆ ನೇ ತರಗತಿಗಳಿಗೆ ಬೋಧನೆ ಮಾಡಲು Sr ಕ್ಲೇರ್ ಅವರನ್ನು ನಿಯೋಜಿಸಲಾಯಿತು. [೧೦] ಅವರು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ಕಲಿಸಲು ಸಾಧ್ಯವಾಗದಿದ್ದಾಗ, ಚಿತ್ರಕಲೆಯನ್ನು ಪ್ರಾರಂಭಿಸಿದರು. ಆಕೆಯ ಪ್ರತಿಭೆಯನ್ನು ಗುರುತಿಸಿದ ಆಕೆಯ ತಾಯಿಯು ಅವರನ್ನು ಕಲಾಶಾಲೆಗೆ ಕಳುಹಿಸಿದರು. [೧೧] [೧೨]

ಕಲಾಕೃತಿ

[ಬದಲಾಯಿಸಿ]

ಸಿಸ್ಟರ್ ಕ್ಲೇರ್ ಅವರ ಕಲಾಕೃತಿಯನ್ನು ಪೋಪ್ ಜಾನ್ ಪಾಲ್ II ಅವರಿಗೆ ಎಸ್.ಎಮ್.ಎಮ್.ಐ ನ ಮೊದಲ ಭಾರತೀಯ ಸುಪೀರಿಯರ್ ಜನರಲ್ ಆದ ಜೇನ್ ಸ್ಕೇರಿಯ ಅವರು ಉಡುಗೊರೆಯಾಗಿ ನೀಡಿದ್ದಾರೆ. [೧೩] ಅವರ ಕೃತಿಗಳು ಪುಸ್ತಕಗಳು, [೧೪] [೧೫] ಪೋಸ್ಟರ್‌ಗಳು, [೧೬] ಬ್ಲಾಗ್‌ಗಳು, [೧೭] ಮತ್ತು ಕ್ರಿಸ್ಮಸ್ ಕಾರ್ಡ್‌ಗಳಲ್ಲಿ ಕಾಣಿಸಿಕೊಂಡಿವೆ. Sr ಕ್ಲೇರ್ ಅವರ ವರ್ಣಚಿತ್ರಗಳು ಭಾರತೀಯ ಗ್ರಾಮೀಣ ವ್ಯವಸ್ಥೆಯಲ್ಲಿ ಕ೦ಡುಬರುವಬೈಬಲ್‌ನ ಕಥೆಗಳು ಮತ್ತು ವಿಚಾರಗಳ ಸುತ್ತ ಸುತ್ತುತ್ತವೆ. ಅವರು ಕಣ್ಣು ಕುಕ್ಕುವ ಬಣ್ಣಗಳು ಮತ್ತು ವಿಶಿಷ್ಟವಾದ ಭಾರತೀಯ ಸ೦ಯೋಜನೆಗಳು, ಚಿಹ್ನೆಗಳು ಮತ್ತು ಉಡುಪುಗಳನ್ನು ಬಳಸಿ ಚಿತ್ರಿಸಿದ್ದಾರೆ. [೧೮] ಅವರು ಭಾರತೀಯ ಚಿಹ್ನೆಗಳು ಮತ್ತು ಹಿನ್ನೆಲೆಯಲ್ಲಿ ಕ್ರುಸಿಫಿಕೇಫನ್, ದ ಲಾಸ್ಟ್ ಸಪ್ಪರ್ ಮತ್ತು ಕ್ರಿಸ್‌ಮಸ್‌ನಂತಹ ವಿಷಯಗಳನ್ನು ಚಿತ್ರಿಸಿದ್ದಾರೆ. [೧೯] ಅವರು ವಾರ್ಷಿಕವಾಗಿ ೧೦೦೦ ಕ್ಕೂ ಹೆಚ್ಚು ಕ್ರಿಸ್ಮಸ್ ಕಾರ್ಡ್‌ಗಳನ್ನು ಚಿತ್ರಿಸಿದ್ದಾರೆ ಮತ್ತು ಮುದ್ರಿಸಿದ್ದಾರೆಂದು ತಿಳಿದುಬಂದಿದೆ. [೨೦]

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸೇಂಟ್ ಮೇರಿ ಕಾನ್ವೆಂಟ್ ಆವರಣದಲ್ಲಿರುವ ಕ್ರಿಶ್ಚಿಯನ್ ಆರ್ಟ್ ಗ್ಯಾಲರಿಯಲ್ಲಿ ಕ್ಲೇರ್ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. [೨೧] ೧೮೦೦ ಚದರ ಅಡಿ ಆರ್ಟ್ ಗ್ಯಾಲರಿಯನ್ನು ದಿ ಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ) ತೆರೆಯಿತು. [೨೨]

ಗುರುತಿಸುವಿಕೆ

[ಬದಲಾಯಿಸಿ]

ಪೋಪ್ ಬೆನೆಡಿಕ್ಟ್ XVI ಅವರು ಕ್ಲೇರ್ ಅವರನ್ನು ಅಭಿನಂದಿಸಲು ಅವರನ್ನು ವ್ಯಾಟಿಕನ್‌ಗೆ ಆಹ್ವಾನಿಸಿದರು. ಅವರು ಹೋಗಲಿಲ್ಲ, ಆದರೆ ಪೋಪ್ ಅವರನ್ನು ಗೌರವಿಸಲು ಕಾರ್ಡಿನಲ್ ನನ್ನು ಬೆಂಗಳೂರಿಗೆ ಕಳುಹಿಸಿದರು. [೨೩] ಅವರು ೨೦೧೨ ರಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದಿಂದ ನೀಡಲ್ಪಡುವ ಜೀವಮಾನ ಸಾಧನೆಯ ಪ್ರಶಸ್ತಿಯಾದ ಅಸ್ಸಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. [೨೪]

ಉಲ್ಲೇಖಗಳು

[ಬದಲಾಯಿಸಿ]
  1. "Pentecost Art (India, Sister Claire)". Global Christian Worship.
  2. SJ, Anand Amaladass (19 September 2011). "Christian Themes in Indian Art from Mughal Times to the Present". Manohar Publishers.
  3. "India's noted nun painter dies". Mattersindia.com. 11 February 2018. Retrieved 19 November 2018.
  4. Fuller, Theological Seminary (2018). "Collection 0064:Collection of Sr Claire, SMMI Biblical Art, 1980-2003". Digital Commons Fuller Education. Archived from the original on 2021-10-17.
  5. Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
  6. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.
  7. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.
  8. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.
  9. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.
  10. "Guide to the Sr. Claire, SMMI: Biblical Posters". oac.cdlib.org. Retrieved 2021-03-28.
  11. "Guide to the Sr. Claire, SMMI: Biblical Posters". oac.cdlib.org. Retrieved 2021-03-28.
  12. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.
  13. "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2020-08-06.
  14. "Sr. Claire, SMMI: Biblical Posters". worldcat.org.
  15. Society, Bible (10 September 1988). "The Bible in Pictures TRILINGUAL Urdu, Sindhi and Parkari Language Comments by each Illustration Biblical Posters / Sr.M.Claire SMMI The Catholic Diocese of Hyderabad / Pakistan". Bible Society.
  16. "Guide to the Sr. Claire, SMMI: Biblical Posters". Oac.cdlib.org.
  17. "Christmas Story Art from India (Sr. Claire set 3)". Global Christian Worship.
  18. Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
  19. "Art gallery in Bengaluru highlights nuns' works". Matters India (in ಅಮೆರಿಕನ್ ಇಂಗ್ಲಿಷ್). 2017-06-15. Retrieved 2021-03-28.
  20. Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
  21. "Art gallery in Bengaluru highlights nuns' works". Matters India (in ಅಮೆರಿಕನ್ ಇಂಗ್ಲಿಷ್). 2017-06-15. Retrieved 2021-03-28.
  22. Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
  23. Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2020-08-06.
  24. "India's noted nun painter dies". Matters India (in ಅಮೆರಿಕನ್ ಇಂಗ್ಲಿಷ್). 2018-02-11. Retrieved 2021-03-28.