ಸಿಲ್ವರ್ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಲ್ವರ್ ಮರ
Grevillea robusta flowering in Gan Shmuel01.jpg
Scientific classification
Kingdom:
plantae
Division:
Class:
Order:
Family:
Genus:
Species:
G. robusta
Binomial name
ಗ್ರೆವಿಲ್ಲೆ ರೊಬಸ್ಟ

ಸಿಲ್ವರ ಮರ (ಸಿಲ್ವರ್ ಓಕ್)ಆಸ್ಟ್ರೇಲಿಯ ಖಂಡದ ಮೂಲ ನಿವಾಸಿ. ಭಾರತದಲ್ಲಿ ಕಾಫಿತೋಟಗಳಲ್ಲಿ ನೆರಳಿಗಾಗಿ ತಂದು ಬೆಳೆಸಿದ್ದಾರೆ.ವೇಗವಾಗಿ ಬೆಳೆಯುವ ಮರ.ಅರಣ್ಯ ಇಲಾಖೆಯವರು ನೆಡು ತೋಪುಗಳಾಗಿಯೂ ಬೆಳೆಸುತ್ತಾರೆ.

ಸಸ್ಯ ಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಗ್ರೆವಿಲ್ಲೆ ರೊಬಸ್ಟ ಎಂಬ ಸಸ್ಯ ಶಾಸ್ತ್ರೀಯ ಹೆಸರಿದ್ದು,ಪ್ರೋಟೆಸಿ ಕುಟುಂಬಕ್ಕೆ ಸೇರಿದೆ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಇದು ಮದ್ಯಮ ಗಾತ್ರದ ಎತ್ತರಕ್ಕೆ ವೇಗವಾಗಿ ಬೆಳೆಯುವ ನಿತ್ಯಹರಿದ್ವರ್ಣದ ಮರವಾಗಿದೆ.ಇದರ ಎಲೆಗಳ ಅಡಿಭಾಗ ಎಳೆ ಬೂದು ಬಣ್ಣದ್ದಾಗಿದ್ದು ಹೆಚ್ಚು ಕಡಿಮೆ ಬೆಳ್ಳಿಯ ಬಣ್ಣ ಹೊಂದಿರುವುದರಿಂದ ಇದಕ್ಕೆ 'ಸಿಲ್ವರ್ ಓಕ್' ಎಂದೂ ಹೆಸರಿದೆ.ಸುವರ್ಣ ವರ್ಣದ ಹೂಗಳಿವೆ. ಇದರ ದಾರುವು ನಸು ಕಂದು ಬಣ್ಣದ್ದಾಗಿದೆ.

ಉಪಯೋಗಗಳು[ಬದಲಾಯಿಸಿ]

ಇದು ಕಾಫಿತೋಟಗಳಲ್ಲಿ ನೆರಳಿನ ಮರವಾಗಿ ಹೆಚ್ಚು ಉಪಯೋಗದಲ್ಲಿದೆ.ದಾರುವು ಉತ್ತಮ ಜಾತಿಯದ್ದಾಗಿದ್ದು ಸಂಗೀತಉಪಕರಣ,ಪೀಠೋಪಕರಣ,ಪದರ ಹಲಗೆಗಳ ತಯಾರಿಯಲ್ಲಿ ಉಪಯುಕ್ತವಾಗಿದೆ. ಗೃಹನಿರ್ಮಾಣದಲ್ಲಿಯೂ ಉಪಯೋಗದಲ್ಲಿದೆ.

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ