ಸಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೈಕ್ ಮತ್ತು ಸಿಲ್‍ಗಳ ನಡುವೆ ವ್ಯತ್ಯಾಸವನ್ನು ತೋರಿಸುವ ಚಿತ್ರ.

ಸಿಲ್ ಎಂದರೆ ಶಿಲೆಗಳಲ್ಲಿ ಸೀಳು ಬಿಟ್ಟಿರುವ ಬಿರುಕುಗಳ ಮೂಲಕ ಮತ್ತು ಜಲಜ ಶಿಲೆಗಳಲ್ಲಿಯ ಎರಡು ಸ್ತರಗಳ ಇಲ್ಲವೆ ಪದರಗಳ ಮಧ್ಯೆ ಶಿಲಾರಸ ಭೇದಿಸಿಕೊಂಡು ಹೋಗುವುದರಿಂದ ಉಂಟಾಗುವ ರಚನೆ.[೧][೨] ಇದು ಅಲ್ಲಿ ಸುತ್ತುವರಿದಿರುವ ಪದರಗಳ ಉದ್ದಕ್ಕೆ ಸಮಾಂತರವಾಗಿರುತ್ತದೆ. ಇದು ತಾನು ಹಾಯ್ದು ಬಂದ ಶಿಲೆಗಳ ರಚನೆಯನ್ನು ಅಸ್ತವ್ಯಸ್ತಗೊಳಿಸುವುದಿಲ್ಲ. ಇದರ ಮಂದ ಕೆಲವು ಮಿಮೀಗಳಿಂದ ಹಲವು ಸೆಂಮೀವರೆಗೆ. ಸಿಲ್ ಮತ್ತು ಡೈಕ್‌ಗಳಿಗೆ ಪರಸ್ಪರ ಸಂಬಂಧವಿರುವುದೂ ಉಂಟು. ಕೆಲವು ಸಾರಿ ಸಿಲ್ ಸ್ತರಗಳನ್ನು ಅಡ್ಡಹಾಯ್ದು ಸ್ವಲ್ಪ ದೂರದವರೆಗೆ ಡೈಕ್ ಆಗಿ ಪರಿವರ್ತನಗೊಳ್ಳುವುದುಂಟು. ಸಾಮಾನ್ಯವಾಗಿ ಸಿಲ್‌ಗಳು ಮಧ್ಯಮ ಗಾತ್ರದ ಹರಳುಗಳಿಂದ ಕೂಡಿರುತ್ತವೆ. ಅನೇಕ ಸಾರಿ ಒತ್ತಾಗಿರುವ ಸೂಕ್ಷ್ಮಕಣಗಳ ಮಾತೃಕೆಯಲ್ಲಿ ದೊಡ್ಡ ದೊಡ್ಡ ಸ್ಫಟಿಕಗಳು ಇರುತ್ತವೆ. ಇವು ಬಿಡಿ ಬಿಡಿಯಾಗಿಯೂ ಗುಂಪಾಗಿಯೂ ದೊರೆಯುತ್ತವೆ. ಹೆಚ್ಚಾಗಿ ಆಮ್ಲಶಿಲೆಗಳು ಸಿಲ್ ರೂಪದಲ್ಲಿ ಕಂಡುಬರುತ್ತವೆ.

ಈ ಸಿಲ್‌ಗಳಲ್ಲಿ ಹಲವಾರು ಕಡೆ ಬೆಲೆಬಾಳುವ ಖನಿಜಗಳು ದೊರಕಿರುವ ಸಂದರ್ಭವೂ ಉಂಟು.

ಉಲ್ಲೇಖಗಳು[ಬದಲಾಯಿಸಿ]

  1. Britannica, The Editors of Encyclopaedia. "sill". Encyclopedia Britannica, 31 Jul. 2018, https://www.britannica.com/science/sill. Accessed 6 December 2023.
  2. "Sill ." World of Earth Science. . Encyclopedia.com. 16 Nov. 2023 <https://www.encyclopedia.com>.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಿಲ್&oldid=1197866" ಇಂದ ಪಡೆಯಲ್ಪಟ್ಟಿದೆ