ವಿಷಯಕ್ಕೆ ಹೋಗು

ಸಿರ್ಪುರ್ ಸ್ಮಾರಕಗಳ ಗುಂಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೮ನೇ ಶತಮಾನದ ಕಲಾಕೃತಿ

ಸಿರ್ಪುರ್ ಕ್ರಿ.ಶ. ೧ನೇ ಸಹಸ್ರಮಾನದ ಪೂರ್ವಾರ್ಧದಲ್ಲಿದ್ದ ಒಂದು ಪ್ರಾಚೀನ ನಗರವಾಗಿತ್ತು. ಇದು ಮುಂಚಿನ ಶತಮಾನಗಳಿಂದ ೧೨ನೇ ಶತಮಾನಗಳವರೆಗಿನ ಹಿಂದೂ ಮತ್ತು ಬೌದ್ಧ ಸ್ಮಾರಕಗಳನ್ನು ಒಳಗೊಂಡಿರುವ ತನ್ನ ಪುರಾತತ್ವ ಅವಶೇಷಗಳಿಗೆ ಜನಪ್ರಿಯವಾಗಿದೆ. ಇದು ಭಾರತದ ಛತ್ತೀಸ್‌ಘಡ್ ರಾಜ್ಯದ ಮಹಾಸಮುಂದ್ ಜಿಲ್ಲೆಯಲ್ಲಿ ಸ್ಥಿತವಾಗಿದೆ.[] ಇದು ಇದೇ ಹೆಸರಿನ ಹಳ್ಳಿಯ ಹತ್ತಿರವಿದ್ದು ರಾಜ್ಯದ ರಾಜಧಾನಿ ರಾಯ್ಪುರ್‌ಗೆ ೭೮ ಕಿಲೋಮೀಟರ್ (೪೮ ಮೈಲಿ) ಪೂರ್ವದಲ್ಲಿದೆ.[] ಈ ಅವಶೇಷಗಳು ಮಹಾನದಿ ತಟದ ಹತ್ತಿರ ಸ್ಥಿತವಾಗಿವೆ.[]

ಸಿರ್ಪುರ್ ನಗರವನ್ನು ೪ರಿಂದ ಕ್ರಿ.ಶ. ೮ನೇ ಶತಮಾನದ ಕಾಲದ್ದೆಂದು ನಿರ್ಧರಿಸಲಾಗಿರುವ ಶಾಸನಶಾಸ್ತ್ರ ಸಂಬಂಧಿ ಮತ್ತು ಪಠ್ಯ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಗರವು ಒಂದು ಕಾಲದಲ್ಲಿ ದಕ್ಷಿಣ ಕೋಸಲ ರಾಜ್ಯದ ಶರಭಪುರೀಯ ಮತ್ತು ಸೋಮವಂಶಿ ರಾಜರ ರಾಜಧಾನಿಯಾಗಿತ್ತು. ೫ ಮತ್ತು ಕ್ರಿ.ಶ. ೧೨ ನೇ ಶತಮಾನದ ನಡುವೆ ಇದು ದಕ್ಷಿಣ ಕೋಸಲ ರಾಜ್ಯದ ಪ್ರಮುಖ ಹಿಂದೂ, ಬೌದ್ಧ ಮತ್ತು ಜೈನ ವಾಸಸ್ಥಳವಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Atula Kumar Pradhan and Shambhoonath Yadav (2013), Sirpur - A unique township of early medieval India, Proceedings of the Indian History Congress, Vol. 74 (2013), pp. 854-864
  2. Sirpur Archived 2009-02-14 ವೇಬ್ಯಾಕ್ ಮೆಷಿನ್ ನಲ್ಲಿ. raipur.gov.in
  3. SIRPUR : A Goldmine of History Archived 2014-02-14 ವೇಬ್ಯಾಕ್ ಮೆಷಿನ್ ನಲ್ಲಿ. Prasar Bharti

ಹೊರಗಿನ ಕೊಂಡಿಗಳು

[ಬದಲಾಯಿಸಿ]