ವಿಷಯಕ್ಕೆ ಹೋಗು

ಸಿರಿ ಚಂದ್ ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ ರಾಮ್
Personal information
Full nameಸಿರಿ ಚಂದ್ ರಾಮ್
Nationalityಭಾರತೀಯ
Born (1958-01-26) 26 January 1958 (age 67)
ರಾಜನಾ ಖುರ್ದ್, ಜಿಂದ್, ಹರಿಯಾಣ, ಭಾರತ
Height5 ft 10 in (1.78 m)
Weight68 kg (150 lb)
Sport
Sport೨೦ ಕಿಲೋಮೀಟರ್ ರಸ್ತೆ ನಡಿಗೆ
Achievements and titles
Olympic finals೧೯೮೪ ಬೇಸಿಗೆ ಒಲಿಂಪಿಕ್ಸ್, ಎಲ್‌ಎ(LA) (ಭಾಗವಹಿಸಿದ್ದರು)
Medal record
೨೦ ಕಿಲೋಮೀಟರ್ ರಸ್ತೆ ನಡಿಗೆ
Representing  ಭಾರತ
ಏಷ್ಯನ್ ಗೇಮ್ಸ್
Gold medal – first place ೧೯೮೨ ದೆಹಲಿ ೨೦ ಕಿಲೋಮೀಟರ್ ರಸ್ತೆ ನಡಿಗೆ

ಸಿರಿ ಚಂದ್ ರಾಮ್ (ಜನನ ೨೬ ಜನವರಿ ೧೯೫೮) ಅವರು ದೆಹಲಿಯಲ್ಲಿ ೧೯೮೨ ರ ಏಷ್ಯನ್ ಗೇಮ್ಸ್‌ನಲ್ಲಿ ೨೦ ಕಿಲೋಮೀಟರ್ ರೋಡ್ ವಾಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮಾಜಿ ಭಾರತೀಯ ಕ್ರೀಡಾಪಟು. ಅವರು ೧೯೮೪ ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.[]

ಕ್ರೀಡಾ ಆಸಕ್ತಿ

[ಬದಲಾಯಿಸಿ]

ಚಾಂದ್ ರಾಮ್ ಎಂದು ಕರೆಯಲ್ಪಡುವ ಸಿರಿ ಚಾಂದ್ ರಾಮ್ ಅವರು ಅಥ್ಲೆಟಿಕ್ಸ್‌ನ ನಾನಾ ವಿಭಾಗಗಳಲ್ಲಿ ಪರಿಣಿತರಾದ ಕ್ರೀಡಾಪಟು. ಪ್ರಾರಂಭದಲ್ಲಿ ಪುರ್ಣವೇಗದ ಓಟ (ಸ್ಪ್ರಿಂಟ್) ಹಾಗೂ ಉದ್ದ ನೆಗೆತ (ಲಾಂಗ್ ಜಂಪ್) ಸ್ಪರ್ಧೆಗಳಲ್ಲಿ ಮೇಲ್ಮೆ ಸಾಧಿಸಿದರು. ಅವರಿಗೆ ೧೯೮೨ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. ೧೯೮೩ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಹಕಾಮ್ ಸಿಂಗ್ ೧೯೭೮ ರಲ್ಲಿ ಮತ್ತು ಚಂದ್ ರಾಮ್ ೧೯೮೨ ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕ್ರಮವಾಗಿ ೨೦ ಕಿ.ಮೀ.ವಾಕ್ ರೇಸ್ನಲ್ಲಿ ಚಿನ್ನದ ಪದಕವನ್ನು ನೀಡಲಾಯಿತು.[] ಅಂದಿನಿಂದ ಈ ಪಂದ್ಯಾವಳಿಯಲ್ಲಿ ಕಾಂಟಿನೆಂಟಲ್ ಮಟ್ಟದಲ್ಲಿ ಯಾವುದೇ ಭಾರತೀಯರು ಚಿನ್ನದ ಪದಕವನ್ನು ಗೆಲ್ಲಲ್ಲಾಗಲಿಲ್ಲ. ೨೦ ಕಿ.ಮಿ. ಓಟವನ್ನು ಪೂರ್ಣಗೊಳಿಸಲು ಚಾಂದ್ ರಾಮ್ ೧ ಗಂಟೆ ೨೯ ನಿಮಿಷ ಮತ್ತು ೨೯ ಸೆಕೆಂಡುಗಳನ್ನು ತೆಗೆದುಕೊಂಡರು. ೨೦೦ ಮೀಟರ್ ಹಾಗೂ ೪೦೦ ಮೀಟರ್ ಓಟದ ಸ್ಪರ್ಧೆಗಳಲ್ಲಿ ಗೆದ್ದು ಭಾರತದ ಯಶಸ್ವಿ ಅಥ್ಲೀಟ್ ಎನಿಸಿಕೊಂಡರು.

ರೋಮ್ ಒಲಿಂಪಿಕ್ಸ್

[ಬದಲಾಯಿಸಿ]

೧೯೮೪ ರಲ್ಲಿ ರೋಮ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ೪೦೦ ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಚಾಂದ್ ರಾಮ್ ೪೦೦ ಮೀಟರ್‌ ಓಟವನ್ನು ೪೭.೬ ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೆ ಯ ಸ್ಥಾನ ಗಳಿಸಿದರು. ಎರಡನೆಯ ಸುತ್ತಿನಲ್ಲಿ ಅವರು ಪುನಃ ತಮ್ಮ ದಾಖಲೆಯನ್ನು ಉತ್ತಮಗೊಳಿಸಿ, ೪೬.೫ ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೆಯ ಸ್ಥಾನ ಗಳಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]