ಸಿರಿಯನ್ ಸಲಿಕೆಪಾದ ಕಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿಯನ್ ಸಲಿಕೆಪಾದ ಕಪ್ಪೆಯು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ಖಂಡದಲ್ಲಿ ಕಾಣಸಿಗುವ ಒಂದು ಕಪ್ಪೆಯ ಬಗೆ.  ಪೆಲೋಬಟೇಸ್ ಸಿರಿಯಾಕಸ್ ಎಂಬುದು ಈ ಕಪ್ಪೆಯ ವೈ~ಜ್ಞಾನಿಕೆ ಹೆಸರು. ಈ ಕಪ್ಪೆ, ಪೆಲೋಬಟಿಡೇ ಸಂಕುಲಕ್ಕೆ ಸೇರಿದ್ದು. [೧]

ಸಿರಿಯನ್ ಸಲಿಕೆಪಾದ ಕಪ್ಪೆ
Eastern spadefoot toad
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಉಪಗಣ:
ಕುಟುಂಬ:
ಕುಲ:
ಪ್ರಜಾತಿ:
P. syriacus
Binomial name
Pelobates syriacus
Boettger, 1889


ಗುರುತು ಗಳು[ಬದಲಾಯಿಸಿ]

ಸಿರಿಯನ್ ಸಲಿಕೆಪಾದ ಕಪ್ಪೆಯು ದೊಡ್ಡ ತಲೆ ಇರುವ ದಪ್ಪ ದೇಹದ ಕಪ್ಪೆ. 9 ಸೆಂಟಿಮೀಟರ್ ನಷ್ಟು ಉದ್ದ ಬೆಳೆಯಬಲ್ಲ ಈ ಕಪ್ಪೆ, ಮೃದುವಾದ ಚರ್ಮ ಹೊಂದಿರುತ್ತದೆ. ಗಂಡು ಕಪ್ಪೆಯ ಮುಂಪಾದದ ಹಿಂಬದಿಯಲ್ಲಿ ದೊಡ್ಡದಾದ ಗ್ರಂಥಿಯನ್ನು ಕಾಣಬಹುದು. ಸಂತಾನೋತ್ಪತ್ತಿ ಕಾಲದಲ್ಲಿ, ಈ ಗ್ರಂಥಿಯು ದೊಡ್ಡದಾಗುತ್ತದೆ.

ಪಾದ[ಬದಲಾಯಿಸಿ]

ಮುಂಪಾದದಲ್ಲಿ ನಾಲ್ಕು ಬೆರಳುಗಳು ಮತ್ತು ಹಿಂಪಾದದಲ್ಲಿ ಐದು ಬೆರಳುಗಳನ್ನು ಕಾಣಬಹುದು.

ಬಣ್ಣ[ಬದಲಾಯಿಸಿ]

ಈ ಕಪ್ಪೆಗಳು ಬಹು ಬಣ್ಣ ಗಳಲ್ಲಿ ಕಾಣಸಿಗುತ್ತವೆ. ಮಾಸಿದ ಕಂದು ಬಣ್ಣದ ಬೆನ್ನು, ದೊಡ್ಡ ಪ್ರಮಾಣದ ಹಸಿರು ಮಚ್ಚೆಗಳು ಮತ್ತು ಹೊಟ್ಟೆ ಭಾಗದಲ್ಲಿ ಕಂದು ಬಣ್ಣದ ಮಚ್ಚೆಯನ್ನು ಕಾಣಬಹುದು.[೩]

ಪಶ್ಚಿಮ ಏಷ್ಯಾ ಖಂಡದ ಸಲಿಕೆಪಾದ ಕಪ್ಪೆಗಳ ಪಾದಗಳು ಕಪ್ಪು ಬಣ್ಣದ ವಾಗಿರುತ್ತವೆ.

ಪೂರ್ವ ಯೂರೋಪ್ ಸಲಿಕೆಪಾದ ಕಪ್ಪೆಗಳ ಪಾದಗಳು, ಕಂದುಬಣ್ಣದ ಪಾದ ಹೊಂದಿರುತ್ತದೆ.

ಸಂತಾನ[ಬದಲಾಯಿಸಿ]

ಈ ಕಪ್ಪೆಯ ಗೊದಮೊಟ್ಟೆಗಳು ಬಲು ದೊಡ್ಡದಾದ ಕಾರಣ, ಸಾಕಷ್ಟು ದೊಡ್ದ ಕೊಳಗಳು ಮತ್ತು ಮೀನುಗಳು ಹೆಚ್ಚು ಇಲ್ಲದ ಕೊಳಗಳಲ್ಲಿ, ಈ ಮೀನುಗಳು ವಾಸ ಮಾಡುತ್ತವೆ.

ವಾಸಸ್ಥಾನ[ಬದಲಾಯಿಸಿ]

ಪಶ್ಚಿಮ ಏಷ್ಯಾ ಖಂಡದ ಸಲಿಕೆಪಾದ ಕಪ್ಪೆಗಳು, ಆರ್ಮೇನಿಯಾ, ಅಜರ್ಬೈಜಾನ್, ಬಲ್ಗೇರಿಯ, ಜಾರ್ಜಿಯ, ಗ್ರೀಸ್, ಇರಾನ್, ಇಸ್ರೇಲ್, ಲೆಬನಾನ್, ಮಸೆಡೋನಿಯ, ರೊಮಾನಿಯ, ರಷ್ಯಾ, ಸೆರ್ಬಿಯ, ಸಿರಿಯ ಮತ್ತು ಟರ್ಕಿ ಈ ದೇಶಗಳಲ್ಲಿ ಕಾಣಬಹುದು.

ಭಾಗಶಃ ಮರುಭೂಮಿ, ದಿಬ್ಬಗಳು ಮತ್ತು ಪೊದೆ ಇರುವ ಜಾಗಗಳು ಈ ಕಪ್ಪೆಯ ವಾಸಸ್ಥಾನ. ತಮ್ಮ ಸಲಿಕೆಪಾದಗಳ ಮೂಲಕ ಮಣ್ಣನ್ನು ಅಗೆದು ಬಿಲ ನಿರ್ಮಾಣ ಮಾಡಲು, ಈ ಸ್ಥಳಗಳಲ್ಲಿ ಅನುಕೂಲ ವಾಗುತ್ತದೆ.

ಧ್ವನಿ[ಬದಲಾಯಿಸಿ]

ಸಿರಿಯನ್ ಸಲಿಕೆಪಾದ ಕಪ್ಪೆಯು ನಿಶಾಚರವಾದುದು, ಅಂದರೆ ರಾತ್ರಿ ಹೊತ್ತಿನಲ್ಲಿ ಹೆಚ್ಚು ಓಡಾಟವನ್ನು ತೋರುವುದು. ಈ ಕಪ್ಪೆಯು ಪತರುಗುಟ್ಟುವುದು ನೀರಿನ ಅಡಿಯಿಂದ. ರಾತ್ರಿಯಿಡೀ ಕ್ಲಾಕ್ ಕ್ಲಾಕ್ ಎಂಬ ಧ್ವನಿ ಹೊರಡಿಸುತ್ತವೆ. ಈ ಧ್ವನಿ ಸುಮಾರು ದೂರದಿಂದಲೂ ಕೇಳಸಿಗುತ್ತದೆ.

ಹವಾಮಾನ[ಬದಲಾಯಿಸಿ]

ಹೆಚ್ವು ಮಳೆಯಾಗಿ ತೇವಾಂಶ ಹೆಚ್ಚು ಇರುವ ಜಾಗಗಳಲ್ಲಿ ಈ ಕಪ್ಪೆಗಳು ವಾಸ ಮಾಡುವುದಿಲ್ಲ.ಬಿಸಿಲು ಹೆಚ್ಚು ಇರುವ ಪ್ರದೇಶದಲ್ಲಿ ಇವು ಹೆಚ್ಚು ಕಾಣ ಸಿಗುತ್ತವೆ.[೪]

ತಾಪಮಾನ ಹೆಚ್ಚು ಆದಾಗ, ಈ ಕಪ್ಪೆಗಳು ಬಿಲದ ಅಡಿಯಲ್ಲಿ ನುಸುಳಿ ವಾಸಿಸುತ್ತವೆ. ನದಿ ಪಾತ್ರ ಗಳಲ್ಲಿ, ಹೆಚ್ಚು ಬದುಕುವ ಈ ಕಪ್ಪೆಗಳು, ಬರಗಾಲದ ಸಮಯದಲ್ಲಿ ಸಾಯುವ ಪ್ರಮಾಣ ಹೆಚ್ಚು. ಚಳಿಗಾಲದಲ್ಲಿ ಮರದ ಬೇರುಗಳು ಅಥವಾ ಕಲ್ಲುಬಂಡೆಗಳ ಅಡಿಯಲ್ಲಿ ಈ ಕಪ್ಪೆಯ ಮರಿಗಳು ಕಾಣಸಿಗುತ್ತವೆ.

ಫ಼ೆಬ್ರವರಿಯಿಂದ ಮೇ ತಿಂಗಳಿನ ಅವಧಿಯಲ್ಲಿ ಸಂತಾನೋತ್ಪತ್ತಿಗೆ ಪ್ರಶಸ್ತ ಕಾಲ.2 ಸೆಂಟಿಮೀಟರ್ ನಿಂಸ 1 ಮೀಟರ್ ವರೆಗೆ ಉದ್ದವಿರುವ ಅಂಟು ಪದಾರ್ಥದ ಮೇಲೆ ಹಲವು ಸಾವಿರ ಮೊಟ್ಟೆಗಳನ್ನು ಈ ಕಪ್ಪೆ ಇಡುತ್ತದೆ. 3 ದಿನಗಳ ನಂತರ ಮೊಟ್ಟೆ ಒಡೆದು ಹೊರಬರುವ ಮರಿಗಳು, ಪಾಚಿ, ನೀರುಹುಳು ಇವೇ ಮುಂತಾದ ಪ್ರಾಣಿಗಳನ್ನು ತಿಂದು, 3 ತಿಂಗಳಲ್ಲಿ ರೂಪಾಂತರ ಹೊಂದಿ, ದೊಡ್ಡದಾಗುತ್ತವೆ. [೫]

ಅಳಿವು-ಉಳಿವು[ಬದಲಾಯಿಸಿ]

ಈ ಕಪ್ಪೆಯು ಅಳಿವಿನ ಅಂಚಿನಲ್ಲ್ಲಿ ಇಲ್ಲ. ಈ ಕಪ್ಪೆಯು ಬಲು ಕಡಿಮೆ ಜಾಗದಲ್ಲಿ (ಪಶ್ಚಿಮ ಏಷ್ಯಾ ಮತ್ತು ಪೂರ್ವ ಯೂರೋಪ್) ಕಂಡುಬಂದರೂ ಸಹಿತ, ಆ ಪ್ರದೇಶದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಜೌಗು ನೆಲ ಮತ್ತು ನದಿ ಪಾತ್ರ ಗಳ ಸಂಖ್ಯೆ ಕಡಿಮೆಯಾಗುತ್ತ, ಈ ಕಪ್ಪೆಗಳು ಕಡಿಮೆಯಾಗ ತೊಡಗಿವೆ.

ಮರುಭೂಮಿಯಲ್ಲಿ ಕೂಡ, ಜನಸಾಂದ್ರತೆ ಹೆಚ್ಚು ಆಗಿ, ಈ ಕಪ್ಪೆಗಳ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಉಲ್ಲೇಖ[ಬದಲಾಯಿಸಿ]

  1. http://www.ingentaconnect.com/content/brill/amre/2009/00000030/00000003/art00011
  2. {{{assessors}}} (2009). Pelobates syriacus. In: IUCN 2008. IUCN Red List of Threatened Species. Retrieved March 25, 2012.
  3. http://amphibiaweb.org/cgi/amphib_query?where-genus=Pelobates&where-species=syriacus
  4. "ಆರ್ಕೈವ್ ನಕಲು". Archived from the original on 2009-05-21. Retrieved 2017-11-26.
  5. https://en.wikipedia.org/wiki/International_Union_for_Conservation_of_Nature