ವಿಷಯಕ್ಕೆ ಹೋಗು

ಸಿದ್ಧಉಡುಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಂಗ್ಲಾದೇಶದಲ್ಲಿ ತಯಾರಾದ ಸಿದ್ಧಉಡುಪುಗಳು

ಸಿದ್ಧಉಡುಪುಗಳು ಎಂದರೆ ಉಡುಪು ಉದ್ಯಮದ ರಾಶಿ ತಯಾರಿಕೆಯಾದ ಸಿದ್ಧಪಡಿಸಿದ ವಸ್ತ್ರ ಉತ್ಪನ್ನಗಳು. ಅವು ಅಳತೆಗಳ ಪ್ರಕಾರ ಗ್ರಾಹಕೀಯಗೊಂಡಿರುವುದಿಲ್ಲ, ಬದಲಾಗಿ ಮಾನವದೇಹಮಿತಿ ಅಧ್ಯಯನಗಳ ಪ್ರಕಾರ ಸಾಮಾನ್ಯೀಕರಿಸಲಾಗಿರುತ್ತದೆ. ಅವುಗಳನ್ನು ಅನೇಕ ವಿಭಿನ್ನ ಬಟ್ಟೆಗಳು ಮತ್ತು ನೂಲುಗಳಿಂದ ತಯಾರಿಸಲಾಗಿರುತ್ತದೆ.[] ಅವುಗಳ ಗುಣಲಕ್ಷಣಗಳು ಅವುಗಳ ತಯಾರಿಕೆಯಲ್ಲಿ ಬಳಸಲಾದ ಬಟ್ಟೆಗಳನ್ನು ಅವಲಂಬಿಸಿರುತ್ತವೆ.[] ಸಿದ್ಧಉಡುಪುಗಳನ್ನು ಈ ಮುಂದಿನ ಪ್ರಕಾರಗಳಾಗಿ ವಿಭಜಿಸಲಾಗುತ್ತದೆ: ಹೊರಾಂಗಣ ಉಡುಪು, ಇದು ಕೆಲಸದ ಉಡುಪು ಮತ್ತು ಸಮವಸ್ತ್ರಗಳನ್ನು ಒಳಗೊಳ್ಳುತ್ತದೆ, ವಿರಾಮದುಡುಪು ಮತ್ತು ಕ್ರೀಡಾ ಉಡುಪು (ಉದಾ. ಸೂಟ್‍ಗಳು, ಷರಾಯಿಗಳು, ಡ್ರೆಸ್‍ಗಳು, ಹೆಂಗಸರ ಸೂಟ್‍ಗಳು, ಬ್ಲೌಸ್‍ಗಳು, ಬ್ಲೇಜ಼ರ್‌ಗಳು, ಜ್ಯಾಕೆಟ್‍ಗಳು, ಕಾರ್ಡಿಗನ್‍ಗಳು, ಪುಲ್ ಓವರ್‌ಗಳು, ಕೋಟುಗಳು, ಕ್ರೀಡಾ ಜ್ಯಾಕೆಟ್‍ಗಳು, ಸ್ಕರ್ಟ್‌ಗಳು, ಅಂಗಿಗಳು, ಟೈಗಳು, ಜೀನ್ಸ್, ಚಲ್ಲಣಗಳು, ಟಿ-ಶರ್ಟ್‌ಗಳು, ಪೋಲೊ ಶರ್ಟ್‌ಗಳು, ಕ್ರೀಡಾ ಅಂಗಿಗಳು, ಟ್ರ್ಯಾಕ್‍ಸೂಟ್‍ಗಳು, ಸ್ನಾನದ ಚಲ್ಲಣಗಳು, ಸ್ನಾನದ ಸೂಟ್‍ಗಳು ಮತ್ತು ಬಿಕೀನಿಗಳು); ಮತ್ತು ಒಳಉಡುಪುಗಳು.

ಉಲ್ಲೇಖಗಳು

[ಬದಲಾಯಿಸಿ]
  1. "Ready-made garments". www.tis-gdv.de. Retrieved 5 May 2016.
  2. Abul Basher (26 June 2009). "The important role of ready made garments to Bangladesh's export earnings". worldbank.org. World Bank. Archived from the original on 19 ಜನವರಿ 2017. Retrieved 18 January 2017.