ಸಾಹಿತ್ಯ ಭಂಡಾರ

ವಿಕಿಪೀಡಿಯ ಇಂದ
Jump to navigation Jump to search

ಸಾಹಿತ್ಯ ಭಂಡಾರ ಇದು ಕನ್ನಡದ ಒಂದು ಪ್ರಮುಖ ಪುಸ್ತಕ ಪ್ರಕಾಶನ ಸಂಸ್ಥೆ. ಮಂಗಳೂರು ಗೋವಿಂದರಾಯರು ಸಾಹಿತ್ಯ ಭಂಡಾರವನ್ನು ೧೯೩೪ರ ಯುಗಾದಿಯಂದು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು. ಗೋವಿಂದರಾಯರು ಸಹೋದರ ಅನಂತಮೂರ್ತಿಯವನ್ನು ಸೇರಿಸಿಕೊಂಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಓದುಗರಲ್ಲಿದ್ದಲ್ಲೇ ಪುಸ್ತಕಗಳನ್ನು ಕೊಂಡೊಯ್ದು ಹೊಸ ಕನ್ನಡ ಓದುಗ ಪರಂಪರೆಯ ಸೃಷ್ಟಿಯಲ್ಲಿ ತೊಡಗಿದವರು.

೧೯೬೮ರಲ್ಲಿ ಈ ಸಂಸ್ಥೆಯ ಬೆಂಗಳೂರು ಶಾಖೆಯನ್ನು ಪ್ರಾರಂಭಿಸಿದರು, ಇದೇ ಈಗ ಈ ಸಂಸ್ಥೆಯ ಮುಖ್ಯ ಕಚೇರಿಯಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಈ ಸಂಸ್ಥೆಯು ಮೂಡಿಸಿದೆ.

ಕನ್ನಡದ ಪ್ರಮುಖ ಲೇಖಕರಾದ ಎಸ್.ಎಲ್.ಭೈರಪ್ಪ, ಯಶವಂತ ಚಿತ್ತಾಲ, ಮಾಸ್ತಿ ವೆಂಕಟೇಶ ಅಯ್ಯಂಗಾರ್'ರ ಕೃತಿಗಳನ್ನು ಈ ಸಂಸ್ಥೆಯೇ ಪ್ರಕಾಶಿಸಿದೆ.

ವಿಳಾಸ[ಬದಲಾಯಿಸಿ]

ಜಂಗಮಮೇಸ್ತ್ರಿ ಗಲ್ಲಿ (ಮಲಬಾರ್ ಹೋಟೆಲ್ ಎದುರು), ಬಳೇಪೇಟೆ, ಬೆಂಗಳೂರು - ೫೬೦೦೫೩, ದೂ: ೦೮೦-೨೨೮೭೭೬೧೮